ಗಾಳೇರ್ ಬಾತ್-04
Clinicಲ್ಲಿ ಸಿಕ್ಕ ಕಮಲ ಆಂಟಿ ನೋಡಿ ಆಶ್ಚರ್ಯವಾಗಿತ್ತು……….
ಆ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಪರೀತ ಮಳೆ ಬೀಳುತ್ತಿತ್ತು. ನಾನು ಕೆಲಸಕ್ಕೆ ನಡೆದುಕೊಂಡೆ ಹೋಗಬೇಕಾಗಿದ್ದರಿಂದ ಹಲವು ಬಾರಿ ಭಾರಿ ಮಳೆಗೆ ತೋಯಿಸಿಕೊಂಡಿದ್ದರ ಪರಿಣಾಮವಾಗಿ ನನಗೆ ಮೂಗಿನಲ್ಲಿ ಸಿಂಬಳ ಬರಲಿಕ್ಕೆ ಶುರುವಾಗಿತ್ತು. I mean ನೆಗಡಿ ಆಗಿತ್ತು ಅಂತ ನಿಮ್ಮ ಮಾತಿನಲ್ಲಿ ತಿಳಿಯಬಹುದು.
ನೀವು ತಿಳಿದಾಗೆ, ನಾನು ಬರಿ ನೆಗಡಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಮನುಷ್ಯನಲ್ಲ! ಯಾವಾಗಲೂ ಅತ್ಯಂತ ಚುರುಕುತನದಿಂದ ಬೆಂಗಳೂರು ನಗರವನ್ನೇ ಸುತ್ತುತ್ತಿದ್ದ ನನ್ನ ಕಾಲುಗಳು ಯಾಕೋ ಸುಸ್ತಾದಂತೆ ಕಾಣುತ್ತಿದ್ದವು. ಏನಾದರೂಂದು ಗೀಚೂತಿದ್ದ ನನ್ನ ಕೈಗಳು ಜಡತ್ವವಾಗಿದ್ದವು! ತಲೆಯು ಭೂಮಿ ಸುತ್ತಿದಂತೆ ಸುತ್ತುತ್ತಿತ್ತು, ಕಣ್ಣುಗಳು ಮುಂಜಾನೆಯ ಮಂಜು ನೋಡಿದಂತೆ ಪ್ರತಿ ವಸ್ತುವನ್ನು ತೀಕ್ಷ್ಣವಾಗಿ ನೋಡುತ್ತಿದ್ದವು. ಏಡ್ಸ್ ರೋಗವು ನಾನು ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಹೊಂದಿರುತ್ತವೆ ಎಂದು ಎಲ್ಲೋ ಓದಿದ್ದ ನೆನಪುಗಳೇ ನನ್ನ hospital ಗೆ ದೂಡಿಕೊಂಡು ಹೋಗುವಂತೆ ಮಾಡಿದ್ದವು. ಅದಲ್ಲದೆ ನಾನು ಕೆಲವು ತಿಂಗಳ ಹಿಂದೆ ಸುಜಾತ ಅಂಟಿ ಮನೆಗೆ ಹೋದಾಗ ಅಲ್ಲಿ ಆಕೆಯ ಗಂಡನ ಕಾಯಿಲೆಯ ವೈರಸ್ ನನಗೆ ತಗುಲಿತಾ! ಎಂದು ಭಯಭೀತನಾಗಿದ್ದೆ. ಅದಾದ ನಂತರವೇ ನನಗೆ ಗೊತ್ತಾಗಿದ್ದು. ಏಡ್ಸ್ ಅಂಟು ರೋಗ ಅಲ್ಲ. ಏಡ್ಸ್ ರೋಗಿ ಜೊತೆ ಒಂದೆ ತಟ್ಟೆಯಲ್ಲಿ ಉಂಡರು ಆ ಖಾಯಿಲೆ ನಮಗೆ ಅಂಟಿ ಕೊಳ್ಳುವುದಿಲ್ಲ ಎಂದು ಗೊತ್ತಾಗಿದ್ದು. ಏನೇ ಆಗಲಿ ನಾನು ಖಾಲಿ ನೆಗಡಿಗೆನೆ hospitalಗೆ ಹೋದ್ನಾ…..! ಅಂತ ಇವತ್ತಿಗೂ ನನ್ನ ಮೇಲೆ ನನಗೆನೆ ನಾಚಿಕೆ ಆಗುತ್ತೆ. ಇಂತಹ ಸಿಲ್ಲಿ ವಿಚಾರಗಳನ್ನು ನೆನಪಿಸಿ ಕೊಂಡಾಗ ಯಾರು ಇಲ್ಲದ ಸ್ಥಳದಲ್ಲಿ ಹಾಗಾಗ ಒಬ್ಬನೆ ನಕ್ಕು ಸುಮ್ಮನಾಗಿ ಬಿಡುತ್ತೇನೆ.
