ವಿಜ್ಞಾನ

ವಿಜ್ಞಾನದ ಕ್ಷಿತಿಜ, ಮನುಕುಲದ ಪ್ರಗತಿ ವಿಸ್ತರಿಸುವ ಮೈಕ್ರೊವೈಟಾ

Microvita Cosmology / Wave Matrix Physics


        ವಿಶೇಷವಾದ ಜ್ಞಾನವೇ ವಿಜ್ಞಾನ.  ಹೊಸ ಸಂಶೋಧನೆಗಳು, ಹೊಸ ಆವಿಷ್ಕಾರಗಳಿಗೆ  ಮೂಲ ಕಾರಣ, ಕನಸನ್ನು ಕಾಣುವ  ಮತ್ತು ಅದನ್ನು  ನನಸಾಗಿಸುವ  ತೀವ್ರ ತುಡಿತ ಜೊತೆಗೆ ನಿರಂತರ  ಪ್ರಯತ್ನ. ಹಕ್ಕಿಗಳಂತೆ ತಾನು ಆಕಾಶದಲ್ಲಿ  ವಿಹರಿಸಬೇಕೆಂಬ ಕನಸನ್ನು ಕಂಡು ನನಸಾಗಿಸಿದವರಿಂದಾಗಿ ಇಂದು ವಾಯುಯಾನ ಸಾಧ್ಯವಾಗಿದೆ. ಸ್ಥೂಲ  ಜಗತ್ತೇ ಸರ್ವಸ್ವ ಎಂದುಕೊಂಡಲ್ಲಿಂದ  ನ್ಯಾನೋ ತಂತ್ರಜ್ಞಾನದ ಬಳಕೆಯ  ದಿನಗಳು ಬಂದಿವೆ. ಇಡೀ ವಿಶ್ವವು  ತರಂಗರೂಪಿ ಅಸ್ತಿತ್ವವೆಂಬ ಅರಿವಿನಿಂದಾಗಿ, ವಿಜ್ಞಾನದ  ಮೂಲ ನಂಬಿಕೆಗಳೂ ಬದಲಾಗುತ್ತಿವೆ. ಪ್ರೋಟೋನ್, ಪಾಸಿಟ್ರಾನ್‍ಗಳಿಗಿಂತ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಾದ ಮೈಕ್ರೊವೈಟಾ ಕುರಿತಾದ  ಸಿದ್ಧಾಂತದಿಂದಾಗಿ ವೈಜ್ಞಾನಿಕ  ಕ್ಷೇತ್ರದಲ್ಲಿ  ಮಹತ್ತರ ಬದಲಾವಣೆಗಳಾಗಲಿವೆ.

   ಮೈಕ್ರೊವೈಟಾ ಸಿದ್ಧಾಂತದ ಹಿನ್ನೆಲೆಯಲ್ಲಿ ಸಂಶೋಧನೆಗಳು ಪ್ರಾರಂಭವಾಗುತ್ತಿವೆ.  ಮೈಕ್ರೊವೈಟಾಗಳು ಸ್ಥೂಲ, ಸೂಕ್ಷ್ಮ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವುದರಿಂದ   ಭೌತಿಕ  ಪ್ರಯೋಗಾಲಯಗಳಲ್ಲೇ ಈ ಸಂಶೋಧನೆಗಳು ಪೂರ್ಣಗೊಳ್ಳಲಾರವು. ಈ ಸೂಕ್ಷ್ಮ ಸ್ಥಿತಿಯನ್ನು ಗ್ರಹಿಸಲು ಅವರವರ  ಕ್ಷೇತ್ರಗಳಲ್ಲಿ  ಪರಿಣ ತಿ ಹೊಂದಿದ ವಿಜ್ಞಾನಿಗಳಿಗೆ ಅಗ್ರಬುದ್ಧಿಯನ್ನು  ಬೆಳೆಸಿಕೊಳ್ಳುವುದು ಅನಿವಾರ್ಯ.  ಸಂಶೋಧಕರ ಮನಸ್ಸು ವಿಸ್ತಾರ ಹೊಂದಿದಷ್ಟು, ಸೂಕ್ಷ್ಮವಾದಷ್ಟು  ಅವರ ಕಲ್ಪನಾ ಶಕ್ತಿ  ಮತ್ತು ಗ್ರಹಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ. ಇದಕ್ಕಿರುವ  ಒಂದೇ ದಾರಿಯೆಂದರೆ ಮನಸ್ಸನ್ನು ಏಕಾಗ್ರಗೊಳಿಸಿ, ಅನಂತತೆಯಲ್ಲಿ  ಒಂದಾಗಿಸುವ  ಧ್ಯಾನ ಮಾಡುವುದು. 

   ಕೋಟಿಗಟ್ಟಲೆ ಮೈಕ್ರೊವೈಟಾಗಳಿಂದ  ಒಂದು ಎಲೆಕ್ಟ್ರಾನ್ ರೂಪುಗೊಳ್ಳುತ್ತದೆಂಬ  ಆಧಾರದಲ್ಲಿ ನಡೆಸುವ  ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರದ  ಅರಿವು ಹಿಗ್ಗಲಿದೆ. ಅಣು  ಶಕ್ತಿಯನ್ನು ಬಳಸಿ ಹಾರಲಿರುವ  ರಾಕೆಟ್‍ಗಳು ಕೂಡಾ  ಸೌರಮಂಡಲದಾಚೆಗೆ  ಹೋಗಲಾಗಿಲ್ಲ.  ಸಂಶೋಧನೆಗಳಿಂದ  ಹೊಸ ಇಂಧನಗಳ  ಸೃಷ್ಟಿಯಾಗಲಿದೆ.  ಪೆಟ್ರೋಲ್ , ಡೀಸೆಲ್‍ಗಳಿಗೆ  ಪರ್ಯಾಯಗಳು,  ಕೃತಕ  ಪೆಟ್ರೋಲ್ ಸೃಷ್ಟಿಯಾಗಲಿವೆ.  ಸೌರಮಂಡಲದಾಚೆಗಿನ ನಕ್ಷತ್ರ, ಗ್ರಹಗಳಿಗೆ  ತಲ್ಪುವ  ಮಾನವನ ಕನಸು ನನಸಾಗುತ್ತದೆ.

Toroid-model of the Microvitum - Microvita Research Institute ...

   ಶತಮಾನಗಳಿಂದಲೂ  ಉತ್ತರ ಕಂಡುಕೊಳ್ಳಲಾಗದ ಅದೆಷ್ಟೋ    ನಿಸರ್ಗದ   ವೈಚಿತ್ರ್ಯಗಳಿಗೆ ವಿವರಣೆ ಸಿಗಲಿದೆ.  ಉದಾಹರಣೆಗಾಗಿ ಪ್ರಪಂಚದ  ಎಲ್ಲಾ ಸಮುದ್ರಗಳೂ ಒಂದಕ್ಕೊಂದು ಬೆಸೆದುಕೊಂಡಿವೆ.   ಆದರೂ, ಅವುಗಳ ಉಷ್ಣತೆ,  ಕ್ಷಾರೀಯತೆಗಳಲ್ಲಿ  ವ್ಯತ್ಯಾಸವಿದೆ.   ಆದರೆ ಈ ಸಮುದ್ರಗಳ ನೀರನ್ನು ತಂದು ಒಂದೇ ಪಾತ್ರೆಯಲ್ಲಿ  ಬೆರೆಸಿದಾಗ ಅವು ಒಂದಾಗಿ  ಏಕವಾಗುತ್ತವೆ. ಇದಕ್ಕೆ  ಅವುಗಳಲ್ಲಿರಬಹುದಾದ ಮೈಕ್ರೊವೈಟಾಗಳ  ಸಂಖ್ಯೆ  ಅಥವಾ ಪ್ರಭೇದಗಳು ಕಾರಣವಿರಬಹುದೇ? ಬರ್ಮೋಡಾ ತ್ರಿಕೋನದ ರಹಸ್ಯ ಇತ್ಯಾದಿಯಾಗಿ ಎಷ್ಟೋ ನಿಗೂಢತೆಗಳ  ರಹಸ್ಯ ಬಯಲಾಗಲಿವೆ.

       ಅಣು ವಿಕಿರಣ ಯಾಕಾಗುತ್ತದೆ? ಅದನ್ನು  ತಡೆಯಲು ಸಾಧ್ಯವೇ? ಅಥವಾ ಕಿರಣ ಹೊರಸೂಸದೇ ಹೀರಿಕೊಳ್ಳಲ್ಪಡುವಂತೆ (ಪರಾವರ್ತನ) ಮಾಡಬಹುದೇ ಎಂಬುದರ ಸಾಧ್ಯತೆಗಳಿಗೆ  ಮೈಕ್ರೊವೈಟಾ  ಸಂಶೋಧನೆಯೇ ಉತ್ತರ ನೀಡಬಲ್ಲದು.  ವಿದ್ಯುತ್  ಸಂಪರ್ಕಕ್ಕಾಗಿ ಎಲ್ಲೆಡೆ  ತಂತಿ  ಎಳೆಯುವ ಬದಲಿಗೆ  ಪರ್ಯಾಯ ವಿಧಾನಗಳ ಸಾಧ್ಯತೆಯನ್ನು  ಮೈಕ್ರೊವೈಟಾ ಅಧ್ಯಯನ ತೋರಿಸಿಕೊಡಲಿದೆ.

