ಪರಿಚಯ

ಹನುಮಾಕ್ಷಿ ಗೋಗಿ.

ಅನನ್ಯ ಶಾಸನ ಸಂಶೋಧಕಿ, ಸಾಹಿತಿ, ಪ್ರಕಾಶಕಿ ಹನುಮಾಕ್ಷಿ ಗೋಗಿ..!

ಸಂಶೋಧಕಿ ಹನುಮಾಕ್ಷಿ ಗೋಗಿಯವರು ನನಗಷ್ಟೇಯಲ್ಲ ನಮ್ಮ ಗೆಳೆಯರಿಗೆ ಪರಿಚಯವಾಗಿದ್ದು ಇದೇ ಧಾರವಾಡದಲ್ಲಿ ನೆಲಸಿದ್ದ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದವರಾಗಿದ್ದ ನನ್ನ ಅಷ್ಟೇ ಅಲ್ಲ ಅನೇಕಾನೇಕ ನಮ್ಮ ಗೆಳೆಯರ ಮಾರ್ಗದರ್ಶಕರಾಗಿದ್ದ ಮೋಹನ ನಾಗಮ್ಮನವರ ಮೂಲಕ. ಮೋಹನ ನಾಗಮ್ಮನವರಿಗೆ ಇದ್ದ ಅನೇಕಾನೇಕ ಶಿಷ್ಯ ಬಳಗದಲ್ಲಿ ನಾನು, ರೈತ ಕವಿಯಾದ ಚಂಸು ಅಂದರೆ ಚಂದ್ರಶೇಖರ ಪಾಟೀಲ ಮತ್ತು ರೈತ, ನ್ಯಾಯವಾದಿ ಮತ್ತು ಲೇಖಕ ವಿಜಯಕಾಂತ ಪಾಟೀಲಗಳು ತೀರಾ ಹತ್ತಿರದ ಶಿಷ್ಯರಾಗಿದ್ದೆವು. ಆ ಸಮಯದಲ್ಲಿ ಸಿಕ್ಕವರು ಅಂದರೆ ನಮಗೆ ತೀರಾ ಪರಿಚಿತವಾದರು ಸಂಶೋಧಕಿ ಹನುಮಾಕ್ಷಿ ಗೋಗಿಯವರು…

ಹನುಮಾಕ್ಷಿ ಗೋಗಿಯವರು ಬರೀ ಸರ್ಕಾರಿ ಅಧಿಕಾರಿಗಳು ಮಾತ್ರ ಆಗಿರಲಿಲ್ಲ. ಅವರೊಬ್ಬ ಅನನ್ಯ ಲೇಖಕಿಯಾಗಿದ್ದರು. ಅದರಲ್ಲೂ ಅವರೊಬ್ಬ ಶಾಸನಗಳ ಸಂಶೋಧಕಿಯಾಗಿದ್ದರು. ಅವರ ಸಂಶೋಧನೆ ತೀರಾ ಹಸಿವಿನಿಂದ ಕೂಡಿತ್ತು, ಅಂದರೆ ಅವರು ಶಾಸನ ಅಧ್ಯಯನದಲ್ಲಿ ಅಷ್ಟೊಂದು ತೀರಾ ಚಿಕಿತ್ಸಕರಾಗಿದ್ದರು. ಶಾಸನಗಳ ಹುಡುಕಾಟದಲ್ಲಿ ಭಾರೀ ಹಸಿವು ಉಳ್ಳವರು ಆಗಿದ್ದರು ಹನುಮಾಕ್ಷಿ ಗೋಗಿಯವರು…

