ರಾಧಾ ಕೃಷ್ಣ
ಕವಿತೆ ರಾಧಾ ಕೃಷ್ಣ ಲಕ್ಷ್ಮೀ ಪಾಟೀಲ್ ಕೃಷ್ಣನ ಅಷ್ಟ ಮಹಿಷಿಯರಿಗಿಂತಲೂಹದಿನಾರು ಸಾವಿರ ನೂರುಭಕ್ತಪ್ರೇಮಿಗಳಿಗಿಂತಲೂ ಆತನ ಏಕೈಕ ಜೀವರಾಧೆಯೇ ಆತನಿಗಿಷ್ಟಗಂಡಿನಂತೆ ಸ್ವಾತಂತ್ರವನ್ನು ಉಸಿರಾಡಿದಳುಪ್ರೀತಿಗೆ ಭಾಷ್ಯ ಬರೆದಂತೆ ಬದುಕಿದಳು ಅಷ್ಟ ಮಹಿಷಿಯರು ಹದಿನಾರು ಸಾವಿರ ನೂರುಭಕ್ತ ಹೆಂಗಳೆಯರೆಲ್ಲ ಕೃಷ್ಣನ ಬರುವಿಕೆಗೆಕಾದು ಸೋತು ಹಿಡಿ ಶಾಪ ಹಾಕಿ ಮಲಗುತ್ತಿದ್ದರುಕನಸಿನಲ್ಲಿ ಸುಳಿದಂತೆ ಸುಳಿದರೆ ಬರೀ ಆತದೇಹವಾಗಿ ಜಡವಾಗುತಿದ್ದ ಮುಟ್ಟಾದುದನುಹಾಡಿರೇ ನೀವೆಲ್ಲ ಸೇರಿ ಎಂದು ಗೋಗರೆದುಬೇಡಿ ಸರಕ್ಕನೆ ಸರಿಸಿ ರಾಧೆಯ ಕೂಗಿಗೆಹಾತೊರೆದು ಓಡುತ್ತಿದ್ದ ಮನಬಿಟ್ಟು ಕದಲದೆಆತ್ಮವಾಗಿ ಅರಳುತ್ತಿದ್ದ ರಾಧೆ ಕಾಯಿಸಿ ಮಜಾ ಉಡಾಯಿಸಿದಾಗಲೆಲ್ಲಪುಟಿವ ಚೆಂಡಾಗಿ […]
ದೇವರು
ಕವಿತೆ ದೇವರು ಮಾಲತಿ ಶಶಿಧರ್ ನಿನ್ನ ಮೆಚ್ಚಿಸಲೇಬೇಕೆಂಬಇರಾದೆಯೇನಿಲ್ಲ ಹುಡುಗ,ಸೊಡರ ಹೊತ್ತಿಸುವುದುದೇವರ ಮೆಚ್ಚಿಸುವುದಕ್ಕಲ್ಲಮನವ ಒಪ್ಪಿಸಲು… ನಿನ್ನ ಒಲಿಸಿಕೊಳ್ಳಲೇಬೇಕೆಂಬಹಠವೇನಿಲ್ಲ ಹುಡುಗ,ಹೂವ ಅರ್ಪಿಸುವುದುದೇವರ ಒಲಿಸಲಲ್ಲಭಕ್ತಿ ತೋರಿಸಲು… ನಿನ್ನ ಪಡೆಯಲೇಬೇಕೆಂಬಸಂಕಲ್ಪವೇನಿಲ್ಲ ಹುಡುಗ,ನೈವೇದ್ಯೆ ಕೊಡುವುದುದೇವರು ಪ್ರತ್ಯಕ್ಷವಾಗಲಿ ಎಂದಲ್ಲಪ್ರೀತಿ ಸಮರ್ಪಿಸಲು… ನಿನ್ನ ಮೆಚ್ಚಿಸಿ, ಒಲಿಸಿ, ಪಡೆದುಬಿಟ್ಟರೆಎಲ್ಲರಂತೆ ಕೇವಲಮನುಜನಾಗಿಬಿಡುವೆ,ನೀನೆಂದಿಗೂ ಮನದ ಗುಡಿಯೊಳಗೆನೆಲೆಸಿರುವ ನನ್ನ ದೇವರಾಗೆ ಉಳಿದುಬಿಡು **********************
ಕವಿತೆ
ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. […]
ಅನುವಾದ ಸಂಗಾತಿ
