ಕಾವ್ಯಯಾನ

ಗಝಲ್

woman in white sleeveless top holding umbrella looking up

ವೆಂಕಟೇಶ್ ಚಾ

ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ
ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ||

ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ
ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ||

ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ
ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ ||

ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು ಹೊತ್ತಿದೆ
ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರೂ ಜೊತೆಯಾದಾಗ ||

ಅಗೋ,ಮುಂಬರುವ ದಿನಗಳ ತುಂಬಾ ನೆರಳು ಬೆಳಕಿನ ಚೆಂದದ ಆಟ
‘ಚಾಗಿ’ಯ ಕಲ್ಪನೆಯ ಬದುಕು ನಿಜವಾಗಿದೆ ನಾವಿಬ್ಬರು ಜೊತೆಯಾದಾಗ ||

********

Leave a Reply

Back To Top