ಅನುವಾದ ಸಂಗಾತಿ

 ಕೊನೆಯ ಮು೦ಜಾನೆ

Silhouette of Tree Digital Wallpaper

ಮೂಲ: ಆಕ್ತೇವಿಯೋ ಪಾಜ಼್ 

ಕನ್ನಡಕ್ಕೆ : ಮೇಗರವಳ್ಳಿ ರಮೇಶ್

ಮೇಗರವಳ್ಳಿ ರಮೇಶ್

ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ
ನಿನ್ನ ಕೂದಲು
ನನ್ನ ಪಾದವನ್ನು ಸೋಕುತ್ತಿದೆ
ನಿನ್ನ ಪಾದ
ಮಲಗಿರುವೆ ನೀನು
ರಾತ್ರಿಗಿ೦ತಲೂ ಹಿರಿದಾಗಿ.
ಆದರೆ ನಿನ್ನ ಆ ಕನಸು
ಈ ಕೋಣೆಗಷ್ಟೇ ಸೀಮಿತ.
ಎಷ್ಟೊ೦ದು ಜನ ಇದ್ದೇವೆ ನಾವು ನೋಡು
ಇಷ್ಟು ಚಿಕ್ಕದಾಗಿ!

ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು
ಸರಿದು ಹೋಗುತ್ತಿದೆ ಹೊರಗೆ.
ಹತ್ತಿರದಲ್ಲಿ ಹರಿವ ನದಿ ಯಾವಗಲೂ
ಹಿಮ್ಮುಖ ಪ್ರವಾಹಿಯಾಗಿದೆ.

ನಾಳೆ ಇನ್ನೊ೦ದು ದಿನವಾದೀತೆ?

****

Leave a Reply

Back To Top