ಕಾವ್ಯಯಾನ

ನೀ ಬದಲಾದರೆ

Abstract Love Pictures, Photos, and Images for Facebook, Tumblr ...

ನಾಗರಾಜ್ ಹರಪನಹಳ್ಳಿ

ಆಕೆ ಎದುರಾದಾಗ ಹೀಗೆ
ಒಂದು ಪ್ರಶ್ನೆ‌ ಎಸೆದಳು
ನೀ ಬದಲಾದರೆ….

ನಾ‌ ಸ್ವಲ್ಪ ಹೊತ್ತು ಮಾತಾಡಲಿಲ್ಲ

ಆಕೆ ಒತ್ತಾಯಿಸಿದಳು
ತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳು
ನೀ ಬದಲಾದರೆ ??

ದೀರ್ಘ ನಿಟ್ಟುಸಿರು ಬಿಟ್ಟೆ
ಹಾಗೂ ಹೇಳಿದೆ ;
ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ

ಮತ್ತೆ ಅವಳೆಡೆಗೆ ಹೊರಳಿ
ಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;
ಸೂರ್ಯನ ಗಮನಿಸು
ಆಕಾಶ ಗಮನಿಸು
ಬಯಲ ಓದುವುದ ಕಲಿ
ಸಮುದ್ರದ ಎದುರು ನಿಂತು
ಅದರ ರೋಧನವ ಅರಿ

ಮನುಷ್ಯರ ಬದುಕಿನ‌‌ ದೇಹದ‌ ನಶ್ವರತೆಯ ಅವಲೋಕಿಸು

ಹಾಗೂ ….ಹಾಗೂ
ನನ್ನ ಕಣ್ಣುಗಳ ದಿಟ್ಟಿಸು
ನನ್ನ ತೋಳಿನಲ್ಲಿ ಸುಮ್ಮನೆ ಕರಗಿ‌ಹೋಗು…..

ಚಾಡಿಗಳ ಜಾಡಿಸಿ ಒದೆ
ಕಿವಿ ಕಚ್ಚುವವರ ಕುಡಗೋಲಿನಿಂದ‌ ಕೊಚ್ಚಿಹಾಕು
ಹಾಳು ಹಡಬೆ ರಂಡೆಯರ
ಮಾತಿಗೆ ಅಡುಗೆ ಮನೆಯ ಲಟ್ಟಣಿಗೆಯಿಂದ ತಿವಿ

ನಾನು ಉರಿವ ಕೆಂಡ
ದಂಡೆ ದಿಗ್ಭ್ರಮೆಗೊಳ್ಳುವಂತೆ ಹರಿವ ನದಿ…ಜಗದ ಮೌನ ಗರ್ಭೀಕರಿಸಿಕೊಂಡ ಕಣಿವೆ
ಸುಮ್ಮನೆ ನನ್ನೆದುರು ಕುಳಿತು ಅಪ್ಪಿ ಆಲಂಗಿಸು …

ನೀ ಬದಲಾದರೆ ಎಂಬ ಪ್ರಶ್ನೆಗಳ ಹುಟ್ಟಿದಲ್ಲಿ ನೇತು ಹಾಕು

ಬಿಮ್ಮನೆ ಘಮ್ಮನೆ ಮಘ ಮಘಿಸುವ ಮಲ್ಲಿಗೆಯಂತೆ ಪ್ರೀತಿಸು, ಪ್ರೀತಿಸು…; ಅಪ್ಪಟವಾಗಿ ಪ್ರೀತಿಸು…
ಪ್ರೀತಿ ಬೆಳಕೆಂಬ ಬೆಳಕಿನ ಬೆನ್ನು ಹತ್ತು….

*********************

6 thoughts on “ಕಾವ್ಯಯಾನ

  1. ಹೀಗೂ ಒಂದು ಬಂಡಾಯ ಉಂಟು. ಕವಿತೆ ತುಂಬಾ ಇಷ್ಟವಾಯಿತು.

  2. ಧೈರ್ಯತುಂಬುವ ಕವಿತೆ ಪ್ರೀತಿ ಎಷ್ಟು ಶ್ರೇಷ್ಠ ಎಂಬುದನ್ನು ಮಾರ್ಮಿಕವಾಗಿ ಅರುಹಿದೆ ಅಭಿನಂದನೆಗಳು

Leave a Reply

Back To Top