ನಾನು ಓದಿದ ಕಾದಂಬರಿ
ಹರಿಚಿತ್ತ ಸತ್ಯ ವಸುಧೇಂದ್ರ ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ. ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ […]
ನಾನು ಓದಿದ ಕಾದಂಬರಿ
ಅಶ್ವತ್ಥಾಮನ್ ಜೋಗಿ ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ […]
ಗಝಲ್ ಲೋಕ
ಬಸವರಾಜ್ ಕಾಸೆ ಗಝಲ್ ಬಗ್ಗೆ ಮಾಹಿತಿ ನೀಡುವ ಮತ್ತು ಗಝಲ್ ರಚನೆಗೆಇರುವ ನಿಯಮಗಳ ಬಗ್ಗೆ ಸವಿವರವಾಗಿ ತಿಳಿಸಿ ಕೊಡುವ ಹೊಸ ಅಂಕಣವೇ ‘ಗಝಲ್ ಲೋಕ’ ಪ್ರತಿ ಬುದವಾರಮತ್ತು ಶನಿವಾರ ನಮ್ಮ ನಡುವಿನಕವಿ ಬಸವರಾಜ್ ಕಾಸೆ ಅವರ ಲೇಖನಿಯಿಂದ
ಕಾವ್ಯಯಾನ
ಒಂದು ಕವಿತೆ ಅಮೃತಾ ಮೆಹಂದಳೆ ಈಗ ನಿನ್ನ ವಿರಾಮ ಸಮಯವಲ್ಲವೇ? ಬಿಡುವಿನಲ್ಲಿ ನೆನೆಯುತ್ತಿರುವೆಯಾ ನನ್ನ ನೀನು? ಲಟಿಗೆ ಮುರಿದ ಬೆರಳು ಸ್ಪರ್ಶಕ್ಕಾಗಿ ಹಂಬಲಿಸಿರಬಹುದೇನು? ಚಾಚಿದ ಕಾಲು ಬಯಸಿತಾ ಸಹನಡಿಗೆಯನ್ನು? ಏನೋ ಹುಡುಕುವ ಕ್ಯಾಮರಾ ಕಣ್ಣು ನನ್ನದೇ ಚಿತ್ರ ಸೆರೆಹಿಡಿಯುತ್ತಿದೆಯೇನು? ತುಟಿಸೋಕಿ ಸುಟ್ಟ ಕಹಿಕಾಫಿ ನಿನ್ನ ಪಾಲಿನ ನಾನಲ್ಲವೇನು? ನನ್ನ ಪ್ರೀತಿಯ ಹಾಡು ನಿನ್ನ ಪಾಡಾಗಿ ಕಿವಿಯ ಸೋಕುತ್ತಿರಬಹುದೇನು? ಇಲ್ಲಿ ಬೀಸಿದ ಗಾಳಿ ಸುತ್ತಿ ಸುಳಿದು ನಿನ್ನಾತ್ಮವ ಪುಳಕಿಸಬಾರದಿತ್ತೇನು? ನನ್ನ ಕಣ್ಣು ಕತ್ತಲು ಕಪ್ಪುಪಟ್ಟಿ ಕಟ್ಟದೆಯೇ.. ಕಿವಿ ಮುಚ್ಚಿಹೋಗಿದೆ […]
ಕಾವ್ಯಯಾನ
