ಯುಗಾದಿ ಕಾವ್ಯ

ಯುಗಾದಿ ಬಂದಿದೆ

Image result for images of sunrise in spring

ವೀಣಾ ರಮೇಶ್

ಯುಗಾದಿ ಬಂದಿದೆ

ಇಳೆಯ ಹೊಸಿಲಿಗೆ

ಅಡಿಇಟ್ಟ ಹೊಂಗಿರಣ

ವಸಂತನ ಚಿಗುರಿನಲಿ

ತರುಲತೆಗಳ ತೋರಣ

ಯುಗಾದಿ ತಂದ ಸಿಹಿ

ಸಿಹಿ ಹೂರಣ

ಹೊಸ ಪರ್ವದ ಹಾದಿ

ಚೈತ್ರಮಾಸದ ಯುಗಾದಿ

ಹಳೆಯ ನೆನಪುಗಳು

ತಿವಿದು ಹೊರಳಿದೆ

ಮತ್ತದೇ ಹೊಸ ಕನಸು

ಬಗೆದು ಮರಳಿದೆ

ಸಿಹಿ ಕಹಿಗಳು ತಬ್ಬಿವೆ

ಮತ್ತದೇ ಬದುಕಿನ, ಸಾಂಗತ್ಯಕೆ ಬದುಕು

ಬೆಸೆದಿದೆ, ಹಸಿರು ಸಿರಿಯಲಿ ನಿಸರ್ಗ

ಮೈತುಂಬಿದೆ

ಮಾವು,ಬೇವುಗಳ

ಭಾವ ಸಮಾಗಮ

ಏಳು ಬೀಳುವಿನ

ಸಿಹಿಕಹಿ ಸುಖದ ಲೇಪನ

ಬೇವು ಬೆಲ್ಲದ ಜೀವನ ಸವಿಯೋಣ

ಸಮಾನತೆ ಹಂಚೋಣ

ಯುಗಾದಿ ಅರ್ಥತಿಳಿದು

ಆಚರಿಸೋಣ

*********

Leave a Reply

Back To Top