ನಿತ್ಯೋತ್ಸವದ ಕವಿಗೆ ನಮನ
ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ […]
ಕಾವ್ಯಯಾನ
ಜೀತ ಸ್ವಪ್ನ ಆರ್.ಎ. ಜೀತದಾಳು ಆಗಿ ಹುಟ್ಟಿ ಜೀತದ ಆಳಾಗಿ ದುಡಿ ಯೋ ಕಾಲ ನಮ್ಗೆ ಹೋಗಲಿಲ್ಲ ವ ಲ್ಲೋ ಕರ್ಮ ತಮ್ಮ ಹೋಗಲಿಲ್ಲ ವಲ್ಲೋ!!! ಜೀತ ಪದ್ದತಿ ಬೇಡ ಕಣೋ!! ನಮ್ಮ ರಕ್ತ ಸುರಿಸಿ ಅವ್ರು ಜಗ್ಗಿ ಕೂಳು ಕೊಡದೆ ಚಿತ್ರ ಹಿಂಸೆ ಕೊಡ್ತರಲ್ಲೋ ಶಿವನೇ ನಮ್ಮ ಕಷ್ಟ ದಿನಕ್ಕೆ ಕಷ್ಟ ಕೊಡ್ತಾರಲ್ಲೋ ಜೀತ ಪದ್ದತಿ ಬೇಡ ಕಣೋ!! ಬಟ್ಟೆ ಇಲ್ಲ ಬರೆ ಇಲ್ಲ ,ಸ್ನಾನ ಇಲ್ಲ ಮೈ ಮೈಲಿಗೆ ಎಲ್ಲ ನಮ್ಮ ಪಾಡು ನಾಯಿ […]
ನಿಂತುಹೋದ ನಿತ್ಯೋತ್ಸವ
ಕೆ.ಎಸ್ ನಿಸಾರ್ ಅಹಮದ್ ನಮ್ಮನ್ನಗಲಿದ್ದಾರೆಂದು ತಿಳಿಸಲು ವಿಷಾದವಾಗುತ್ತಿದೆ
ಕಾವ್ಯಯಾನ
ಗಝಲ್ ರತ್ನರಾಯಮಲ್ಲ ನೆಮ್ಮದಿಯ ಜೀವನಕ್ಕಾಗಿ ಮನಸ್ಸನ್ನು ಮರೆತುಬಿಡು ಶಾಂತಿಯುತ ಬದುಕಿಗಾಗಿ ಬುದ್ಧಿಯನ್ನು ಮರೆತುಬಿಡು ಬಾಳೊಂದು ಸುಂದರ ಸ್ವಪ್ನ ಎಂಬುದನ್ನು ಮರೆಯದಿರು ನಿರ್ಮಲ ಸಹಯೋಗದ ಸಾಂಗತ್ಯವನ್ನು ಮರೆತುಬಿಡು ಪರಪಂಚದಲ್ಲಿ ಶೂನ್ಯ ಸಂಪಾದನೆ ಮಾಡಬೇಕಾಗಿದೆ ಎಲ್ಲಾ ಬಲ್ಲೆನೆಂಬ ಸಿಹಿಯಾದ ಭ್ರಮೆಯನ್ನು ಮರೆತುಬಿಡು ಮನುಷ್ಯ ಸಮಾಜ ಜೀವಿ ಎಂದು ಸಾರಲು ಹೋಗಬೇಡ ಜಿಂದಗಿಯ ಸವಿಯನುಣಲು ಸಂಸಾರವನ್ನು ಮರೆತುಬಿಡು ‘ಮಲ್ಲಿ’ ಮರೆವು ಪ್ರಜ್ಞಾವಂತ ಜಗತ್ತಿನ ಬಹುದೊಡ್ಡ ಆಸ್ತಿ ಶಾಶ್ವತವೆಂಬ ಮಾಯಾ ಜಿಂಕೆಯನ್ನು ಮರೆತುಬಿಡು ******
ಅನುವಾದ ಸಂಗಾತಿ
ಕೊನೆಯ ಮು೦ಜಾನೆ ಮೂಲ: ಆಕ್ತೇವಿಯೋ ಪಾಜ಼್ ಕನ್ನಡಕ್ಕೆ : ಮೇಗರವಳ್ಳಿ ರಮೇಶ್ ಮೇಗರವಳ್ಳಿ ರಮೇಶ್ ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ ನಿನ್ನ ಕೂದಲು ನನ್ನ ಪಾದವನ್ನು ಸೋಕುತ್ತಿದೆ ನಿನ್ನ ಪಾದ ಮಲಗಿರುವೆ ನೀನು ರಾತ್ರಿಗಿ೦ತಲೂ ಹಿರಿದಾಗಿ. ಆದರೆ ನಿನ್ನ ಆ ಕನಸು ಈ ಕೋಣೆಗಷ್ಟೇ ಸೀಮಿತ. ಎಷ್ಟೊ೦ದು ಜನ ಇದ್ದೇವೆ ನಾವು ನೋಡು ಇಷ್ಟು ಚಿಕ್ಕದಾಗಿ! ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು ಸರಿದು ಹೋಗುತ್ತಿದೆ ಹೊರಗೆ. ಹತ್ತಿರದಲ್ಲಿ ಹರಿವ ನದಿ ಯಾವಗಲೂ ಹಿಮ್ಮುಖ ಪ್ರವಾಹಿಯಾಗಿದೆ. ನಾಳೆ ಇನ್ನೊ೦ದು ದಿನವಾದೀತೆ? ****
ಕಾವ್ಯಯಾನ
ಯುದ್ದ ಮಲ್ನಾಡ್ ಮಣಿ ಮಾಯ ಜಾಲದ ಮಾಂತ್ರಿಕನೊಬ್ಬನ ಮಾಯೆಯಾಟದ ಛಾಯೆಯ ಕರಿನೆರಳು ಸುಡುತಿದೆ ಭೂಮಂಡಲವನ್ನು. ತುಪಾಕಿಗಳ ಗುಂಡಿನ ಘನಘೋರ ಶಬ್ದ ಗಗನ ಚುಂಬಿಯಾಗಿತ್ತು ನರ ಮಂಡಲದ ವಿಷವರ್ತುಲದಲ್ಲಿ ವಿಲವಿಲ ಒದ್ದಾಡಿ ಬೆತ್ತಲಾಗಿ ನಿಂತಿದೆ ಬದುಕು. ಅರೆಗಳಿಗೆಯ ಅಲ್ಪಸುಖದಲ್ಲಿ ತಲ್ಲೀನನಾಗಿದ್ದೆ, ಚಾಟಿಯ ಏಟು ಬೀಸಿ ಬರುತ್ತಿತ್ತು ನನ್ನೆಡೆಗೆ, ತಂಗಾಳಿಯಲ್ಲಿ ವಿಷ ಬೆರತದ್ದು ಗೊತ್ತಾಗಲೆ ಇಲ್ಲ. ಯದ್ಧಕ್ಕೆ ಸಜ್ಜು ಮಾಡುತ್ತಿದ್ದೆ ತುಕ್ಕು ಹಿಡಿದ ಅಲಗನ್ನು ಮಸೆಯುತ್ತಿದ್ದೆ, ವೈರಿಯು ಅದನ್ನೆ ನಡೆಸಿರಬೇಕು. ನನಗೆ ಶತ್ರು ಭಯ, ಶತ್ರುವಿಗೆ ನನ್ನ ಭಯ, ಆದರು […]
ಹೆಣ್ಣು ಬದುಕಿನ ಘನತೆ
ಹೆಣ್ಣು ಬದುಕಿನ ಘನತೆ ವಸುಂಧರಾ ಕದಲೂರು. ವಸುಂಧರಾ ಕದಲೂರು. ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ.. ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ ಹೆಣ್ಣುಮಗುವಾಗಿ ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು […]
ಕಾವ್ಯಯಾನ
ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು […]
ಸ್ವಾತ್ಮಗತ
ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********