ಯುಗಾದಿ ಕಾವ್ಯ
ಯುಗಾದಿ ಐ.ಜಯಮ್ಮ *ನಿಸರ್ಗವು ಚೈತನ್ಯದಿ ಸಂಭ್ರಮಿಸುವ ನವಕಾಲ ಪ್ರಕೃತಿ ಅಪ್ಸರೆಯಂತೆ ಮೆರೆಯುವ ಸವಿಕಾಲ ಬ್ರಹ್ಮದೇವನು ವಿಶ್ವಸೃಷ್ಠಿಸಿದ ಚೈತ್ರಮಾಸ ಭೂತಾಯಿ ಹಸಿರ ಸೀರೆಯನ್ನುಟ್ಟ ವಸಂತಕಾಲ ಮೇಘಗಳ ಘರ್ಜನೆಗೆ ಮಯುರಿ ನರ್ತಿಸಲು ಚಿಗುರೆಲೆಯ ಮಾಮರದಿ ಕೋಗಿಲೆಯು ಕೂಗಿರಲು ಬಾನಂಗಳದಿ ಹರ್ಷದಿ ಹಕ್ಕಿಗಳು ಹಾರಿರಲು ಪುಷ್ಪಗಳೆಲ್ಲ ಆರಳಿ ಸುಗಂದ ದ್ರವ್ಯಸುಸಿರಲು ಮಕರಂದ ಹೀರುವ ಜೇನಿನ ಝೇಂಕಾರ ಪೃಥ್ವಿಯ ಬೆಳಗುವ ಭಾಸ್ಕರನಿಗೆ ನಮಸ್ಕಾರ ಅಭ್ಯಂಜನ ಸ್ನಾನದ ಶೃಂಗಾರ ದೇವ ಮಂದಿರದಲ್ಲಿ ಶಿವನಾಮದ ಓಂಕಾರ ಮನೆಯ ಬಾಗಿಲಿಗೆ ತಳಿರುಗಳ ತೋರಣ ಅಂಗಳದಿ ವರ್ಣಗಳ ರಂಗೋಲಿಗಳ […]
ಯುಗಾದಿ ಕಾವ್ಯ
ಚೈತ್ರೋತ್ಸವ ಕೆ.ಎ.ಸುಜಾತಾ ಗುಪ್ತ ಸದ್ದು ಗದ್ದಲವಿಲ್ಲದೆ ಈ ಸೃಷ್ಟಿಯ ಅರಮನೆಗೆ ಅತಿಥಿಯಾಗಿ ಆಗಮಿಸಿರುವ ಉಲ್ಲಸಿತ ವಸಂತ ಋತುವು.. ಸಾಕ್ಷಿಯಾಯಿತು ನಿಶ್ಯಬ್ಧದಲಿ ಋತು ಮನ್ವಂತರಕೆ… ಚೇತೋಹಾರಿಯೋ.. ಚಿತ್ತ ಮನೋಹರಿಯೋ.. ವಿಸ್ಮಿತ ನೇತ್ರಗಳಲಿ ಸುಹಾಸಿನಿಯೋ..! ಹೃನ್ಮನಗಳಿಗೆ ಸುಲಲಿತೆಯೋ.. ಈ ನವ ವಸಂತವು. ಚೈತ್ರವು ವಸಂತದ ಕೈಹಿಡಿದು ಕಿಣಿ ಕಿಣಿ ನಾದದೆ ಹೆಜ್ಜೆಯನಾಕಿ ಚೈತ್ರೋತ್ಸವಸಂಭ್ರಮಿಸುತಿರೆ. ಪ್ರಕೃತಿ ಮುಗ್ಧ ಮನೋಹರಿ, ಭಾವೋಜ್ವಲೆ.. ಹೃದ್ಗೋಚರ ದೃಶ್ಯಕೆ ಹರ್ಷೋದ್ಭವವು.. ಈ ನರ ಜನುಮ ಪಾವನವೋ. ತಿಳಿ ಹಸಿರು, ಗಿಳಿ ಹಸಿರು, ಪಚ್ಚ ಪಸಿರು ಪರ್ಣಗಳು ತಲೆದೂಗಲು […]
ಯುಗಾದಿ ಕಾವ್ಯ
