ಮಳೆಹಾಡು-4

ಮಳೆಹಾಡು-4

ಆಶಾ ಜಗದೀಶ್ ಒಂದು ತಣ್ಣನೆಯ ರಾತ್ರಿಮಳೆಗೆಅದೆಷ್ಟೋ ವರ್ಷಗಳ ತಪಸ್ಸಿನಂತೆಕಾದು ಕುಳಿತಿದ್ದೆರಾತ್ರಿಗಳಾಗಲೀ ಮಳೆಯಾಗಲೀಒಟ್ಟಾಗಿ ಬಂದೇ ಇಲ್ಲ ಅಂತಲ್ಲಅವು ಒಟ್ಟಾಗಿ ಬಂದ ಒಂದು ದಿನವೂನಾನು ಪ್ರಜ್ಞೆಯಿಂದಿರಲಿಲ್ಲ ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿರತಿ ಶಿಖರ ಮುಟ್ಟುತ್ತಿರುವಾಗನಾನು ಮಾತ್ರ ಅದನ್ನು ಧಿಕ್ಕರಿಸಿಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದಕಲ್ಲ ಮೆಟ್ಟಿಲ ಮೇಲೆ ಕೂರುವಾಗಪರಮ ಚರಮ ಸುಖವನ್ನೂಮೀರಿದೊಂದು ಅನುಭೂತಿಮತ್ತು ಈ ಮಳೆಯ ಮೇಲೆಸಣ್ಣದೊಂದು ಹುಸಿ ಮುನಿಸು ತನ್ನ ರಾತ್ರಿ ಸಖನನ್ನು ಕೂಡುವಅಮೃತಘಳಿಗೆಯ ಬಗ್ಗೆಚಕಾರೆತ್ತದೆ ಸೂಚನೆ ಕೊಡದೆಸುರಿದು ಸೇರಿ ಸರಿದು ಹೋಗಿಯಾಗಿಮರು ಮುಂಜಾನೆ ಮನೆ ಮುಂದೆನೆನ್ನೆಯ […]

ಭಿನ್ನ ಬದುಕು

ಸರಿತಾ ಮಧು ನೀರಿನೊಂದಿಗೆ ನಂಬಿಕೆ ಇಟ್ಟುಮೀನು ಮರಿಗಳ ಅದರೊಳು ಬಿಟ್ಟುಅದಮ್ಯ ಆಸೆಯಿಂದ ದಿನಗಳೆದದ್ದುಅಪರಿಮಿತ ಮಳೆಗೆ ಕನಸೆಲ್ಲವೂಕೊಚ್ಚಿ ಹೋದದ್ದು ಅನೂಹ್ಯ! ಜಲ ಸೌಂದರ್ಯ ನೋಡಲುಮುಗಿಬಿದ್ದ ಜನಸಮೂಹ ಒಂದೆಡೆಅಳಿದುಳಿದ ಕನಸ ಶೋಧಿಸಲುತೆಪ್ಪ ಹತ್ತಿ ಹೊರಟ ಬೆಸ್ತರ ಹುಡುಗಿ ಇನ್ನೊಂದೆಡೆ ಹೂಗಳಂತೆ ಬದುಕು ಸುಂದರವಾದೀತೆಂದುತೆಪ್ಪವನೇರಿ ಹೊರಟಿದೆ ಬಾಲೆಯ ಕನಸುಅವಳ ಮುಗ್ಧ ನಗೆ ಹೂವ ಸೌಂದರ್ಯದಂತೆಬಣ್ಣ ಬಣ್ಣದ ಆಸೆಗಳು ಗರಿಗೆದರಿ ನಿಂತಂತೆ ಹೂವ ಹಿಡಿದು ಅದೇನು ಉಸುರಿದಳೋಅದೂ ತಲೆ ತೂಗಿ ಅವಳೆಡೆಗೆ ನಗುವ ಚೆಲ್ಲಿದೆಆನಂದಮಯ ಸಮಯ ಈರ್ವರ ನಡುವೆಬಾಲೆ ಮತ್ತು ಹೂವು ಜಗದ […]

ವಲಸೆಯ ಹಾದಿಯಲ್ಲಿ ಪುಸ್ತಕ- ಮಲಾಣ್ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿಬೆಲೆ-೩೧೦/-ಪ್ರಕಾಶಕರು- ದೇಸಿ ಪುಸ್ತಕ        ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ […]

