ಕಾವ್ಯಸಂಕ್ರಾಂತಿ
ಹಳ್ಳಿಯ ಸಂಕ್ರಾಂತಿ ಸಂಭ್ರಮ ಸುಜಾತ ರವೀಶ್ ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು . ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು . ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ […]
ಕಾವ್ಯಸಂಕ್ರಾಂತಿ
ಗಝಲ್ ಸಂಕ್ರಾಂತಿ ವಿಶೇಷ ಎ.ಹೇಮಗಂಗಾ ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ? ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ? ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ? ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ? ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ? ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ? ಮಂದಿರ, ಮಸೀದಿ, […]
ಸ್ವಾತ್ಮಗತ
ಸಂಕ್ರಾಂತಿಯ ಸಂಭ್ರಮ ಕೆ.ಶಿವು ಲಕ್ಕಣ್ಣವರ ಸೂರ್ಯನ ಉತ್ತರಾಯಣದ ಪರ್ವ ಕಾಲ..! ಸಂಕ್ರಾಂತಿಯ ಆಚರಣೆ ಏಕೆ? ಈ ದಿನ ಎಳ್ಳಿಗೆ ಮಹತ್ವವೇಕೆ.!? ಭೂಮಿ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ… ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ […]
ಕಾವ್ಯಯಾನ
ಹೆದರುವುದಿಲ್ಲ ವಿಜಯಶ್ರೀ ಹಾಲಾಡಿ ಹೆದರುವುದಿಲ್ಲನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ ಯಾವ […]
ಹೊತ್ತಾರೆ
ಅಮ್ಮನೂರಿನ ನೆನಪುಗಳು. ಅಮೇರಿಕಾದಿಂದ ಅಶ್ವಥ್ ಸಾಮ್ರಾಜ್ಯ ಪ್ರೈಮರಿ ಸ್ಕೂಲಿನಲ್ಲಿ ವೀರಮಾತೆ ಜೀಜಾಬಾಯಿ ಅನ್ನುವ ಶಿವಾಜಿಯ ಒಂದು ಪಾಠ ಇತ್ತು. ಜೀಜಾಬಾಯಿ ಶಿವಾಜಿಯ ಬಾಲ್ಯದಲ್ಲಿ ಪುರಾಣಕತೆಗಳನ್ನೂ, ವೀರಪುರುಷರ ಸಾಹಸಗಳನ್ನೂ ಬಾಲಕ ಶಿವಾಜಿಗೆ ಮನಮುಟ್ಟುವ ಹಾಗೆ ಪಾಠ ಹೇಳಿಕೊಡುತ್ತಿದ್ದಳು. ಇಂತಹ ವೀರಮಾತೆಯ ಪಾಲನೆಯಲ್ಲಿಯೇ ಬೆಳೆದ ಶಿವಾಜಿ ಒಂದು ದಿನ ತನ್ನ ತಂದೆಯು ಸ್ವಾಭಿಮಾನ ಮರೆತು ಸುಲ್ತಾನರ ಮುಂದೆ ತಲೆಬಾಗಿ ನಮಸ್ಕರಿಸುವುದು ಸಹಿಸಿಕೊಳ್ಳಲಾಗದೇ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಶಪಥ ಮಾಡಿದ್ದನು. ಇದು ಪಾಠದ ಸಾರಾಂಶವಾಗಿತ್ತು. ಮೊದಲನೇ ಸಾರ್ತಿ ಈ ಪಾಠ ಕೇಳಿಸಿಕೊಂಡಾಗ, […]