Doctor ಹತ್ರ ತೋರಿಸಿಕೊಂಡು ಹೊರಗಡೆ ಬರುತ್ತಿರುವಾಗ ಅಲ್ಲೇ ಒಂದು ಮೂಲೆಯಲ್ಲಿ ಇದ್ದ medical shop ನ ಹತ್ತಿರ ಕಮಲ ಆಂಟಿ ಎದುರಿಗೆ ಸಿಕ್ಕಳು. ನನ್ನ ನೋಡಿದವಳೇ “ಏನು ಗಾಳೇರ ಇಲ್ಲಿ” ಎಂದಾಗ. ನನ್ನ ಆಶ್ಚರ್ಯದಾಯಕ ವಿಚಾರಗಳೆನ್ನೆಲ್ಲಾ ಅನಿವಾರ್ಯವಾಗಿ ಬದಿಗೊತ್ತಿ ಅವಳ ಜೊತೆ ಮಾತಿಗಿಳಿದೆ.”ಆ ಅಂಟಿ ಸ್ವಲ್ಪ ಆರಾಮಿರಲಿಲ್ಲ, doctor ಕಾಣೋಣ ಅಂತ ಬಂದೆ”. ಆಗೆ ಹೇಳುವಾಗ ನಾನು ಅವಳ ಕೈಯಲ್ಲಿ ಇದ್ದ x-ray card ನೋಡಿ ಮತ್ತೆ ಅವಳ ಹಿಂದಿನ ಚರಿತ್ರೆಯ ಬಗ್ಗೆ ಜಾರಿದೆ.
ಕಮಲಾ ಅಂಟಿ ನೋಡಲು ಅಷ್ಟೇನು ಬಣ್ಣ ಇರಲಿಲ್ಲ. ಸರಿಸುಮಾರು ಮೂವತ್ತೈದರ ಆಜುಬಾಜಿನ ಕಪ್ಪು ಸುಂದರಿ ಕಮಲ ಆಂಟಿ, ಸಾಧಾರಣ ಎತ್ತರ ಹೊಂದಿದ್ದ ಅವಳ ದೇಹ… ಮೈಕಟ್ಟು ಮಾತ್ರ ಎಂತಾ ಬ್ರಹ್ಮಚಾರಿಯನ್ನದಾರು ತನ್ನತ್ತಾ ಸೆಳೆದುಕೊಳ್ಳುವ ಆಕರ್ಷಕ ಮೈಮಾಟ ಹೊಂದಿದ್ದಳು. ಒಂದು ರೀತಿಯಲ್ಲಿ ಪುರಾಣದ ಕತೆಯಲ್ಲಿ ಹೇಳಿದಂತೆ ಹೇಳುವುದಾದರೆ ಗಜನಿಂಬೆ ಎಂದು ಕರೆಯಬಹುದು. ಇಂತ ಕಮಲಾ ಅಂಟಿಗೆ ಸೋತವರೆಷ್ಟೋ ಲೆಕ್ಕವೇ ಇಲ್ಲ. ಪಟ್ಟಿ ಮಾಡಿದರೆ ಪ್ರಕಾಶ, ಮಹೇಶ, ನಂದೀಶ್, ಬಸವ, ಚೆನ್ನ, ಒಬ್ರ… ಇಬ್ರಾ…..!
ಆದ್ರೆ ಈ ಅಂಟಿ ಅವರ್ಯಾರಿಗೂ ಸೆರಗು ಹಾಸಿರಲಿಲ್ಲ ಎನ್ನುವುದು ನನ್ನ ಸ್ನೇಹಿತರು ಆಗಾಗ ಹೇಳುತ್ತಿದ್ದರು. ಗಂಡನಲ್ಲದ ಪರಪುರುಷನ ಜೊತೆ ಇವಳ ಸಂಬಂಧ ಇದೆ ಎಂದು ತಿಳಿದಾಗ, ಕಮಲಾ ಆಂಟಿಯ ಹಿಂದೆ ಸಾಲು ಸಾಲು ಹುಡುಗರು ನಾವು ಒಂದು ಕೈ ನೋಡೋಣ ಅಂತ ಎಷ್ಟು try ಮಾಡಿದರು ಆಂಟಿ ಅವರ್ಯಾರಿಗೂ ಕ್ಯಾರೇ ಅಂದಿರಲಿಲ್ಲ. ಆದರೆ ನಾಗರಾಜನಿಗೆ ಮಾತ್ರ ಎಲ್ಲಿಲ್ಲದ ಸಲುಗೆ ತೋರಿಸಿದ್ದಳಂತೆ. ಅವನ ಜೊತೆ park, film, mall ಅಷ್ಟೇ ಅಲ್ಲದೆ ನಂದಿ ಬೆಟ್ಟಕ್ಕೂ ಕೂಡ ಒಂಟಿಯಾಗಿ ಹೋಗುತ್ತಾಳೆ ಎಂದು ನನ್ನ ಗೆಳೆಯರು ಹೇಳುತ್ತಿದ್ದಾಗ; ನಾನು ಕುತೂಹಲದಿಂದ “ಅಲ್ಲ ಗುರು, ಕಮಲಾ ಆಂಟಿಗೆ ಮದುವೆ ಆಗಿಲ್ವಾ……” ಅಂದೆ. ಅಷ್ಟಂದದ್ದೆ ತಡ ಗೆಳೆಯನೊಬ್ಬ “ಮದುವೆ ಆಗಿದೆ ಗಾಳೇರ, ಆಂಟಿ ಕೊರಳಲ್ಲಿ ತಾಳಿ ಇದೆಪಾ…..” ನಾನು ಮತ್ತೆ ಕೂತುಹಲ ತಡೆಯದೆ “ಅವಳ ಗಂಡ ಯಾರು ಗುರು, ಇಂತಹ ಸುಂದರವಾದ ಚೆಲುವೆಯನ್ನು ಇನ್ನೊಬ್ಬರ ಜೊತೆಗೆ ಬಿಟ್ಟಿದನಲ್ಲ” ಅಂದೇ ಬಿಟ್ಟೆ. ಆಗ ಗೆಳೆಯನೊಬ್ಬ “ಇಲ್ಲ ಗಾಳೇರ ಅವಳು ಗಂಡನ ಜೊತೆನೆ ಇದಾಳೆ, ಅವಳ ಗಂಡನಿಗೂ ಗೊತ್ತು ಅಂಟಿ ನಾಗರಾಜ ಆಗಾಗ ಒಟ್ಟಿಗೆ ಇರೋದು, ಆದ್ರೂ ಅವಯ್ಯ ಅಂಟಿಗೆ ಏನು ಹೇಳಲ್ಲ” ಅಂದಾಗ ನಾನು “ಬಿಡಪ್ಪ ನಮಗ್ಯಾಕೆ ಕಂಡವರ ಸುದ್ದಿ ಅಂತ” ಗೆಳೆಯರ ಆ ವಿಚಾರ ಗೋಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದೆ.
