ಪುಸ್ತಕ ಸಂಗಾತಿ
ಮಗರಿಬ್ ಗಜಲ್ ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ* ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದುಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ […]
ಪ್ರಸ್ತುತ
ಅವಕಾಶ – ವಂಚಿತರ ಗೆಲುವಿನ ಹೆಬ್ಬಾಗಿಲು! ವಸುಂಧರಾ ಕದಲೂರು ಜನರು ಅವಕಾಶ ವಂಚಿತರಾಗಲು ಇರುವ ಕಾರಣಗಳು ಬಹಳ ಸಲ ಕ್ಷುಲ್ಲಕವಾಗಿರುತ್ತವೆ. ಅದರಲ್ಲೂ ಬಣ್ಣ, ಹಣ, ಅಧಿಕಾರ, ಜಾತಿ- ಇತರೆ ತಾರತಮ್ಯಗಳು ಪ್ರಮುಖವಾದವು. ಆದರೆ ಕೇವಲ ‘ಹೆಣ್ಣು’ ಎಂಬ ಕಾರಣಕ್ಕೇ ಅವಕಾಶ ವಂಚಿತರಾಗುವುದು ಇದೆಯಲ್ಲಾ ಇದಕ್ಕೆ ಏನೆನ್ನುವುದು..? ತಮಗೆ ದೊರಕಿದ ಒಂದು ಸದಾವಕಾಶದಿಂದ ಎತ್ತರದ ಸಾಧನೆ ಮಾಡಿರುವ ಸುಧಾಮೂರ್ತಿ, ಕಿರಣ್ ಮಜುಂದಾರ್, ಹಿಮಾದಾಸ್ ಗುಪ್ತಾ, ಸಾನಿಯಾ ಮಿರ್ಜಾ, ಪಿ ಟಿ […]
ಕಾವ್ಯಯಾನ
ಕೆಂಡ ಸಂಪಿಗೆ ರೇಮಾಸಂ ನೀರಾಡಿದೆ ಕಣ್ಣಲಿ ಮಂದಹಾಸೆ ಗಂಟಲುಬ್ಬಿದರು ನಸುನಗು ಮಾಸೆ ಸೆರಗಲಿ ಕೆಂಡವು ನಿಗಿನಿಗಿಸುತಿದೆ ಎದೆಯ ಕ್ಷೀರಧಾರೆ ಅಮೃತವಾಗಿದೆ/ ಭೇದಭಾವದ ನೊಗದಲಿ ಕಳೆದೆ ಬಾಲ್ಯ ಅಯ್ಯೋ ನೀನು ಮಹಿಳೆಯಂದು ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/ ಧಾರೆಗೆ ಬಾಲ್ಯಕೆ ಮನೆಯರಡು ಬೆಳಗಿದರೂ ಅವಳು ಕೊರಡು ಜ್ಯೋತಿಯಾದರೂ ಚುಕ್ಕೆಯೆಂದರು ಅಡುಗೆ ಗಡುಗೆಗವಳನು ಮೀಸಲಿಟ್ಟರು/ ಹೊತ್ತು ಗರ್ಭದಿ ನವಮಾಸಗಳು ನೋವನುಂಗಿ ನಗುವ ಹರಡಿದಳು ಕುಲವಧುವಾಗಿ ಕುಲಜ್ಯೋತಿಯಾದಳು ಮರಣಶಯ್ಯೇನೇರುತ ಜೀವದಾನಿಯಾದಳು/ ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ ಬಲಿಯಾಗಿ ಹೊಸಕಿದ ಅನಾಗರಿಕ […]
ಕಾವ್ಯಯಾನ
ಹಸನಾಗಲಿ ಬಾಳು ಜ್ಯೋತಿ ಹೊಸಕೋಟೆ ನನ್ನ ಜೀವದ ಜೀವ ನೀ ನನ್ನೊಲವ ಉಸಿರು ನೀ// ಮೊಲೆಹಾಲ ಕುಡಿಸುವಾಗ ಪುಟ್ಟ ಪುಟ್ಟ ಹೆಜ್ಜೆಗಳಿಂದ ಎದೆಗೆ ಒದ್ದ ಕ್ಷಣ ಪುಳಕಗೊಂಡಿತ್ತು ತನು ಮನ ಎದೆ ಎತ್ತರಕ್ಕೆ ಬೆಳೆಸಿಹೆ ನಾನಿಂದು ಒದೆಯದಿರು ಚುಚ್ಚು ಮಾತುಗಳಿಂದ ನಿನ್ನ ಪ್ರೀತಿಗಾಗಿ ಹಾತೊರೆಯುವ ತಾಯಿಯ ಮನ ತಡೆಯಲಾರದು ಎಡವಿದಾಗ ಕೈ ಹಿಡಿದು ನಡೆಸಿ ದಾರಿ ತೋರಿದ್ದೆ ಅಂದು ಎಡವದಿರು ಮುಗ್ಗರಿಸದಿರು ನೋಡಿ ಸಹಿಸಲಾಗದು ಇಂದು ತಾಯಿಯ ಸೆರಗು ಹಿಡಿದವ ಸಂಗಾತಿಯ ಕೈ ಹಿಡಿದಿರುವೆ ಅವಳಲ್ಲೂ ಮಾತೃತ್ವ […]
ಪ್ರಸ್ತುತ
