ಗಝಲ್

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************

ಕವಿತೆ.

ಕವಿತೆ ವಾಯ್.ಜೆ.ಮಹಿಬೂಬ ನೀ ಬರುವಾ ಹಾದಿಯೊಳಗೆಗಿರಿಮಲ್ಲೆ ಹಾಸಲೇನ ?ನಾ ನೆರಳಾಗಿ ನಿಲ್ಲಲೇನ !? ನೀ ಹಾಡೋ ರಾಗದಲ್ಲಿಧ್ವನಿಯಾಗಿ ಕೇಳಲೇನ ?ನಾ ರಸವಾಗಿ ಸುರಿಯಲೇನ ? ನೀ ಕುಡಿವ ಪ್ರಾಣ ಹನಿಗೂಮದುವಾಗಿ ಬೆರೆಯಲೇನ ?ನಾ ತತ್ರಾಣಿಯಾಗಲೇನ ? ನಿನ್ನ ನವಿಲುಗರಿಕೆ ಜಡೆಗೆಪಚ್ಚೆ ಮಲ್ಲೆ ತೊಡಿಸಲೇನ-?ದಳ ಕಮಲ ಹೊದಿಸಲೇನ-? ಕರುನಾಡ ಕಣ್ಣ ಹೆಣ್ಣೆಮಗುವಾಗಿ ಪಡೆಯಲೇನನಾ ಗುರುವಾಗಿ ಕರೆಯಲೇನ ? *****************************

ಭಾವಗಳ ಹಕ್ಕಿ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಭಾವಗಳ ಹಕ್ಕಿಗೆ ಹಾರುವುದೇ ಕೆಲಸಒಮ್ಮೆ ಆ ಮರ..ಒಮ್ಮೆ ಈ ಮರ..ಮಗದೊಮ್ಮೆ…..ಮತ್ತೊಂದು. ಗಮನಿಸಿದ್ದೇನೆ ನಾನು ಬಗೆ ಬಗೆ ಹಕ್ಕಿಗಳಸಂಜೆ ಹೊತ್ತು ನನ್ನ ಕೈತೋಟದಲ್ಲಿಭಿನ್ನ…ಭಿನ್ನ…ಒಂದೊಂದೂ. ಕೆಲವು ಗುಂಪು ಗುಂಪುಗಳವಾದರೆಕೆಲವದೋ….ಬರೀ ಗದ್ದಲ,ಇನ್ನು ಕೆಲವು ಮೌನವಾಗಿದ್ದರೆ..ಮತ್ತೂ ಕೆಲವು ಬರೀ…ಒಂಟಿ. ಬಣ್ಣ ಬಣ್ಣದ ರಂಗೋಲಿಯಂತೆ ಕೆಲವಾದರೆ,ಹಸಿರು ಮಧ್ಯೆ ಐಕ್ಯವಾದಂತೆ ಕೆಲವುನಾವಿರುವುದೇ ಹೀಗೆಂಬ ಮಾಸು ಬಣ್ಣದವು ಕೆಲವಾದರೆ,ಒಂಟಿಯಾಗಿರುವ ಕಪ್ಪು ಹಕ್ಕಿ ಮೇಲೇ….ನನಗೆ ಒಲವು. ತುಂಬೆ ಗಿಡದಲ್ಲೂ ಕೊಂಬೆ ಕೊಂಬೆಗೆ ಹಾರುವ ಪುಟ್ಟ ಹಕ್ಕಿ,ಒಂದು ಹೋದಲ್ಲೆಲ್ಲ ಇನ್ನೊಂದೂ ಹೋಗುವ ಜೋಡಿ […]

ಗಝಲ್

ಗಝಲ್ ರೇಷ್ಮಾ ಕಂದಕೂರ. ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆಆ ದೇವನ ದೂಷಿಸತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ ನೋಡದಾಗಿದೆ. ****************************

ಅವಳು ಮತ್ತು ಅಗ್ಗಿಷ್ಟಿಕೆಯು..!!

ಕವಿತೆ ವೀಣಾ ಪಿ. ಧೋ………. ಎಂದೆನುತೆ ಸುರಿಮಳೆಯ ದಾರ್ಢ್ಯತೆಯ ಗಡ-ಗಡನೆ ನಡುಗಿಸುವ ತಣ್ಣೀರ ಧಾವಂತಕೆ ತೊಯ್ದ ಕಾಯವ ಮುಚ್ಚಿಟ್ಟ ಸೀರೆಯ ಸೆರಗಿನಂಚನು ಹಿಂಡುತಲಿ ಗುಡುಗು-ಮಿಂಚಿನ ಸೆಡವಿಗೆ ಭಯಗೊಂಡ ಹುಲ್ಲೆಯಂತಾದ ಭಾವದಲಿ ಬರದೂರ ಬಯಲಿಂದ ಕಟ್ಟಿಗೆಯನಾಯಲು ಕಾನನಕೆ ಬಂದಾಕೆ ಸಂಜೆ ಮಳೆಗೆ ಸಿಲುಕಿರಲು ಕತ್ತಲಾವರಣದಂಜಿಕೆಗೆ ದೂರದಂಚಿನ ಬೆಳಕು ಅರಸುತ್ತಲೋಡುತ್ತ ಅದಾವುದೋ ಹಿತ್ತಲಿನ ಹೊಚ್ಚನೆಯ ತಾವತ್ತ ಹೊರಳಿಸಿರೆ ಅಂಜುತಲಿ ಜಿಂಕೆ ಕಣ್ಗಳನು ಬೆಳದಿಂಗಳಂತಿವಳ ಸೆಳೆದು ಕಾವು ಕೊಡುವೆನೆಂದೆಂಬ ಕಾಮದಲಿ ಅಗ್ಗಿಷ್ಟಿಕೆಯೊಂದು ಉರಿಜ್ವಾಲೆಯಾಡಂಬರ ತೋರುತಿರೆ.. ತಾ ತೋಯ್ದ ಗತಿ ಮರೆತು ಚಡಪಡಿಕೆ […]

ಶಬ್ಧಭಾರವಿಲ್ಲದ ಮನದ ಮಾತುಗಳು

ಅಂಕಣ ಬರಹ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.ಏನೂ ಬೇಡವೆಂದುಮನುಷ್ಯ […]

ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ ಅಂಕಣ ಬರಹ ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, […]

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. […]

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಡಾ. ಅಜಿತ್ ಹರೀಶಿ ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ. ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ! ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ […]

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

ಹೆಣ್ಣು ಸಾಹಿತ್ಯ,ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕ , ಅಡುಗೆ ಮನೆ ಸೌಟು ಹಿಡಿದಿರಬಹುದಾದ ಹೆಣ್ಣು ತಾಯಿಯಾಗಿ ,ಸೋದರಿಯಾಗಿ ಪತ್ನಿಯಾಗಿ ಸಂಸಾರದ ಕಣ್ಣಾಗಿದ್ದಾಳೆ ,ಸಮಾಜದ ಎಲ್ಲ ರಂಗಗಳಲ್ಲಿ ಸಕ್ರಿಯಳಾಗಿ ಸೈ  ಎನಿಸಿಕೊಂಡಿರುವ ಆಕೆ ವೈದ್ಯಳಾಗಿ .ಯೋಧಳಾಗಿ .ಪ್ರಧಾನಿಯಾಗಿ,ರಾಷ್ಟ್ರಪತಿಯಾಗಿ ತನ್ನ ಸಾಮರ್ಥ್ಯ ಮೆರೆದಿದ್ದಾಳೆ . ಅಲ್ಲದೆ ಪುರುಷರಿಗೆ ಸಮನಾಗಿ ಎಲ್ಲ ಸ್ತರಗಳಲ್ಲಿ ಕಾರ್ಯವೆಸಗುವುದರಲ್ಲಿ ಯಶಸ್ವಿಯಾಗಿದ್ದಾಳೆ. ಸಾಹಿತ್ಯಮತ್ತು ಸಂಸ್ಕಾರಕ್ಕೆ ಅವಳ ಕೊಡುಗೆ ಅಪಾರ,  ಹೆಣ್ಣು ಸಮಾಜದ ಕಣ್ಣು .   ಆದರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಏಕೊ ಏನೋ […]

Back To Top