ಬೊಗಸೆಯಲ್ಲೊಂದು ಹೂನಗೆ ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ. ಹಾಗೆ ಸ್ಪರ್ಶಿಸಿದ ಒಂದಿಷ್ಟು ಹನಿಗಳು ಜಾರಿಬಿದ್ದು ನೆಲವನ್ನು ಹಸಿಯಾಗಿಸಿದರೆ, ಉಳಿದವು ಬೊಗಸೆಯಲ್ಲೊಂದು ಹೊಸ ಪ್ರಪಂಚವನ್ನು ಬಿಚ್ಚಿಡುತ್ತವೆ. ಹಾಗೆ ನಮ್ಮೆದುರು ತೆರೆದುಕೊಳ್ಳುವ ಪ್ರಪಂಚದಲ್ಲಿ ಕೈಗೂಸಿನ ಕನಸಿನಂಥ ನಗುವೊಂದು ಅಮ್ಮನ ಮಡಿಲಿನಲ್ಲಿ ಕದಲಿದರೆ, ಹೂನಗೆಯ ಹೊತ್ತ ಹುಡುಗಿಯೊಬ್ಬಳು ಸೈಕಲ್ಲನ್ನೇರಿ ಕನಸಿನಂತೆ ಮರೆಯಾಗುತ್ತಾಳೆ; ಹನಿಮೂನ್ ಪ್ಯಾಕೇಜಿನ ರೆಸಾರ್ಟ್ ಒಂದರ ಡೈನಿಂಗ್ ಹಾಲ್ ನಲ್ಲಿ ನಾಚಿಕೆಯ ನಗುವೊಂದು ಮೋಂಬತ್ತಿಯಾಗಿ ಕರಗಿದರೆ, ಆಪರೇಟಿಂಗ್ ರೂಮೊಂದರಿಂದ ಹೊರಬಂದ ವೈದ್ಯರ ನಗುವೊಂದು ಕಣ್ಣೀರನ್ನೆಲ್ಲ […]

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು […]

ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ ಹಿಂಡು ಮೋಡದ ಗಾಳಿ ಸವಾರಿ -ಆಷಾಢ     ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು […]

ಸುರಿಯುತಿಹ ಮೋಡಗಳು

ಡಾ. ಪ್ರತಿಭಾ ಸುರಿಯುತಿರೆಜಿಟಿ,ಜಿಟಿ ಮಳೆಹನಿಗಳುನೋಡಿರಿ ಹರಡಿದೆ ಘಮಸುತ್ತಮೂತ್ತಲೂ. ಅವಳು ಅದೇ ಭೂತಾಯಿನಿಂತಿಹಳು,ಹಸಿರು ಸೀರೆರವಿಕೆಯ ತೊಟ್ಟು. ಸುರಿಸುತಿಹೆ ಮೋಡಗಳುಮಳೆ ಹನಿಗಳು ಶುರುವಾಗಿದೆನೋಡಿ ಕಣ್ಣುಮುಚ್ಚಾಲೆ ಆಟ. ಸ್ವಲ್ಪವೇ, ಸ್ವಲ್ಪವೇಹಿಡಿದು ಬಿಟ್ಟು, ಹಿಡಿದು ಬಿಟ್ಟು ಎನ್ನವಂತೆ ಸುರಿಸುತಿಹೆ ಮೋಡಗಳುಮಳೆಹನಿಗಳ.ದಾರಿಯುಂಟಕೂ ತೊಡಕುಗಳು ಸುರಿಯುವಮಳೆ ಹನಿಗಳಿಗೆಗಾಳಿಯದು ನೋಡಿಬಂದಿತು ರಭಸವಾಗಿಕೊಂಡೊಯ್ಯಲು ಮೋಡಗಳ ಬೇರೆ ಜಾಗಕ್ಕೆ. *************************

ಮಳೆಹಾಡು-3

ಸಂಜೆಯ ಮುಹೂರ್ತ ಆಶಾ ಜಗದೀಶ್ ಅದೆಷ್ಟೋ ವರ್ಷಗಳ ಪೂರ್ವ ನಿಯೋಜಿತಘಟನೆಯಿದು ಎನಿಸುವಂತೆಸುರಿಯುತ್ತಿರುವ ಈ ಮಳೆಗೆಸಂಜೆಯ ಮುಹೂರ್ತ ರಾಗ, ರಂಗು ಮತ್ತು ದೀರ್ಘ ಕ್ಷಣಗಳಕಟು ಮೌನಕಣ್ಣೀರು ಸ್ಫುರಿಸುವಂತೆ ತಾಕುವತಣ್ಣ ಸಣ್ಣ ಸಣ್ಣ ಸಿಡಿ ಹನಿಗಳುಯಾವುದಕ್ಕೂ ಪ್ರತಿರೋಧ ಒಡ್ಡದರಸ್ತೆಗೆ ಇದೊಂದು ಜನ್ಮದ ಸುವಾಸನೆಯನ್ನುಬಿಗಿ ಹಿಡಿದು ಉಚ್ವಾಸಕ್ಕೆ ಎಳೆಸುವ ಆಸೆಮತ್ತಷ್ಟು ಕಠೋರವಾಗಿ ಎದೆ ಸೆಟೆಸಿಮಲಗುತ್ತದೆ… ಒಂಚೂರೂ ನಡುಗದ ಮಲ್ಲಿಗೆ ಬಳ್ಳಿಮಳೆಯ ಹೊಡೆತಕ್ಕೆ ನಲುಗಿದೆಮತ್ತೆ ಮತ್ತೆ ಸರಿ ಮಾಡಿ ಹಿಡಿದೆತ್ತಿತಂತಿಯಿಂದ ಬಂಧಿಸಿ ತರಸಿಗೇರುವಂತೆಮಾಡುವ ಒಡತಿ ನಡುಗುತ್ತಾ ಒಳಗಿದ್ದಾಳೆತಾನು ಕಟ್ಟಿದ ತಂತಿ ತುಂಡಾಗಿಬೀಳುತ್ತಿರುವ ಬಳ್ಳಿಯ […]

