ಕಾವ್ಯಯಾನ

ಕಾವ್ಯಯಾನ

ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ […]

ನೆನಪು

ದಾವಣಗೆರೆಯ ಕಪ್ಪು ಗುಲಾಬಿ ಮಲ್ಲಿಕಾರ್ಜುನ ಕಡಕೋಳ ಕಣ್ಮರೆಯಾದ ದಾವಣಗೆರೆಯ ಕಪ್ಪು ಗುಲಾಬಿ ಆ ಪುಟ್ಟ ಕಂದನಿಗೆ ಎರಡು ವರ್ಷವೂ ತುಂಬಿರಲಿಲ್ಲ. ಮೊಲೆಹಾಲು ಕುಡಿಯುವ ಆ ಹಸುಳೆಯ ತಂದೆ ಜೈಲು ಸೇರಬೇಕಾದ ದುಃಸ್ಥಿತಿ. ಅವರೇನು ಕಳ್ತನ, ದರೋಡೆ ಮಾಡಿ ಜೈಲು ಸೇರಿದ್ದಲ್ಲ. ಮಿಲ್ಲುಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಕಾರಾಗೃಹ ಸೇರಬೇಕಾಯ್ತು. ದಿಟ್ಟ ಹೋರಾಟಕ್ಕೆ ಸಿಕ್ಕ ಕೆಟ್ಟ ಪ್ರತಿಫಲ ಎಂಬಂತೆ ಒಂದಲ್ಲ ಎರಡು ಬಾರಿ, ಒಟ್ಟು ಹದಿನಾಲ್ಕು ವರುಷ ಈ ತಂದೆ ಜೈಲು ಪಾಲಾದರು. ತಂದೆಯ […]

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-4 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು ಎಂದಿಗೂ ತೆರೆಯದಿರಲಿ! ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಂಬೆಳಿಗ್ಗೆ ತೆಗೆದು, ಕಸ ಗುಡಿಸಿ ಮನೆಯ ಮುಂದೆ ನೀರು ಚಿಮುಕಿಸಿ, ರಂಗೋಲಿ ಹಾಕುವುದೆಂದರೆ ನನಗೆ ಒಂದು ಬಗೆಯ ಸಂಭ್ರಮ. ಅಂಗಳದಲ್ಲಿ ಮೊಗ್ಗು ಬಿರಿದು ಹೂವಾಗುವ ಚೆಂದ, ಚಿಲಿಪಿಲಿ ಕೂಗುತ್ತ ಹಕ್ಕಿಗಳು ಹಾರಾಡುವ ಸಡಗರ, ಮೂಡಣ ರಂಗಾಗಿಸಿ ಬರುವ ನೇಸರನ ಅಂದ…ಎಲ್ಲವುಗಳ ಮೇಲೆ ಕಿರುನೋಟ ಬೀರುವ, ತಂಗಾಳಿಗೆ ಮೈಮನ […]

ನಿಮ್ಮೊಂದಿಗೆ

ಪ್ರಿಯ ಬರಹಗಾರರಿಗೆ ಪ್ರಿಯರೆ ಆರಂಭದ ಅಡಚಣೆಗಳನ್ನು ದಾಟಿಸಂಗಾತಿ ಬ್ಲಾಗ್ ಐದನೆ ತಿಂಗಳನ್ನು ಪೂರೈಸುತ್ತಿದೆ.ಈ ನಿಟ್ಟಿನಲ್ಲಿ ಬರಹಗಾರರಿಗೆ ಕೆಲವು ಮಾತುಗಳನ್ನುಹೇಳಲೇ ಬೇಕಿದೆ.ಮೊದಲನೆಯದಾಗಿ ಇದುವರೆಗಿನ ನಿಮ್ಮಸಹಕಾರಕ್ಕೆ ದನ್ಯವಾದಗಳು. ಮುಂದೆಯೂತಮ್ಮ ಸಲಹೆ-ಸಹಕಾರಗಳು ಹೀಗೆ ಮುಂದುವರೆಯಲೆಂದು ಬಯಸುತ್ತೇನೆ ದಯಮಾಡಿ ನಿಮ್ಮಬರಹಗಳನ್ನುತಪ್ಪಿರದೆ ಟೈಪ್ ಮಾಡಿ ಕಳಿಸಿ,ಇನ್ನು ಬರಹಗಳಪಿಡಿಎಫ್ ಮತ್ತು ಪೋಟೊಪ್ರತಿಗಳನ್ನು ಕಳಿಸಬೇಡಿ. ಈಗಾಗಲೇ ಫೇಸ್ಬುಕ್ಕಿನಲ್ಲಿ ಹಾಕಿದಬರಹಗಳನ್ನು ಕಳಿಸದೆ,ನಿಮ್ಮಹೊಸ ಬರಹಗಳನ್ನು ಕಳಿಸಿ,ಆದಷ್ಟು ಗುಣ ಮಟ್ಟದ ಬರಹಗಳನ್ನು ಕಳಿಸಿಒಂದು ಬರಹಕ್ಕು ಮತ್ತೊಂದು ಬರಹಕ್ಕು ಕನಿಷ್ಠ  ಒಂದುವಾರ ಅಂತರವಿರಲಿ.ಬರಹದ ಗುಣಮಟ್ಟದ ಬಗ್ಗೆ ನೀವೇ ಮೌಲ್ಯಮಾಪನ ಮಾಡಿಕೊಂಡು  ಪ್ರಕಟಿಸಬಹುದಾದದ್ದು ಅನಿಸಿದರೆ […]

