ಕಥಾಯಾನ
ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ
ಪುಸ್ತಕ ಪರಿಚಯ
ಸಂಕೋಲೆಗಳ ಕಳಚುತ್ತ ಕೃತಿ: ಸಂಕೋಲೆಗಳ ಕಳಚುತ್ತ ಕವಿ: ಕು.ಸ.ಮಧುಸೂದನ ಪ್ರಕಾಶಕರು: ಕಾವ್ಯಸ್ಪಂದನ ಪ್ರಕಾಶನ, ಬೆಂಗಳೂರು ಪುಸ್ತಕ ದೊರೆಯುವ ವಿವರಗಳು ಸಂಕೋಲೆಗಳ ಕಳಚುತ್ತ ಪುಸ್ತಕತರಿಸಿಕೊಳ್ಳುವ ವಿವರಗಳು ಪುಸ್ತಕದ ಬೆಲೆ=150=00 ಬ್ಯಾಂಕ್ ವಿವರಗಳು IFSC CODE-CNRB0002698 AC/NO=1145101036761 Bhadravathiramachari Canara bank,rajajinagar 2nd block***********
ಕನ್ನಡ ಕಾವ್ಯ ಕುರಿತು
ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ […]
ಯುಗಾದಿಗೊಂದು ಗಝಲ್
ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು […]
ಯುಗಾದಿ ಕಾವ್ಯ
ಶಾವ೯ರಿ ಯುಗಾದಿ ರೇಖಾ ವಿ.ಕಂಪ್ಲಿ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ವಿಕಾರಿ ಸಂವತ್ಸರದ ಕೊನೆಯಲಿ ವಿಷಕಾರಿತು ಕರೋನಾ ಜಗವ ತಲ್ಲಣಗೊಳಿಸಿದೇ ಉಸಿರಿಸಲು ಬೇವರಿಳಿಸುವಂತೆ ಮಾಡಿದೆ ಎಲ್ಲರನ್ನು ಮನೆಯೊಕ್ಕಿಸಿ ಬಿಟ್ಟಿದೆ ಮಹಾಮಾರಿ ರೋಗಕ್ಕೆ ಬೆದರಿದೇ ಜಗದೆದೆಯನು ಜಲ್ಲ ಎನ್ನಿಸಿದೆ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ಮುಡಿಗಟ್ಟಿ ಅದರುಟ್ಟಡಿಗಿಸಲು ಬಾ ಯುಗಾದಿ ಬಾ ಯುಗಾದಿ ಬಾ …………. ಯುಗಾದಿ ಯುಗ ಯುಗಾಂತರ ಕಳೆದರು ಹೊಸತು ತರುವ ನಿನ್ನ ಹಚ್ಚ ತೋರಣದಿ ಆಹ್ವಾನಿಸಲು ಶಾವ೯ರಿಯು ಕಾಯುತಿರುವಳು […]
ಯುಗಾದಿ ಕಾವ್ಯ
