ಅಹಂಕಾರ
ಅಣ್ಣೇಶಿ ದೇವನಗರಿ
ಹೆಣ್ಣೆಂದು ಜರಿದರು
ಹಣ್ಣಂತೆ ಹರಿದು
ಮುಕ್ಕಿದರು,
ಭುವಿಗೆ ಹೋಲಿಸಿದರು
ಒಡಲ ಬಗೆದರು ,
ಪ್ರಕೃತಿ ಎಂದರು
ವಿಕೃತಿ ಮೆರೆದರು ,
ಭುವಿಗೆ ಹೋಲಿಸಿದ್ದೂ
ಪ್ರಕೃತಿಯೆಂದು ವರ್ಣಿಸಿದ್ದು
ಮುಂದೊಂದು ದಿನ
ತಾನು ಗೈಯ್ಯಲಿರುವ
ಕ್ರೌರ್ಯ ಕಾರ್ಯವ
ಮೂಕಳಾಗಿ ಸಹಿಸಿಕೊಳ್ಳಲೆಂಬ
ದೂ(ಧು)ರಾಲೋಚನೆಯಿದೆಂಬಂತೆ
ನಿರಂತರ ಸುಲಿಗೆ ಮಾಡಿದರೂ ,
ಅವಳದು ಮೌನ ಆಕ್ರಂದನ ,
ಅರಣ್ಯರೋದನ .
ಈ ಅತ್ಯಾಚಾರ ತಡೆಯಲು
ಮತ್ತೆ ಅವಳೇ ಎತ್ತಬೇಕಿದೆ
ದುರ್ಗೆಯ ಅವತಾರ ,
ಮುರಿಯ ಬೇಕಿದೆ
ಅತ್ಯಾಚಾರಿಗಳ ಅಹಂಕಾರ..!
**************************
ಚೆಂದದ ಕವನ