ಕೃಷಿಬೆಲೆ ಆಯೋಗ
ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು….. ಗಣೇಶಭಟ್ ಶಿರಸಿ. ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು…… ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ನೇಮಿಸಿರುವ ಕರ್ನಾಟಕ ಕೃಷಿ ಬೆಲೆ ಆಯೋಗವು ಸಕ್ರಿಯವಾಗಿ ಚಿಂತಿಸುತ್ತಿದೆ. ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಈ ಆಯೋಗವು ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಆಯೋಗ ಮಾಡಿರುವ ಪ್ರತಿಯೊಂದು ಶಿಫಾರಸ್ಸಿನಲ್ಲೂ ರೈತರ, ರೈತಾಬಿಯ ಕುರಿತಾದ ಪ್ರಾಮಾಣಿಕ ಕಾಳಜಿ ಎದ್ದುಕಾಣುತ್ತದೆ. ರಾಜ್ಯಸರ್ಕಾರ ಮನಸ್ಸು ಮಾಡಿದರೆ […]
ಸ್ವಾತ್ಮಗತ
ಶಾಂತವೇರಿ ಗೋಪಾಲಗೌಡರು.! ಮಾನವ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರು.! ಕೆ.ಶಿವು ಲಕ್ಕಣ್ಣವರ ನಾನು ಒಂದಿಷ್ಟು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜವಾದಿಗಳ ಬಗೆಗೆ ಬರೆಯುತ್ತಿದಂತೆ ನಮ್ಮ ಎಲ್ಲ ಮಾನವ ಸಮಾನ ಮನಸ್ಕ ಮನುಷ್ಯರ ಬಗೆಗೂ ಒಂದಿಷ್ಟು ಲೇಖನ ಬರೆಯಿರಿ ಎಂದು ಗೆಳೆಯರು ಕಿವಿಮಾತು ಹೇಳಿದರು. ಆಗ ಆ ನಿಟ್ಟಿನಲ್ಲಿ ಯೋಚಿಸಿದಾಗ ಮೊದಲು ಶಾಂತವೇರಿ ಗೋಪಾಲಗೌಡರ ಬಗೆಗೇ ಬರೆಯುವುದೇ ಉತ್ತಮ ಎಂದು ನಮ್ಮ ಶಾಂತವೇರಿ ಗೋಪಾಲಗೌಡರ ಮಾಹಿತಿ ಹೆಕ್ಕಿದೆ. ಇಂತಹ ಸಮಾಜವಾದಿಗಳ ಬಗೆಗೆ ಸಾಕಷ್ಟು […]
ಬನ್ನಿ ಭಾಗವಹಿಸಿ
ಬಂಡಾಯ ಸಾಹಿತ್ಯ ಸಂಘಟನೆ-ತುಮಕೂರು ಯುವ ಬರಹಗಾರರ ಕಾರ್ಯಾಗಾರ ದಿನಾಂಕ:4/01/2020 ಮತ್ತು 5/01/2020
ಗಝಲ್ ಸಂಗಾತಿ
ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ […]
ಅನುವಾದ ಸಂಗಾತಿ
ನನ್ನ ಕುದುರೆಗೆ ಅನಿಸಿದೆ ಇದೆಂಥ ಸೋಜುಗ
ಮನೆಮಾರು ಇರದ ಕಡೆ ನಿಲ್ಲುವುದು ಹೀಗೆ
ಕವಿತೆ ಕಾರ್ನರ್
ಮುಂದಾಗಲಿಲ್ಲ ಇಷ್ಟು ವರುಷ ಎದೆಯೊಳಗಡಗಿಸಿಟ್ಟ ಮಾತುಗಳ ಮೂಟೆಗಳ ಬಾರವನ್ನಿಳಿಸಿ ಹಗುರಾಗಲೆಂದೇ ಆ ಬೇಟಿಯನ್ನು ನಿಕ್ಕಿ ಮಾಡಿದ್ದರು ಅಪರಿಚಿತ ಊರಿನ ಜನಸಂದಣಿಯಿರದ ಜಾಗ ಹುಡುಕಿ ಕೂತರು. ಮಾತು ಶುರು ಮಾಡುವುದಾದರೂ ಯಾರೆಂಬುದು ಅರ್ಥವಾಗದೆ ಕುಳಿತೇ ಇದ್ದರೂ ದ್ಯಾನಸ್ಥ ಪ್ರತಿಮೆಗಳಂತೆ ಬೆಳಿಗ್ಗೆ ಬಂದು ಕೂತವರು ಮೊದಲ ಮಾತಾಡುವ ಹೊತ್ತಿಗೆಮದ್ಯಾಹ್ನವಾಗಿತ್ತು ‘ಹೇಳು’ ಕೇಳಿದವನಿಗೇನೆ ಅನುಮಾನವಿತ್ತು ತನ್ನ ದ್ವನಿಯವಳ ಕಿವಿ ತಲುಪಿದ್ದರ ಬಗ್ಗೆ ಅಷ್ಟುಮೆಲುವಾಗಿ ಮಾತಾಡಿದ್ದ ಏನಿದೆ ಹೇಳಲು ಎಲ್ಲ ಮಾಮೂಲು ಇವತ್ತು ಒಂದು ದಿನ ಬಿಡುವು ಮಾಡಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯ್ತು ಎಲ್ಲಿಗೆ […]
