ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ನಾನೇಕೆ ಓದುತ್ತೇನೆ ಈ ಚರ್ಚೆಯ ಹಿನ್ನೆಲೆ ಮತ್ತು ವಿವರಗಳು “ಲಂಕೇಶರನ್ನು ನಾನೇಕೆ ಓದುತ್ತೇನೆ?” ಸ್ಪರ್ಧೆಯ ಫಲಿತಾಂಶ : ಸಹೃದಯರೇ, ‘ಮೈಸೂರು ಗೆಳೆಯರು’ ‘ಲಂಕೇಶ್ ನೆನಪು’ ಕಾರ್ಯಕ್ರಮದ ಭಾಗವಾಗಿ‘ನಾನೇಕೆ ಲಂಕೇಶರನ್ನು ಓದುತ್ತೇನೆ?’ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಈ ಸ್ಪರ್ಧೆಗೆ ಒಟ್ಟು ಆರು ಜನ ತಮ್ಮ ಬರಹಗಳನ್ನು ಕಳುಹಿಸಿದ್ದರು. ಈ ಬರಹಗಳನ್ನು ಓದಿ,ಅವುಗಳಲ್ಲಿ ಒಂದನ್ನು ಬಹುಮಾನಕ್ಕೆ ಆಯ್ಕೆ ಮಾಡಿ ಎಂದು (ಬರಹಗಾರರ ಹೆಸರನ್ನು ತೀರ್ಪುಗಾರರಿಗೆ ನೀಡದೆ, ನಾವು ಸ್ಪರ್ಧಿ-1, ಸ್ಪರ್ಧಿ -2 ಎಂದಷ್ಟೆ, ಬರಹದಲ್ಲಿ ಹಾಕಿ ಕಳುಹಿಸಿದ್ದೆವು) ನಾಡಿನ […]

ಕಾವ್ಯಯಾನ

ಧಿಕ್ಕಾರವಿರಲಿ                            ಗೌರಿ.ಚಂದ್ರಕೇಸರಿ ನೇಣಿನ ಕುಣಿಕೆಯ ನೆನೆದು ಝಲ್ಲನೆ ಬೆವರುವ ನೀವು ಎರಡು ಕ್ಷಣದ ನೋವಿಗೆ ಕೊರಳೊಡ್ಡಲಾರದ ರಣ ಹೇಡಿಗಳು ಅರಳಿ ನಿಂತು ನಸು ನಗುವ ಹೂವನ್ನು ಹೊಸಕಿ ಹಾಕುವಾಗಿನ ಭಂಡತನ ಯಾರದೋ ಮನೆಯ ನಂದಾ ದೀಪವ ನಂದಿಸಿ ಗಹ ಗಹಿಸಿ ನಕ್ಕು ನಲಿದ ನಿಮ್ಮ ಗುಂಡಿಗೆಯ ಕುದಿ ರಕ್ತ ಗಲ್ಲು ನೆನೆದು ಗಡ್ಡೆ ಕಟ್ಟಿತೆ? ಹೆಣ್ಣಿನಲ್ಲಿ ತಾಯ ತಂಗಿಯರ ಕಾಣದ ನೀವು ಹುಣ್ಣೊಳಗಿನ ಹುಳುಗಳು ಯಾರದೋ ತೋಟದ ಸುಮಗಳನು ಹೊಸಕಿ ಹಾಕಿ ಅಟ್ಟಹಾಸದ ಮೀಸೆಯ ಹುರಿಗೊಳಿಸುವ […]

ಕಾವ್ಯಯಾನ

ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ  ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ  ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ  ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ  ಸಮುದ್ರದಾಳದ ಮುತ್ತಾಗ ಬಯಕೆಯೇ […]

