ನನ್ನಿಷ್ಟದ ಕವಿತೆ
ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ. – ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ […]
ಕಾವ್ಯಯಾನ
ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************
ಕಾರ್ಟೂನ್ ಕಾರ್ನರ್
ನಟರಾಜ್ ಅರಳಸುರಳಿ
ಕೊರೊನಾ ಮತ್ತು ಕಲಾವಿದೆ ಬೇಗಂ…
ಕಥೆ ಕೊರೊನಾ ಮತ್ತು ಕಲಾವಿದೆ ಬೇಗಂ… ಮಲ್ಲಿಕಾರ್ಜುನ ಕಡಕೋಳ ಕೈ ಕಾಲುಗಳಲ್ಲಿ ಥರ್ಕೀ ಹುಟ್ಟಿದಂಗಾಗಿ ನಡುಗ ತೊಡಗಿದವು. ಮೈಯೆಲ್ಲ ಜಲ ಜಲ ಬೆವೆತು ಹೋಯ್ತು. ಎದೆಗುಂಡಿಗೆ ಹಿಂಡಿದಂಗಾಯ್ತು. ಎದ್ದು ಹೋಗಿ ನೀರಿನ ತಂಬಿಗೆ ತುಂಬಿಕೊಳ್ಳಬೇಕೆಂದು ರಗಡ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಯಾರಿಗಾದರೂ ಫೋನ್ ಮಾಡಬೇಕೆಂದ್ರೆ ಅವಳ ಡಬ್ಬಾ ಫೋನಲ್ಲಿ ದುಡ್ಡಿಲ್ಲ. ಎರಡು ತಿಂಗಳಿಂದ ಅದು ಬರೀ ಇನ್ಕಮಿಂಗ್ ಸೆಟ್ ಆಗಿತ್ತು. ” ದೈವಹೀನರಿಗೆ ದೇವರೇಗತಿ ” ಎಂಬ ಸಾಳುಂಕೆ ಕವಿಗಳ ನಾಟಕವೊಂದರ ಡೈಲಾಗ್ ನೆನಪಾಗಿ, ದೇವರನ್ನೇ […]
ಕಾವ್ಯಯಾನ
ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************
ಇತರೆ
ಓಲೆ ಮರೆತರೆ ನಿನ್ನ ಮಡಿವೆನು ಚಿನ್ನ! ಜಯಶ್ರೀ.ಜೆ. ಅಬ್ಬಿಗೇರಿ ಬೆಳದಿಂಗಳ ರಾತ್ರಿಯ ಪೂರ್ಣ ಚಂದಿರನ ಮೊಗ ನೋಡಿದಾಗೊಮ್ಮೆ ನಿನ್ನ ಮುಖವನ್ನೇ ನೋಡಿದಂತೆ ಅನಿಸುತ್ತದೆ. ನೀನೇನು ಚಂದಿರನ ಮಗಳಾ ಎನ್ನುವ ಸಂಶಯ ಮನದಲ್ಲಿ ಕಾಡುತ್ತದೆ. ನಿನ್ನ ಹತ್ತಿರ ಅದೇನೋ ಮಾಯಾ ಶಕ್ತಿ ಇದೆ ನಿನ್ನನ್ನೇ ನೋಡೋಕೆ ಮನಸ್ಸು ಕಾತರಿಸುತ್ತದೆ. ಈ ಹಿಂದೆ ನೂರು ನೂರು ಸುಂದರಿಯರನ್ನು ಕಂಡ ಕಣ್ಣು ಹೀಗೆ ಹಟ ಹಿಡಿದಿರಲಿಲ್ಲ. ಸ್ವಭಾವದಲ್ಲಿ ತುಂಬಾ ಮೌನಿ ನಾನು. ಮರುಭೂಮಿಯಲ್ಲಿ ಗುಲಾಬಿ ಹೂ ಅರಳಿದಂತೆ ಅರಳಿದ ನಿನ್ನ […]
ವಾರದ ಕವಿತೆ
ಹುಡುಗ ನೀ ಸಾಯಬೇಕಿತ್ತು ಲಕ್ಷ್ಮೀ ಪಾಟೀಲ್ (ಶ್ರೀ ಕೆ ವಿ ಅಯ್ಯರ್ ಬರೆದಿರುವ “ರೂಪದರ್ಶಿ “ಕಾದಂಬರಿಯಲ್ಲಿ ಬರುವ ” ಆರ್ನೆಸ್ಟ್” ನನ್ನು ಕುರಿತ ಕವಿತೆಯಿದು) ಹೊಟ್ಟೆಯಲ್ಲೇ ಅಪ್ಪ ಅಮ್ಮರಿಗಾಗಿಗೋರಿಗರಸ ಎಬ್ಬುವಾಗ ಹಾಳಮಣ್ಣ ಹಾಸಿನಲ್ಲಿಭ್ರಮೆಯ ಬದುಕು ಬಿಕ್ಕುವ ಮುನ್ನಹುಡುಗ ನೀ ಸಾಯಬೇಕಿತ್ತು ಅಜ್ಜಿಯ ಪೊರೆವ ಬಾಂಧವ್ಯದಲ್ಲಿಬದುಕನ್ನು ಒದ್ದೆಯಾಗಿಸಿಕೊಳ್ಳುವಾಗಅವಳ ನೋವಿಗೆ ಬಾಲ ಕನಸುಗಳತೇಪೆ ಜೋಡಿಸುವಾಗ ದೂರ ದುರಂತ ಕಾಣದ ಮುನ್ನಹುಡುಗ ನೀ ಸಾಯಬೇಕಿತ್ತು ಕೈಯಾಡಿಸಿದ ಕೈಗೆ ಬಾಲ ಭಾವದ ಹಾಲು ಗೆಣ್ಣೆಅಪರೂಪದ ಬಾಲ ಯೇಸುವಿನ ವಿರಾಜತೆಮೈಕಲ್ ಏಂಜಲೋನ ದಿವ್ಯ ಅಪ್ಪುಗೆಯ […]
ನನ್ನ ಇಷ್ಟದ ಕವಿತೆ
ನನ್ನ ಇಷ್ಟದ ಕವಿತೆ ದ.ರಾ.ಬೇಂದ್ರೆ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ೧) ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨) ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ […]
ಹಿರಿಯ ಕವಿಗಳಹಳೆಯ ಕವಿತೆಗಳು
ಇತರೆ ಹಿರಿಯ ಕವಿಗಳಹಳೆಯ ಕವಿತೆಗಳು ಡಾ.ಎಂ.ಗೋಪಾಲಕೃಷ್ಣ ಅಡಿಗ ಪ್ರಾರ್ಥನೆ ಪ್ರಭೂ,ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮುಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ;ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿಜುಮ್ಮನರಸುವ ಷಂಡ ಜಿಗಣೆಯಲ್ಲ;ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿಒರೆಗೆ ತುರುಕಿರುವ ಹೆಂಬೇಡಿಯಲ್ಲ. ಈ ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,ಕೋಲುನಡಿಗೆಕವಾತು ಕಲಿತ ಕೊಬ್ಬಿದ ಹುಂಜ:ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ.ಕುಮರುತೇಗಿನ ಕಪಿಲೆಹೊಡೆದು ಹಗಲೂ ಇರುಳುತೇಗಿಗೊಂದು ಅಮೋಘ ಸ್ಫೂರ್ತಿಗೀತವ […]
ಪುಸ್ತಕ ಸಂಗಾತಿ
ಪುಸ್ತಕ ಪರಿಚಯ ಅಲೆಮಾರಿಯ ದಿನದ ಮಾತುಗಳು ಪುಸ್ತಕ : ಅಲೆಮಾರಿಯ ದಿನದ ಮಾತುಗಳು ( ಪದ್ಯ – ಗದ್ಯಗಂಧಿ ಚಿಂತನ ಬರಹಗಳು ) ಲೇಖಕ: ಗಂಗಾಧರ ಅವಟೇರ ಪ್ರಕಾಶನ: ಪ್ರತೀ(ಕ)ಕ್ಷಾ ಪ್ರಕಾಶನ, ಕುಕನೂರ ಜಿ|| ಕೊಪ್ಪಳ ಪುಟಗಳು: 96 ಬೆಲೆ: 100/- ಪ್ರಕಟಿತ ವರ್ಷ: 2019 ಲೇಖಕರ ದೂರವಾಣಿ: 9449416270 ಮಾನವ ಸಮಾಜಜೀವಿ. ಅವನು ಸಮಾಜವನ್ನು ಬಿಟ್ಟು ಬಾಳಲಾರ-ಬದುಕಲಾರ. ಅರಿಸ್ಟಾಟಲ್ ಹೇಳುವಂತೆ ‘ಸಮಾಜವನ್ನು ಬಿಟ್ಟು ಬದುಕುವ ಮಾನವ ದೇವರು ಇಲ್ಲವೇ ಪಶು ಆಗಿರುತ್ತಾನೆ’. ಮಾನವ ಭಾಗಶಃ […]