ನದಿಯಾಗು. ಶಾಲಿನಿ ಆರ್. ಶಾಲಿನಿ ಆರ್. ಆಸೆಗಳಿವೆ ನೂರಾರು ನೂರಾರು ಬಯಕೆ, ಎತ್ತಲಿಂದೆತ್ತಣಕೂ ನಿನ್ನ ಸೇರುವ ಹರಕೆ, ಹಸಿರುಲ್ಲಿನ ನಡುವೆ ಇಬ್ಬನಿ ಬನಿಯೊಳಗೆ ನಾನಿದಿದ್ದರೆ, ನಿನ್ನ ಪಾದ ಪ್ರಾತಃ ಸ್ಪರ್ಶಕೆ ನಾ ಸದಾ ಕಚಗುಳಿಯಿಡುತಿದ್ದೆ, ನಿನ್ನ ನೋಡುವ ಕನ್ನಡಿ ನಾನಾಗಿರೆ, ನಿನ್ನಂತರಂಗನರಿವ ಬೆರಗು ನಾನಾಗಿ ಬಳಿಯಿರುತಿದ್ದೆ, ನೀ ನಡೆವ ಹಾದಿಗೆ ಮರವು ನಾನಾದೊಡೆ, ನಿನ್ನ ದಣಿವಿಗೆ ನಾ ನೆರಳಾಗ ಬಯಸಿದ್ದೆ, ನೀ ನೋಡುವ ನೋಟದ ಕಣ್ಣು ನಾನಗಿದ್ದರೆ, ಭರವಸೆಯ ಬೆಳದಿಂಗಳ ಕಣ್ಗಿರಿಸಿ ತಣಿಯುತಿದ್ದೆ, ನಿನ್ನ ನಿಜ ಪ್ರೀತಿ […]
ಅನುವಾದ ಸಂಗಾತಿ
“ನಿಮ್ಮ ಕೈಗಳು ಮೂಲ: ಬಾಬುರಾವ್ ಬಾಗುಲ್(ಮರಾಠಿಕವಿ) ಕನ್ನಡಕ್ಕೆ:ಕಮಲಾಕರ ಕಡವೆ ನಿಮ್ಮ ಕೈಗಳು ಇದ್ದಿರಬಹುದು ಬಂಧಿಆದರೆ ಅವು ಸೃಜನಶೀಲನಿಮ್ಮ ಕೈಗಳು ಇದ್ದಿರಬಹುದು ಶಾಂತ, ಅಮಾಯಕಆದರೆ ಅವು ಪರಿವರ್ತನೆಯ ರಥಗಳುಪ್ರಗತಿಯ ಹೆದ್ದಾರಿಗಳುನಿಮ್ಮ ಐದು ಬೆರಳುಗಳು ಪಂಚಮಹಾಭೂತಗಳುಇದೇನು ಬಾ. ಬಾ. ನ ಕಲ್ಪನೆಯಲ್ಲರಶಿಯಾ, ಅಮೇರಿಕ, ಯುರೋಪು ಆಗಿದ್ದಾರೆ ಸಾಕ್ಷಿನಿಮ್ಮ ಖಚಿತ ಸಾಮರ್ಥ್ಯಕ್ಕೆ ********
ಕವಿತೆ ಕಾರ್ನರ್
ಚಹರೆ ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ನಮ್ಮ ವಿದಾಯದ ಕ್ಷಣಗಳ ಕ್ಷಣಗಳ ಸಾಕ್ಷಿಗಳಿನ್ನೂಹಾಗೇ ಉಳಿದಿವೆ ರಪ್ಪನೆ ಬಾಗಿಲು ತೆಗೆದು ಸದ್ದು ಮಾಡುತ್ತಾ ಹೋದವಳುಎಸೆದು ಹೋದ ಮುಖ ಕನ್ನಡಿಯ ಚೂರುಗಳಲ್ಲಿನ್ನುಅವಳ ಚಹರೆಗಳು ಕಾಣುತ್ತಿವೆ! ಮತ್ತೆಂದೂ ನೋಡಲಾರೆ ನಿನ್ನ ಮುಖವ ಎಂದು ಕೂಗಿ ಹೇಳಿ ಹೋದವಳಮಾತುಗಳಿನ್ನೂ ಹಳೆಯ ಮಣ್ಣಿನ ಗೋಡೆಗಪ್ಪಳಿಸಿಮತ್ತೆ ಮತ್ತೆ ಕೇಳುತ್ತಲೇ ಇವೆ! ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ಕೇಳಿಸುತ್ತಲೇ ಇವೆ ಶಬ್ದಗಳುಕಾಣಿಸುತ್ತಲೇ ಇವೆ ಚಿತ್ರಗಳು ಒದ್ದೆಯಾಗುತ್ತಲೇ ಇವೆ ಕಣ್ಣುಗಳು!ಕಾರಣವಿರದೇ? ********* ಕು.ಸ.ಮದುಸೂದನ