ಅನುವಾದ ಸಂಗಾತಿ

ಹೆಣ್ಣಿನ ದುಡಿಮೆ ಮೂಲ:ಮಾಯಾ ಏಂಜೆಲೋ ಕನ್ನಡಕ್ಕೆ ಡಾ.ಗೋವಿಂದ ಹೆಗಡೆ ನನಗೆ ಮಕ್ಕಳ ಕಾಳಜಿ ಮಾಡಲಿದೆ ಅರಿವೆಗಳನ್ನು ಒಗೆಯಲಿದೆ ನೆಲ ಸಾರಿಸುವುದು ಆಹಾರ ಖರೀದಿಸುವುದು ಕೋಳಿಯನ್ನು ಹುರಿಯುವುದು ಮಗುವನ್ನು ಚೊಕ್ಕ ಮಾಡುವುದು ಬಂದವರಿಗೆ ಊಟ ನೀಡಬೇಕಿದೆ ತೋಟದ ಕಳೆ ತೆಗೆಯಬೇಕಿದೆ ಅಂಗಿಗಳಿಗೆ ಇಸ್ತ್ರಿ ಮಾಡಲಿದೆ ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ ಕಬ್ಬು ಕತ್ತರಿಸಲಿಕ್ಕಿದೆ ಈ ಗುಡಿಸಲನ್ನು ಶುಚಿಗೊಳಿಸಲಿದೆ ರೋಗಿಗಳ ಉಪಚರಿಸಲಿದೆ ಹತ್ತಿಯನ್ನು ಬಿಡಿಸುವುದಿದೆ ಬೆಳಗು ನನ್ನಮೇಲೆ, ಬಿಸಿಲೇ ಸುರಿ ನನ್ನ ಮೇಲೆ, ಮಳೆಯೇ ಮೃದುವಾಗಿ ಇಳಿ, ಇಬ್ಬನಿಯೇ ನನ್ನ ಹಣೆಯನ್ನು […]

ಕಾವ್ಯಯಾನ

ಕವಿತೆ ರಾಮಸ್ನಾಮಿ ಡಿ.ಎಸ್ ಸಂಗೀತಕಛೇರಿಯತಂಬೂರಿಶೃತಿಹೆಣ್ಣು. ಬಿಗಿತ ಹೆಚ್ಚಾದರೆತುಂಡಾಗುವ ತಂತಿಸಡಿಲಾದರೆ ಹೊಮ್ಮದು ನಾದ ತನ್ನ ಕಂಠಸಿರಿಗೆತಕ್ಕಂತೆ ಶೃತಿಹೊಂದಿಸಿಕೊಳ್ಳುವುದುಗಾಯಕನ ಜವಾಬ್ದಾರಿ. ವೀಣೆ ಸಿತಾರು ಸರೋದುಗಳನ್ನುಬೆರಳಿನಿಂದಲೇ ನುಡಿಸಬಹುದಾದರೂರಕ್ಷಣೆಗೆ ಕವಚ ಇರುವಂತೆಯೇಪಿಟೀಲು ನುಡಿಯುವುದು ಕಮಾನಿಗೆ ಶೃತಿ ತಪ್ಪದೇ ಇದ್ದರೆಕಛೇರಿ ಕಳೆಗಟ್ಟುವುದಕ್ಕೆಇದ್ದೇ ಇವೆ ಪಕ್ಕ ವಾದ್ಯದಸಹಕಾರ, ತನಿ ಆವರ್ತನ. ಸಂಸಾರದ ಕಛೇರಿಯೂಥೇಟು ಸಂಗೀತದ ಹಾಗೇ ಶೃತಿ ತಪ್ಪದ ಹಾಗೆತಾಳ ಮರೆಯದ ಹಾಗೆಪರಸ್ಪರರ ಗೌರವಕ್ಕೆ ಹಾನಿ ಮಾಡದ ಹಾಗೆ ಬದುಕ ಹಾಡು ಹಾಡಬೇಕುಇಹದ ಇರವ ಮರೆಯಬೇಕು. *******

ಕಾವ್ಯಯಾನ

ಗಝಲ್ ಶಶಿಕಾಂತೆ ಇಂದು ನಿನ್ನೆಯದಲ್ಲ ನನ್ನ ನಿನ್ನ ಪ್ರೇಮ ಯಾವ ಜನ್ಮದ ಮೈತ್ರಿಯೋ ನಾಕಾಣೆ.. ಇನ್ನೆಂದಿಗೂ ನನ್ನನು ಬಿಟ್ಟು ದೂರ ಹೋಗಬೇಡಾ,ನಮ್ಮ ಪ್ರೀತಿ ಮೇಲಾಣೆ.. ತಿಳಿನೀರ ಕೊಳದಂತಿದ್ದ ಮನಸಲಿ ಒಲವೆಂಬ ಕಲ್ಲೆಸೆದು ಹೋದೆಯಲ್ಲಾ.. ಕೂತರೂ ನಿಂತರೂ ,ಮಲಗಿದರೂ ನಿನ್ನದೇ ಧ್ಯಾನ ,ತಾಳಲಾರೆ ಈ ಭವಣೆ.. ಕುಡಿನೋಟ ನೀ ಬೀರಿದಾಗಿ ನಾಚಿನಾಚಿ ಕೆಂಪುಕೆಂಪು ಸೇಬಾಯ್ತು ನನ್ನ ಕೆನ್ನೆ.. ಯಾರನ್ನೂ ಒಪ್ಪದ ಮನಸು ನಿನಗೊಲಿ ಯಲು ಕಾರಣ ನಿನ್ನ ಸ್ನೇಹ ಸಂಭಾಷಣೆ.. ಕಣ್ಣಿಗೆ ಕಾಣ್ಣದ್ದು ಹೃದಯಕ್ಕೆ ತಿಳಿಯಲು ತಡವಿಲ್ಲ. ನಿನ್ನ […]