ಕಾವ್ಯಯಾನ

ಕಾಲದ ಕರೆ ಡಾ.ಪ್ರಸನ್ನ ಹೆಗಡೆ ಮನೆಯ ಒಳಗೇ ಉಳಿಯಬೇಕಾಗಿದೆ ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ ಮುಖಗವಚ ಧರಿಸಬೇಕಾಗಿದೆ ವೈರಾಣುವ ದೂರವೇ ಇಡಬೇಕಾಗಿದೆ ನಡುನಡುವೆ ಅಂತರ ಕಾಪಾಡಿಕೊಂಡು ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ ಶಿರವನ್ನೇ ಹೊನ್ನಗಲಶವಾಗಿಸಿಕೊಂಡು ಆತ್ಮಜ್ಯೋತಿಯ ಬೆಳಗಬೇಕಾಗಿದೆ ಮನದಿ ಕುಣಿವ ಮಂಗಗಳ ಹಿಡಿದು ಉದ್ಯಾನವನ ಉಳಿಸಿಕೊಳಬೇಕಾಗಿದೆ ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ ಈ ದಿನವ ಹೇಗೋ ದೂಡಬೇಕಾಗಿದೆ ಹೊರಗೆ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಅಭಿಮಾನದ ಎದೆಪುಟದಲಿ ಅನುಮಾನದ ಸಾಲುಗಳೇತಕೆ ಗೆಳೆಯಾ ಆತ್ಮಸಾಕ್ಷಿಯ ದೀಪದೆದುರಲಿ ಅಂಧಕಾರದ ಚಿಂತೆಗಳೇತಕೆ ಗೆಳೆಯಾ ಅಂಗೈಯ್ಯಲೇ ಮಾಣಿಕ್ಯವಿದ್ದರೂ ಅದರಾಕರ್ಷಿತರ ಗೊಡವೆಗಳೇತಕೆ ಒಡೆಯಾ ನಿನ್ನಂತರಂಗದೊಳು ನಾನು ಪಣತಿಯಾಗಿದ್ದರೂ ಭ್ರಮೆಗಳೇತಕೆ ಗೆಳೆಯಾ ಹದವರಿತು ಹೆಪ್ಪಾಗಿರುವ ಮೊಸರಿನಲಿ ಕಲ್ಲ ಹುಡುಕುವುದೇತಕೆ ಇನಿಯಾ ಒಳಗವಿತಿರುವ ಕಂಪಿನ ಘ್ರುತವಿದ್ದರೂ ನಾರುವ ಭಾವಗಳೇತಕೆ ಗೆಳೆಯಾ ನೋವುನಲಿವಲೂ ಜೊತೆಯಾಗಿ ಹಿಂಬಾಲಿಸುವ ನೆರಳ ಬಾಧಿಸುವುದೇತಕೆ ಹೃದಯಾ ನೆರಳಿಗೆ ನಿನ್ನ ಹೊರತು ಮತ್ಯಾವ ಆಸರೆ, ನಿನಗೆ ಭಯಗಳೇತಕೆ ಗೆಳೆಯಾ ದುಃಖಗಳ ಮನದ ಮರುಭೂಮಿಯಲಿ ಬಿಸಿಗಾಳಿಯಾಗಿ ಸುಳಿಯುವುದೇತಕೆ […]

ವಿಜ್ಞಾನ

ವಿಜ್ಞಾನದ ಕ್ಷಿತಿಜ, ಮನುಕುಲದ ಪ್ರಗತಿ ವಿಸ್ತರಿಸುವ ಮೈಕ್ರೊವೈಟಾ         ವಿಶೇಷವಾದ ಜ್ಞಾನವೇ ವಿಜ್ಞಾನ.  ಹೊಸ ಸಂಶೋಧನೆಗಳು, ಹೊಸ ಆವಿಷ್ಕಾರಗಳಿಗೆ  ಮೂಲ ಕಾರಣ, ಕನಸನ್ನು ಕಾಣುವ  ಮತ್ತು ಅದನ್ನು  ನನಸಾಗಿಸುವ  ತೀವ್ರ ತುಡಿತ ಜೊತೆಗೆ ನಿರಂತರ  ಪ್ರಯತ್ನ. ಹಕ್ಕಿಗಳಂತೆ ತಾನು ಆಕಾಶದಲ್ಲಿ  ವಿಹರಿಸಬೇಕೆಂಬ ಕನಸನ್ನು ಕಂಡು ನನಸಾಗಿಸಿದವರಿಂದಾಗಿ ಇಂದು ವಾಯುಯಾನ ಸಾಧ್ಯವಾಗಿದೆ. ಸ್ಥೂಲ  ಜಗತ್ತೇ ಸರ್ವಸ್ವ ಎಂದುಕೊಂಡಲ್ಲಿಂದ  ನ್ಯಾನೋ ತಂತ್ರಜ್ಞಾನದ ಬಳಕೆಯ  ದಿನಗಳು ಬಂದಿವೆ. ಇಡೀ ವಿಶ್ವವು  ತರಂಗರೂಪಿ ಅಸ್ತಿತ್ವವೆಂಬ ಅರಿವಿನಿಂದಾಗಿ, ವಿಜ್ಞಾನದ  ಮೂಲ ನಂಬಿಕೆಗಳೂ ಬದಲಾಗುತ್ತಿವೆ. ಪ್ರೋಟೋನ್, […]

ಕಾವ್ಯಯಾನ

ಗಝಲ್ ವೆಂಕಟೇಶ್ ಚಾ ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ|| ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ|| ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ || ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು ಹೊತ್ತಿದೆ ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರೂ ಜೊತೆಯಾದಾಗ || ಅಗೋ,ಮುಂಬರುವ ದಿನಗಳ ತುಂಬಾ […]

Back To Top