ಕವಿತೆ ಧ್ಯಾನ ಕನ್ನಡಮೂಲ: ಸುನೀತಾ ಕುಶಾಲನಗರ ಇಂಗ್ಲೀಷಿಗೆ:ಸಮತಾ ಆರ್. ಧ್ಯಾನ ಎಲ್ಲೆಡೆ ಗವ್ ಎನ್ನುವಾಗಲೂಅದೇನೋ ಧ್ಯಾನಮನೆಯೊಳಗಿದ್ದರೂ ನುಗ್ಗಿಬರುವ ಕವಿತೆ ಆಕಾಶದಂತೆ ಆವರಿಸಿನಿತ್ಯ ಬೆಳದಿಂಗಳುಋತುಚಕ್ರ ಉರುಳಿದಂತೆಋತುಸ್ರಾವ ವ್ಯತ್ಯಾಸಬಣ್ಣದ ಕನಸುಗಳಿಗೆಅದೆಷ್ಟು ಕೂಸುಗಳ ಕೇಕೆಜತೆಯಾದ ಕ್ಷಣ ಕ್ಷಣವೂಕಣ ಕಣಕೂ ಹಿತಮತ್ತೊಮ್ಮೆ ಬದುಕಿಬಿಡೆಂದುಚಾಚುವ ಕೈಕಣ್ಣ ಸುತ್ತಿದ ಬಳೆಯಾಕಾರದಕಪ್ಪನೂ ನೇವರಿಸುವಕೂದಲ ಬಣ್ಣದ ಲೇಪನಕೆಹೊಸ ಹೊಳಪುಭೂತ ಭವಿಷ್ಯದಹಂಗ ತೊರೆವ ವರ್ತಮಾನತೀರಾ ಖಾಸಗಿ ಬದುಕೇಆದರೂ ಸದ್ದಿಲ್ಲದೆಮುಟ್ಟುಗೋಲಾಗುವ ಮುಟ್ಟಿಗೂಹುಟ್ಟುತ್ತಿದೆ ಹೊಸಹುರುಪುದಿನ,ದಿನಾಂಕಗಳಗಡಿದಾಟಿ ಬರುವಲವಲವಿಕೆಯ ಮತ್ತು. A Musing.. Far and wide surrounded by gloom,But still have some […]
ಕವಿತೆ
ಹಿರಿಯ ಕವಿಗಳ ಹಳೆಯ ಕವಿತೆಗಳು ಹೊಸ ಪೀಳಿಗೆಯ ಓದುಗರಿಗಾಗಿಹಿರಿಯಕವಿಗಳಕವಿತೆಯೊಂದನ್ನು ನಿತ್ಯ ನೀಡಲಾಗುವುದು ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,ಹೆಂಟೆಗೊಂದು ಮೊಗೆ ನೀರು ಹಿಗ್ಗಿ;ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿಹೆಸರು ಗದ್ದೆಯ ನೋಡಿಕೊಂಡು,ಯೌವನವ ಕಳೆದವಳು […]
ಕವಿತೆ
ಕವಿತೆ ಹಾಳೆ ತಿರುವಿದರೆ ಅಧ್ಯಾಯ ಮುಗಿಯದುಧರ್ಮಸ್ಥಾಪನೆಗೆ ಮತ್ತೆ ಮತ್ತೆ ಬರುತ್ತೇನೆಂದವಹೇಳಿದ್ದೂ ಅದನ್ನೇಎಲ್ಲವೂ ಮುಗಿಯದ ಅಧ್ಯಾಯ ದಾರಿಗಳು ಎಂದೋ ಕವಲೊಡೆದವುಎಲ್ಲ ಮರೆತಂತೆ ಹೆಜ್ಜೆಗಳೂ ನಡೆದವುಉಸಿರು ಭಾರದ ಜೋಕಾಲಿಜೀಕಿದಷ್ಟೂ ಎಳೆದಾಡುತ್ತಿತ್ತು ಕಟಕಟೆಯ ತೀರ್ಪಿನಲ್ಲಿಇವರು ಬೇರೆ ಬೇರೆಉಳಿಯುವುದು ಏನಿದ್ದರೂ ಲೆಕ್ಕಾಚಾರಉತ್ತರ ಹುಡುಕುವ ಪುಟ್ಟ ಕಂಗಳಲ್ಲಿಪ್ರಶ್ನೆಗಳ ಮಹಾಪೂರ ಹಾಳೆಗಳೂ ನಾಳೆಗಳಂತೆಕರೆದಷ್ಟೂ ತೆರೆಯುತ್ತವೆಚುಕ್ಕೆಯಿಡುವ ಮುನ್ನ ಅಲ್ಪವಿರಾಮಮುಗಿಸಲು ಮನಸ್ಸಿಲ್ಲಹೇಗೆಂದರೂಇದು ಮುಗಿಯದ ಅಧ್ಯಾಯ.