Plexuses and Microvita

   ರಸಾಯನಶಾಸ್ತ್ರದ  ಸೂತ್ರಗಳು ಇನ್ನಷ್ಟು ಉದ್ದವಾಗಲಿದೆ. ಉದಾಹರಣೆಗಾಗಿ  ಕೃಷಿಕರು ಬಳಸುವ  ತುತ್ತ ಅಥವಾ ಕಾಪರ್ ಸಲ್ಫೇಟ್ ಇದರ ಸಂಕೇತ ಅuSಔ4.  ಎಲ್ಲಾ ತಯಾರಕರು ಪೂರೈಸುವ  ತುತ್ತದ ಪರಿಣಾಮ ಮಾತ್ರ  ಒಂದೇ ರೀತಿಯಾಗಿರುವುದಿಲ್ಲ.  ಎಲ್ಲೊ ಒಂದೆಡೆ ಪರಿಣಾಮಕಾರಿಯಾದ   ತುತ್ತ, ಇನ್ನೊಂದೆಡೆ  ಪರಿಣಾಮ ಬೀರುವುದಿಲ್ಲ.  ಇದಕ್ಕೆ ಕಾರಣ ಅವುಗಳಲ್ಲಿರುವ  ಮೈಕ್ರೊವೈಟಾಗಳ  ಪ್ರಭೇದ ಮತ್ತು ಸಂಖ್ಯೆ.  ಇದರ ಅಧ್ಯಯನ ಸಾಧ್ಯವಾದಾಗ   ತುತ್ತದ ರಾಸಾಯನಿಕ  ಸೂತ್ರ  ಇನ್ನಷ್ಟು ಉದ್ದವಾಗಿ   ಅuSಔ4-ಒಂ 20 ಲಕ್ಷ ಎಂದಾಗಬಹುದು. ಅಂದರೆ ಈ ತುತ್ತದಲ್ಲಿ    ಂ ಪ್ರಭೇದದ 20 ಲಕ್ಷ ಮೈಕ್ರೊವೈಟಾಗಳು ಇವೆ ಎಂದು ಅರ್ಥ.  ಒಂದಕ್ಕಿಂತ ಹೆಚ್ಚು ಪ್ರಭೇದಗಳಿರುವಾಗ ಅದನ್ನು  ಕೂಡಾ  ನಮೂದಿಸಬೇಕಾಗುತ್ತದೆ. ಈ ಸಂಶೋಧನೆಗಳಿಂದಾಗಿ  ರಾಸಾಯನಿಕಗಳ ಬಳಕೆಯಲ್ಲಿ  ನಿಖರತೆ  ಬರುತ್ತದೆ.

  ರಸಾಯನಶಾಸ್ತ್ರದಲ್ಲಾಗುವ  ಸಂಶೋಧನೆಗಳ ಪರಿಣಾಮ ಇತರ ಸಂಬಂಧಿತ  ಕ್ಷೇತ್ರಗಳಾದ ಔಷಧಗಳು  (ಮಾನವ, ಪಶು, ಗಿಡ- ಮರಗಳಿಗೆ), ರಾಸಾಯನಿಕ  ಗೊಬ್ಬರಗಳು, ಇಂಧನ ಮೂಲ ಮುಂತಾದವುಗಳಲ್ಲಿ ಮಹತ್ತರ  ಬದಲಾವಣೆಗಳಾಗಲಿವೆ.

    ಇಂಗಾಲದ  ಕಣಗಳಿಂದಲೇ ಜೀವೋದ್ಭವವಾಗಿದೆಯೆಂಬ ನಂಬಿಕೆಯ  ಆಧಾರದಲ್ಲೇ ಜೀವಶಾಸ್ತ್ರದ  ಸಂಶೋಧನೆಗಳು ನಡೆದಿವೆ.  ಪ್ರತಿಯೊಂದು ಕಾರ್ಬನ್  ಕಣವೂ ಕೋಟ್ಯಾಂತರ ಮೈಕ್ರೊವೈಟಾಗಳಿಂದ  ರೂಪುಗೊಳ್ಳುತ್ತದೆ.  ಮೈಕ್ರೊವೈಟಮ್  ಎನ್ನುವ ಸೂಕ್ಷ್ಮಾತಿ ಸೂಕ್ಷ್ಮ ಜೀವ ಬೀಜವೇ ಪ್ರಥ್ವಿಯ ಮೇಲೆ ಜೀವೋದ್ಭವಕ್ಕೆ ಕಾರಣ ಎಂಬ ಸಿದ್ಧಾಂತದನ್ವಯ ನಡೆಯುವ ಸಂಶೋಧನೆಗಳ ಪರಿಣಾಮವಾಗಿ ಜೀವಶಾಸ್ತ್ರದ ಇಂದಿನ ಜ್ಞಾನದ  ವಿಸ್ತಾರ ಅಗಾಧವಾಗಲಿದೆ.

  ಇಷ್ಟೊಂದು  ವಿಧದ  ಸಸ್ಯ ಮತ್ತು ಪ್ರಾಣ  ಪ್ರಭೇದಗಳು ಯಾಕಿವೆ? ಅವಕ್ಕೆ  ಕಾರಣಗಳೇನು? ಅವುಗಳ ನಡುವಿನ  ಸಂಬಂಧಗಳೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.  ವಂಶವಾಹಿನಿಯಾಗಿ ವ್ಯಕ್ತಿಯ ವಿಶಿಷ್ಟತೆಯನ್ನು  ನಿರ್ಧರಿಸುವ  ಆರ್‍ಎನ್‍ಎ, ಡಿಎನ್‍ಎಗಳು  ಹೇಗೆ  ರೂಪುಗೊಳ್ಳುತ್ತವೆ?ವಿವಿಧ ರೀತಿಯ  ರಕ್ತದ ಗುಂಪುಗಳಿರಲು ಕಾರಣವೇನು ಮುಂತಾದ  ರಹಸ್ಯಗಳು   ಬಯಲಾಗಲಿವೆ.

      ಧಾನ್ಯ, ಹಣ್ಣು, ಹಂಪಲು, ತರಕಾರಿಗಳ  ವಂಶೀಯ ಗುಣಗಳನ್ನು ಗುರ್ತಿಸಿ,  ಅವುಗಳ  ಮೈಕ್ರೊವೈಟಾ ಸಂಖ್ಯೆ ಮತ್ತು ಸ್ವರೂಪವನ್ನು  ಬದಲಿಸುವುದರೊಂದಿಗೆ  ಪೌಷ್ಠಿಕಾಂಶಗಳ ಪ್ರಮಾಣವನ್ನು ನಿಗದಿಗೊಳಿಸಲು ಸಾಧ್ಯವಾಗಲಿದೆ ಹಾಗೂ  ಪೇರಲೆಯನ್ನು  ಮಾವಿನಹಣ್ಣನ್ನಾಗಿ  ಪರಿವರ್ತಿಸಲು ಸಾಧ್ಯವಾಗಲಿದೆ.

        ಜೀವಶಾಸ್ತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ಆರೋಗ್ಯ ಕ್ಷೇತ್ರದ ಬಲ ವರ್ಧಿಸಲಿದೆ. ವಿವಿಧ ಔಷಧಿಗಳ ಪರಿಣಾಮದ ನಿಖರತೆಯನ್ನು, ಅದರಲ್ಲೂ ಹೋಮಿಯೋಪಥಿ ಚಿಕಿತ್ಸಾ ವಿಧಾನಕ್ಕೆ ಬಹಳಷ್ಟು ಹೊಸ ಆಯಾಮಗಳು ಸೇರ್ಪಡೆಯಾಗಲಿದೆ. ವಿಷ ಚಿಕಿತ್ಸಾ ವಿಧಾನವೆಂಬುದು ಪ್ರಾಚೀನ  ಭಾರತದಲ್ಲಿ  ಪ್ರಚಲಿತವಿದ್ದರೂ, ಕಾರಣಾಂತರಗಳಿಂದ ಹಿನ್ನೆಲೆಗೆ ಸರಿದಿದ್ದರಿಂದಾಗಿ, ಅದೇ ತತ್ವ ಆಧಾರಿತ ಹೋಮಿಯೋಪಥಿಯ ಮೂಲವನ್ನು ಪಾಶ್ಚಾತ್ಯ ದೇಶಗಳಿಗೆ  ತಪ್ಪಾಗಿ ನೀಡಲಾಗುತ್ತಿದೆ.

   ಮೈಕ್ರೊವೈಟಾ ಸಂಶೋಧನೆಗಳು  ಇಡೀ ಜಗತ್ತಿನ  ಆರ್ಥಿಕ ಕ್ಷೇತ್ರದ ಮೇಲೆ  ಮಹತ್ತರ ಪರಿಣಾಮ  ಬೀರಲಿವೆÉ.  ಆಯಾತ, ನಿರ್ಯಾತವಾಗುವ  ವಸ್ತುಗಳು ಮತ್ತು  ಅವುಗಳ  ಸ್ವರೂಪ ಬದಲಾಗಲಿದೆ. ಉದಾಹರಣೆಗಾಗಿ ತೈಲಕ್ಕೆ  ಪರ್ಯಾಯ  ವಸ್ತುವನ್ನು ಸಿದ್ಧಪಡಿಸಿದಾಗ ತೈಲ ಉತ್ಪಾದಕ ರಾಷ್ಟ್ರಗಳ  ಮೇಲಿನ ಅವಲಂಬನೆ  ತಗ್ಗಲಿದೆ.

