ಚಹರೆ
ನನ್ನ ಅವಳ ಸಂಬಂದ
ಮುರಿದುಬಿದ್ದು
ಮುವತ್ತು ವರುಷಗಳಾದರೂ
ನಮ್ಮ ವಿದಾಯದ ಕ್ಷಣಗಳ ಕ್ಷಣಗಳ ಸಾಕ್ಷಿಗಳಿನ್ನೂ
ಹಾಗೇ ಉಳಿದಿವೆ
ರಪ್ಪನೆ ಬಾಗಿಲು ತೆಗೆದು ಸದ್ದು ಮಾಡುತ್ತಾ ಹೋದವಳು
ಎಸೆದು ಹೋದ ಮುಖ ಕನ್ನಡಿಯ ಚೂರುಗಳಲ್ಲಿನ್ನು
ಅವಳ ಚಹರೆಗಳು ಕಾಣುತ್ತಿವೆ!
ಮತ್ತೆಂದೂ ನೋಡಲಾರೆ ನಿನ್ನ ಮುಖವ ಎಂದು ಕೂಗಿ ಹೇಳಿ ಹೋದವಳ
ಮಾತುಗಳಿನ್ನೂ ಹಳೆಯ ಮಣ್ಣಿನ ಗೋಡೆಗಪ್ಪಳಿಸಿ
ಮತ್ತೆ ಮತ್ತೆ ಕೇಳುತ್ತಲೇ ಇವೆ!
ನನ್ನ ಅವಳ ಸಂಬಂದ
ಮುರಿದುಬಿದ್ದು
ಮುವತ್ತು ವರುಷಗಳಾದರೂ
ಕೇಳಿಸುತ್ತಲೇ ಇವೆ ಶಬ್ದಗಳು
ಕಾಣಿಸುತ್ತಲೇ ಇವೆ ಚಿತ್ರಗಳು
ಒದ್ದೆಯಾಗುತ್ತಲೇ ಇವೆ ಕಣ್ಣುಗಳು!
ಕಾರಣವಿರದೇ?
*********
ಕು.ಸ.ಮದುಸೂದನ