ಮಹಿಳಾ ಸಾಹಿತ್ಯದಲ್ಲಿ ಹೆಸರು ಮಾಡಿದವರೂ ಆಗಿದ್ದರು. ಹಾಗಾಗಿಯೇ ಹನುಮಾಕ್ಷಿ ಗೋಗಿಯವರು ‘ಮಹಿಳಾ ಸಾಹಿತ್ಯಕಾ’ ಎಂಬ ಪ್ರಕಾಶನವನ್ನೂ ತೆರೆದು ನಾಡಿನ ಪ್ರಮುಖ ಲೇಖಕಿಯರ ಸಾಹಿತ್ಯವನ್ನು ಪ್ರಚುರಪಡಿಸಿದವರು ಮತ್ತು ಈಗಲೂ ಆ ನಿಟ್ಟಿನ ಕೆಲಸದಲ್ಲಿ ತೊಡಗಿಕೊಂಡವರು.
ಇವರ ಪ್ರಕಾಶನದಿಂದ ಅಮೂಲ್ಯ ಸಾಹಿತ್ಯ ಒಡಮೂಡಿದೆ. ಹಾಗಾಗಿಯೇ ತಾವೊಬ್ಬ ಸಾಹಿತಿಯಾಗಿಯೂ ಇತರ ಪ್ರಮುಖ ಮಹಿಳಾ ಸಾಹಿತಿಗಳನ್ನೂ ಹೊರತಂದವರು ಹನುಮಾಕ್ಷಿ ಗೋಗಿಯವರು…

ಮುಖ್ಯವಾಗಿ ಇವರೊಬ್ಬ ಶಿಲಾ ಶಾಸನಗಳ ಸಂಶೋಧಕಿಯಾಗಿ ಮಾಡಿದ ಕೆಲಸ ಅಮೂಲ್ಯ ಮತ್ತು ಅನನ್ಯವಾದದು.
ಇಂತಹ ಹನುಮಾಕ್ಷಿ ಗೋಗಿಯವರ ಬಗೆಗೆ ಒಂದು ಕಿರು ಟಿಪ್ಪಣಿ ಹೀಗಿದೆ…

ಹನುಮಾಕ್ಷಿ ಗೋಗಿ ಅವರು ೧೯೫೫ ಜೂನ ೧ ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈಚಬಾಳ ಗ್ರಾಮದಲ್ಲಿ ಜನಿಸಿದರು…

ಇವರು ಮೂಲತಃ ಅವಿಭಜಿತ ಗುಲ್ಬರ್ಗಾ ಅಥವಾ ಕಲಬುರ್ಗಿ ಜಿಲ್ಲೆಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅದೇ ವಿಶ್ವ ವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಅವರು ಪ್ರಥಮ ಶ್ರೇಣಿಯೊಂದಿಗೆ ಪ್ರಥಮ ಸ್ಥಾನವನ್ನೂ ಪಡೆದುಕೊಂಡರು. ಸದ್ಯ ಕರ್ನಾಟಕ ರಾಜ್ಯ ಸರಕಾರದ ಸಹಕಾರ ಇಲಾಖೆಯ ಸೇವೆಯಲ್ಲಿದ್ದಾರೆ. ಈಗ ಧಾರವಾಡದಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿಯವರು, ಲೇಖಕಿ, ಸಂಶೋಧಕಿ ಹಾಗೂ ಪ್ರಕಾಶಕಿಯಾಗಿಯೂ ಇದ್ದಾರೆ…

ಇವರು ‘ಮಹಿಳಾ ಸಾಹಿತ್ಯಿಕಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ಅನೇಕಾನೇಕ ಲೇಖಕಿಯರ ಸಾಹಿತ್ಯದ ವಿವಿಧ ಪ್ರಕಾರಗಳ ೪9ಕ್ಕೂಹೆಚ್ಚು ಕೃತಿಗಳನ್ನು ಪ್ರಕಟಗೊಳಿಸಿದ್ದಾರೆ…

ಶಾಸನಗಳ ಆಕರ ಸಂಶೋಧಕಿಯಾಗಿರುವ ಇವರ ಕೃತಿಗಳು ಹೀಗಿವೆ–

ವ್ಯಾಸಂಗ (೧೯೮೩).
ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (೧೯೯೩) (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ).
ಸುರಪುರ ತಾಲೂಕಿನ ಶಾಸನಗಳು (೧೯೯೪).
ಕಲಬುರ್ಗಿ ಜಿಲ್ಲೆಯ ಶಾಸನಗಳು (೧೯೯೫).
ಕರ್ನಾಟಕ ಭಾರತಿ ಸೂಚಿ (೨೦೦೨).
ಅನುಶಾಸನ (೨೦೦೨).
ಉಪ್ಪಾರ ಹಣತೆ (೨೦೦೨).
ಬೀದರ ಜಿಲ್ಲೆಯ ಶಾಸನಗಳು (೨೦೦೫).
ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (೨೦೦೭).
ಲಕ್ಕುಂಡಿ ಶಾಸನಗಳು (೨೦೦೮).
ಡಂಬಳ: ಸಾಂಸ್ಕೃತಿಕ ಅಧ್ಯಯನ (೨೦೦೮) (ಡಾ. ಪಿ. ಕೆ. ರಾಥೋಡರ ಜೊತೆಯಲ್ಲಿ).
ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (೨೦೦೯) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ).
ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ) (೨೦೦೯).
ಅಣ್ಣಯ್ಯ ತಮ್ಮಯ್ಯಗಳ ಪುರಾಣ (೨೦೧೦) (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ).
ಚೈತನ್ಯಶೀಲೆ ( ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ) (೨೦೧೧).
ಹುಬ್ಬಳ್ಳಿ ತಾಲೂಕಿನ ಶಾಸನಗಳು (೨೦೧೩).
ಡಾ.ಆರ್.ಎನ್.ಗುರವ ಸಂಪ್ರಬಂಧಗಳು (೨೦೧೪).
ರಾಜಮನೆತನದ ಚರಿತ್ರೆಗಳು (೨೦೧೪).
ಲಕ್ಷ್ಮೇಶ್ವರದ ಶಾಸನಗಳು (೨೦೧೫).
ದಂಡಿನ ದಾರಿ (೨೦೧೬).
ಯಾದಗಿರಿ ಜಿಲ್ಲೆಯ ಶಾಸನಗಳು (೨೦೧೬).

ಇವರ ಸಂಶೋಧನೆಗೆ ಸಂದ ಸನ್ಮಾನ ಮತ್ತು ಪುರಸ್ಕಾರಗಳು-

೧೯೯೧ – ಆಡಳಿತಾತ್ಮಕ ಸೇವೆಗೆ ಸನ್ಮಾನ.
೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನರಗುಂದದ ಪುರಸ್ಕಾರ.
೧೯೯೫ – ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಬೆಂಗಳೂರು.
೧೯೯೬ – ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಬೆಂಗಳೂರು.
೨೦೦೪ – ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
೨೦೦೫ – ಡಾ. ಜ. ಚ. ನಿ. ಪ್ರಶಸ್ತಿ, ರಾಜೂರು.
೨೦೦೫ – ಬಾಲಕೃಷ್ಣ ಪ್ರಶಸ್ತಿ, ನರೇಗಲ್ಲ.
೨೦೦೫ – ಲೇಪಾಕ್ಷಸ್ವಾಮಿ ಪ್ರಶಸ್ತಿ, ಬೆಂಗಳೂರು.
೨೦೦೬ – ಡಾ. ಶೈಲಜ ಉಡಚಣ ಪ್ರಶಸ್ತಿ, ಕಲಬುರ್ಗಿ.
೨೦೦೬ – ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಬೆಂಗಳೂರು.
೨೦೦೭- ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಅಡ್ನೂರು.
೨೦೦೯ – ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಇತಿಹಾಸ ಅಕ್ಯಾಡಮಿ, ಬೆಂಗಳೂರು.
೨೦೧೪ – ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ.
೨೦೧೪ – ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ.
೨೦೧೫ – ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೧೨ರ ಗೌರವ ಪ್ರಶಸ್ತಿ.
೨೦೧೫ – ಕರ್ನಾಟಕ ಲೇಖಕಿಯರ ಸಂಘದಿಂದ ಪುಸ್ತಕಕ್ಕೆ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ.
೨೦೧೫ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ.
೨೦೧೫ – ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ.
೨೦೧೫ – ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ.
೨೦೧೬ – ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ.
೨೦೧೭ – ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ. ಹೀಗೆಯೇ ವಿವಿಧ ಪುರಸ್ಕಾರ ಮತ್ತು ಪ್ರಶಸ್ತಿಗಳು ಬಂದಿವೆ ಹನುಮಾಕ್ಷಿ ಗೋಗಿಯವರಿಗೆ…

ಹೀಗೆಯೇ ಒಬ್ಬ ಸರ್ಕಾರಿ ಅಧಿಕಾರಿಯಾಗಿಯೂ ಶಾಸನ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು ಹನುಮಾಕ್ಷಿ ಗೋಗಿಯವರು..!

***********


ಕೆ.ಶಿವು.ಲಕ್ಕಣ್ಣವರ

Leave a Reply

Back To Top