  ಪೊಟ್ಯಾಶ್ ಮತ್ತು ರಂಜಕ ಒದಗಿಸುವ  ರಾಸಾಯನಿಕ  ಗೊಬ್ಬರಗಳ ತುಟಾಗ್ರತೆ  ಭಾರತವನ್ನು  ಕಾಡುತ್ತಿದ್ದು,  ಬೇರೆ  ದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪೊಟ್ಯಾಶ್ ಪ್ರಮಾಣವನ್ನು  ಹೆಚ್ಚಿಸುವ  ಸಂಶೋಧನೆಗಳಿಂದಾಗಿ, ಸ್ಥಳೀಯವಾಗಿ ಲಭ್ಯವಿರುವ  ಸಂಪನ್ಮೂಲಗಳನ್ನೇ ಬಳಸಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ.

        ಸಂಪನ್ಮೂಗಳು ಎಂದರೆ ಇಂದಿನ ಸ್ಥಿತಿಯಲ್ಲಿ  ಭೌತಿಕ  ಸಂಪನ್ಮೂಲಗಳೆಂದು  ಅರ್ಥೈಸಲಾಗುತ್ತದೆ. ಮಾನವ  ಸಂಪನ್ಮೂಲದ  ಕುರಿತು  ಹೇಳುವಾಗ ಮಾನವನ  ಬುದ್ಧಿಶಕ್ತಿಯನ್ನು ಪರಿಗಣ ಸಲಾಗುತ್ತದೆ. ಇದರಾಚೆಗಿನ  ಸಂಪನ್ಮೂಲಗಳ  ಪರಿಚಯವನ್ನು ಮೈಕ್ರೊವೈಟಾ ಸಿದ್ಧಾಂತ ನೀಡಲಿದೆ.   ಭೌತಿಕ, ಅಭೌತಿಕ, ಮಾನಸಿಕ,  ಆಧ್ಯಾತ್ಮಿಕ ಸಂಪನ್ಮೂಲಗಳ  ಕಲ್ಪನೆ, ವೈಯಕ್ತಿಕ  ಮತ್ತು ಸಾಮೂಹಿಕ ಸ್ತರದಲ್ಲಿ  ಲಭ್ಯವಿರುವ  ಈ ಸಂಪನ್ಮೂಲಗಳನ್ನು  ಸಾಮೂಹಿಕ ಹಿತಕ್ಕಾಗಿ  ಬಳಸುವ  ವಿಧಾನಗಳು ರೂಪುಗೊಳ್ಳಲಿವೆ.

        ಅತಿಸೂಕ್ಷ್ಮ ಅಸ್ತಿತ್ವದ ವಿಶ್ವದ  ಜೈವ  ಬೀಜ, ವಿಶ್ವ ಚೈತನ್ಯದ  ನಿಗೂಢ ಉತ್ಪತ್ತಿಯನ್ನು  ಮೈಕ್ರೊವೈಟಮ್  (ಬಹುವಚನದಲ್ಲಿ ಮೈಕ್ರೊವೈಟಾ)  ಎಂದು  ಪರಿಚಯಿಸಿದ  ದಾರ್ಶನಿಕ  ಶ್ರೀ ಪ್ರಭಾತರಂಜನ್  ಸರ್ಕಾರರು ನೀಡಿರುವ  ಆರ್ಥಿಕ ಸಿದ್ಧಾಂತವಾದ  ಪ್ರಗತಿಶೀಲ  ಉಪಯೋಗ ತತ್ವದಲ್ಲಿ  ( ಸಂಕ್ಷಿಪ್ತದಲ್ಲಿ ಪ್ರಉತ)  ಸಂಪನ್ಮೂಲಗಳ  ಗುರುತಿಸುವಿಕೆ ಮತ್ತು ಬಳಸುವಿಕೆಯ ವಿಧಾನವನ್ನು ಮೇಲಿನಂತೆ  ವಿವರಿಸಲಾಗಿದೆ.

