ಯುಗಾದಿ
ಐ.ಜಯಮ್ಮ
*ನಿಸರ್ಗವು ಚೈತನ್ಯದಿ ಸಂಭ್ರಮಿಸುವ ನವಕಾಲ
ಪ್ರಕೃತಿ ಅಪ್ಸರೆಯಂತೆ ಮೆರೆಯುವ ಸವಿಕಾಲ
ಬ್ರಹ್ಮದೇವನು ವಿಶ್ವಸೃಷ್ಠಿಸಿದ
ಚೈತ್ರಮಾಸ ಭೂತಾಯಿ ಹಸಿರ ಸೀರೆಯನ್ನುಟ್ಟ ವಸಂತಕಾಲ
ಮೇಘಗಳ ಘರ್ಜನೆಗೆ ಮಯುರಿ ನರ್ತಿಸಲು
ಚಿಗುರೆಲೆಯ ಮಾಮರದಿ ಕೋಗಿಲೆಯು ಕೂಗಿರಲು
ಬಾನಂಗಳದಿ ಹರ್ಷದಿ ಹಕ್ಕಿಗಳು ಹಾರಿರಲು
ಪುಷ್ಪಗಳೆಲ್ಲ ಆರಳಿ ಸುಗಂದ ದ್ರವ್ಯಸುಸಿರಲು
ಮಕರಂದ ಹೀರುವ ಜೇನಿನ ಝೇಂಕಾರ
ಪೃಥ್ವಿಯ ಬೆಳಗುವ ಭಾಸ್ಕರನಿಗೆ ನಮಸ್ಕಾರ
ಅಭ್ಯಂಜನ ಸ್ನಾನದ ಶೃಂಗಾರ
ದೇವ ಮಂದಿರದಲ್ಲಿ ಶಿವನಾಮದ ಓಂಕಾರ
ಮನೆಯ ಬಾಗಿಲಿಗೆ ತಳಿರುಗಳ ತೋರಣ
ಅಂಗಳದಿ ವರ್ಣಗಳ ರಂಗೋಲಿಗಳ ಚಿತ್ರಣ
ಬೇವು ಬೆಲ್ಲಗಳ ಮಿಶ್ರಣಗಳ ಸವಿಯೋಣ
ಕಷ್ಟಸುಖಗಳ ಜೀವನ ಸಮನಾಗಿ ಅನುಭವಿಸೋಣ
ಹೊಸ ಬಟ್ಟೆಗಳ ಧರಿಸಿ ಸಂಭ್ರಮಿಸಿ
ಚಂದ್ರದರ್ಶನ ಮಾಡಿ ಕೈಮುಗಿದು ನಮಿಸಿ
ಗುರುಹಿರಿಯರಿಗೆ ಭಕ್ತಿಭಾವದಿ ನಮಸ್ಕರಿಸಿ
ಸಂತಸದಿ ನಾಡಿನೆಲ್ಲೆಡೆ ಯುಗಾದಿ ಹಬ್ಬ ಆಚರಿಸಿ
**********