ಕಾವ್ಯಯಾನ
ಅಹಂ ಜ್ಞಾನಿಗಳು ಹರೀಶ್ ಗೌಡ ಗುಬ್ಬಿ ಅಹಂ ಜ್ಞಾನಿಗಳು ತನ್ನವರ ಏಳ್ಗೆಯಂ ಸಹಿಸದವರು ನೀವು ಬಿದ್ದವರ ಕಂಡೊಡನೆ ನಕ್ಕವರು ನೀವು ಅವರಿವರ ಕಾಲ್ಗೆಳಗೆ ಕಾಲೆಳೆದವರು ನೀವು ಉದ್ದುದ್ದ ಬೀಗುತ್ತ ಉದ್ಗಾರ ಮಾತಿನಲಿ ಪರನಿಂದೆ ಗೈದವರು ನೀವಲ್ಲವೇ. ನೀ ನುಡಿದುದಂ ನಡೆಯಬೇಕೆನುತಲಿ ಅಡ್ಡಡ್ಡ ದಾರಿಗಳಂ ತುಳಿದವರು ನೀವು ಸರಿ ಮಾರ್ಗದ ದಾರಿಹೊಕನಂ ಕರೆದು ಗೊಟರಿನೊಳಗೆ ನೂಕಿದವರು ನೀವು ಅಹಂ ಜ್ಞಾನವಂ ಮೈತುಂಬಿದವರು ನೀವಲ್ಲವೆ. ಗಳಿಸಿದ ಹೆಸರಂ ಬಳಸಿ ಆತ್ಮದೊಳು ಕಸವಂ ತುಂಬಿ ಅಮಾಯಕರ ನೋವಾಗಿ ಕುಳಿದು ಕುಪ್ಪಳಿದವರು ನೀವು […]
ಕಥಾಗುಚ್ಛ
ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ವೇಣುಗೋಪಾಲ್ ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ಬಡತನವನ್ನೇ ಬುನಾದಿಯಾಗಿ ಮೆಟ್ಟಿ ಸಿರಿತನದ ಒಂದೊಂದು ಇಟ್ಟಿಗೆಯನ್ನು ಹೆಕ್ಕಿತಂದು ಬೆವರರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತಿದ್ದ ಅಪ್ಪ ಹೇಡಿಯಾಗಿಬಿಟ್ಟಿದ್ದ..! ನಾ ಕಂಡ ಅಪ್ಪ ಹೀಗಿರಲಿಲ್ಲ.! ಉರಿಯುವ ಸೂರ್ಯನಂತೆ ಎಂತಹ ಕಷ್ಟಗಳ ಮೋಡಗಳನ್ನ ಕರಗಿಸಿ ಬಿಡುತ್ತಿದ್ದ.. ಅವನ ಪ್ರೀತಿಯು ಅಷ್ಟೇ ಆಗತಾನೆ ಕರೆದ ಹಾಲಿನಂತಹ ಸಿಹಿ ನಿಷ್ಕಲ್ಮಶವಾದ ತ್ಯಾಗವೆತ್ತ ಸಾಕಾರಮೂರ್ತಿ.. ಅಮ್ಮನ ಪ್ರಿತೆಯೇ ಕಾಣದ ನನಗೆ ಅವನ ಬೆಚ್ಚನೆಯ ತೋಳುಗಳೇ ಎಲ್ಲವೂ ಆಗಿತ್ತು ಮರಿಗುಬ್ಬಿಗೆ ಗೂಡಿನಂತೆ..! ಅವನಿಗೂ ಅಷ್ಟೇ ನಾನೆಂದರೆ […]
ಲಹರಿ
