ಕಾವ್ಯಯಾನ

ಕಾವ್ಯಯಾನ

ಸಮಾಜ ಕೆ.ಸುಜಾತಾ ಗುಪ್ತ ಬಗ್ಗಿದವನ ಬೆನ್ನಿಗೊಂದು ಗುದ್ದು ಇರಲು ಹಾಗೆ ಮತ್ತೊಂದು ಗುದ್ದು ಇದಾಗಿದೆ ಪ್ರಸ್ತುತ ಸಮಾಜದ ನೀತಿ ಮೂರ್ಖತನದ ಪರಮಾವಧಿ ದಾಟಿರಲು ಶಾಂತಿಯ ತತ್ವವ- ಮಹತ್ವವ ಅರಿವ ಮನಗಳುಹೆಣಗಳಾಗಿವೆ. ಈಗೆಲ್ಲಿದೆ..ಶಾಂತಿ ಗೆ ತಾಣ!? ಎಲ್ಲಿದೆ ಶಾಂತಿಗೆ ಪ್ರಾಮುಖ್ಯತೆ.. ಬುದ್ಧನನ್ನು ನೆನೆಯೆ ಪೆದ್ದನೆನುವರು.. ‘ ಶಾಂತಿ ‘ ಅಸಹಾತೆಯಕತೆಯ ಚಿಹ್ನೆ ಎನುವರು.. ಕಲ್ಪನೆಯಲ್ಲಿ ‘ಶಾಂತಿ ಮಂತ್ರ’ ಚಂದವೋ ಚಂದ.. ವಾಸ್ತವದಲ್ಲಿ ಎಲ್ಲವೂ ಮಿಥ್ಯವೋ ಮಿಥ್ಯ… ********

ಪಾಟೀಲ ಪುಟ್ಟಪ್ಪ

ಪ್ರಪಂಚ ತೊರೆದ ಪಾಪು ನಾಡೋಜ, ಟಿಎಸ್ಆರ್ ಪ್ರಶಸ್ತಿ ಪುರಸ್ಕೃತ, ಡಾ.ಪಾಟೀಲ ಪುಟ್ಟಪ್ಪ ಅಸ್ತಂಗತ..! ಹಿರಿಯ ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ (102) ಅವರು ವಿಧಿವಶರಾಗಿದ್ದಾರೆ… ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕಳೆದ ಫೆ.10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ… ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ, […]

ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. […]

ಪರಿಚಯ

ಹನುಮಾಕ್ಷಿ ಗೋಗಿ. ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..! ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು […]

ಪುಸ್ತಕ ಬಿಡುಗಡೆ

ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ        ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು.    ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ […]

ಕಾವ್ಯಯಾನ

ಮೊಗ್ಗುಗಳು ತುಟಿ ಬಿಚ್ಚೆ ಕೆ.ಸುಜಾತ ಗುಪ್ತ ನಾ ಪ್ರಕೃತಿ ಪ್ರೇಮಿಯಾಗಿ ಸೂಕ್ಷ್ಮವಾಗಿ ಗಮನಿಸೆ ಪ್ರಕೃತಿಯ ಸೊಬಗು ನೂರ್ಮಡಿ ಹೆಚ್ಚಿತ್ತು… ಭಾವುಕತೆಯಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ನನ್ನ ನಾ ಮರೆತು ಲಲ್ಲಗೆರೆಯಲು ಹರುಷದಿ ಸ್ಪಂದಿಸಿ ನಸು ನಕ್ಕಿತ್ತು ಪ್ರಕೃತಿ.. ಬಿರಿದು ಪರಿಮಳವ ಸೂಸಲು ರವಿ ಕಿರಣದ ಸ್ಪರ್ಶದ ನಿರೀಕ್ಷೆಯಲ್ಲಿರಲು ಮೊಗ್ಗುಗಳು, ಮಂಜಿನ ಮುಂಜಾನೆಯಲಿ ಭೂದರನ ಮರೆಯಲಿ ರಾಜೀವ ಸಖ ಇಣುಕೆ, ಸಜ್ಜಾಗಿ ನಿಂತು ವಯ್ಯಾರದೆ ಅವನೆಡೆಗೆ ಓರೆನೋಟ ಬೀರಿದ ಮೊಗ್ಗುಗಳು ನಸು ನಾಚಿ ತುಟಿ ಬಿಚ್ಚಿ ಲಯಬದ್ದವಾಗಿ …ಹಾಯ್ […]

ಕಾವ್ಯಯಾನ

ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು […]

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ಸುಪ್ರಿಯಾ ನಟರಾಜ್ ನಾನೇಕೆ ಲಂಕೇಶರನ್ನು ಓದುತ್ತೇನೆ ಪಿಯುಸಿ ಯಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ, ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿ ಇತ್ತು. ಆದರೆ, ಪುಸ್ತಕಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸವಾಗಿತ್ತೇ ಹೊರತು, ಓದುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ನನಗೆ ಪುಸ್ತಕಗಳ ಮೇಲೆ ಪ್ರೀತಿ ಇತ್ತು. ಆದರೆ ಅವುಗಳನ್ನು ಓದುವ ಚಟವಿರಲಿಲ್ಲ.  ಆದರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವುದು ನನ್ನ ಆಸ್ಥೆಯಾಗಿದ್ದರಿಂದ ಕನ್ನಡ ರತ್ನ ಪರೀಕ್ಷೆ ಯಲ್ಲಿ ಉತ್ತೀರ್ಣಳಾಗಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವಾಗ, ನನ್ನ ಸಂಗ್ರಹದಲ್ಲಿ ಹಲವಾರು […]

ಕಾವ್ಯಯಾನ

 ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… […]

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನವೀನ್ ಮಂಡಗದ್ದೆ ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ.. ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು.. ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ‌ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ.. ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ.. ಲಂಕೇಶ್ ನಗರದ […]

Back To Top