ಅಪಾಯ ಎದುರಿಸುವ ಬಗೆ ಹೀಗೆ . ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ […]

ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ

ಮಹಾಂತೇಶ್ ಪಲದಿನ್ನಿ ಮಿಥುನ ಶಿಲ್ಪಗಳ ಮೂಲಕ ಸಾಮಾಜಿಕ ಎಚ್ಚರಿಕೆ ನೀಡುವ  ಸಂದೇಶವೂ ಇದೆ ‘ * ಕಲಾವಿದ ಡಾ.ಮಹಾಂತೇಶ್ ಎಂ.ಪಲದಿನ್ನಿ . ವಿಜಾಪುರ ಇವರ ಊರು. ಹುಟ್ಟಿದ್ದು ೧೯೮೪. ಕಲಾ ಶಿಕ್ಷಣ ಕಲಿತದ್ದು ಹಂಪಿ ಕನ್ನಡ ವಿವಿ ಶಿಲ್ಪಕಲಾ ವಿಭಾಗದಲ್ಲಿ. ಬಿಎಫ್‌ಎ ಶಿಲ್ಪಕಲೆ ಕಲಿತ ಅವರು ಮೈಸೂರಿನ ಕಾವಾದಲ್ಲಿ ಮಾಸ್ಟರ್ ಆಫ್ ಆರ್ಟ ಕಲಿತರು. ನಂತರ ಶಿಲ್ಪಕಲೆಯಲ್ಲಿ ಎಂ.ಫಿಲ್.ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಹಂಪಿ ಕನ್ನಡ ವಿ.ವಿ.ಯಿಂದ ಪಡೆದರು. ಹಂಪಿ ವಿಶ್ವ ವಿದ್ಯಾಲಯದ ಶಿಲ್ಪಕಲಾ ವಿಭಾಗ ಬದಾಮಿ […]

ಒಲವಿನ ಪಹರೆ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಅರಳುತ್ತಿದೆ ಹೃದಯದಹೂ ಬನ ನಿನ್ನನೆನೆನಾದಕ್ಷಣ ….. ಎಣಿಸಲಾಗದ ಕನಸುಗಳದಿಬ್ಬಣ ಹೊರಟಿದೆಮನದೂರಿನ ಹೆದ್ದಾರಿಯಲಿನೆನಪಿನ ಬಿಡಿ ಹೂಗಳಸ್ವಾಗತದೊಂದಿಗೆ …. ನಿನ್ನ ಎದೆಯ ಗೂಡಿನಲ್ಲಿಬಚ್ಚಿಟ್ಟ ನನ್ನ ಚಹರೆಯಪಟವ ಮತ್ತೆ ನೋಡುವಾಸೆಈ ಸಂಜೆಯ ತಂಪು ಕಂಪಿನಸುಸಮಯದಲ್ಲಿ ….. ಬಯಕೆಯ ಕುಡಿನೋಟವೊಂದುಸದ್ದಿಲ್ಲದೆ ನಿನ್ನ ಬಳಿಸಾರಿದೆಸ್ವೀಕರಿಸಿ ಒಪ್ಪಿಗೆಯ ಮುದ್ರೆಯಾರವಾನಿಸುವೆಯಾ ನಿನ್ನ ಬೊಗಸೆಕಂಗಳ ಬೆಳಕಿನಲ್ಲಿ…‌‌‌‌.. ***********

ಆಚರಣೆಗಳಲ್ಲಿನ ತಾರತಮ್ಯ

ವಿಚಾರ ಜ್ಯೋತಿ ಡಿ.ಬೊಮ್ಮಾ ದೇವರನ್ನು ನಂಬಿ ಕೆಟ್ಟವರಿಲ್ಲ ಎಂಬ ವಾದವನ್ನು ಒಪ್ಪಬಹುದು.ಆದರೆ ದೈವದ ಹೆಸರಲ್ಲಿ ಆಚರಿಸುವ ಆಚರಣೆಗಳಲ್ಲಿನ ತಾರತಮ್ಯ ಒಪ್ಪಲಾಗದು. ಪೂಜೆಯ ಆಚರಣೆಗಳು ನಮ್ಮ ಮನಸ್ಸಿಗೆ ಸಮಾಧಾನವಾಗಿದ್ದರಷ್ಷೆ ಸಾಲದು ,ಆ ಆಚರಣೆಗಳು ಮತ್ತೊಬ್ಬರ ಮನಸ್ಸಿಗೆ ನೊವನ್ನುಂಟು ಮಾಡಬಾರದು. ನಿರಾಕಾರನನ್ನು ಒಂದೊಂದು ರೂಪ ಕೊಟ್ಟು ಬಟ್ಟೆ ತೊಡಿಸಿ ಅಲಂಕರಿಸಿ ಒಂದೊಂದು ಹೆಸರು ಕೊಟ್ಟು ಪೂಜಿಸುವರಿಗೆ , ದೇವರನ್ನು ತಾವೆ ಸೃಷ್ಟಿಸುತ್ತಿದ್ದೆವೆ ಎಂಬ ಅರಿವಾಗದೆ..! ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕ  ,ಈಗ ಬರುತ್ತಿರುವ ವರಮಹಾಲಕ್ಷಿ ಹಬ್ಬವೂ ಅದಕ್ಕೊಂದು ಉದಾಹರಣೆ.ಲಕ್ಷ್ಮಿ ಎಂದರೆ […]

ಮಾನವೀಯತೆ ಮಾತನಾಡಲಿ

ಕವಿತೆ ಪ್ಯಾರಿ ಸುತ ಮುಂದೊಂದು ದಿನ ನಾವಿಬ್ಬರು ಹೀಗೆ ಸತ್ತುಬಿಡೋಣಅಲ್ಲಿಗೆ ಬರುವವರು ಹೂವಿನ ಹಾರ,ಕನಿಕರದ ಮಾತುಗಳು,ಕೆಲವಂದಿಷ್ಟು ಬಿಡಿಬಿಡಿ ಹೊಗಳಿಕೆಗಳು,ಅಲ್ಲೊಂದಿಲ್ಲೊಂದು ತೆಗಳಿಕೆಗಳು,ತಂದು ಅಳುವ ಮುನ್ನಇಲ್ಲವೇ ;ಸಪ್ಪಳ ಮಾಡುವ ಕಣ್ಣೀರು ಅಳುವೆಂಬಪದವಾಗಿ ಸತ್ತ ಕಿವಿಯನ್ನುಸೇರೋ ಮುನ್ನಹಾಗೆ ಮಣ್ಣು ಸೇರಿಬಿಡೋಣಅಲ್ಲಿ ನಾವಿಬ್ಬರು ತಬ್ಬಿಕೊಂಡು ಒಬ್ಬರ ಮುಖವಇನ್ನೊಬ್ಬರುಹೊಂದಿಸಿಕೊಂಡು ಬೆತ್ತಲಾಗಿ ಮಲಗೋಣ ಅಲ್ಲಿ ಉಸಿರಾಡುವ,ಹೆಸರು ಮಾಡುವ ,ಸಮಸ್ಯೆಗಳೇ ಸವಾಲಾಗುವ ಯಾವ ಪ್ರಮೇಯವೇ ಇಲ್ಲವಂತೆಹೆಚ್ಚುಕಡಿಮೆ,ಬಡವ ಧನಿಕ,ಮುಟ್ಟಿಸಿಕೊಳ್ಳದವಎಲ್ಲರೂ ಹೀಗೆ ಸಮಾನವಾಗಿ ಮಲಗಿ ಸುಖಿಸುತ್ತಿದ್ದಾರೆ.ಲಾಭ-ನಷ್ಟ ,ದುಃಖ-ದುಮ್ಮಾನ ಎಲ್ಲವೂ ಕೆಲಸಕ್ಕೆ ಬಾರದವುಗಳಲ್ಲಿತೇವಳುವ,ತೇಲುವ ದುಡಿಯುವ,ಹೊಡೆಯುವಅದೆಷ್ಟು ಜೀವಗಳು ಸುಮ್ಮನೆ ಮಲಗಿಕೊಂಡಿವೆ ಅಂತರ, ಜನ್ಮಾಂತರ […]

ಕುರ್ಚಿಗಳು ಅಂಗಿ ತೊಟ್ಟು..

ಕವಿತೆ ನೂತನ ದೋಶೆಟ್ಟಿ ಈ ಅಂಗಿಯ ದರ ಸಾವಿರದ ಐದು ನೂರುಕೇಳಿ ನೀನು ಕಣ್ಣರಳಿಸುತ್ತಿಬೆಲೆಯಿಂದೇನಾಗಬೇಕುತೊಟ್ಟವನು ನೀನಲ್ಲವೇ?ಕುರ್ಚಿಯ ಲೆಕ್ಕಾಚಾರ ಅದಲ್ಲ.ನಿನ್ನ ಓಡಾಟದ ಚುರುಕುಮುಟ್ಟಿರುತ್ತದೆ ಆ ಅಂಗಿಗೆಹಕ್ಕನ್ನು ಕೊಡಲಾರೆನಡೆ ನಿಧಾನವಿರಲಿಕುರ್ಚಿಯ ಡೊಳ್ಳು ಹೊಟ್ಟೆ ಕನಲುತ್ತದೆ.ನಿನ್ನದೋ ಯೋಗನಡೆದೀರ್ಘ ಉಸಿರೆಳೆದುತುಂಬಿಕೊಂಡ ಕಸರನ್ನುಹೊರಹಾಕುತ್ತ ನಿಶ್ವಾಸದಲಿಹಗುರವಾಗುವುದ ಕಲಿತಿದ್ದಿ.ಕುರ್ಚಿಗೆ ಧಗೆ ಹತ್ತಿದೆ.ಕುಂತಲ್ಲಿ ಇರುವ ಕುರ್ಚಿಯಬತ್ತಳಿಕೆಯ ತುಂಬಹಸಿರು ಶರಾದ ಬಾಣಗಳುನಿನ್ನೆಡೆಗೆ ತೂರಿ ಬಿಡಲುಕುರ್ಚಿಯೀಗ ಪಣ ತೊಟ್ಟಿದೆ.ಮತ್ತೀಗ ಉಚ್ಛ್ವಾಸದಲಿಎದೆಯ ಹುರಿ ಮಾಡುತ್ತಿನಾಟುವುದು ಅಲ್ಲಿಗೇ ತಾನೇ?ಜಯದ ಬೆನ್ನು ಹತ್ತಿದರೆಅಪಜಯದ ಭಯಕುರ್ಚಿಗೇನು ಗೊತ್ತು ನಿನಗೆ ಸೋಲಿಲ್ಲ.ತಳವೂರಿ ನಿಂತು ಜಯದ ಅಹಂಕಾರತನ್ನ ಸೋಲಿನ ಭಯಕುರ್ಚಿಯ […]

ಆಹ್ಲಾದಕರ ಭಾವನೆಯಲಿ ನಾವು

ಕವಿತೆ ರಾಘವೇಂದ್ರ ದೇಶಪಾಂಡೆ ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರುರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನುಒಳಗೊಂಡಿದೆ ನಮ್ಮೀ ಸಂಬಂಧವುಸೃಷ್ಟಿಕರ್ತನ ಫಲದೊಳಗೆ… ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದುಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕಆಳವಾದ ಪ್ರೀತಿ ಇದೆಯೆನೋ… ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿದಾಂಪತ್ಯ ದೀವಿಗೆಯ ಬೆಳಕಿನಲಿ… ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳುಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿವಿರಹಿಸೋಣ ಭರವಸೆಯ […]

ಕರುಣಾಮಯಿ

ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು […]

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ

ಕವಿತೆ ವಿದ್ಯಾ ಕುಂದರಗಿ ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯುದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವುಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ ‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ *******************

ಗಝಲ ಧರ್ಮ..

ಗಝಲ ಗಳಲ್ಲಿ ಬಳಸುವ ಪಾರಂಪರಿಕ ಪಾರಿಭಾಷಿಕ ಪದಗಳು ಹಾಗೂ ಅವುಗಳ ಅರ್ಥ ಗಝಲ…. ಒಂದೇ ಪದ ಬಳಕೆಯ ಸಮ ಅಂತ್ಯವುಳ್ಳ ರದೀಫ್ ಮತ್ತು ಅನುಪ್ರಾಸ ದಿಂದ ಕೂಡಿದ ಕ಼ವಾಫಿ಼ ಯುಳ್ಳ ಒಂದೇ ವಜ಼್ನ ಅಥವಾ ಬಹರ್ ನಲ್ಲಿ ಬರೆದ ಅಶಾಅರ(ಶೇರ್ ನ ಬಹುವಚನ)ಗಳ ಸಮೂಹ. ಶಾಯಿರ್/ಸುಖನವರ…ಕವಿಶಾಯಿರಿ…. ಕಾವ್ಯಗಜ಼ಲ ಗೋ…ಗಝಲ್ ಗಾರಗಜ಼ಲ್ ಗೋಯೀ… ಗಝಲ್ ಬರೆಯುವ ಕ್ರಮ ಶೇರ… ಸಮಾನ ರದೀಪ್ ಮತ್ತು ವಿಭಿನ್ನ ಕ಼ವಾಫಿ಼ಯಿಂದ ಒಂದೇ ವಜ಼್ನ ಅಥವಾ ಬಹರ್ ಬಳಸಿ ಬರೆದ ದ್ವಿಪದಿಗಳು… ಅಶಆರ್….ಶೇರ್ ನ […]

Back To Top