ಲಂಕೇಶರನ್ನು ಏಕೆ ಓದಬೇಕು?
ನವೀನ್ ಮಂಡಗದ್ದೆ
ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ..
ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು..
ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ..
ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ..
ಲಂಕೇಶ್ ನಗರದ ಕಡೆ ಮುಖ ಮಾಡಿದರೂ ತನ್ನ ಹಳ್ಳಿಯನ್ನು ಮರೆಯಲಿಲ್ಲ, ಅವರೊಬ್ಬ ಅಕ್ಷರಸ್ತ ವ್ಯಕ್ತಿಯಾಗಿ ಅನಕ್ಷರಸ್ಥ ಸಮುದಾಯದ ಜೊತೆ ನಿಂತರು
ಅವರ ಊರಾದ ಕೊನಗವಳ್ಳಿಯಲ್ಲಿ ಕೌದಿಗಳನ್ನು ಹೊಲಿಸಿ ಬೆಂಗಳೂರಿನಲ್ಲಿ ತೆಗೆದುಕೊಂಡು ಹೋಗಿ ಮಾರಿ ಅದರ ಹಣವನ್ನು ಕೌದಿ ನೇಯ್ದವರಿಗೆ ತಂದುಕೊಡುತ್ತಿದ್ದರಂತೆ
ಸಾಹಿತ್ಯ ಕಲಿಸುವ ಬದ್ದತೆ ಏನು ಅದರ ಪ್ರತಿಫಲ ಏನಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಲಂಕೇಶ್.
ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವವರು ಓದಲೇಬೇಕಾದ ಕತೆ ಮುಟ್ಟಿಸಿಕೊಂಡವನು, ನನ್ನ ಎಚ್ಚರದ ಧ್ವನಿಯಾಗಿ ಆ ಕತೆಯನ್ನು ಓದುತ್ತೇನೆ.
ಬಿರುಕು ಕಾದಂಬರಿಯ ಬಸವರಾಜನ ಪಾತ್ರ ನನ್ನನ್ನು ಕಾಡುತ್ತಿರುತ್ತದೆ.
ಅದರಲ್ಲಿ ಅವನು ಆಗಾಗ ತನ್ನ ಅಂಗಿಯನ್ನು ಬದಲಿಸುತ್ತಾನೆ,
ಅದು ವ್ಯಕ್ತಿತ್ವ ಬದಲಾವಣೆಯ ಸಂಕೇತ, ಆಧುನಿಕೋತ್ತರ ಕಾಲದಲ್ಲು ಇದು ಸಹಜವಾಗಿ ರೂಪುಗೊಂಡಂತೆ ಇದೆಯಲ್ಲ ಅನಿಸುವ ಕಾರಣಕ್ಕಾಗಿ ಆ ಕಾದಂಬರಿಯನ್ನು ಮತ್ತೆ ಮತ್ತೆ ಓದುತ್ತೇನೆ,
ಒಟ್ಟಾರೆ ಲಂಕೇಶ್ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸದ ನಾವು ಅವರನ್ನು ಸ್ಪೂರ್ತಿಯಾಗಿ ಭಾವಿಸಲು ಸಾಧ್ಯವಿದೆ.