ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ ಬಾ! ಕು.ಸ.ಮಧುಸೂದನ ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರುಮತ್ತುನಾನೇನು? ಯಾವ ದಾರಿಯೂ ನನ್ನದಾಗಲಿಲ್ಲಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರುಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರುಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವುಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯಎಂದು […]

ಪ್ರಸ್ತುತ

ಶಿವ ಒಂದುವಿಶ್ಲೇಷಣೆ ಗಣೇಶ ಭಟ್ ಶಿರಸಿ ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ. ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ […]

ಕಾವ್ಯಯಾನ

ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ […]

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

ಅನುವಾದ ಸಂಗಾತಿ

“ದುಃಖ” ಮೂಲ ಸುಮನಾ ರಾಯ್(ಇಂಗ್ಲೀಷ್) ಕನ್ನಡಕ್ಕೆ:ಕಮಲಾಕರ ಕಡವೆ “ದುಃಖ” ದುಃಖ ಒಂದು ಬಿಳಿ ಆಕಳ ಮೇಲೆ ಕೂತ ಬಿಳಿ ಕೊಕ್ಕರೆಒಂದು ಮಾತ್ರ ಇನ್ನೊಂದರ ತೂಕ ಸಹಿಸ ಬಲ್ಲದು ದುಃಖ ನದಿತೀರದ ಬಿಳಿ ಮರಳುಅದು ಒದ್ದೆಯಾಗಿದ್ದಾಗಲೂ ಬಿಳಿಯೇ. ದುಃಖ ಬೇಲಿ ಮೇಲಣ ಬಿಳಿ ದಾಸವಾಳಅದಕ್ಕೆ ಬಿಳಿ ಮೊಗ್ಗು, ಬಿಳಿ ಹೆಣ. ದುಃಖ ಮಂಜು-ಮುಸುಕಿದ ಮರ, ಬಿಳಿ ರೆಪ್ಪೆಗೂದಲುಅದರ ಹೆಣೆಗಳು ತಮ್ಮದೇ ತೂಕದಿಂದ ಜೋಲುತ್ತವೆ. ದುಃಖ ಕಾಡಾನೆಯ ದಂತ, ಚೂಪು, ವರ್ಷಾನುವರ್ಷಗಳ ಶೇಖರಣೆಅದರ ಸೌಂದರ್ಯ, ಶೋಭೆ ದೂರದಿಂದ ಮಾತ್ರ. ದುಃಖ […]

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು […]

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು […]

ಅನುವಾದ ಸಂಗಾತಿ

ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

Back To Top