ಬೆಂಗಳೂರು ಬ್ಯಾಚುಲರ್ ಹುಡುಗರ ಡೇ ಡ್ರೀಮು ದೇವರಾಜ್ ಹೆಂಡ್ತಿ ಹೇಗಿರಬೇಕು…? ಹೆಂಡ್ತಿ ಆಗಿದ್ರೆ ಸಾಕ… ಜೀವನದ ಜೋಕಾಲಿಯಲ್ಲಿ ಮಗು ತರ ಇರ್ಬೇಕಲ್ವಾ. ಬ್ಯಾಚುಲರ್ ಜೀವನ ಒಂತರ ಬೋನ್ ಲೆಸ್ ಬೋಟಿ ಆಗೋಗಿದೆ .ಬ್ಯಾಚುಲರ್ ಅಂದ್ರೆ ಭಗವಂತ ಕೇರ್ ತಗೊಳಲ್ಲ. ಊರು ಮನೆ ಅಪ್ಪ ಅಮ್ಮ ತಂಗಿ ತಮ್ಮ ಅಕ್ಕ ನೆಂಟ್ರು ನಿಷ್ಠರು ಎಲ್ಲರನ್ನು ಬಿಟ್ಟು ಬಂದು ಬೆಂಗಳೂರಿನನಲ್ಲಿ ಬಂದು ಸಿಂಹದಂತೆ ಬದುಕವರು ಬ್ಯಾಚುಲರ್ ಹುಡುಗ್ರು. ತಿಂಗಳಿಗೊಂದು ಸಲ ಸಂಬಳ .ಮನೆ ರೆಂಟು ವಾಟರ್ ಬಿಲ್ಲು ಚೀಟಿ ಬಟ್ಟೆ […]
ಕಾವ್ಯಯಾನ
ಆನಿ ಜಯಾ ಮೂರ್ತಿ ಪಂಜರದ ಹಕ್ಕಿ ಅಲ್ಲ ನೀನು ಸ್ವತಂತ್ರ ಹಕ್ಕಿ ನೀ ಹಾರುವೆ ಎಲ್ಲಿಬೇಕಲ್ಲಿ ಒಡೆಯ ನ ಭುಜದಲ್ಲಿ ಒಡತಿಯ ಕೈಯಲ್ಲಿ ಮನೆಯ ಮೂಲೆಯಲ್ಲಿ ನೀನು ಸಾಮಾನ್ಯ ಹಕ್ಕಿಯಲ್ಲ ಎಲ್ಲಿಂದ ಧರೆಗಿಳಿದೆ ವಾಸಿಸಲು ಇಲ್ಲಿ? ಇಂದ್ರನ ಸ್ವರ್ಗದಿಂದ ಇಳಿದೆಯಾ? ಅಪ್ಸರೆ ಗಂಧರ್ವರಿಂದ ಹಾಡಲು ಕಲಿತೆಯ? ನಾರದರ ತಂಬೂರಿ ಶ್ರುತಿ ಜೊತೆಯ? ನಿನ್ನ ಹಾಡಿನ ಶೈಲಿ ಪುರಂದರ ತ್ಯಾಗರಾಜ ಶಯ್ಲಿ ನಿನ್ನ ಸ್ವರ ಹೋಲುವುದಿಲ್ಲಿ ಆಲಾಪನೆ, ಪಲ್ಲವಿ, ಚರಣ ದಲ್ಲಿ ಸ್ವರ ಆ ದೇವನ ಪ್ರಾರ್ಥನೆ ರೀತಿಯಲ್ಲಿ […]
ಪ್ರಸ್ತುತ
ಕ್ಯಾಂಪಸ್ ಕೋಲಾಹಲ…… ಗಣೇಶ್ ಭಟ್ ಶಿರಸಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ಪುನಃ ಸುದ್ಧಿಯಲ್ಲಿದೆ. ವಿವಿಧ ಶುಲ್ಕಗಳ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಿ, ಕೆಲವು ವಾರಗಳ ಹಿಂದೆ ಮಾಧ್ಯಮಗಳಿಗೆ ಆಹಾರವಾಗಿದ್ದ ಜೆಎನ್‍ಯುನಲ್ಲಿ ಮುಸುಕುಧಾರಿಗಳು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಹೊಡೆದು ಬಡಿದಿದ್ದಾರೆಂಬ ವಿಷಯ ಬಿತ್ತರವಾಗುತ್ತಿದೆ. ಕ್ಯಾಂಪಸ್‍ನಲ್ಲೇ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲವೆಂಬ ವಿಷಯ ದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಕೆರಳಿಸಿ, ಪ್ರತಿಭಟನೆ ನಡೆಸಲು ಕಾರಣವಾಗಿದೆ. ನಾಲ್ಕಾರು ದಶಕಗಳ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಚರ್ಚೆಗಳು ಇರುತ್ತಿದ್ದವು. ಅಭಿಪ್ರಾಯ ಭೇದಗಳು ಇದ್ದವು. ಆದರೆ […]