ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಲೇಖನ ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ ನಿಂತು ಮಲ್ಲಿಕಾರ್ಜುನ ಕಡಕೋಳ  ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ  ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ  “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿದರು. ಆ ಮೂಲಕ  ಹೈದ್ರಾಬಾದ್ ಕರ್ನಾಟಕ ಕನ್ನಡನಾಡ ಪ್ರಜ್ಞೆಗೆ ಹೊಸವಿನ್ಯಾಸದ ತಾಜಾ ತಾಜಾ ಖುಷಿ ದೊರಕಿದಂತಾಗಿದೆ. ಇದು ಸಾಂಸ್ಕೃತಿಕವಾಗಿ ವಿನೂತನ ಉಮೇದು. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆಮೀರಿ ವಚನಗಳ ಮೂಲಕ ಜನಚಳವಳಿ ರೂಪಿಸಿದ್ದು ಜನಕಲ್ಯಾಣದ ಕಳಕಳಿಯ ದ್ಯೋತಕ. […]

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ […]

ದ್ವೇಷ

ಅನುವಾದಿತ ಕವಿತೆ ದ್ವೇಷ ಇಂಗ್ಲೀಷ್ ಮೂಲ: ಸ್ಟೀಫನ್ಸ್ ಕನ್ನಡಕ್ಕೆ: ವಿ.ಗಣೇಶ್ ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ […]

ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..!

ಲೇಖನ ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..! ಮಹಿಳೆಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂಬ ಚರ್ಚೆಗೆ ಜೀವ ಬಂದಿದೆ. ಶತಮಾನ ಪೂರೈಸಿರುವ ಈ ಸಂಸ್ಥೆಯು ಇದುವರೆಗೆ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಅಧಿಕಾರ-ಹಣ-ವರ್ಚಸ್ಸು ಇರುವ ಕ.ಸಾ.ಪ,ದಲ್ಲಿ ಚುನಾವಣೆಯ ಬಲಾಬಲ ಪರೀಕ್ಷೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳಬಹುದೇ? ಅಂತಹ ಅವಕಾಶವನ್ನು ’ಮತ’ ಚಲಾಯಿಸುವ ಸದಸ್ಯರು ಒಪ್ಪಿಕೊಳ್ಳುವರೇ? ಎಂದು ಕೇಳಿರುವ ಪತ್ರಕರ್ತವೊಬ್ಬರು ಚರ್ಚೆಯನ್ನು ಆರಂಭಿಸಿದ್ದಾರೆ. ನೂರೈದು ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲ ವರುಷಗಳಿಂದ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾದದ್ದು […]

ಏಕೀ ಏಕತಾನತೆ

ಲಹರಿ ಏಕೀ ಏಕತಾನತೆ ಸ್ಮಿತಾ ಭಟ್ ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ. ನನಗೋ ಅಳುವೇ ತುಟಿಗೆ ಬಂದ ಅನುಭವ. ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು ಯಾರದ್ದಾದರೂ ಮನೆಯಲ್ಲಿ, ಹೋಟೆಲ್‌ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ […]

ಮಿಗೆಯಗಲ ನಿಮ್ಮಗಲ

ಕವಿತೆ ಮಿಗೆಯಗಲ ನಿಮ್ಮಗಲ ನೂತನ ದೋಶೆಟ್ಟಿ ದೇಹವನೆ ದೇಗುಲ ಮಾಡಿಜಗ ಮುಗಿಲುಗಳಗಲ ನಿಂತಕಾಣಲಾರದ ಕೂಡಲಸಂಗನಕರಸ್ಥಲದಲ್ಲೆ ಕರೆಸಿಭಕ್ತಿ ದಾಸೋಹವನೆಗೈದಜಗದ ತಂದೆ ಸಕಲ ಜೀವರಾತ್ಮವೂ ಪರಶಿವನ ನೆಲೆಮೇಲು – ಕೀಳೆಂಬುದು ಇಳೆಯ ಕೊಳೆಇದ ತೊಳೆವುದೇ ಶಿವ ಪಾದಪೂಜೆಕೂಡುಂಡ ಅನ್ನವೇ ಕರಣಪ್ರಸಾದಅರಿವ ಜ್ಯೋತಿ ಬೆಳಗಿಸಿದಕ್ರಾಂತಿಕಾರಿ ಅಣ್ಣ ದಯೆಯ ಬೀಜಮಂತ್ರವ ಪಠಿಸಿಸುಳ್ಳು- ಸಟೆ ಬಿಡುನೀತಿ ನಡೆ ನುಡಿಯೇ ಕೂಡಲಸಂಗಮಆವು ತಾವೆಂಬ ಸರಳತೆಯ ಕಲಿಸಿದಮಮತೆಯ ಮಾತೆ ಚಂದ್ರ- ಚಕೋರರ, ಭ್ರಮರ – ಬಂಡುವಅಂಬುಜ- ರವಿ, ಜ್ಯೋತಿ – ತಮಂಧಆಡುವ ನವಿಲು, ಓದುವ ಗಿಳಿಜಗವ ಅವನಲಿ […]

ಮರೆವಿಗೆ ಇಲ್ಲಿದೆ ರಾಮಬಾಣ           ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು […]

ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ.  ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ.  ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ  `ಸಂಚಯ’ ನಡೆಸುವ ರಾಜ್ಯ ಮಟ್ಟದ […]

ನೀ ಬರಲಾರೆಯಾ

ಕವಿತೆ ನೀ ಬರಲಾರೆಯಾ ವಿದ್ಯಾಶ್ರೀ ಅಡೂರ್ ಚಂದಿರನ ಬೆಳಕಿನಲಿ ತಂಪಮಳೆ ಸುರಿದಾಗನನ್ನ ಜತೆಗಿರಲು ನೀ ಬರಲಾರೆಯಾ ಇನ್ನು ಸನಿಹಕೆ ಸಾಗಿ ಉಸಿರ ಬಿಸಿಯನು ಸೋಕಿನನ್ನ ಜತೆಗಿರಲು ನೀ ಬರಲಾರೆಯಾ ಒಂದಿರುಳು ಕನಸಿನಲಿ ನಿನ್ನ ಜತೆ ಕೈಹಿಡಿದುಕಡಲಬದಿ ನಿಲುವಾಸೆ ನೀ ಬರಲಾರೆಯಾ ಮರಳಿನಲಿ ನಿನ ಹೆಜ್ಜೆ ಮೇಲೆನ್ನ ಹೆಜ್ಜೆಯನುಇಡುವಾಸೆ ಒಂದೊಮ್ಮೆ ಬರಲಾರೆಯಾ ಭೋರ್ಗರೆವ ಅಲೆಗಳಿಗೆ ಮೈಯೊಡ್ಡಿ ನಿಲುವಾಗಬಿಡದೆನ್ನ ಕೈಹಿಡಿಯೇ ಬರಲಾರೆಯಾ ