ಯುಗಾದಿ ಕಾವ್ಯ

ಮಾಸಿದ ಉಗಾದಿ

ಕೃಷ್ಣಮೂರ್ತಿ ಕುಲಕರ್ಣಿ

ಸಂಭ್ರಮಿಸುವ ಉಗಾದಿ ಸಂಭ್ರಮ
ಮಾಸಿಹೋತ ಗೆಳತಿ../
ಬೆಲ್ಲ ಕರಗಿಹೋಗಿ ಬರೀ ಬೇವೆ
ಬಟ್ಟಲು ತುಂಬೈತಿ…//

ದೇವರ ಮನಿ ನಂದಾದೀಪ
ಮಿಣ ಮಿಣ ಅಂತೈತಿ
ಬೇವಿನ ಸ್ನಾನ ಸವಿ ಸವಿ ಹೂರಣ
ಅದ್ಯಾಕೊ ದೂರಸರಿದೈತಿ

ವರ್ಷದ ಮೊದಲ ಹಿಂಗಾದ್ರೈಂಗ
ಹಳವಂಡ ಕಾಡತೈ
ಬದುಕಿನ ಚಿಗುರೆ ಉಗಾದಿ
ಬಾಡಿದ್ರ ಬದುಕುಇನ್ನೈಲಿ..

ಮಣ್ಣಿನಮಕ್ಕಳ ಕನಸೆ ಉಗಾದಿ
ಕತ್ತಲು ಕವಿದೈತಿ..
ಉತ್ತುವ ಬಿತ್ತುವ ಆಸೆಗಳೆಲ್ಲ
ಕಮರೇ ಹೋಗೈತಿ../

ಬೇವು ಹೆಚ್ಚಿದ್ದರೂ ಇರಲಿ
ಬೆಲ್ಲವೂ ಇರಲಿಸ್ವಲ್ಪ
ದೇವರ ದರುಶನ ಬ್ಯಾಡಾಂದ್ರ
ಇನ್ನು ಬದುಕು ಹೆಂಗ್ಯಪ್ಪ

ಯುಗದ ಆದಿ ಉಗಾದಿ
ತರಲಿ ಹರುಷ ನೆಮ್ಮದಿ
ಬೇವಿರಲಿ ಬೆಲ್ಲವೂ ಇರಲಿ
ಸರಿ ಸಮಾನತೆ ಕಾಣಲಿ.

*******

Leave a Reply

Back To Top