ಭರವಸೆಯೊಂದಿರಲಿ ಶಾಲಿನಿ ಆರ್. ಚಿಗುರಿದೆಲಿ ಮ್ಯಾಲೆಲ್ಲ ಚುಂಬನವಿತ್ತಿದೆ ಸಾವಿರ ಸೂರ್ಯಕಿರಣ ಗಾಳ್ಯಾಗ ತೇಲಿಬರುತಿವೆ ಹೂವ ಪರಿಮಳ ದುಂಬಿಗದುವೆ ಪ್ರಾಣ, ಹೊಸ ಆದಿಗೆ ತಳಿರು ತೂಗಿವೆ ತೋರಣ ಹೊಸ ಮನ್ವಂತರಕೆ ರಸದೌತಣವ ಬೀಡಿಗೆ ಪ್ರಕೃತಿ ಹಾಡಿದೆ ತಾನನ, ಕೋಗಿಲೆಯ ಗಾನ ದುಂಬಿಯ ಝೇಂಕಾರ ಕೇಳುತ ಮೈಮರೆತಿವೆ ಮರಗಳೆಲ್ಲ ಕೂತು ಹರಸುತ ನಮ್ಮನ್ನೆಲ್ಲ, ಬೇವಿನಮರಕದು ಹೂವಿನ ಸೀರಿ ಮಾವಿನ ಮರದಲಿ ಕಾಯಿಗಳ ಮೋಡಿ ಸುಂದರ ಸೊಬಗಿದು ಯುಗದ ಆದಿ ಎದಿಮನವ ಬೆಸೆದಿದೆ ಸಿರಿ ಸಂಭ್ರಮ ಚೈತ್ರ, ಬದುಕೆಲ್ಲ ಹಿಂಗಾ ಇರಲಿ […]
ಯುಗಾದಿ ಕಾವ್ಯ
ಬಾರೆ ಶಾರ್ವರಿ ಡಾ.ಗೋವಿಂದ ಹೆಗಡೆ ಬಂದೆಯಾ ಬಾ ಬಾರೆ ಶಾರ್ವರಿ ನಲವಿನೂಟೆ ತಾರೆ | ಕಾಲನ ಕಾಲಲಿ ಕುಸಿದಿದೆ ಜನಪದ ಬದುಕನುಣಿಸು ಬಾರೆ|| ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ ನಲುಗಿದೆಯೇ ಜೀವ | ನೆಲೆಗಾಣದೆ ಗೋಳಿಟ್ಟಿದೆ ಮನುಕುಲ ತಾರೆ ಕರುಣೆ ತೇವ || ನಿನ್ನಯ ಹೆಸರೇ ಇರುಳೆಂದರಿತೆ ಶಕ್ತಿಯೂ ಹೌದು ನೀನು | ಕತ್ತಲ ಮಣ್ಣಲಿ ಬೆಳಕನು ಬೆಳೆವ ವರವನು ನೀ ತಾರೆ || ಬಾಳಲಿ ಶ್ರದ್ಧೆಯ ನೀ ಮರುಕಳಿಸು ಬೆಳೆಯಲಿ ನಿನ್ನೊಲುಮೆ | ದುರಿತವ ದೂರಾಗಿಸಿ […]
ಯುಗಾದಿ ಕಾವ್ಯ
ಮಾಸಿದ ಉಗಾದಿ… ಕೃಷ್ಣಮೂರ್ತಿ ಕುಲಕರ್ಣಿ ಸಂಭ್ರಮಿಸುವ ಉಗಾದಿ ಸಂಭ್ರಮ ಮಾಸಿಹೋತ ಗೆಳತಿ../ ಬೆಲ್ಲ ಕರಗಿಹೋಗಿ ಬರೀ ಬೇವೆ ಬಟ್ಟಲು ತುಂಬೈತಿ…// ದೇವರ ಮನಿ ನಂದಾದೀಪ ಮಿಣ ಮಿಣ ಅಂತೈತಿ ಬೇವಿನ ಸ್ನಾನ ಸವಿ ಸವಿ ಹೂರಣ ಅದ್ಯಾಕೊ ದೂರಸರಿದೈತಿ ವರ್ಷದ ಮೊದಲ ಹಿಂಗಾದ್ರೈಂಗ ಹಳವಂಡ ಕಾಡತೈ ಬದುಕಿನ ಚಿಗುರೆ ಉಗಾದಿ ಬಾಡಿದ್ರ ಬದುಕುಇನ್ನೈಲಿ.. ಮಣ್ಣಿನಮಕ್ಕಳ ಕನಸೆ ಉಗಾದಿ ಕತ್ತಲು ಕವಿದೈತಿ.. ಉತ್ತುವ ಬಿತ್ತುವ ಆಸೆಗಳೆಲ್ಲ ಕಮರೇ ಹೋಗೈತಿ../ ಬೇವು ಹೆಚ್ಚಿದ್ದರೂ ಇರಲಿ ಬೆಲ್ಲವೂ ಇರಲಿಸ್ವಲ್ಪ ದೇವರ ದರುಶನ […]
