ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ

ಲೇಖಕಿ-ಚಂದ್ರಪ್ರಭ

ದಾವಲ್ ಸಾಬ್

ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. ಭಾರತೀಯರ ಪ್ರಾಚೀನ ಬದುಕು ಸುಖದ ಸುಪತ್ತಿಗೆಯಾಗಿತ್ತು. ಅಲ್ಲಿ ಎಲ್ಲ ಬಗೆಯ ಸಮಾನತೆ ಇತ್ತು.ವೈದಿಕಯುಗದಲ್ಲಿ ಶಾಂತಿ,ಸಮೃದ್ದಿಯಿತ್ತು ಎಂಬ ಹೇಳಿಕೆಗಳು ಡಾಂಭಿಕತೆಯನ್ನು ಮೆರೆಯುತ್ತಿವೆ. ಹಸಿ ಸುಳ್ಳನ್ನು ಪ್ರದರ್ಶಿಸುತ್ತಿವೆ. ವಾಸ್ತವವೆಂದರೆ ರಾಜಪ್ರಭುತ್ವದ ಕಾಲದಲ್ಲಿ ಜನಸಾಮಾನ್ಯರ ಬದುಕು ಅತಿ ಹೆಚ್ಚು ಸಂಕಟ ಮತ್ತು ಶೋಷಣೆಗೆ ಒಳಗಾಗಿತ್ತು ಎಂಬುದನ್ನು ಶರೀಫರ ತತ್ವಪದಗಳಲ್ಲಿ ಕಂಡುಬರುತ್ತದೆ ಎಂಬಂತಹ ವಿಚಾರ ಚಂದ್ರಪ್ರಭಾ ರವರ ಈ ಹೊತ್ತಿಗೆಯಲ್ಲಿ ಕಾಣುತ್ತೇವೆ. ಬೌದ್ಧಿಕ ಬದುಕಿನ ದುಃಖ ದುಮ್ಮಾನಗಳನ್ನು ಧಿಕ್ಕರಿಸಿ ಜನನ ಮರಣ ಭವ ಚಕ್ರದಿಂದ ಪಾರಾಗುವ ಮುಕ್ತಿ ಸಾಧನೆಯನ್ನು ಸಾಧಿಸಬಹುದು. ಲೋಕ ಜೀವನವು ಹಲವು ವ್ಯಾಧಿಗಳಿಂದ ಕೂಡಿದೆ.ಹಸಿವು ನಿದ್ದೆ ನೀರಡಿಕೆ ನೆರೆಹಾವಳಿ ಅತಿವೃಷ್ಟಿ ಅನಾವೃಷ್ಟಿ ಬಡತನ ಅಜ್ಞಾನ ಮೌಢ್ಯ ಮೊದಲಾದವುಗಳು ಇಡುಕಿರಿದು ಭವ ಸಾಗರವು ಘೋರವಾಗಿದೆ.ಈ ಭವ ಸಾಗರದಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಆಧ್ಯಾತ್ಮ ಮಾರ್ಗವೇ ಸಾಧನ.
ಜೀವ ಜಗತ್ತು, ಈಶ್ವರ ಮಾಯೆ ಮೊದಲಾದ ತತ್ವಗಳ ಹುಡುಕಾಟ, ನಂತವಾದ ಈ ಬದುಕಿನಿಂದ ಅನಂತವಾದದತ್ತ ಚಲಿಸುವುದೇ ಜೀವನದ ಗುರಿಯಾಗಿದೆ.
ಹೀಗೆ ಇನ್ನೂ ಹಲವಾರು ವಿಷಯಗಳನ್ನು ಶ್ರೀಮತಿ.ಚಂದ್ರಪ್ರಭಾ ರವರು “ತಗಿ ನಿನ್ನ ತಂಬೂರಿ” ಎಂಬ ಕಿರುಹೊತ್ತಿಗೆಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ.

Leave a Reply

Back To Top