ಕಾವ್ಯಯಾನ
ಮಂತ್ಲಿಪಿರಿಯಡ್ಸ್ ಮತ್ತು…. ವಿಜಯಶ್ರೀ ಹಾಲಾಡಿ ಮಂತ್ಲಿಪಿರಿಯಡ್ಸ್ ಮತ್ತು…. ರಕ್ತ ಕಂಡರೆ ಹೆದರುವಕೋಮಲೆಗೆ ಅನಿವಾರ್ಯ ಮಂತ್ಲಿ ಪಿರಿಯಡ್ಸ್ ! ಬ್ರೆಡ್ – ಜಾಮ್ ಹೋಲಿಕೆಗೆ ಲಘುವಾಗಿ ನಕ್ಕವಳೇ ಇನ್ನೀಗ ಅಳಬೇಕು ಹೆರಿಗೆ ಬೇನೆಯಾದರೂ ಮುಗಿಯುತ್ತದೆ ಒಮ್ಮೆಗೇ ಇಪ್ಪತ್ತೆಂಟರ ಸೈಕಲ್ ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ ಹಾಗಾದರೆ ವರ್ಷಕ್ಕೆಷ್ಟು ! ಟೆನ್ಷನ್ ಜಾಸ್ತಿಯಾದರೆ ಬ್ಲೀಡಿಂಗೂ ಜಾಸ್ತಿ ಪ್ಯಾಡುಗಳೂ ಇರಿಸುಮುರುಸುಗಳೂ ನೋವು ಅಪಮಾನಗಳೂ… ಐವತ್ತೋ ಐವತ್ಮೂರಕ್ಕೋ ನಿಲ್ಲುತ್ತದಂತೆ … ಅಂತೆಕಂತೆಗಳಿಗೂ ಆಚೆ ಬದುಕಿದೆ ಮೆನೋಪಾಸ್ ತೀಕ್ಷ್ಣತೆಗೆ ಡಿಪ್ರೆಶನ್ ಸುಸೈಡ್ ಉದಾಹರಣೆಗಳೂ ಉಂಟು! ಈ ನಡುವೆ […]
ನಿಮ್ಮೊಂದಿಗೆ
ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು […]
ಸ್ವಾತ್ಮಗತ
ಹೈದರಾಬಾದ್ ಕರ್ನಾಟಕ 371ನೆ ಕಲಂ ತಿದ್ದುಪಡಿಯ ಬಗ್ಗೆ ಕೆ.ವು ಲಕ್ಕಣ್ಣವರ ಸಮಗ್ರ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು..! ದಕ್ಷಿಣ ಕರ್ನಾಟಕಕ್ಕೆ ಉತ್ತರ ಕರ್ನಾಟಕವೆಂದರೆ ಮುಂಬೈ ಕರ್ನಾಟಕ ಹಿಂದುಳಿದ ಪ್ರದೇಶ. ಇನ್ನೂ ಮುಂಬೈ ಕರ್ನಾಟಕಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಹೈದರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಜಾರಿ ಮಾಡಿರುವುದು. ಆದರೆ ಈ ೩೭೧ನೇ ಕಲಂ ಜಾರಿಯಾದರೂ ಈ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಗಗನಕುಸುಮವಾಗಿದೆ. ಈ ಕಾರಣಕ್ಕಾಗಿಯೇ […]
ಪುಸ್ತಕ ವಿಮರ್ಶೆ
ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..! ಲೇಖಕಿ: ಡಾ.ಕಮಲಾ ಹೆಮ್ಮಿಗೆ ಕೆ.ಶಿವು ಲಕ್ಕಣ್ಣವರ ‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..! ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ… ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ […]