ಯುಗಾದಿಗೆ ಸ್ವಾಗತ
ರತ್ನಾ ನಾಗರಾಜ
ಯುಗ ಯುಗ ಕಳೆದರು
ಯುಗಾದಿ ಹುಟ್ಟುತ್ತಲೆ ಇರುತ್ತದೆ
ನಶ್ವರವೆಂಬುವುದು ಅದು ಕಾಣದು
ಚಿರಂಜೀವಿ ಯುಗಾದಿಗೆ ಸ್ವಾಗತ
ಮನುಷ್ಯ ಹುಟ್ಟುತ್ತಾನೆ
ಹುಟ್ಟಿ ಸಾಯುತ್ತಾನೆ
ಯುಗಾದಿ ಅವನಿಗೊಂದಷ್ಟು
ಗಾದಿಗಳನ್ನು ಕೊಟ್ಟು
ಯುಗಾದಿಗೆ ಉತ್ಸಾಹದ ಸ್ವಾಗತ
ಯುಗಾದಿ ಮರೆಯಾಗುತ್ತದೆ
ಹಳೆಯದನ್ನು ನೆನಪಾಗಿಯಿಟ್ಟು
ಹೊಸದತ್ತ ಪಯಣಿಸುತ್ತಲೆಯಿರುತ್ತದೆ
ಗಡಿಯಾರದ ಮುಳ್ಳಿನಂತೆ
ಅದಕ್ಕೆ ತಳಿರು ತೋರಣಗಳ ಸ್ವಾಗತ
ಯುಗಾದಿ ಬೇವು ಬೆಲ್ಲದ ಮಿಶ್ರಣದ ಸುಖ
ಬರಿ ಬೇವು ಬೇಡ, ಸದಾ ಸಿಹಿಯು ಬೇಡ
ಒಂದರೊಳಗೊಂದು ಇದ್ದರೆ ಜೀವನ ಪಾವನ
ಅದಕ್ಕೆ ಸಮಿಶ್ರಣ ಯುಗಾದಿಗೆ ಸ್ವಾಗತ
ನವ ಚೈತನ್ಯ ನವ ಉಲ್ಲಾಸ
ತರುವ ಯುಗಾದಿ
ಹಳೆಯದನ್ನು ಮಂಕುತನವನ್ನು ಓಡಿಸುವ
ಯುಗಾದಿಗೆ ಸ್ವಾಗತ
ಯುಗಾದಿಗೆ ಶುಭ ಶಕುನ ನುಡಿಯುತ್ತಾರೆ
ಹೊಸ ಉಡಿಗೆ ತೊಡಿಗೆ ಕಾಣಿಕೆಗಳು ಲಭಿಸುತ್ತದೆ
ನೆಂಟರಿಷ್ಟರರು ಆಗಮಿಸುವ ಸಂಭ್ರಮ ತರುವ
ಯುಗಾದಿಗೆ ಸ್ವಾಗತ
ನವ ವಸಂತ ಪ್ರಕೃತಿಗೆ
ಹೊಸ ಚಿಗುರು ಹೊಸ ಉಸಿರು
ನೀಡುತ್ತಾನೆ, ಹಚ್ಚ ಹಸಿರು ತುಂಬುತ್ತಾನೆ
ಸದಾ ಕಾಲ ಜೀವಿಗಳಿಗೆ ಜೀವ
ನೀಡುವ ಯುಗಾದಿಗೆ ಸ್ವಾಗತ
ಬೀರು ಬಿಸಲ ಬೆವರು ಹರಿದರು
ವಿಹಾರ ವಿರಾಮ ತರುವ
ಮದುವೆ ದಿಬ್ಬಣ ಹೊತ್ತು ಬರುವ
ಹಳೆಯ ಲೆಕ್ಕಾಚಾರ ತುಲನೆ ಮಾಡಿ
ಹೊಸ ವ್ಯವಹಾರಕ್ಕೆ ಮುನ್ನುಡಿಯಿಡುವ
ಯುಗಾದಿಗೆ ಸ್ವಾಗತ
ನೂತನ ಪಂಚಾಗ ವಷðವಿಡಿ
ಭವಿಷ್ಯ ಪಲುಕಿ
ವಷðತಡಕು ಭೋಜನ ಪ್ರಿಯ
ಜಾತ್ರೆ ಹರಕೆ ನದಿ ಜಳಕ
ಮೋಜು ಮಸ್ತಿ ಕುಸ್ತಿಯಾಟ
ಆಡಿಸುವ ಯುಗಾದಿಗೆ ಸ್ವಾಗತ
********