ಕಾವ್ಯಯಾನ
ಗಝಲ್ ಬಸವರಾಜ ಕಾಸೆ ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ ಸಂಜೆ ಸೂರ್ಯನನ್ನು/ ಮರಳು ದಡದ ಮೇಲೆ ಮೆಲ್ಲಗೆ ಮೆಲುಕುವ ಮಲ್ಲಿಗೆ ದಂಡೆಯೊಂದು ನೀನು// ನೀ ಬರುವ ಸಮಯಕ್ಕೆ ಕಾಯುವ ಭಾವಗಳು ಹರಿಯುವವು ಮಳೆಗಾಲದ ಹೊಳೆಯಾಗಿ/ […]
ಕಾವ್ಯಯಾನ
ನನಗಷ್ಟೆ ಗೊತ್ತು! ಲೋಕೇಶ್ ಅಷ್ಟು ಸುಲಭವಲ್ಲ ನಿನ್ನ ಉಳಿಸಿಕೊಳ್ಳುವುದು ಅಷ್ಟು ಸಲೀಸು ಅಲ್ಲ ನಿನ್ನ ಕಳೆದುಕೊಳ್ಳುವುದು ನೀನೆಂದು ಉನ್ಮಾದ ರುಚಿಗೆ ತಾಕೀದೊಡನೇ ನೀ ಕರೆದೊಯ್ಯುವ ಜಗತ್ತು ನನಗಷ್ಟೇ ಗೊತ್ತು! ನೀನೆಂದು ಭಾವನ್ಮೊದಾ ಮನಕ್ಕೆ ನೆನಪದೊಡನೇ ನೀ ಆವರಿಸಿಕೊಳ್ಳುವ ನಿಯತ್ತು ನನಗಷ್ಟೇ ಗೊತ್ತು! ನೀನೆಂದು ಸವಿ ವಿನೋದ ಮಾತಿಗೆ ಜೊತೆಯಾದೊಡನೇ ನೀ ಆಪ್ತವಾಗುವ ಅವಲತ್ತು ನನಗಷ್ಟೇ ಗೊತ್ತು! ನೀನೆಂದು ಉಸಿರ ನಾದ ಏರಿ ಇಳಿದೊಡನೇ ನನ್ನ ಎದೆಯಲ್ಲೆಳೆವ ಹೆಸರಂತು ನನಗಷ್ಟೇ ಗೊತ್ತು *************
ಕಾವ್ಯಯಾನ
ಯುಗಾದಿಯ ಆ ದಿನ ನೀ.ಶ್ರೀಶೈಲ ಹುಲ್ಲೂರು ಹೆದ್ದಾರಿಗಂಟೇ ಇರುವ ನನ್ನ ಮನೆ ಮಹಲಿನ ಮಹಡಿಯ ಬಾಲ್ಕನಿಯಲಿ ಬಂದು ನಿಂತೆ ಬಿಕೋ ಎನ್ನುವ ಸತ್ತುಬಿದ್ದ ರಸ್ತೆ! ಅಲ್ಲೊಂದು ಇಲ್ಲೊಂದು ಆಗೊಂದು ಈಗೊಂದು ಕಂಡು ಕಣ್ಮರೆಯಾಗುವ ಬೀದಿ ನಾಯಿ ಗಳು ತಮ್ಮ ವಿಸರ್ಜನಾ ವ್ಯೂಹ ದ ಕೊನೆಯ ಅಂಗದ ಅಂತಿಮ ಚಪಲವ ಲೈಟಿನ ಕಂಬಕೆ ಕಾಲೆತ್ತಿ ನೆಲಕೆ ತಳವೊತ್ತಿ ತೀರಿಸಿ ಕೊಂಡು ಕಂಬಿ ಕಿತ್ತವು! ಪ್ರಾಸಕ್ಕಂಟಿದ ‘ಕವಿತೆ ಸಾಲು’ ಇಂದು ನನ್ನನ್ನು ಪರದೇಶಿಯಾಗಿಸಿ ಕ್ರಾಸ್ ಕಂಟ್ರಿ ಓಟಕ್ಕಿಳಿದವು. ಸರಿ,ಬಂದಂತೆ ಬರೆದಿಡುವೆ […]