    ಮೈಕ್ರೊವೈಟಾಗಳ  ಪರಿಣಾಮವನ್ನು ಆಧರಿಸಿ ಅವುಗಳನ್ನು  ನಕಾರಾತ್ಮಕ, ಸಕಾರಾತ್ಮಕ ಹಾಗೂ ತಟಸ್ಥ ಎಂದು ವರ್ಗೀಕರಿಸಲಾಗುತ್ತದೆ. ಜಗತ್ತನ್ನು ಕಾಡುತ್ತಿರುವ  ಹಲವು ವಿಧದ  ವೈರಸ್‍ಗಳು ನÀಕಾರಾತ್ಮಕ ಸ್ಥೂಲ  ಮೈಕ್ರೊವೈಟಾಗಳು. ಇವುಗಳ ಕುರಿತಾದ ಹೆಚ್ಚಿನ  ತಿಳುವಳಿಕೆ ಹಾಗೂ ನಿಯಂತ್ರಣದ ವಿಧಾನಗಳ ಅಳವಡಿಕೆಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಔಷಧಿಗಳಿಂದ ನಕಾರಾತ್ಮಕ ಮೈಕ್ರೊವೈಟ್‍ಗಳನ್ನು  ಕೊಲ್ಲಲು ಸಾಧ್ಯವಿಲ್ಲ.  ಆದರೆ ಸಕಾರಾತ್ಮಕ ಮೈಕ್ರೊವೈಟಾಗಳ ಸಂಖ್ಯೆಯನ್ನು ಹೆಚ್ಚಿಸುವ  ಮೂಲಕ ಅವುಗಳ ನಿಯಂತ್ರಣ ಸಾಧ್ಯ.

   ಆರ್ಥಿಕ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ  ಮೈಕ್ರೊವೈಟಾ ಕುರಿತಾಗಿ ನಡೆಯುವ  ಸಂಶೋಧನೆಗಳಿಂದಾಗಿ  ಇಡೀ ಮಾನವ ಸಮಾಜ  ಲಾಭ ಪಡೆಯಲಿದೆ.  ಇಂದಿನ ಪರಿಸ್ಥಿತಿಯಲ್ಲಿ ತನ್ನ ಭೌತಿಕ  ಅಸ್ತಿತ್ವವನ್ನು  ಕಾಪಾಡಿಕೊಳ್ಳುವುದೇ  ಮಾನವರಿಗೆ  ದೊಡ್ಡ ಸವಾಲಾಗಿದೆ.  ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಗಾಗಿ ಜೀವನವಿಡೀ ಸೆಣಸುವುದೇ ಹಲವರ ಪಾಡಾಗಿದೆ. ಅಂದರೆ,  ವ್ಯಕ್ತಿಯ  ಸಾಮಥ್ರ್ಯದ ಹೆಚ್ಚಿನ  ಭಾಗ ಜೀವನದ  ಕನಿಷ್ಠ ಅಗತ್ಯತೆಗಳ ಪೂರೈಕೆಗಾಗಿಯೇ ವ್ಯಯವಾಗುತ್ತಿದೆ.  ಮುಂದಿನ ದಿನಗಳಲ್ಲಿ  ಇಡೀ ಮಾನವ ಸಮಾಜಕ್ಕೆ ಈ ಸಮಸ್ಯೆಯಿಂದ  ಬಿಡುಗಡೆ  ಸಿಗಲಿದೆ.  ಜೀವನದ  ಬಹುಪಾಲು ಸಮಯವನ್ನು  ತನ್ನ ಅಸ್ತಿತ್ವದ  ರಕ್ಷಣೆಗಾಗಿಯೇ  ಕಳೆಯಬೇಕಾದ  ಪರಿಸ್ಥಿತಿ   ಬದಲಾಗಿ ಸಾಕಷ್ಟು ಬಿಡುವು ಸಿಗಲಿದೆ.

   ದಿನಕ್ಕೆ  10 ರಿಂದ  12 ತಾಸು  ದುಡಿದರೂ ಬದುಕು ಕಟ್ಟಿಕೊಳ್ಳಲಾಗದ  ಸ್ಥಿತಿಯಲ್ಲಿ  ಬದುಕುತ್ತಿರುವ  ನಮಗೆ ದಿನಕ್ಕೆ  ಎರಡು ಗಂಟೆಗಿಂತ ಕಡಿಮೆ ದುಡಿದರೂ ಉತ್ತಮ ಬದುಕು ಸಿಗುತ್ತದೆನ್ನುವುದನ್ನು ಊಹಿಸಲೂ ಇಂದು   ಕಷ್ಟವಾಗುತ್ತದೆ.  ಅಂತಹ ದಿನಗಳು ಬಂದಾಗ  ಏನಾಗಬಹುದು? ಸಮಯದ ಬಳಕೆ ಹೇಗಾದೀತು ಎಂಬ ಪ್ರಶ್ನೆ ಸಹಜ.