ನಾನು ಹೀಗೆ ಆಂಟಿಯ ಹಿಂದಿನ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳುತ್ತಿರುವಾಗ, ಆಂಟಿ ಒಮ್ಮೆ ಜೋರಾಗಿ “hello ಗಾಳೇರ ಇದಿಯಾ” ಎಂದಾಗ ವಾಸ್ತವ ಲೋಕಕ್ಕೆ ಮರಳಿದೆ. ಅಲ್ಲೇ ಪಕ್ಕದಲ್ಲಿ ಒಂದು ಚಿಕ್ಕ ಹೋಟೆಲ್ ಇತ್ತು. ಅಲ್ಲಿ ಕಾಫಿ ಕುಡಿಯೋಣ ಎಂದು ಆಂಟಿ ನನ್ನ ಕರೆದುಕೊಂಡು ಹೋದಳು. ಆಂಟಿ ನನ್ನ ಪಕ್ಕದಲ್ಲಿಯೇ ನನ್ನ ಮೈಗೆ ಅಂಟಿಕೊಂಡು ಕೂತಾಗ ನನ್ನ ಮನಸ್ಸಿನಲ್ಲಿ ಹರೆಯದ ಹುಡುಗರ ಯೋಚನೆಗಳು ಬರತೊಡಗಿದವು. ಆದರೂ ಅವುಗಳನ್ನೆಲ್ಲ ನಿಯಂತ್ರಿಸಿಕೊಂಡೆ ಕೂತೆ. ನಾನು ನಿರೀಕ್ಷಿಸಿದಂತೆ ಆಂಟಿ ನನ್ನ ಅತ್ತಿರ ಅನುಚಿತವಾಗಿ ವರ್ತಿಸಲಿಲ್ಲ. ಯಾವುದೋ ಗಾಢವಾದ ಚಿಂತೆಯಲ್ಲಿ ಇದ್ದಳು. ನಾನೇ ಮುಂದಾಗಿ “ಆಂಟಿ ನೀವು ಯಾಕೆ hospitalಗೆ ಬಂದಿದ್ದೀರಿ, ಕೈಯಲ್ಲಿರುವುದು x ray report ಏನದು” ಎಂದೆ.ಆಗ ಅವಳು ಹೇಳಿದ ಮಾತು ನನಗೆ ಆಶ್ಚರ್ಯವಾಯಿತು “ಇದು ನನ್ನದಲ್ಲ ಗಾಳೇರ ನಾಗರಾಜನದು, ಪಾಪ ಅವನಿಗೆ brain tumor, ಅದು ಈಗ ಕೊನೆಯ ಅಂತದಲ್ಲಿದೆ” ಎಂದಾಗ ನನಗೆ ಏನು ಮಾತಾಡಬೇಕೆಂದು ತಿಳಿಯದೆ “ಅಂಟಿ ನೀವು ನಾಗರಾಜನ್ನಾ……” ಎಂದು ಮಾತು ಅರ್ಧಕ್ಕೆ ನಿಲ್ಲಿಸಿದಾಗ, ಆಂಟಿಯೇ ಮಾತು ಮುಂದುವರಿಸಿ “ಹೌದು ಗಾಳೇರ ನಾಗರಾಜನೊಂದಿಗೆ ನಾನು ಸಂಬಂಧ ಬೆಳಿಸಿದ್ದೀನಿ” ಎಂದು ನನ್ನ ಕೈ ಹಿಡಿದುಕೊಂಡಳು. ನನಗೆ ಅವಳು ಕೈ ಹಿಡಿದುಕೊಂಡಿದ್ದು ಅಸಹ್ಯವಾದರೂ ತೋರಿಸಿಕೊಳ್ಳದೆ ಅವಳಿಂದ ನನ್ನ ಕೈ ಬಿಡಿಸಿಕೊಂಡು “ಆಂಟಿ ನಿಮಗೆ ಗಂಡ ಇದ್ದಾನಲ್ಲ. ನೀವು ಮಾಡುತ್ತಿರುವುದು ತಪ್ಪಲ್ವಾ” ಎಂದೆ. ಅವಳು ನನ್ನ ಮಾತಿಗೆ ಮರುಉತ್ತರಿಸದೇ ಕಾಫಿ ಕುಡಿದು ಸೀದಾ ಹೊರಟುಹೋದಳು.