ಮಹಿಳಾದಿನದ ವಿಶೇಷ

ದ್ವೇಷ.. ಶ್ವೇತಾ. ಎಂ.ಯು. ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನೂ ಉಳಿದಿಲ್ಲ; ಆಸೆಗಣ್ಣುಗಳಲಿ ನೀವು ತುಂಬಿಕೊಂಡರೆ ನನ್ನ ನಗಬೇಕು ಎನಿಸುತ್ತದೆ, ಸುಮ್ಮನಾಗುತ್ತೇನೆ ರಂಜಕ ಹಾಕಿ ಸುಡುವ ಮನಸಾದರು ಕಣ್ಣುಗಳು ನೋಡಿಕೊಳ್ಳಲಿ ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ.. ಬಾಯಾರಿದರೆ ಕುಡಿಯ ಬೇಕು ನೀರು; ಕೊಳದಲ್ಲಿ ಈಜುವುದು ಕೊಳಕಾದವರು ಮಾತ್ರವೇ ? ಇಲ್ಲದಿರಬಹುದು ನಾಲಗೆಗೆ ಎಲುಬು ಹೃದಯಕ್ಕೆ ದಾರಿಗಳಿವೆ ಸಂಯಮವೇ ಸಂಬಂಧ ಗುಣಗಳೇ ಬೆಳಕು ನಗುವಿಗೆ ಹಲವು ಮುಖ ಬದಲಿ […]

ಮಹಿಳಾದಿನದ ವಿಶೇಷ

ಒಂದು ಹೆಣ್ಣಿನ ಸ್ವಗತ. ಜ್ಯೋತಿ ಡಿ.ಬೊಮ್ಮಾ ನನಗಾರ ಭಯ..! ನಾನು ಜನ್ಮ ಕೊಡುವ ಹೆಣ್ಣು ಮಗುವನ್ನು ಈ ಲೋಕದಿ ತರಲು ನನಗಾರ ಭಯ.. ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು.. ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವ ಧೈರ್ಯ ನನಗಿಲ್ಲದಿರುವದು.. ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..! ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ.. ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ.. ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವ ನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳು ಅವಳು ಅನುಭವಿಸುವದು ಬೇಡವೆಂದೇ… ಕೆಟ್ಟ ಕಾಮುಕರಿಗೆ […]

ಮಹಿಳಾದಿನದ ವಿಶೇಷ

ಅಹಂಕಾರ ಅಣ್ಣೇಶಿ ದೇವನಗರಿ ಹೆಣ್ಣೆಂದು ಜರಿದರು ಹಣ್ಣಂತೆ ಹರಿದು ಮುಕ್ಕಿದರು, ಭುವಿಗೆ ಹೋಲಿಸಿದರು ಒಡಲ ಬಗೆದರು , ಪ್ರಕೃತಿ ಎಂದರು ವಿಕೃತಿ ಮೆರೆದರು , ಭುವಿಗೆ ಹೋಲಿಸಿದ್ದೂ ಪ್ರಕೃತಿಯೆಂದು ವರ್ಣಿಸಿದ್ದು ಮುಂದೊಂದು ದಿನ ತಾನು ಗೈಯ್ಯಲಿರುವ ಕ್ರೌರ್ಯ ಕಾರ್ಯವ ಮೂಕಳಾಗಿ ಸಹಿಸಿಕೊಳ್ಳಲೆಂಬ ದೂ(ಧು)ರಾಲೋಚನೆಯಿದೆಂಬಂತೆ ನಿರಂತರ ಸುಲಿಗೆ ಮಾಡಿದರೂ , ಅವಳದು ಮೌನ ಆಕ್ರಂದನ , ಅರಣ್ಯರೋದನ . ಈ ಅತ್ಯಾಚಾರ ತಡೆಯಲು ಮತ್ತೆ ಅವಳೇ ಎತ್ತಬೇಕಿದೆ ದುರ್ಗೆಯ ಅವತಾರ , ಮುರಿಯ ಬೇಕಿದೆ ಅತ್ಯಾಚಾರಿಗಳ ಅಹಂಕಾರ..! **************************

ಮಹಿಳಾದಿನದ ವಿಶೇಷ

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ತ್ರಿವೇಣಿ ಜಿ.ಹೆಚ್ ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ? ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ […]

Back To Top