ಆರು ಮೂರು

ಡಾ.ಅಜಿತ್ ಹರೀಶಿ ಮೂಲ ಆಲಯದಿಂದ ಕೈಲಾಸ ಪಟದಾಟಲೆತ್ತ ಬೀರಿ ಅದರತ್ತ ನೋಟಬುಡದಲ್ಲಿ ಬಿಸಿಯಿಲ್ಲಮೇಲೇರಿದಂತೆ ಕಾವೇರಿ ಪರದಾಟ ಹಿಂದೆ ಮುಂದೆ, ನೂಕುನುಗ್ಗಲುಆರು ಬಿದ್ದರೆ ಇನ್ನೊಂದು ಬಾರಿಸಿಗುವುದು ಆಡಲುಮೊದಮೊದಲು ಸಣ್ಣ ಏಣಿಹಾವು, ಆತಂಕವಿಲ್ಲ ಕಳೆ ಕಟ್ಟಿದೆ ಕೊನೆಯಲ್ಲಿನುಣುಪಾದ ದಂತದ ದಾಳದಲ್ಲಿಮೂರು ಬಿದ್ದರೆ ಹಾವು ಕಚ್ಚಿನಿಶ್ಚಲವಾಗುವುದು ನಿಶ್ಚಿತ ನೆಲಕಚ್ಚಿಕೈಲಾಸ ಕಾಣಬಹುದು ಬಿದ್ದರೆ ಆರುಶಿವ ಪಾರ್ವತಿ ಕಾಣುತಿಹರು ಒಂದು ಐದು ಬೀಳುತಿಹುದು ನೆತ್ತದಲಿಅತ್ತ ಇತ್ತ ಎತ್ತ ಎಂತ ಮಾಡಿದರೂ ಕೈಲಾಸ ಪ್ರಾಪ್ತಿಯಿಲ್ಲಆಟ ಬಿಟ್ಟು ಏಳುವಂತಿಲ್ಲಆರಕ್ಕೇರದ ಮೂರಕ್ಕಿಳಿಯಿದ ಬದುಕಿನಂತೆ ಲತ್ತದಲಿ ಮೂಡಿತು ಮೂರರ ಮುಖವಂತೂಮತ್ತೆ […]

ಆಕೆ ಉಲ್ಲಾಸದಿ‌ ನಕ್ಕಳು

ನಾಗರಾಜ್ ಹರಪನಹಳ್ಳಿ -೧-ವಾರಬಿಟ್ಟು ಸುರಿದ ಮಳೆಗೆಉಲ್ಲಾಸದಿಂದ ನಕ್ಕಳು ಭೂತಾಯಿ ಕಂಪೌಂಡ್ ಕಟ್ಟೆ ಮೇಲೆ ಕುಳಿತಗುಬ್ಬಚ್ಚಿ ಹಿಂಡಿನ ಹರಟೆಜಗುಲಿ ಒಳಗಿನ ಹೆಂಗಸರ ನಾಚಿಸಿತು -೨-ಮಳೆ ಸುರಿದಾಯ್ತುಹನಿಯುಂಡ ಭೂಮಿನಿದ್ದೆ ಹೋಗಿದೆಮೈಮುರಿಯುತ್ತಿದೆ ನೆಲಪುಟಿದೇಳುತ್ತಿದೆ ಚಿಗುರುಪ್ರತಿ ಚಿಗುರಿನಲಿತೇಲಿ ಬಂದಿದೆನಿನ್ನದೇ ಬಿಂಬ -೩-ಹಗಲು ರಾತ್ರಿಯನ್ನದೇಮಳೆ ಸುರಿಯಿತುನಾನು ನೀನು ಮಾತಾಡಿಕೊಂಡಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿಮಾತಾಡುತ್ತಲೇ ನಾವುನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆನೂರು ಸಂಕಟ ನುಂಗಿಯೂ ನಕ್ಕಂತೆ ನಾನು -೪-ಮಾತಿಗೆ ಮಾತು ಬೆಸೆಯಿತು ,ಹೆಜ್ಜೆ […]

Back To Top