   ಮಾನವನ ಅಸ್ತಿತ್ವವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಎಂಬ ಮೂರು ಸ್ತರಗಳಲ್ಲಿದೆ. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನವರ  ಬದುಕು ದೈಹಿಕ  ಅಸ್ತಿತ್ವದಾಚೆಗೆ  ಹೋಗುವುದಿಲ್ಲ. ಕೆಲವರು ತಮ್ಮ ಮಾನಸಿಕ  ಅಸ್ತಿತ್ವವನ್ನು  ಬೆಳೆಸಿಕೊಳ್ಳುತ್ತಾರೆ. ತೀರಾ ಕ್ವಚಿತ್ತಾಗಿ  ಕೆಲವರು  ಆಧ್ಯಾತ್ಮಿಕ  ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ.  ಮಾನವರ ಮಾನಸಿಕ   ಸಾಮಥ್ರ್ಯದ ಶೇಕಡಾ 10 ರಷ್ಟನ್ನು ಕೂಡ ಹೆಚ್ಚಿನವರು ಬಳಸುತ್ತಿಲ್ಲವೆಂದು ಹೇಳಲಾಗುತ್ತದೆ. ಅಂದರೆ   ಉಳಿದ  ಶೇಕಡಾ 90 ರಷ್ಟು  ಮಾನವನ ಮಾನಸಿಕ  ಸಾಮಥ್ರ್ಯ  ಬಳಕೆಯಾಗದೇ ವ್ಯರ್ಥವಾಗುತ್ತಿದೆ.

  ಬದಲಾಗಲಿರುವ  ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಮಾನವನ  ಮಾನಸಿಕ, ಆಧ್ಯಾತ್ಮಿಕ  ಪ್ರಗತಿಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಯಾಗಲಿದೆ. ಭೌತಿಕ  ಅಸ್ತಿತ್ವದ  ನಿರ್ವಹಣೆ ಸುಲಭವಾದಷ್ಟು ಹೆಚ್ಚುವರಿಯಾಗಿ ಸಿಗುವ  ಬಿಡುವಿನ ವೇಳೆಯನ್ನು  ಉನ್ನತ  ಉದ್ದೇಶಗಳಿಗೆ  ಬಳಸಿಕೊಳ್ಳುವುದನ್ನು ಪ್ರಕೃತಿ ಕಡ್ಡಾಯಗೊಳಿಸಲಿದೆ.  ಯಾಕೆಂದರೆ  ವಿಕಾಸ ಪಥದಲ್ಲಿ ಮಾನವನ ಸೃಷ್ಟಿಯಾಗಿಸುವುದೇ ವಿಕಾಸವನ್ನು ಮುಂದುವರಿಸುವ  ಉದ್ದೇಶದಿಂದ. ಅಪರಿಪೂರ್ಣತೆಯಿಂದ ಪರಿಪೂರ್ಣತೆಯೆಡೆಗಿನ  ಪಯಣವೇ  ಜೀವನವೆಂದು ಅನುಭಾವಿಗಳು ಹೇಳುತ್ತಾರೆ.  ಪರಿಪೂರ್ಣತೆಯನ್ನು ಸಾಧಿಸುವ  ದಾರಿಯಲ್ಲಿ  ಮಾನವ ಜೀವಿಯ  ಹಂತ  ಪ್ರಾಮುಖ್ಯವಾದದ್ದು. ಯಾಕೆಂದರೆ  ಸ್ವ ಪ್ರಯತ್ನದಿಂದ  ಪರಿಪೂರ್ಣತೆಯ  ದಾರಿಯಲ್ಲಿ  ಸಾಗುವ ಸಾಮಥ್ರ್ಯವನ್ನು  ಪ್ರಕೃತಿ ಮಾನವರಿಗೆ   ಮಾತ್ರ  ನೀಡಿದೆ.

  ಸಕಾರಾತ್ಮಕ ಮೈಕ್ರೊವೈಟಾಗಳು ವಿಕಾಸದ ದಾರಿಯಲ್ಲಿ  ಚಲಿಸುವವರಿಗೆ  ಸಹಕಾರಿಯಾಗಲಿವೆÉ.  ಕೆಲವೇ ವ್ಯಕ್ತಿಗಳು ಆಧ್ಯಾತ್ಮದ  ( ವಿಕಾಸ) ಪಥದಲ್ಲಿ  ನಡೆದು ಗುರಿ ತಲುಪುವುದು ಪ್ರಕೃತಿಯ ಉದ್ದೇಶವಲ್ಲ. ಇಡೀ ಮಾನವ  ಕುಲ ಒಂದು ಸಮಾಜವಾಗಿ, ಒಗ್ಗಟ್ಟಿನಿಂದ  ವಿಕಾಸದ ಪಯಣ ಮುಂದುವರಿಸಲು ಪ್ರಕೃತಿ ಸದಾ ಸಹಾಯ ಮಾಡುತ್ತದೆ.

    ಇದರ ಮೊದಲ ಹಂತವೆಂದರೆ, ಭೌತಿಕ  ಸ್ತರಕ್ಕೆ   ನೇರವಾಗಿ ಸಂಬಂಧಿಸಿದ  ಸಾಮಾಜಿಕ, ಆರ್ಥಿಕ ಕ್ಷೇತ್ರ, ಮಾನವನ ಸ್ವಾರ್ಥ-ಸಂಕುಚಿತತೆಗಳ ಆಧಾರದ ಮೇಲೆ ರೂಪುಗೊಂಡಿರುವ  ಇಂದಿನ  ಕ್ರೂರ ಬಂಡವಾಳವಾದ ನೀತಿಯ ಅಧಃಪತನ ಹಾಗೂ  ನಿರಾಕರಣೆ. ಒಂದು ಚಿಕ್ಕ ವೈರಾಣುವಿನ ಹೊಡೆತಕ್ಕೆ  ಇಡೀ ವಿಶ್ವದ ಆರ್ಥಿಕತೆ  ಏರುಪೇರಾಗಿದೆ.  ಹಲವು ದೇಶಗಳಲ್ಲಿ  ಆರ್ಥಿಕ ಹಿಂಜರಿತ ಪ್ರಾರಂಭವಾಗಿದ್ದು, ಭೀಕರ ಆರ್ಥಿಕ   ಕುಸಿತಕ್ಕೆ   ಕಾರಣವಾಗಲಿದೆ. ಯಾವ ದೇಶ ಆರ್ಥಿಕ ವಿಕೇಂದ್ರೀಕರಣ ನೀತಿ ಅರ್ಥಾತ್  ಜನಾಧಿಕಾರದ ವ್ಯವಸ್ಥೆಯನ್ನು  ಎಷ್ಟು ಬೇಗ  ಅಳವಡಿಸಿಕೊಳ್ಳುತ್ತದೋ ಅಷ್ಟು ಬೇಗ ಆರ್ಥಿಕ ಚೇತರಿಕೆ  ಕಾಣಲಿದೆ.

  ಈ ಪೃಥ್ವಿ ಇರುವುದು ಕೇವಲ ಮಾನವರಿಗಾಗಿ ಮಾತ್ರವಲ್ಲ.  ಅವರಿಗಿಂತ ಮೊದಲಿನಿಂದಲೂ ಇಲ್ಲಿಯೇ ಇದ್ದ ಗಿಡ ಮರಗಳು, ಪಕ್ಷಿ, ಪ್ರಾಣ  ಸಂಕುಲಕ್ಕೂ ಅದು ಸೇರಿದೆ. ತನ್ನ ವೈಯಕ್ತಿಕ  ಹಾಗೂ ಸಾಮೂಹಿಕ ಬದುಕಿನ  ರೀತಿ- ನೀತಿಗಳನ್ನು, ಸಿದ್ಧಾಂತ – ಆಚರಣೆಗಳಲ್ಲಿ  ಪ್ರಕೃತಿ  ಪೂರಕ ನಿಲುವನ್ನು  ಅಳವಡಿಸಿಕೊಳ್ಳದಿದ್ದರೆ,  ನಿಸರ್ಗ ತನ್ನದೇ ರೀತಿಯಲ್ಲಿ  ಪಾಠ ಕಲಿಸುತ್ತದೆ.

   ಸೃಷ್ಟಿಯ  ವೈಚಿತ್ರ್ಯವನ್ನು  ಅರಿಯಲು,  ಮನುಕುಲದ   ಉಳಿವಿಗಾಗಿ ಅದನ್ನು ಬಳಸಲು ಮೈಕ್ರೊವೈಟಾ ಸಿದ್ಧಾಂತ ಹೊಸ ಹೊಳಹುಗಳನ್ನು ನೀಡಿದೆ.  ಇದು ವಿಜ್ಞಾನದ ಇತಿಮಿತಿಗಳನ್ನು  ದಾಟಲು ಮಾತ್ರವಲ್ಲ, ಇಡೀ ಮಾನವ  ಸಮಾಜದ   ಪ್ರಗತಿಯ ವೇಗವನ್ನು  ಹೆಚ್ಚಿಸಲೂ ಸಹಕಾರಿ ಹಾಗೂ ಅನಿವಾರ್ಯ.

(Microvita – ಕುರಿತಾದ ಹೆಚ್ಚಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯ.)

*******

ಗಣೇಶ್ ಭಟ್, ಶಿರಸಿ

                 –

Leave a Reply

Back To Top