“ನಿಮ್ಮ ಕೈಗಳು
ಮೂಲ: ಬಾಬುರಾವ್ ಬಾಗುಲ್(ಮರಾಠಿಕವಿ)
ಕನ್ನಡಕ್ಕೆ:ಕಮಲಾಕರ ಕಡವೆ
ನಿಮ್ಮ ಕೈಗಳು ಇದ್ದಿರಬಹುದು ಬಂಧಿ
ಆದರೆ ಅವು ಸೃಜನಶೀಲ
ನಿಮ್ಮ ಕೈಗಳು ಇದ್ದಿರಬಹುದು ಶಾಂತ, ಅಮಾಯಕ
ಆದರೆ ಅವು ಪರಿವರ್ತನೆಯ ರಥಗಳು
ಪ್ರಗತಿಯ ಹೆದ್ದಾರಿಗಳು
ನಿಮ್ಮ ಐದು ಬೆರಳುಗಳು ಪಂಚಮಹಾಭೂತಗಳು
ಇದೇನು ಬಾ. ಬಾ. ನ ಕಲ್ಪನೆಯಲ್ಲ
ರಶಿಯಾ, ಅಮೇರಿಕ, ಯುರೋಪು ಆಗಿದ್ದಾರೆ ಸಾಕ್ಷಿ
ನಿಮ್ಮ ಖಚಿತ ಸಾಮರ್ಥ್ಯಕ್ಕೆ
********