ಗಝಲ ಧರ್ಮ..

ಗಝಲ ಗಳಲ್ಲಿ ಬಳಸುವ ಪಾರಂಪರಿಕ ಪಾರಿಭಾಷಿಕ ಪದಗಳು ಹಾಗೂ ಅವುಗಳ ಅರ್ಥ

ಗಝಲ…. ಒಂದೇ ಪದ ಬಳಕೆಯ ಸಮ ಅಂತ್ಯವುಳ್ಳ ರದೀಫ್ ಮತ್ತು ಅನುಪ್ರಾಸ ದಿಂದ ಕೂಡಿದ ಕ಼ವಾಫಿ಼ ಯುಳ್ಳ ಒಂದೇ ವಜ಼್ನ ಅಥವಾ ಬಹರ್ ನಲ್ಲಿ ಬರೆದ ಅಶಾಅರ(ಶೇರ್ ನ ಬಹುವಚನ)ಗಳ ಸಮೂಹ.

ಶಾಯಿರ್/ಸುಖನವರ…ಕವಿ
ಶಾಯಿರಿ…. ಕಾವ್ಯ
ಗಜ಼ಲ ಗೋ…ಗಝಲ್ ಗಾರ
ಗಜ಼ಲ್ ಗೋಯೀ… ಗಝಲ್ ಬರೆಯುವ ಕ್ರಮ

ಶೇರ… ಸಮಾನ ರದೀಪ್ ಮತ್ತು ವಿಭಿನ್ನ ಕ಼ವಾಫಿ಼ಯಿಂದ ಒಂದೇ ವಜ಼್ನ ಅಥವಾ ಬಹರ್ ಬಳಸಿ ಬರೆದ ದ್ವಿಪದಿಗಳು…

ಅಶಆರ್….ಶೇರ್ ನ ಬಹುವಚನ

ಫ಼ರ್ದ್… ಒಂದು ಶೇರ್

ಮಿಸ್ರಾ…. ಶೇರ್ ನ ಪ್ರತಿ ಸಾಲನ್ನು ಮಿಸ್ರಾ ಅನ್ನುತ್ತಾರೆ ಪ್ರತಿ ಶೇರ್ ಎರಡು ಮಿಸ್ರಾಗಳಿಂದ ಕೂಡಿರುತ್ತದೆ.

ಮಿಸ್ರಾ-ಎ-ಊಲಾ….ಶೇರ ನ ಮೊದಲ ಸಾಲು..
ಊಲಾ ಇದರ ಶಬ್ದಶಃ ಅರ್ಥ ಮೊದಲು

ಮಿಸ್ರಾ-ಎ-ಸಾನಿ….ಶೇರ ನ ಎರಡನೆ ಸಾಲು.
ಸಾನಿ ಇದರ ಶಬ್ದಶಃ ಅರ್ಥ ಎರಡನೆಯದು

ಮಿಸರೈನ್… ಮಿಸ್ರಾದ ಬಹುವಚನ
ರದೀಫ್… ಅನುಪ್ರಾಸವುಳ್ಳ ಮತ್ಲಾದ ಎರಡು ಮಿಸ್ರಾ(ಸಾಲು)ಗಳ ಕೊನೆಗೆ ಬರುವ ಹಾಗೂ ಗಝಲ್ ನ ಅನ್ಯ ಶೇರ ಗಳಲ್ಲಿ ಬರುವ ಸಮನಾಂತ ಪದ. ಇದು ಪೂರ್ತಿ ಗಝಲ್ ನಲ್ಲಿ ಪದ ಬದಲಾಗುವದಿಲ್ಲ…

ಕಾಫಿಯಾ… ರದೀಫ್ ನ ಹಿಂದೆ ಬರುವ ಅಂತ್ಯಪ್ರಾಸ ವುಳ್ಳ ಪ್ರತಿ ಶೇರ್ ನ ಮಿಸ್ರಾ-ಏ-ಸಾನಿಯಲ್ಲಿ ಬರುವ ಬದಲಾಗುವ ಅಂತ್ಯಪ್ರಾಸವುಳ್ಳ ಪದ. ಒಟ್ಟಾರೆ ಒಂದು ಶೇರ್ ನ ಆಕರ್ಷಣೆ ಕಾಫಿಯಾ. ಇದರ ಸುಂದರ ಹೆಣಿಗೆ ಗಝಲ ನ್ನು ಪ್ರಭಾವಶಾಲಿಯನ್ನಾಗಿಸುತ್ತದೆ.
ಇದು ಗಝಲ್ ನ ಬೆನ್ನೆಲುಬು.

ಮತ್ಲಾ… ಗಝಲ ನ ಮೊದಲ ಎರಡು ಮಿಸ್ರಾಗಳು (ಸಾಲು).ಎರಡೂ ಸಾಲು ಕಾಫಿಯಾ ರದೀಫ್ ದಿಂದ ಕೂಡಿರುತ್ತವೆ.

ಹುಸ್ನ -ಏ -ಮತ್ಲಾ… ಗಝಲ ನಲ್ಲಿ ಮತ್ಲಾದ ನಂತರ ಇನ್ನೊಂದು ಮತ್ಲಾ ಇದ್ದರೆ… ಅಂದರೆ ಒಂದು ಗಝಲ್ ಎರಡು ಮತ್ಲಾ ಗಳಿಂದ ಕೂಡಿದ್ದರೆ… ಆ ಎರಡನೆಯ ಮತ್ಲಾ ವನ್ನು ಹುಸ್ನ -ಏ -ಮತ್ಲಾ ಅನ್ನುತ್ತಾರೆ.

ತಕಲ್ಲುಸ್…. ಕಾವ್ಯನಾಮ… ಅಂಕಿತನಾಮ.

ಮಕ್ತಾ… ಗಝಲ ನ ಕೊನೆಯ ಶೇರ. ಇಲ್ಲಿ ಗಝಲ ಗಾರ ತನ್ನ ತಕಲ್ಲುಸ್ ಅನ್ನು ಮೊದಲ ಸಾಲು ಅಥವಾ ಕೊನೆಯ ಸಾಲಿನಲ್ಲಿ ಬಳಸಬಹುದಾಗಿದೆ. ಇದು ಒಂದು ಸುಂದರ ಶಾಬ್ದಿಕ ಅರ್ಥ ಬರುವಂತೆ ಬಳಸುವದು ಆತನ ಪ್ರತಿಭೆಯ ಅನಾವರಣ.

ರಬ್ತ… ಅಂತಃಸಂಬಂಧ
ಲಾಮ… ಲಘು
ಗಾಫ…. ಗುರು
ವಜ಼್ನ… ಮಾತ್ರೆಗಳ ಕ್ರಮ
ರುಕ್ನ…. ಗಣ

ಗಜಲ್

ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನ
ನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ

ಇರುವವರೆಗೂ ಅಷ್ಟಮದಗಳಿಂದ ಮೆರೆದಾಡಿ ನನ್ನತನವನ್ನು ಮರೆತಿದ್ದೇನೆ
ನನ್ನದೆನ್ನುವ ಈ ಎಲ್ಲವನ್ನೂ ಇಲ್ಲಿಯೇ ಬಿಟ್ಟು ನಡೆಯುತ್ತೇನೆ ಒಂದು ದಿನ

ತುತ್ತು ಅನ್ನಕ್ಕಾಗಿ ಹೈರಾಣಾಗುವವರ ಹೊಟ್ಟೆಯ ಮೇಲೆ ಹೊಡೆದಿದ್ದೇನೆ
ಶಾಶ್ವತವಲ್ಲದ ಈ ಬದುಕಿಗಾಗಿ ಹೊಡೆದಾಡಿ ಬರಿಗೈಯಲ್ಲಿ ಸಾಗುತ್ತೇನೆ ಒಂದು ದಿನ

ಬೇಕು ಬೇಕು ಎನ್ನುವ ದುರಾಸೆಯಲ್ಲಿ ಮಾನವ ಪ್ರೀತಿಯನ್ನು ಮರೆತಿದ್ದೇನೆ
ಇಲ್ಲಿ ಸ್ವರ್ಗ ನಿರ್ಮಿಸಲಾಗದೆ ಗೋಡೆಗಳನ್ನು ಕಟ್ಟಿಕೊಂಡು ಪಯಣಿಸುತ್ತೇನೆ ಒಂದು ದಿನ

ರಾಜ ಮಹಾರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲ
ಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ
…. ಅರುಣಾ ನರೇಂದ್ರ

ಅವರ ಗಝಲ್ ಉದಾಹರಣೆಗೆ

ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನ…..ಇದು ಮಿಸ್ರಾ ಹಾಗೂ ಮಿಸ್ರಾ-ಏ-ಊಲಾ

ನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ…ಇದು ಎರಡನೆಯ ಮಿಸ್ರಾ
ಮಿಸ್ರಾ-ಏ-ಸಾನಿ…

ಗಝಲ್ ನ ಈ ಎರಡೂ ಮಿಸ್ರಾಗಳು ಸೇರಿ ಶೇರ ಆದವು

ಗಝಲ ನ ಮೊದಲ ಶೇರ ನ್ನು ಮತ್ಲಾ ಅಂತ ಕರೆಯುತ್ತೇವೆ
ಐದು ಅಶಅರ ಗಳುಳ್ಳ ಗಝಲ್ ಇದು…

ರದೀಫ್… ಒಂದು ದಿನ
ಕಾಫಿಯಾ…. ಹೋಗುತ್ತೇನೆ, ಹೊರಡುತ್ತೇನೆ, ನಡೆಯುತ್ತೇನೆ,ಸಾಗುತ್ತೇನೆ,ಪಯಣಿಸುತ್ತೇನೆ,ಮಣ್ಣಾಗಿಬಿಡುತ್ತೇನೆ.

ತಖಲ್ಲುಸ್… ಅರುಣಾ

ಮಕ್ತಾ…

ರಾಜ ಮಹರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲ…
ಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ…
**********************

ಮೆಹಬೂಬ್ ಬೀ

2 thoughts on “ಗಝಲ ಧರ್ಮ..

  1. ವೇರಿ ನೈಸ್…
    ಅತ್ಯುತ್ತಮ ಉಪಯುಕ್ತ ಬರಹ ಬೀಜಿ…
    ಧನ್ಯವಾದಗಳು ಮಧು ಸರ್…

    1. ಉಪಯುಕ್ತ ಮಾಹಿತಿ ಒದಗಿಸಿದ್ದೀರಿ.ಧನ್ಯವಾದಗಳು.

Leave a Reply

Back To Top