ಪ್ರಶಸ್ತಿ ಘೋಷಣೆ
ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 […]
ಕಾರ್ತಿಕದ ಮುಸ್ಸಂಜೆ
ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ […]
ನೇಗಿಲಿನ ಒಂದು ಸಾಲು
ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ […]
ಗಜಲ್
ಗಜಲ್ ಸ್ಮಿತಾ ಭಟ್ ಬೇಕೋ ಬೇಡವೋ ಈ ಬದುಕನ್ನು ನಡೆದೇ ಮುಗಿಸಬೇಕಿದೆ.ಕಾಲದ ಕಡುದಾರಿಯ ಕಳವಳಿಸದೇ ಮುಗಿಸಬೇಕಿದೆ ಉಯ್ಯಾಲೆ ಕಟ್ಟಿದ ರೆಂಬೆಯ ಮೇಲೆ ಅದೆಷ್ಟು ನಂಬಿಕೆಎರಗುವ ನಸೀಬನ್ನು ಎದೆಗುಂದದೇ ಮುಗಿಸಬೇಕಿದೆ. ಸುತ್ತಿ ಬಳಸುವ ದಾರಿಯಲಿ ಕಾಲಕಸುವು ಕಳೆಯದೇ ಇರದುಸಿಗದ ನೂರು ಬಯಕೆ ಕನಸನು ಕೊರಗದೇ ಮುಗಿಸಬೇಕಿದೆ. ಮೋಡ ಎಲ್ಲವನ್ನೂ ಶೂನ್ಯಗೊಳಿಸುವುದು ಕೆಲವೊಮ್ಮೆಮೆತ್ತಿಕೊಳ್ಳುವ ನೋವನು ಅಳುಕದೇ ಮುಗಿಸಬೇಕಿದೆ. ಹಿಂತಿರುಗಿದಾಗ ಎಷ್ಟೊಂದು ಏರಿಳಿತಗಳು ಬದುಕಿಗೆಯಾವ ಕಹಿಯನೂ ಉಳಿಸಿಕೊಳ್ಳದೇ ಮುಗಿಸಬೇಕಿದೆ. ರೆಕ್ಕೆ ಕಟ್ಟಿಕೊಂಡಾಗ ಜಗವದೆಷ್ಟು ಸೋಜಿಗ “ಮಾಧವ”ಈ ಖುಷಿಗೆ ಯಾರ ಹಂಗು,ವಿಷಾದವಿರದೇ ಮುಗಿಸಬೇಕಿದೆ […]
ದೂರ ದೂರದತೀರ
ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ […]
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ […]
ಅಂಕಣ ಬರಹ ಕರುಳು ಹಿಂಡುವ ಬಡಪಾಯಿಯೊಬ್ಬನ ಕರುಣ ಕಥೆ ‘ಆಡು ಜೀವನ’ ‘ಆಡು ಜೀವನ’ಮೂಲ : ಬೆನ್ಯಾಮಿನ್ಕನ್ನಡಕ್ಕೆ : ಡಾ.ಅಶೋಕ ಕುಮಾರ್ಪ್ರಕಾಶಕರು : ಹೇಮಂತ ಸಾಹಿತ್ಯಪ್ರಕಟಣೆಯ ವರ್ಷ: ೨೦೧೨ಬೆಲೆ : ರೂ.೧೦೦ಪುಟಗಳು : ೧೮೪ ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ […]
ಅಡುಗೆಮನೆ ಜಗತ್ತು
ವಾರದ ಕವಿತೆ ಅಡುಗೆಮನೆ ಜಗತ್ತು ಉಮಾ ಮುಕುಂದ್ ಕಬ್ಬಿಣದ ತವದ ಮೇಲೆರೆದದೋಸೆಯ ರುಚಿ ಮತ್ತು ಗರಿನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ? ಉಪ್ಪಿನಕಾಯಿ ಜಾಡಿಗೆ ತುಂಬಿಸಿಮುಚ್ವಿಟ್ಟರೆ ಮುಗಿಯಲಿಲ್ಲಆಗಾಗ್ಗೆ ಕೈಯಾಡಿಸಬೇಕು ತೆಗೆದುಕೆಡದಂತಿರಿಸಿಕೊಳ್ಳಲು. ಅಡುಗೆಮನೆ ಕೈಒರೆಸುಅನಿವಾರ್ಯವಾದರೂಮನೆಯವರಿಗೆ ಸಸಾರಕೆಲಕೆಲವು ಜನರ ಹಾಗೆ. ಬೇಕಾದ್ದು, ಬೇಡದ್ದು ತುಂಬಿಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆಆಗಾಗ ಶುಚಿಗೊಳಿಸಿಕೊಂಡೇವು. ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲುಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತುಮನುಷ್ಯರ ನಿಜಬಣ್ಣ ತಿಳಿಯಲುಉಪಾಯವೇನಾದರೂ ಇದ್ದಿದ್ದರೆ… ಮೊಂಡಾದ ಚಾಕು, ಈಳಿಗೆಗೆಸಾಣೆ ಹಿಡಿಯಬೇಕು ಆಗಾಗ್ಗೆಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ… […]
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..!
ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಕೆ.ಶಿವು.ಲಕ್ಕಣ್ಣವರ ‘ಮಹಾನಾಯಕ’ ಡಾ.ಬಿ.ಆರ್.ಅಂಬೇಡ್ಕರ್ ರ ಕೊನೆಯ ಸಂದೇಶ..! ಡಿ. 6 ದೇಶದ ಮಹಾನಾಯಕ ಅಂಬೇಡ್ಕರ್ ಅವರನ್ನು ಕಳೆದುಕೊಂಡ ದಿನ. ಅವರ ಕೊನೆಯ ಸಂದೇಶವನ್ನು ಪ್ರತಿಯೊಬ್ಬರು ತಿಳಿಯಬೇಕು ಅಂದು ಡಿಸೆಂಬರ್ 6, 1956. ಇಡೀ ಭಾರತದಲ್ಲಿ ಕಣ್ಣೀರ ಕೋಡಿ ಹರಿದ ದಿನ. ಕತ್ತಲಲ್ಲಿದ್ದ ಭಾರತಕ್ಕೆ ಬೆಳಕಿನ ಕಿರಣ ನೀಡಿ, ವಿಶ್ವವೇ ಬೆರಗಾಗುವಂತೆ ಮಾಡಿದ್ದ, ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಬ್ಬಾಣ ಹೊಂದಿದ ದಿನ. ಭಾರತದ ಕಣ್ತೆರೆಸಿ, […]
ಹಾಯ್ಕುಗಳು
ಹಾಯ್ಕುಗಳು ಕೆ.ಸುನಂದಾ ಗೆಳತಿ ನಿನ್ನಸೌಂದರ್ಯ ಯಾವ ಶಿಲ್ಪಿಕೈ ಚಳಕವೊ ?** ವಿದ್ಯೆ ದುಡಿಮೆತಾಳ್ಮೆ ; ಇದ್ರೆ ಎಲ್ಲವೂಜಯಶೀಲವು** ಮನತಟ್ಟದೆಹುಟ್ಟೀತೇನು ; ಸ್ವಂತಿಕೆಮರೆತ ಕಾವ್ಯ** ಕಾವ್ಯ ಲಹರಿಬಸಿರಲ್ಲಿ ಪಳಗಿಜನ್ಮಿಸಬೇಕು** ಪಕ್ಟವಾಗದೇಕಿತ್ತರೆ ರುಚಿಸದುಸಾಹಿತ್ಯ ರಸ ** ತಾಳದು ಮನಬರೆದೆ ಕಾವ್ಯ ; ಉಕ್ಕಿಹೊರಹೊಮ್ಮಿತು** ಭವ್ಯತೆಯಲಿಹುಟ್ಟಿದ್ದು ಶಾಸ್ವತದಮಧುರ ಗೀತೆ** ಪಲ್ಲವಿಸಿತುಆತ್ಮದಿಂದ ; ಕಾವ್ಯದಸತ್ವ ಶಕ್ತಿಯು** ಭಾವ ಗರ್ಭದಿಕಾವ್ಯ ಕಟ್ಟಿ ; ಹುಟ್ಟಿದ್ದುರಸ ಭರಿತ**************************************