ನವ ವಸಂತ ಎನ್ ಶಂಕರರಾವ್ ಹೊಸತೇನು ನಮ್ಮ ಬಾಳಲ್ಲಿ *ಹೊಸವರ್ಷ* ಮರಳಿ ಬಂದಲ್ಲಿ, ಹೊಸ ಪರಿವರ್ತನೆ ಸೃಷ್ಟಿಯ ಸಂಕೇತ, ವಸಂತನಾಗಮನ ಬಾಳ ಪಯಣದಲಿ. ಋತುಮಾನ ಬದಲಾವಣೆ ತಂದಿತು ಪ್ರಕೃತಿಯಲಿ ಸಂಭ್ರಮ, ಅಂತರಾತ್ಮದ ಪ್ರತಿಧ್ವನಿ, ಆತ್ಮಾವಲೋಕನ ಮನದಾಳದಿ. ಕಾಲಚಕ್ರ ಯಾನದ ಪ್ರಗತಿ ಸುಲಲಿತ ಪರಿಭಾಷೆಯ ಮುನ್ನುಡಿ, ಸಚ್ಚರಿತ ಸದ್ಭಾವನೆಯ ನುಡಿ, ಸಚ್ಚಿದಾನಂದ ಆತ್ಮ ಸಂತೃಪ್ತಿ. ನವ್ಯ ನವೀನತೆಯ ಸಂತಸ, ನವೋದಯ ಉಲ್ಲಾಸ ಮಾನಸ, ನವೋಲ್ಲಾಸ ನಿತ್ಯೋತ್ಸವ ಭುವಿಯಲಿ, ನವ್ಯ ನಲ್ಮೆಯ ಬಾಳಿನಾ ನಾಂದಿ. ಹೊಸ ವರ್ಷ ತರಲಿ ಹರ್ಷ, […]
ಯುಗಾದಿ ಕಾವ್ಯ
ಯುಗಾದಿ ಬಂದಿದೆ ವೀಣಾ ರಮೇಶ್ ಯುಗಾದಿ ಬಂದಿದೆ ಇಳೆಯ ಹೊಸಿಲಿಗೆ ಅಡಿಇಟ್ಟ ಹೊಂಗಿರಣ ವಸಂತನ ಚಿಗುರಿನಲಿ ತರುಲತೆಗಳ ತೋರಣ ಯುಗಾದಿ ತಂದ ಸಿಹಿ ಸಿಹಿ ಹೂರಣ ಹೊಸ ಪರ್ವದ ಹಾದಿ ಚೈತ್ರಮಾಸದ ಯುಗಾದಿ ಹಳೆಯ ನೆನಪುಗಳು ತಿವಿದು ಹೊರಳಿದೆ ಮತ್ತದೇ ಹೊಸ ಕನಸು ಬಗೆದು ಮರಳಿದೆ ಸಿಹಿ ಕಹಿಗಳು ತಬ್ಬಿವೆ ಮತ್ತದೇ ಬದುಕಿನ, ಸಾಂಗತ್ಯಕೆ ಬದುಕು ಬೆಸೆದಿದೆ, ಹಸಿರು ಸಿರಿಯಲಿ ನಿಸರ್ಗ ಮೈತುಂಬಿದೆ ಮಾವು,ಬೇವುಗಳ ಭಾವ ಸಮಾಗಮ ಏಳು ಬೀಳುವಿನ ಸಿಹಿಕಹಿ ಸುಖದ ಲೇಪನ ಬೇವು ಬೆಲ್ಲದ […]
ಯುಗಾದಿ ಕಾವ್ಯ
ಮರಳಿ ಬಂದಿದೆ ಯುಗಾದಿ :- ಹರೀಶ್ ಬಾಬು ಹಣ್ಣೆಲೆ ಉದುರಿ ಚಿಗುರೆಲೆ ಅರಳಿ ನಗೆ ಬೀರಿವ ಪುಷ್ಪವರಳಿ ನೂತನ ವರುಷ ಮರಳಿ ಎಲ್ಲರ ತನು ಮನಗಳೊಡನೆ ನಗೆಯಾ ಬೀರಿ ತಂದಿದೆ ಹರುಷ ಯುಗ ಯುಗಾದಿ ಮರಳಿ ಚೈತ್ರ ಮಾಸವ ತೆರಳಿ ಬೇವು ಬೆಲ್ಲ ತಿನ್ನುತ್ತಾ ಸಿಹಿ ಕಹಿಯಾ ಹೀರುತ್ತಾ ದ್ವೇಷ ಮತ್ಸಾರ ತೊಲಗಿಸುತ್ತಾ ಪ್ರೀತಿ ಪ್ರೇಮವ ಹಂಚುತ್ತಾ ನೂತನ ಯುಗದ ಆಗಮನದ ಸಂತೋಷ. ದ್ವೇಷ ಅಸೂಯೆ ಮರೆಸಿ ಎಲ್ಲರ ಮನದಲ್ಲಿ ಬಿತ್ತುತ್ತಿದೆ ನೂತನ ಶೈಲಿಯಾ ಭಾವನೆಗಳ ಕೂಡಿ […]
ಯುಗಾದಿ ಕಾವ್ಯ
ಯುಗಾದಿಗೆ ಸ್ವಾಗತ ರತ್ನಾ ನಾಗರಾಜ ಯುಗ ಯುಗ ಕಳೆದರು ಯುಗಾದಿ ಹುಟ್ಟುತ್ತಲೆ ಇರುತ್ತದೆ ನಶ್ವರವೆಂಬುವುದು ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಯುಗಾದಿ ಅವನಿಗೊಂದಷ್ಟು ಗಾದಿಗಳನ್ನು ಕೊಟ್ಟು ಯುಗಾದಿಗೆ ಉತ್ಸಾಹದ ಸ್ವಾಗತ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಯಿಟ್ಟು ಹೊಸದತ್ತ ಪಯಣಿಸುತ್ತಲೆಯಿರುತ್ತದೆ ಗಡಿಯಾರದ ಮುಳ್ಳಿನಂತೆ ಅದಕ್ಕೆ ತಳಿರು ತೋರಣಗಳ ಸ್ವಾಗತ ಯುಗಾದಿ ಬೇವು ಬೆಲ್ಲದ ಮಿಶ್ರಣದ ಸುಖ ಬರಿ ಬೇವು ಬೇಡ, ಸದಾ ಸಿಹಿಯು ಬೇಡ ಒಂದರೊಳಗೊಂದು ಇದ್ದರೆ ಜೀವನ ಪಾವನ ಅದಕ್ಕೆ […]
ಯುಗಾದಿ ಕಾವ್ಯ
ಪರಿಭ್ರಮಣ ಸುಕನ್ಯ ಎ.ಆರ್. ಕಡಲಲೆಗಳಂತೆ ಬರುತಿಹುದು ಹೊಸವರುಷ ಬದುಕಿನ ನೋವು ನಲಿವಿನ ಸಂಘರ್ಷ ಕ್ಷಣ ಕ್ಷಣದಲ್ಲೂ ಹರುಷದ ನಿಮಿಷ ನಮ್ಮೆಲ್ಲರ ಬಾಳು ಬೆಳಗಲಿ ಈ ವರುಷ ಋತುಮಾನದ ಪರಿಭ್ರಮಣ ಚೈತ್ರಮಾಸದ ತೇರನೇರಿ ಹೊಂಗೆ ಮಾವು ಬೇವಿನ ಆಗಮನ ಹೊಸ ವರ್ಷದ ಸಂಭ್ರಮ ಒಳಿತು ಕೆಡುಕನು ಮರೆಮಾಚಿ ಮೊಗದಲ್ಲಿ ನೆಮ್ಮದಿಯ ನಗುವ ಮಳೆಹರಿಸಿ ಸಹಬಾಳ್ವೆಯಲ್ಲಿ ಶುಭವ ಹಾರೈಸಿ ನೆನಪಿನಂಗಳದಲ್ಲಿ ಬರುತಿಹುದು ಹೊಸವರುಷ ಹೊಂಗೆ.ತೆಂಗು.ಮಾವು.ಬಾಳೆ.ಬೇವುಗಳ ತಳಿರು ತೋರಣವ ಶೃಂಗಾರದಿ ಪ್ರಕೃತಿ ಮಾತೆಯು ಅಲಂಕರಿಸಿ ಸ್ವಾಗತಿಸುವಳು ಹೊಸ ವರುಷವ ರೋಗ ರುಜಿನಗಳನು […]
ಕಾವ್ಯಯಾನ
