ನವ ವಸಂತ
ಎನ್ ಶಂಕರರಾವ್
ಹೊಸತೇನು ನಮ್ಮ ಬಾಳಲ್ಲಿ
*ಹೊಸವರ್ಷ* ಮರಳಿ ಬಂದಲ್ಲಿ,
ಹೊಸ ಪರಿವರ್ತನೆ ಸೃಷ್ಟಿಯ ಸಂಕೇತ,
ವಸಂತನಾಗಮನ ಬಾಳ ಪಯಣದಲಿ.
ಋತುಮಾನ ಬದಲಾವಣೆ
ತಂದಿತು ಪ್ರಕೃತಿಯಲಿ ಸಂಭ್ರಮ,
ಅಂತರಾತ್ಮದ ಪ್ರತಿಧ್ವನಿ,
ಆತ್ಮಾವಲೋಕನ ಮನದಾಳದಿ.
ಕಾಲಚಕ್ರ ಯಾನದ ಪ್ರಗತಿ
ಸುಲಲಿತ ಪರಿಭಾಷೆಯ ಮುನ್ನುಡಿ,
ಸಚ್ಚರಿತ ಸದ್ಭಾವನೆಯ ನುಡಿ,
ಸಚ್ಚಿದಾನಂದ ಆತ್ಮ ಸಂತೃಪ್ತಿ.
ನವ್ಯ ನವೀನತೆಯ ಸಂತಸ,
ನವೋದಯ ಉಲ್ಲಾಸ ಮಾನಸ,
ನವೋಲ್ಲಾಸ ನಿತ್ಯೋತ್ಸವ ಭುವಿಯಲಿ,
ನವ್ಯ ನಲ್ಮೆಯ ಬಾಳಿನಾ ನಾಂದಿ.
ಹೊಸ ವರ್ಷ ತರಲಿ ಹರ್ಷ,
ಹೊಸ ಕಾಮನೆಗಳ ವರ್ಷ,
ಹೊಸ ಪರಿಕಲ್ಪನೆ ಸಾಕಾರವಾಗೆ
ಹೊಸ ದಿಗಂತದ ಅನಾವರಣ.
ಅದೇನು ಸಂಭ್ರಮ ಸಡಗರ
ಅದೇನು ಸಂತಸ ಕಾತುರ,
ಸದಾ ಹಳೆಯ ನೆನಪಿನ ನವಿಲುಗರಿ,
ಬದುಕಿನ ಆಶಾಕಿರಣದ ಸಿರಿ.
ಹೊಸ ವರ್ಷದ ಕ್ಷಣಗಣನೆ,
ಸಂಭ್ರಮಾಚರಣೆಯ ಮನನ,
ಶಾರ್ವರಿ ನಾಮಸಂವತ್ಸರದ ಚಾಂದ್ರಮಾನ ಯುಗಾದಿ
ನವವಸಂತ ನಗುವ ತರಲಿ
ಎಲ್ಲರ ಮನ ಮನೆ ಯಲಿ.
****************
ಚೆಂದದ ರಚನೆ ಸರ್
Beautiful poem on Ugadi