ಪುಸ್ತಕ ಸಂಗಾತಿ
Anyone but the Spouse ವಾಸ್ತವ ಸಂಗತಿಗಳ ಯಥಾವತ್ ನಿರೂಪಣೆ ಪುಸ್ತಕ:Anyone but the Spouse ಸಣ್ಣ ಕಥೆಗಳು ಲೇಖಕಿ:ಪೂರ್ಣಿಮಾ ಮಾಳಗಿಮನಿ Anyone but the Spouse ಪೂರ್ಣಿಮಾ ಮಳಗಿಮನಿಯವರು ಇಂಗ್ಲಿಷ್ ನಲ್ಲಿ ಬರೆದು ಪ್ರಕಟಿಸಿರುವ ಸಣ್ಣ ಕಥಾ ಸಂಕಲನ. ಪಾಶ್ಚಾತ್ಯ ಸಂಸ್ಕೃತಿಯ ನೇರ ಪ್ರಭಾವಕ್ಕೊಳಗಾಗಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಗಂಡು- ಹೆಣ್ಣುಗಳ ನಡುವಣ ಸಂಬಂಧ, ವೈವಾಹಿಕ ವ್ಯವಸ್ಥೆ ಮತ್ತು ಕೌಟುಂಬಿಕ ಬದುಕುಗಳಲ್ಲಿ ಆಗಿರುವ ಬದಲಾವಣೆಯ ಯುಕ್ತಾಯುಕ್ತತೆಯ ಕುರಿತು ಈ ಕಥೆಗಳು ತಣ್ಣಗೆ ಸಂಶೋಧನೆ ನಡೆಸುವಂತಿವೆ. […]
ಕವಿತೆ
ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************
ಕವಿತೆ
ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–
ಕವಿತೆ
ಸಂಗಾತಿ ಅರುಣಾ ರಾವ್ ಎನ್ನ ಮನ ದೇಗುಲದಗಂಟೆಯನು ಬಾರಿಸಿಪ್ರೀತಿಯ ಬಡಿದೆಬ್ಬಿಸಿದಇನಿಯ ನೀ ಯಾರು? ಆ ನಾದವನು ಕೇಳಿತಲೆದೂಗುವ ಹಾವಂತೆಎನ್ನ ನಿನ್ನೆಡೆಗೆ ಸೆಳೆದಿಹಸಖ ನೀ ಯಾರು? ಬತ್ತಿದ್ದ ಎನ್ನ ಬಾಳಲ್ಲಿಪ್ರೀತಿ ಹನಿಗಳ ಚಿಮುಕಿಸಿಒಲವ ಹೊಳೆ ಹರಿಸಿದಗೆಳೆಯ ನೀ ಯಾರು? ಮುಚ್ಚಿದ್ದ ಎದೆ ಬಾಗಿಲಿನಚಿಲಕವನು ಅತ್ತ ಸರಿಸಿಒಳ ಹೊಕ್ಕು ನಿಂತಿಹಸಂಗಾತಿ ನೀ ಯಾರು? ನೀ ಯಾರಾದರೇನುಈಗಂತೂ ನನ್ನವ ನೀನುಎನ್ನ ಬಾಳ ದೇಗುಲಕೆಹೊನ್ನ ಕಳಶ| *******************************