ನಾನು ಇವಳ್ಯಾಕಪ್ಪ ಹೊರಟುಹೋದಳು ನಾನು ಇವಳಿಗೆ ಹೇಳಿದ್ದು ತಪ್ಪಾಯ್ತಾ! ಅಂತ ಅವಳು ಹೋದ ದಿಕ್ಕಿನ ಕಡೆ ಹೋದೆ. ರಸ್ತೆಯ ಬದಿಯಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅವಳನ್ನು ನೋಡಿ ಮತ್ತೆ ಅವಳ ಪಕ್ಕದಲ್ಲಿ ಕೂತು “sorry aunty” ಅಂದೆ. ಆಗ ಅವಳು “ನೋಡು ಗಾಳೇರ ನನ್ನ ಗಂಡ ನನ್ನನ್ನು ತುಂಬಾ ಆತ್ಮೀಯವಾಗಿ ಪ್ರೀತಿಸುತ್ತಾನೆ ನಾನು ಕೂಡ ಅಷ್ಟೇ ನನ್ನ ಗಂಡನನ್ನು ಪ್ರೀತಿಸುತ್ತೇನೆ” ಅಂದಾಗ ನಾನು ಅವಳ ಮುಂದಿನ ಮಾತಿಗೂ ಕಾಯದೆ “ಮತ್ತೆ ಈ ನಾಗರಾಜ ಯಾಕೆ ” ಎಂದು ಬಿಟ್ಟೆ. ಆಗ ಆಂಟಿ “ಗಾಳೇರ ನಾಗರಾಜ ನನಗೆ ಹೀಗೆ ಆರು ತಿಂಗಳ ಕೆಳಗೆ ಸಿಕ್ಕ. ಅವನು ಸಿಕ್ಕ ಪರಿಸ್ಥಿತಿ ನಿಜಕ್ಕೂ ನನಗೆ ಇವಾಗ್ಲೂ ನೆನಪಿದೆ. ಅದೊಂದು ದಿನ ರಸ್ತೆಯಲ್ಲಿ ಪ್ರಜ್ಞೆತಪ್ಪಿ ಬಿದ್ದ ನಾಗರಾಜನನ್ನು hospitalಗೆ ಕರೆದೊಯ್ದಿದ್ದೆ. ಆವಾಗಲೇ ನನಗೆ ಗೊತ್ತಾಗಿದ್ದು ಅವನಿಗೆ brain tumor ಇರುವುದು. ಈ ವಿಷಯ ನನಗೆ ತಿಳಿದ ಮೇಲೆ ಅವನ ಸಂಬಂಧಿಕರನ್ನು ಗೆ ಹುಡುಕಲು ಪ್ರಯತ್ನಿಸಿದಾಗ ಅವನೊಬ್ಬ ಅನಾಥ ಎಂದು ತಿಳಿಯಿತು. ಅವನಿಗೆ treatment ಕೊಟ್ಟ doctor ನಾಗರಾಜ ಬದುಕುವುದು ತುಂಬಾ ವಿರಳ ಅವನು ಬದುಕುವಷ್ಟು ಕಾಲ ಅವನಿಗೆ ಸುಖವಾಗಿ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ನಾನು ಅವನಿಗೆ ಎಲ್ಲಾ ವಿಚಾರದಲ್ಲಿ ಸಹಾಯ ಮಾಡುತ್ತಿದ್ದೆ. ಅವನ ದಿನನಿತ್ಯದ ಚಲನವಲನ ಗಳನ್ನೆಲ್ಲ ಗಮನಿಸಿದಾಗ ಅವನಿಗೂ ಸಹ ಹುಡುಗಿಯರ ಹುಚ್ಚು ಇರುವುದು ಕಂಡು ಬಂತು. ಆದರೆ ಅವನಿಗೆ ಯಾವ ಹುಡುಗಿಯರು ಬೀಳದಿದ್ದಾಗ ನನಗೆ ಅಯ್ಯೋ ಅನಿಸಿ ಅವನಿಗೆ ಸೆರಗಾಸಿ ಅವನ ಆಸೆಗಳನ್ನು ನನ್ನ ಗಂಡನಿಗೂ ಕೂಡ ಗೊತ್ತಾಗದಾಗೆ ಈಡೇರಿಸಿದೆ. ಆದರೆ ಸಮಾಜ ಎಷ್ಟೊಂದು ವಿಶಾಲ ಅಲ್ವಾ! ನಾವು ಎಷ್ಟೇ ಗೌಪ್ಯತೆ ಕಾಪಾಡಿದರು ಅದು ಹೊಗೆಯಾಡಿ ಬಿಡುತ್ತದೆ. ಹೀಗೆ ಹೊಗೆಯಾಡಿದಾಗ ನನ್ನನ್ನು ತಪ್ಪು ತಿಳಿದುಕೊಂಡು ಈಗಲೂ ಸಹ ನನಗೆ ಹುಡುಗರು ಒಂದು ರೀತಿಯಲ್ಲಿ ನೋಡುತ್ತಿರುತ್ತಾರೆ” ಎಂದು ಹೀಗೆ ಹೇಳುತ್ತಾ ನನ್ನ ಕೈಯನ್ನು ಹಿಡಿದುಕೊಂಡು “ಗಾಳೇರ ನಾನು ಮಾಡಿದ್ದು ತಪ್ಪಾ ಅಂತ ಕೇಳಿದಾಗ” ನನಗೆ ಮಾತೆ ಬರದಾಯಿತು.
ಹೀಗೆ ಸ್ವಲ್ಪ ದಿನ ಕಳೆದ ನಂತರ ಈ ವಿಚಾರವನ್ನು ನಾನು ಗಂಭೀರವಾಗಿ ತೆಗೆದುಕೊಂಡು ನನ್ನ ಹಲವಾರು ಗೆಳೆಯರೊಂದಿಗೆ ನಾಗರಾಜ್ ವಿಳಾಸವನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದೆ. ಈ ವಿಷಯ ಅವರ ಮನೆಯವರಿಗೆ ತಿಳಿಸಿದಾಗ ನಾಗರಾಜನೂ ಕೂಡ ನನ್ನಂತೆ ಊರು ಬಿಟ್ಟ ಬಂದವನೆಂದು ತಿಳಿಯಿತು. ಅವರ ಮನೆಯವರು ಬಂದು ಅವನನ್ನು ಕರೆದುಕೊಂಡು ಹೋದರು. ನಾನು ಒಂದೆರಡು ತಿಂಗಳ ನಂತರ ಆ ಕಂಪನಿಯಲ್ಲಿ ಕೆಲಸ ಬಿಟ್ಟಿದ್ದೆ. ಅದಾದ ನಂತರ ನನಗೆ ಯಾರ ಸಂಪರ್ಕವೂ ಇರಲಿಲ್ಲ. ಒಂದು ದಿನ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಅಚನಕ್ಕಾಗಿ ಕಮಲ ಆಂಟಿ ಸಿಕ್ಕಾಗ ನಾಗರಾಜ್ ಸತ್ತನೆಂದು ತಿಳಿದಾಗ ನಾಗರಾಜನ ಸಾವು ನನ್ನ ಕಾಡದೆ ಆಂಟಿ ಮಾಡಿದ ಆ ತ್ಯಾಗ ಇವತ್ತಿಗೂ ಕೂಡ ನನ್ನ ಕಾಡುತ್ತಿರುತ್ತದೆ. ಮತ್ತೆ ಆಂಟಿ ಒಳ್ಳೆಯವಳು ಅವಳ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಳ್ಳಬೇಕೆಂದು ಅವಳ ದೂರವಾಣಿಸಂಖ್ಯೆ ಇಸಿದುಕೊಂಡೆ. ಒಂದೆರಡು ತಿಂಗಳು ಸಂಪರ್ಕದಲ್ಲಿದ್ದ ಆಂಟಿ ನಂತರ ಇವತ್ತಿಗೂ ಅವಳು not reachable.ಆದರೆ ಅವಳ ಸಹಾಯ ನನ್ನ ಮನಸ್ಸಿಗೆ ಯಾವಾಗಲೂ reachable.
********
ಮೂಗಪ್ಪ ಗಾಳೇರ್