ಆರೋಗ್ಯ ಸಹಾಯಕರ ಸೇವೆ ಗುರುತಿಸುವ ಕಣ್ಣುಗಳಿಲ್ಲ ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ನೆರಳಿನಲ್ಲಿ ಯುದ್ಧೋಪಾದಿ ಕೆಲಸ ಮಾಡುತ್ತಿರುವವರು ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು. ಇವರನ್ನು ಹೆಲ್ತ್ ವಾರಿಯರ್ಸ್ ಎಂದೇ ಬಣ್ಣಿಸಿ ಎಲ್ಲ ಕಡೆಗೂ ಅವರ ಸೇವಾ ಬಾಹುಳ್ಯ ಕೊಂಡಾಡಿ ಗೌರವಿಸುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಇದು ಸಂತಸ ಪಡುವ ವಿಷಯವೇ. ಆದರೆ ಇದೇ ಸಂದರ್ಭದಲ್ಲಿ ಅದೇ ಕೊರೊನಾ ಯುದ್ಧ ಭೂಮಿಯೊಳಗೆ ಅಕ್ಷರಶಃ ರಣರಂಗದ ಯೋಧರಂತೆ ಕೆಲಸ ಮಾಡುತ್ತಿರುವ ಬಹು ದೊಡ್ಡದಾದ ಮತ್ತೊಂದು ಆರೋಗ್ಯ ಸಮುದಾಯವೇ […]
ಕಥಾಯಾನ
ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು […]
ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ| ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ|| ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ| ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ|| ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ| ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ|| ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ […]
ಕಾವ್ಯಯಾನ
ನಾನಲ್ಲದ ನಾನು ವಿದ್ಯಾಶ್ರೀಎಸ್ಅಡೂರ್ ಬಂಧಿ ನಾನು ಕೋಟೆ ಕೊತ್ತಲಗಳಲ್ಲಲ್ಲ ನನ್ನದಲ್ಲದ ಬದುಕಿನಲ್ಲಿ, ಬಂಧಿ ನಾನು, ನಾಲ್ಕು ಗೋಡೆಗಳ ನಡುವಲ್ಲಲ್ಲ ಗೊಡ್ಡು ಸಂಪ್ರದಾಯಗಳ ಮುಖವಾಡದಲ್ಲಿ, ಒಂಟಿ ನಾನು, ಈ ಜನಜಾತ್ರೆಯ ನಡುವಲ್ಲಲ್ಲ ನನ್ನ ಮನದ ವಿಶ್ವದಲ್ಲಿ ಒಂಟಿ ನಾನು, ನನಗೆ ನನ್ನವರು ಇಲ್ಲದೆ ಅಲ್ಲ ನನ್ನತನವೆಂಬ ಲೋಕದಲ್ಲಿ. ಮೂಕಿ ನಾನು, ಮಾತ ಮಲ್ಲಯುಧ್ಧದಲ್ಲಲ್ಲ ನನ್ನ ಮೌನವಾದ ಕನಸುಗಳಲ್ಲಿ ಮೂಕಿ ನಾನು, ಈ ಮಾತಿನರಮನೆಯಲ್ಲಲ್ಲ ನನ್ನ ಸ್ವಂತಿಕೆಯ ದಿಗಂತದಲ್ಲಿ. ಬೊಂಬೆ ನಾನು, ನನಗೆ ಭಾವಗಳು ಇಲ್ಲದೆ ಅಲ್ಲ ನನ್ನ ಆವರಿಸಿದ […]
ಅನುವಾದ ಸಂಗಾತಿ
ಒಂದುಕತ್ತಲನ್ನುಎತ್ತಿಟ್ಟುಕೊಂಡಿದ್ದೇನೆ ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಾಗರೇಖಾ ಗಾಂವಕರ್ ರಾಜು ಹೆಗಡೆ ಒಂದು ಕತ್ತಲನ್ನು ಎತ್ತಿಟ್ಟುಕೊಂಡಿದ್ದೇನೆ ಹಕ್ಕಿಗಳನ್ನು ಮಲಗಿಸಿ ಚುಕ್ಕೆಗಳನ್ನು ಎಬ್ಬಿಸಿ ಇನ್ನು ಕೆಲವೇ ಗಂಟೆಗಳಿವೆ ಗಿಡಗಂಟಿಗಳ ಜೊತೆಗೆ ಮಾತಾಡಲು ಆಡದಿದ್ದವರ ಸುದ್ದಿಬೇಡ! ಒಂದೊಂದಾಗಿ ದೀಪ ಆರಿಸುತ್ತೇನೆ ಕತ್ತಲೆ ನನಗೆ ಧೈರ್ಯ ತುಂಬುತ್ತದೆ ಗೋಡೆ ಕೂಡ ಮಾತಾಡುತ್ತಿದೆ ಗಡಿಯಾರದ ಬಾಯಲ್ಲಿ ಎಷ್ಟು ಸಂತೋಷ ಕತ್ತಲೆಗೆ ಸುಮ್ಮನೆ ನಗುತ್ತಿದೆ ಅರಿವೆ ಧರಿಸಿರುವ ನನ್ನ ನೋಡಿ. ಒ ಗೇಟಿನ ಸಪ್ಪಳ ಎಲ್ಲಿ ಅಡಗಿಕೊಳ್ಳಲಿ ದಾರಿಯನ್ನೂ ಬಿಡುವುದಿಲ್ಲ […]
ಕಾವ್ಯಯಾನ
ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ […]