ಅನುವಾದ ಸಂಗಾತಿ

ಅನುವಾದ ಸಂಗಾತಿ

.ಕಠೋರ ಕಣ್ಣುಗಳು ಮೂಲ:ವಿಲಿಯಂ ಬ್ಲೇಕ್ ವಿ.ಗಣೇಶ್ ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ ಬೆದರುತ್ತ ನಾ ತೆವಳಿದೆ ಅಡಗು ತಾಣಕೆ ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ. ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು? ನಿನ್ನ  ವಿವಿಧಾಂಗಗಳ ಸೃಷ್ಟಿಸಿದವರಾರು? ತಾರೆಗಳ ನಾಚಿಸುವ  ತಾರಾಮಂಡಳದ ಕಳೆಯ ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ? ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು ಆ ಧೈರ್ಯವೆಂತಹದು? ಅ […]

ಕಾವ್ಯಯಾನ

ನೆಲ ಮುಗಿಲು ಫಾಲ್ಗುಣ ಗೌಡ ಅಚವೆ. ಗುಡ್ಡಗಳ ಮಲೆಯನ್ನು ತಬ್ಬಿ ಮಲಗಿದೆ ಬಾನುಮುಸುಕಿ ಮುದ್ದಾಡುತಿದೆ ಮಂಜು ತಾನು ಚಂದಿರನ ರಮಿಸುವ ಅಬ್ಬರದ ಕಡಲಂತೆಹಿಮ ಹೊದಿಕೆ ಹೊದೆಯುತಿದೆ ಇಳೆಯು ತಾನು ಸಂಗೀತದಾಲಾಪ ಅನುರಣಿಸುತಿದೆ ಇಲ್ಲಿಕಲೆಯ ಸಾಕ್ಷಾತ್ಕಾರ ಸಾಕಾರವಿಲ್ಲಿ ದಿಗಂತದಾಚೆಯೂ ವ್ಯಾಪಿಸಿದೆ ಅಗಸವುಅಲೆವ ನದಗಳನೇರಿ ತಾನು ಸೂರ್ಯನನು ಮರೆಸುತ್ತ ಏಕಾಂತವ ಸರಿಸಿಲೋಕಾಂತ ಸಾರಿತಿದೆ ಮರವು ತಾನು ಸಾಲು ಬೆಟ್ಟಗಳೆಲ್ಲ ನಿನ್ನಂತೆ ಕಾಣುತಿವೆಪ್ರಕೃತಿಯಂತಿಹ ನಿನ್ನ ತಬ್ಬಿ ಹಿಡಿದುಹೂಮಳೆಯ ದನಿಯಂತ ಹೂನಗೆಯು ನಿನ್ನದುಮಳೆಯುಂಟು ನಿನ್ನ ಹೆಸರಿನೊಳಗು! *******

ಕಾವ್ಯಯಾನ

ಬರೆಯುವ ನಿತ್ರಾಣದ ತಾಣ ನೂರುಲ್ಲಾ ತ್ಯಾಮಗೊಂಡ್ಲು ಬರೆಯುವುದೆಂದರೆ ಬಿಳಿಯಾದ ಪರ್ವತಗಳ ಮೇಲೆಹಾರುವ ಹಕ್ಕಿಗಳ ರುಜುವಲ್ಲಕೊರಳೆತ್ತಿ ಕೂಗುವ ಕೋಗಿಲೆಯ ರೆಕ್ಕೆ ಪುಕ್ಕಗಳೊಳಗಿನ ಹೇನಿನ ಕಡಿತದ ಕುರಿತು ದಾಖಲಿಸುವುದು ಪಾಡು ಹಾಡಾಗುವ ಮಣ್ಣು ಬೀಜ ಗರ್ಭದ ತಪ್ತತೆ ಆವಾಹಿಸುವುದುಹೂವು ಹಣ್ಣು ಪತ್ರ ಮಾಗಿ ಬಾಗಿ ಶಿಶಿರದಲಿ ನಡುಗಿ ಕೊರಗಿಕೊನೆಗೆ ಪತ್ಝಡ್ ನಲಿ ಉದುರುವಅದರ ಕೊನೆಯುಸಿರ ನಾದವನು ಎದೆಗಿಳಿಸುವುದು ಬರಿ ಬೆಳಗು ಬಣ್ಣಗಳ ಪದಗಳೇ ಬೇಕಿಲ್ಲಸೂರ್ಯ ಚಂದ್ರರ ಕವಿತೆಯ ಬನಿಗೆಕರುಳು ಕತ್ತರಿಸುವ ಕರಾಳ ಇರುಳ ಇಳೆಯಲಿನೆಲ-ನೊಸಲು ಪದಗಳ ನಿಟ್ಟುಸಿರುದುಮುಗುಡಬೇಕು ಕಸುಬುದಾರಿಕೆಯಲಿ ಜನಮನದ […]

ಪುಸ್ತಕ ಸಂಗಾತಿ

ದರ್ಪಣ ನನಗೆ ಸಾಮಾನ್ಯವಾಗಿ ಆತ್ಮಚರಿತ್ರೆ, ವೈಚಾರಿಕ ಲೇಖನ, ಚರ್ಚೆ ಇಂತಹವುಗಳನ್ನು ಓದುವುದೆಂದರೆನೇ ಬಲು ಇಷ್ಟ. ಕೆಲವೂಮ್ಮೆ ಕವಿತೆಗಳನ್ನು ಓದಿದರೂ ಅದನ್ನು ಒಂದೇ ಬಾರಿಗೆ ಓದಲಾರೆ. ಅಂದರೆ ಕವನ ಸಂಕಲನದಲ್ಲಿ ಇರುವ ಎಲ್ಲಾ ಕವಿತೆಗಳನ್ನು ಒಂದೇ ಉಸಿರಿಗೆ ಓದಲಾರೆ. ಇವನ್ನೆಲ್ಲ ಬಿಟ್ಟು ಕತೆಗಳ ವಿಷಯಕ್ಕೆ ಬಂದರೆ ನನಗೆ ಕಾದಂಬರಿಗಳಿಗಿಂತ ಸಣ್ಣ, ಸಣ್ಣ ಕತೆಗಳನ್ನು ಓದುವುದೆಂದರೆ ಬಹಳ ಇಷ್ಟ.ಅದ್ದರಿಂದ ನನ್ನಲ್ಲಿ ಬಹಳಷ್ಟು ಕಥಾಸಂಕಲನಗಳ ಸಂಗ್ರಹವೇ ಇದೆ. ಹಾಗೆ ಕಥಾಸಂಕಲನಗಳು ಇಷ್ಟವಾಗಲು ಕಾರಣ ಒಂದೇ ಓದಿನಲ್ಲಿ ನಾವು ನಮ್ಮನ್ನು ಭಿನ್ನ, ಭಿನ್ನ […]

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, […]

ಕಾವ್ಯಯಾನ

ನೀ ಬದಲಾದರೆ ನಾಗರಾಜ್ ಹರಪನಹಳ್ಳಿ ಆಕೆ ಎದುರಾದಾಗ ಹೀಗೆಒಂದು ಪ್ರಶ್ನೆ‌ ಎಸೆದಳುನೀ ಬದಲಾದರೆ…. ನಾ‌ ಸ್ವಲ್ಪ ಹೊತ್ತು ಮಾತಾಡಲಿಲ್ಲ ಆಕೆ ಒತ್ತಾಯಿಸಿದಳುತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳುನೀ ಬದಲಾದರೆ ?? ದೀರ್ಘ ನಿಟ್ಟುಸಿರು ಬಿಟ್ಟೆಹಾಗೂ ಹೇಳಿದೆ ;ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ ಮತ್ತೆ ಅವಳೆಡೆಗೆ ಹೊರಳಿಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;ಸೂರ್ಯನ ಗಮನಿಸುಆಕಾಶ ಗಮನಿಸುಬಯಲ ಓದುವುದ ಕಲಿಸಮುದ್ರದ ಎದುರು ನಿಂತುಅದರ ರೋಧನವ ಅರಿ ಮನುಷ್ಯರ ಬದುಕಿನ‌‌ ದೇಹದ‌ ನಶ್ವರತೆಯ ಅವಲೋಕಿಸು ಹಾಗೂ ….ಹಾಗೂನನ್ನ ಕಣ್ಣುಗಳ ದಿಟ್ಟಿಸುನನ್ನ […]

