ಪರಿಭ್ರಮಣ
ಸುಕನ್ಯ ಎ.ಆರ್.
ಕಡಲಲೆಗಳಂತೆ ಬರುತಿಹುದು ಹೊಸವರುಷ
ಬದುಕಿನ ನೋವು ನಲಿವಿನ ಸಂಘರ್ಷ
ಕ್ಷಣ ಕ್ಷಣದಲ್ಲೂ ಹರುಷದ ನಿಮಿಷ
ನಮ್ಮೆಲ್ಲರ ಬಾಳು ಬೆಳಗಲಿ ಈ ವರುಷ
ಋತುಮಾನದ ಪರಿಭ್ರಮಣ
ಚೈತ್ರಮಾಸದ ತೇರನೇರಿ
ಹೊಂಗೆ ಮಾವು ಬೇವಿನ ಆಗಮನ
ಹೊಸ ವರ್ಷದ ಸಂಭ್ರಮ
ಒಳಿತು ಕೆಡುಕನು ಮರೆಮಾಚಿ
ಮೊಗದಲ್ಲಿ ನೆಮ್ಮದಿಯ ನಗುವ ಮಳೆಹರಿಸಿ
ಸಹಬಾಳ್ವೆಯಲ್ಲಿ ಶುಭವ ಹಾರೈಸಿ
ನೆನಪಿನಂಗಳದಲ್ಲಿ ಬರುತಿಹುದು ಹೊಸವರುಷ
ಹೊಂಗೆ.ತೆಂಗು.ಮಾವು.ಬಾಳೆ.ಬೇವುಗಳ
ತಳಿರು ತೋರಣವ ಶೃಂಗಾರದಿ
ಪ್ರಕೃತಿ ಮಾತೆಯು ಅಲಂಕರಿಸಿ
ಸ್ವಾಗತಿಸುವಳು ಹೊಸ ವರುಷವ
ರೋಗ ರುಜಿನಗಳನು ಮೀರಿ
ಬಿಸಿಲು ತಾಪವ ಹೊಂಗೆಯ ನೆರಳಲಿ ತಂಪಾಗಿಸಿ
ಸೂರ್ಯ ಚಂದ್ರರ ಕಣ್ಣಾಮುಚ್ಚಾಲೆಯಲಿ
ಕಳೆದವು ಋತುಮಾನಗಳು ಆದರೂ
ಸ್ವಾಗತಿಸುವೆವು ಪ್ರತಿ ವರ್ಷ ನವ ಯುಗಾದಿಯ
ಆದಿಯ ಬೇರು.ಆನಾದಿಯ ಚಿಗುರು
ಯುಗ ಯುಗಗಳ ಸಂಗಮ
ಕಹಿ ಘಟನೆಗಳ ಮರೆತು
ಸವಿ ಬದುಕಿನ ನವ ಚೇತನ ಈ ಯುಗಾದಿ
ಆದಿ ಅಂತ್ಯದ ಸೂಚಕ
ಯುಗಾದಿ ಹಬ್ಬದ ಪ್ರತೀಕ
ಹೊಸ ವರ್ಷದ ಸೂಚನ ಫಲಕ
ಅರುಣೋದಯದ ಹೊಸತನದ ಹೊಂಬೆಳಕ
ಬಟ್ಟ ಬಯಲಲ್ಲಿ ಮೂಡಿತು
ಪಡುವನದಿ ಅರ್ಧಚಂದ್ರನ ದರ್ಶನ
ಜನರ ಹರ್ಷೋಡ್ಗರ ಮೊಳಗಿತು
ಹುಣ್ಣಿಮೆ ಚಂದ್ರನ ಆಗಮನ
*********
ಯುಗಾದಿ ಕಾವ್ಯ ತುಂಬಾ ಚೆನ್ನಾಗಿದೆ