ಮಂತ್ಲಿಪಿರಿಯಡ್ಸ್ ಮತ್ತು….
ವಿಜಯಶ್ರೀ ಹಾಲಾಡಿ
ಮಂತ್ಲಿಪಿರಿಯಡ್ಸ್ ಮತ್ತು….
ರಕ್ತ ಕಂಡರೆ ಹೆದರುವ
ಕೋಮಲೆಗೆ ಅನಿವಾರ್ಯ
ಮಂತ್ಲಿ ಪಿರಿಯಡ್ಸ್ !
ಬ್ರೆಡ್ – ಜಾಮ್ ಹೋಲಿಕೆಗೆ
ಲಘುವಾಗಿ ನಕ್ಕವಳೇ
ಇನ್ನೀಗ ಅಳಬೇಕು
ಹೆರಿಗೆ ಬೇನೆಯಾದರೂ
ಮುಗಿಯುತ್ತದೆ ಒಮ್ಮೆಗೇ
ಇಪ್ಪತ್ತೆಂಟರ ಸೈಕಲ್
ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ
ಹಾಗಾದರೆ ವರ್ಷಕ್ಕೆಷ್ಟು !
ಟೆನ್ಷನ್ ಜಾಸ್ತಿಯಾದರೆ
ಬ್ಲೀಡಿಂಗೂ ಜಾಸ್ತಿ
ಪ್ಯಾಡುಗಳೂ
ಇರಿಸುಮುರುಸುಗಳೂ
ನೋವು ಅಪಮಾನಗಳೂ…
ಐವತ್ತೋ ಐವತ್ಮೂರಕ್ಕೋ
ನಿಲ್ಲುತ್ತದಂತೆ
…
ಅಂತೆಕಂತೆಗಳಿಗೂ
ಆಚೆ ಬದುಕಿದೆ
ಮೆನೋಪಾಸ್ ತೀಕ್ಷ್ಣತೆಗೆ
ಡಿಪ್ರೆಶನ್ ಸುಸೈಡ್
ಉದಾಹರಣೆಗಳೂ ಉಂಟು!
ಈ ನಡುವೆ
ಯುಟಿರಸ್ ಒಂದಿಷ್ಟು
ಗಲಾಟೆ ಮಾಡಿದರೆ
ವಿಶ್ರಾಂತಿ ಬಯಸಿದರೆ
ಹಿಸ್ಟರೆಕ್ಟಮಿ- ಸರ್ಜರಿ
…..
ಹಾರ್ಮೋನ್ ಏರುಪೇರು
ಉಫ್
ಮುಗಿವ ಕತೆಯಲ್ಲ !
ಸರ್ವಶಕ್ತನಾದ ದೇವನೇ
ತಮಾಷೆಗೂ ಹೆಣ್ಣಾಗದಿರು !
=====================
ಅಬ್ಬಾ…..ಅದ್ಭುತ…. ವಿಜಯ ಅವರೇ ಸಲ್ಯೂಟ್
ಫೈಜ್ನಟ್ರಾಜ್