ಯುಗಾದಿ ಕಾವ್ಯ
ಯುಗಾದಿ ಐ.ಜಯಮ್ಮ *ನಿಸರ್ಗವು ಚೈತನ್ಯದಿ ಸಂಭ್ರಮಿಸುವ ನವಕಾಲ ಪ್ರಕೃತಿ ಅಪ್ಸರೆಯಂತೆ ಮೆರೆಯುವ ಸವಿಕಾಲ ಬ್ರಹ್ಮದೇವನು ವಿಶ್ವಸೃಷ್ಠಿಸಿದ ಚೈತ್ರಮಾಸ ಭೂತಾಯಿ ಹಸಿರ ಸೀರೆಯನ್ನುಟ್ಟ ವಸಂತಕಾಲ ಮೇಘಗಳ ಘರ್ಜನೆಗೆ ಮಯುರಿ ನರ್ತಿಸಲು ಚಿಗುರೆಲೆಯ ಮಾಮರದಿ ಕೋಗಿಲೆಯು ಕೂಗಿರಲು ಬಾನಂಗಳದಿ ಹರ್ಷದಿ ಹಕ್ಕಿಗಳು ಹಾರಿರಲು ಪುಷ್ಪಗಳೆಲ್ಲ ಆರಳಿ ಸುಗಂದ ದ್ರವ್ಯಸುಸಿರಲು ಮಕರಂದ ಹೀರುವ ಜೇನಿನ ಝೇಂಕಾರ ಪೃಥ್ವಿಯ ಬೆಳಗುವ ಭಾಸ್ಕರನಿಗೆ ನಮಸ್ಕಾರ ಅಭ್ಯಂಜನ ಸ್ನಾನದ ಶೃಂಗಾರ ದೇವ ಮಂದಿರದಲ್ಲಿ ಶಿವನಾಮದ ಓಂಕಾರ ಮನೆಯ ಬಾಗಿಲಿಗೆ ತಳಿರುಗಳ ತೋರಣ ಅಂಗಳದಿ ವರ್ಣಗಳ ರಂಗೋಲಿಗಳ […]
ಯುಗಾದಿ ಕಾವ್ಯ
ಚೈತ್ರೋತ್ಸವ ಕೆ.ಎ.ಸುಜಾತಾ ಗುಪ್ತ ಸದ್ದು ಗದ್ದಲವಿಲ್ಲದೆ ಈ ಸೃಷ್ಟಿಯ ಅರಮನೆಗೆ ಅತಿಥಿಯಾಗಿ ಆಗಮಿಸಿರುವ ಉಲ್ಲಸಿತ ವಸಂತ ಋತುವು.. ಸಾಕ್ಷಿಯಾಯಿತು ನಿಶ್ಯಬ್ಧದಲಿ ಋತು ಮನ್ವಂತರಕೆ… ಚೇತೋಹಾರಿಯೋ.. ಚಿತ್ತ ಮನೋಹರಿಯೋ.. ವಿಸ್ಮಿತ ನೇತ್ರಗಳಲಿ ಸುಹಾಸಿನಿಯೋ..! ಹೃನ್ಮನಗಳಿಗೆ ಸುಲಲಿತೆಯೋ.. ಈ ನವ ವಸಂತವು. ಚೈತ್ರವು ವಸಂತದ ಕೈಹಿಡಿದು ಕಿಣಿ ಕಿಣಿ ನಾದದೆ ಹೆಜ್ಜೆಯನಾಕಿ ಚೈತ್ರೋತ್ಸವಸಂಭ್ರಮಿಸುತಿರೆ. ಪ್ರಕೃತಿ ಮುಗ್ಧ ಮನೋಹರಿ, ಭಾವೋಜ್ವಲೆ.. ಹೃದ್ಗೋಚರ ದೃಶ್ಯಕೆ ಹರ್ಷೋದ್ಭವವು.. ಈ ನರ ಜನುಮ ಪಾವನವೋ. ತಿಳಿ ಹಸಿರು, ಗಿಳಿ ಹಸಿರು, ಪಚ್ಚ ಪಸಿರು ಪರ್ಣಗಳು ತಲೆದೂಗಲು […]