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ […]

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲು ರಚ್ಚೆ ಹಿಡಿದ ಮಗುವಿನಂತೆ ಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆ ತಾಳಬಲ್ಲೆನೇ ಸವಾರಿ? ಕಣ್ಣಂಚಲಿ ಮುತ್ತಿಕ್ಕುತ್ತಿದೆ ಸೋನೆ ಸುಡುವ ಹರಳಿನಂತೆ ಒರೆಸಿಕೊಳ್ಳಲೇ ಸುಮ್ಮನೆ? ಎಷ್ಟೊಂದು ಸಂಕಟದ ಸಾಲಿದೆ ಸೋಲೆಂಬ ಮೂಟೆಯೊಳಗೆ ನಟ್ಟ ನಡು ಬಯಲಿನಲಿ ಒಂಟಿ ಮತ್ತು ಒಂಟಿ ಮಾತ್ರ ಹರಿಯಬಲ್ಲದೇ ಹರಿದಾರಿ? ನಡೆಯುತ್ತದೆಯೇ ದಿಕ್ಕು ಮರೆತ ನೌಕೆ? ಸುತ್ತ ಹತ್ತೂರಿಂದ ಬಂದ ಪುಂಡ ಗಾಳಿ ಹೊತ್ತೊಯ್ದು ಬಿಡುವುದೇ ನೆಟ್ಟ ಹಗಲಿನ ಕಂಪು? ಯಾವ ದಾರಿಯ ಕೈ […]

ಕಾವ್ಯಯಾನ

ಮಳೆ ಹಾಡು… ಆಶಾ ಜಗದೀಶ್ ತಾರಸಿಯಿಂದ ಇಳಿಯುತ್ತಿರುವಒಂದೊಂದೇ ಹನಿಗಳನ್ನುನಿಲ್ಲಿಸಿ ಮಾತನಾಡಿಸಿಮೆಲ್ಲಗೆ ಹೆಸರ ಕೇಳಿಹಾಗೇ ಮೆಟ್ಟಿಲ ಮೇಲೆನಯವಾಗಿ ಕೂರಿಸಿಕೊಂಡುಈಗ ಬಿಟ್ಟು ಬಂದವನ ನೆನಪೋಬಂದು ಸೇರಿದವನ ನೆನಪೋಒಮ್ಮೆ ಕೇಳಬೇಕಿದೆ ಜಡಿ ಹಿಡಿದು ಸುರಿವಾಗಯಾರ ಮೇಲಿನ ಮೋಹಆವೇಶವಾಗಿ ಆವಾಹಗೊಳ್ಳುತ್ತದೆಜೀವ ಮರಗುಟ್ಟುವ ಶೀತಲೆತೆಯೊಳಗೆಬೆಂಕಿಯೊಂದನ್ನು ನಂದದಂತೆಹೇಗೆ ತಾನೆ ಬಚ್ಚಿಟ್ಟುಕೊಂಡಿರುವೆಎಂದಾದರೂ ಒಂದು ಸಣ್ಣ ಪ್ರಶ್ನೆಗೆಉತ್ತರ ಕೇಳಿಟ್ಟುಕೊಳ್ಳಬೇಕಿದೆ ಮುಚ್ಚಿದ ಕಿಟಕಿಯ ದಾಟಿ ಹಾಯುವತಂಗಾಳಿ ಮೈ ಸೋಕುವಾಗೆಲ್ಲಒಂದು ಮಳೆಹನಿಯ ಹಟದ ಮುಂದೆಯಾವುದೂ ಸಮವಲ್ಲ ಎನಿಸಿಬಿಡುತ್ತದೆಮತ್ತೆ ಮತ್ತೆ ಇಷ್ಟಿಷ್ಟೆ ಚೈತನ್ಯ ಒಟ್ಟಾಗಿಸಿಕೊಂಡುಹನಿಯುವ ಇಚ್ಛಾಶಕ್ತಿಗೆ ಜಗವೇ ಬಾಗಿದೆಅಂತಲೂ ಋತುಚಕ್ರ ತಿರುಗಿದಾಗಲೆಲ್ಲಾಅನಿಸುತ್ತಲೇ ಇರುತ್ತದೆ […]

ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ “ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ “ ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್. ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ […]

Back To Top