ಗಾಳೇರ್ ಬಾತ್

ಗಾಳೇರ್ ಬಾತ್

ಗಾಳೇರ್ ಬಾತ್-04 Clinicಲ್ಲಿ ಸಿಕ್ಕ ಕಮಲ ಆಂಟಿ ನೋಡಿ ಆಶ್ಚರ್ಯವಾಗಿತ್ತು………. ಆ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಮಳೆ ಬೀಳುತ್ತಿತ್ತು. ನಾನು ಕೆಲಸಕ್ಕೆ ನಡೆದುಕೊಂಡೆ ಹೋಗಬೇಕಾಗಿದ್ದರಿಂದ ಹಲವು ಬಾರಿ ಭಾರಿ ಮಳೆಗೆ ತೋಯಿಸಿಕೊಂಡಿದ್ದರ ಪರಿಣಾಮವಾಗಿ ನನಗೆ ಮೂಗಿನಲ್ಲಿ ಸಿಂಬಳ ಬರಲಿಕ್ಕೆ ಶುರುವಾಗಿತ್ತು. I mean ನೆಗಡಿ ಆಗಿತ್ತು ಅಂತ ನಿಮ್ಮ ಮಾತಿನಲ್ಲಿ ತಿಳಿಯಬಹುದು.       ನೀವು ತಿಳಿದಾಗೆ, ನಾನು ಬರಿ ನೆಗಡಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಮನುಷ್ಯನಲ್ಲ! ಯಾವಾಗಲೂ ಅತ್ಯಂತ ಚುರುಕುತನದಿಂದ ಬೆಂಗಳೂರು ನಗರವನ್ನೇ ಸುತ್ತುತ್ತಿದ್ದ ನನ್ನ ಕಾಲುಗಳು ಯಾಕೋ […]

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ […]

ನಾನೇಕೆ ಬರೆಯುತ್ತೇನೆ?

ಬದುಕಿನ ಉತ್ಸಾಹ ಕಾಪಿಟ್ಟುಕೊಳ್ಳಲು ನಾನೇಕೆ ಬರೆಯುತ್ತೇನೆ? ಈ ಪ್ರಶ್ನೆಗೆ ನನಗಿನ್ನೂ ಸಮಾಧಾನಕರ ಉತ್ತರ ದೊರೆತಿಲ್ಲ.  ಯಾಕೆಂದರೆ ನಾನು ಬರೆಯುವಾಗ ಯಾವುದೇ ಉದ್ದೇಶವನ್ನಿಟ್ಟುಕೊಂಡು ಬರೆಯುವುದಿಲ್ಲ. ನನ್ನಬರವಣಿಗೆಯಿಂದಸಮಾಜದಲ್ಲಿಮಹತ್ತರಬದಲಾವಣೆ ತರಬಹುದೆಂಬ ಭ್ರಮೆ ನನಗಿಲ್ಲ.  ನನ್ನ ಬರವಣಿಗೆಗಳಿಂದ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನಾನೊಬ್ಬ ಮಹಾನ್ ಲೇಖಕ ನಾಗ ಬೇಕೆಂಬ ಮಹತ್ವಾಕಾಂಕ್ಷೆ ನನಗಿಲ್ಲ.ನನ್ನ ಜ್ಞಾನದ, ಪ್ರತಿಭೆಯ ಪರಿಮಿತಿಯಲ್ಲಿ ಬರೆಯುವ ನಾನು ಯಾವುದೆ ಇಸಂ ಗಳಿಗೆ,ರಾಜಕೀಯಸಿಧ್ಧಾಂತಗಳಿಗೆ, ಜಾತಿ ಮತಗಳಿಗೆ ಬದ್ಧನಾಗಿ ಬರೆಯುವುದಿಲ್ಲ. ವೈಶಾಖದುರಿಬಿಸಿಲಮಧ್ಯಾಹ್ನ ಸುರಿವ ಮಳೆಹನಿಗಳ ಸ್ಪರ್ಷಕ್ಕೆ ಅರಳುವ ಮಣ್ಣಿನ ಕಣಗಳ ಕಂಪು ನನ್ನಲ್ಲಿ ಕಾವ್ಯ ಸ್ಪಂದನೆಯನ್ನುಂಟುಮಾಡುತ್ತದೆ.ನಮ್ಮೂರ […]

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಅನುವಾದ ಸಂಗಾತಿ

ಕನ್ನಡಕವಿತೆ:ಸರಜೂ ಕಾಟ್ಕರ್ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ನ್ಯಾಶನಲ್ ಹೈವೇಗುಂಟ ಹೋಗುತ್ತಿರುವಾಗ ಅಲ್ಲಿದ್ದ ಗಿಡಮರಗಳನ್ನು ನಿರ್ದಯವಾಗಿ ಕತ್ತರಿಸಿ ಹಾಕಿದ ರಾಕ್ಷಸರನ್ನು ನೆನೆನೆನೆದು ಸಿಟ್ಟಾಗುತ್ತೇನೆ. ಅಲ್ಲಿಯ ಬೋಳು ಮೈದಾನಗಳಲ್ಲಿ ತಮ್ಮ ಗೂಡುಗಳನ್ನು ಹುಡುಕುತ್ತಿರುವ ಸಾವಿರಾರು ಪಕ್ಷಿಗಳ ಆಕ್ರಂದನ ಕೇಳಿ ಕಂಗಾಲಾಗುತ್ತೇನೆ. ಎಲ್ಲಿ ಹೋಯಿತು ಈ ಗಿಡಗಳ ದಟ್ಟ ಹಸಿರು? ಗಿಡಗಳಿಗಿಂತಲೂ ಉದ್ದವಾಗಿ ಬೀಳುತ್ತಿದ್ದ ನೆರಳು? ವಿಧವಿಧ ಪಕ್ಷಿಗಳ ಕಲರವ? ಗಿಡಗಳ ಸಾಕ್ಷಿಯಲ್ಲಿ ನಡೆಯುತ್ತಿದ್ದ ಪ್ರೇಮದಾಟ? ಏನಾಗಿರಬಹುದು ಈ ಗಿಡಮರಗಳಿಗೆ- ಸತ್ತು ಭಸ್ಮವಾದವೇ ಈ ಮರಗಳು ಅಥವಾ […]

ಅನುವಾದ ಸಂಗಾತಿ

ಕ್ಷುದ್ರ್ ಕೀ ಮಹಿಮಾ ಶಾಮ್ ನಂದನ್ ಕಿಶೋರ್ ಅನುವಾದಕರ ಟಿಪ್ಪಣಿ ಪದ್ಮಶ್ರಿ ಶ್ರೀ ಶಾಮ್ ನಂದನ್ ಕಿಶೋರ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಒಂದು ಕವಿತೆ “ಕ್ಷುದ್ರ್ ಕೀ ಮಹಿಮಾ” ಓದಲು ಸಿಕ್ಕಿತು. ಮೊದಲ ಓದಿಗೇನೂ ಹೆಚ್ಚು ಅರ್ಥವಾಗಲಿಲ್ಲ. ಆದರೂ ಕವಿ ಏನೋ ವಿಭಿನ್ನವಾದುದನ್ನು ಹೇಳಲು ಹೊರಟಿದ್ದಾರೆಂಬುದರ ಅರಿವಿತ್ತು. ಮತ್ತೆ ಮತ್ತೆ ಓದಿದಾಗ ಅರ್ಥ ಸ್ಪಷ್ಟವಾಗತೊಡಗಿತು. ಶಬ್ದಗಳೊಳ ಹೊಕ್ಕು ಕವಿಯ ಭಾವವನ್ನು ಅರಿಯಲು ಸಹಾಯ ಮಾಡಿದವಳು ಗೆಳತಿ ರೂಪಾ. ಅವಳು ಹಿಂದಿ ಭಾಷೆಯ ಅನುವಾದಿತ ಕೃತಿಗಳ […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******

ಗಾಳೇರ್ ಬಾತ್

ಗಾಳೇರ್ ಬಾತ್ -03 ಬದುಕು ಏನೆಲ್ಲಾ ಮಾಡಿಸುತ್ತದೆ…….. ಇವನೌನ್ ಇವನೇನು ಬರಿತಾನ ಅಂತೀರಲಾ….. ನಿಜ ಕಣ್ರೀ ನಾನು ಬೇರೆ ಏನು ಬರೆಯುವುದಿಲ್ಲ! ನಮ್ಮ-ನಿಮ್ಮ ನಡುವೆ ನಡೆಯುವ ದಿನ ನಿತ್ಯದ ಘಟನೆಗಳೇ ನನ್ನ ಬರವಣಿಗೆಗಳಿಗೆ ಶೃಂಗಾರ.          ಆಗ ತಾನೆ ನಾನು duty ಮುಗಿಸಿಕೊಂಡು restroom ನಲ್ಲಿ ಏನೋ ಯೋಚಿಸುತ್ತ ಕೂತಿದ್ದೆ. Duty ನಾ.. ಯಾವ duty….  ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಅದೇ ನಾನು ಮಾಡ್ತಿದ್ನಲ್ಲ housekeeping ಕೆಲಸ. ಹೀಗೆ ಕೂತಿರಬೇಕಾದ್ರೆ ಪ್ರಕಾಶ ಎಲ್ಲಿಂದ ಬಂದ್ನೋ ಗೊತ್ತೆ […]

ಕಾವ್ಯಯಾನ

ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ […]

ಅನುವಾದ ಸಂಗಾತಿ

ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಹುಟ್ಟು ಹುಟ್ಟು ದೇವರಾಣೆ! ನನಗೆ ಗೊತ್ತಿರಲಿಲ್ಲ. ನಾನು ಹುಟ್ಟುತ್ತೇನೆಂದು ಹುಟ್ಟಿ ಇಷ್ಟು ವರ್ಷವಾದರೂ ಹುಟ್ಟಲಾಗಲೇ ಇಲ್ಲ. ಖಾಲಿ ಆಕಾಶದ ಕೆಳಗೆ ಬಟಾಬಯಲ ಒಳಗೆ ಬೋಳು ಮರದಡಿಯಲ್ಲಿ ಕೂರುತ್ತಿರಲಿಲ್ಲ ಹೀಗೆ ನಾನು ಹುಟ್ಟಿದ್ದರೆ ನಿರುದ್ಯೋಗ ಕಲಿಯದಿದ್ದರೆ ಇರುತ್ತಿರಲಿಲ್ಲ ಹೀಗೆ ನಾ ಹುಟ್ಟಿದ್ದರೆ ಕ್ಷಮಿಸಿ, ನನ್ನ ಕೈಲಿನ್ನೂ ಹುಟ್ಟಲಾಗಲೇ ಇಲ್ಲ.. -********** Birth ——- Swear God! I didn’t know that I would be born. After […]

Back To Top