ಏನಿದ್ದರೇನು…? ಪ್ಯಾರಿಸುತ ಈ ದೇಶಕೆ ಏನಿದ್ದರೇನು ನೀನೇ ಇಲ್ಲವಲ್ಲ ಗಾಂಧಿ….? ಖಾಲಿಯಾದ ಕುರ್ಚಿ,ಗಾದಿ,ಖಾದಿ ಕನ್ನಡಕದ ಕಡ್ಡಿ ಎಲ್ಲವೂ ಬೆತ್ತಲೆಯಾಗಿ ಬೆರಗು ಕಂಡು ಸುಮ್ಮನಾದವು ಕೋರ್ಟು,ಕಛೇರಿ, ಶಾಲಾಕಾಲೇಜುಗಳಲ್ಲಿ ನಿನ್ನ ಭಾವಚಿತ್ರವೊಂದು ಮೊಳೆ ಹೊಡೆದ ಆಸರೆಗೆ ಗೋಡೆಯನೇರಿ ಕುಳಿತು ಅದೇ ನಗುವ ಬೀರಿದೆ ಮಾಲೆಯು ಸುಗಂಧ ಸೂಸಿದೆ ಇಷ್ಟೇ ಸಾಲದು ಇನ್ನು ಇದೆ ಗಮನದಲಿ ಕೇಳು..!! ನೀನಿರುವ ಹಾಳೆಯ ಚೂರೊಂದು ಸಾಕು ಅದರಿಂದಲೇ ಇಲ್ಲೆಲ್ಲವು ಬೆಲೆಯುಳ್ಳವಾಗಿವೆ…! ಆದರೆ…? ನಿನ್ನ ಸಿದ್ದಾಂತ ಹೊತ್ತಿಗೆಯಲಿ ಹೊತ್ತಿ ಕರಕಲಾಗಿದೆ ನೀತಿ ಕಲೆತ ಮಂಗಗಳು ಮರವನೇರಿ […]
ಕಾವ್ಯಯಾನ
ಇನಿಯನೆಂದರೆ… ನಿರ್ಮಲಾ ಆರ್. ಇನಿಯನೆಂದರೆ… ಇರುಳಲಿ ನಗುವ ಚಂದಿರನು ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು ತಾರೆಗಳ ನಡುವಲಿ ಇರುವನು ತಿಳಿ ಹಾಲಿನಂತಹ ಮನದವನು ಇನಿಯನೆಂದರೆ… ಆಗಸದಲಿ ಸದಾ ಮಿನುಗುವನು ದೂರದಿಂದಲೇ ನನ್ಮನದ ಧನಿಯ ಕೇಳುವನು ನನ್ನಂತರಾಳದ ಮಾತ ಅರಿಯುವನು ಪ್ರತಿ ಇರುಳಲಿ ನನಗಾಗಿ ಬರುವನು ಇನಿಯನೆಂದರೆ… ಕನಸ ಕಾಣುವ ಕಂಗಳಿಗೆ ತಂಪನೆರೆವನು ಕಂಡ ಕನಸಿಗೆ ಬಣ್ಣ ಹಚ್ಚುವನು ಕಣ್ಣ ಕಾಡಿಗೆಯ ಕದಿಯುವನು ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು ಇನಿಯನೆಂದರೆ… ಮನವೆಂಬ ಇಣುಕುವನು ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು ನಾ […]
ಕಾವ್ಯಯಾನ
ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ […]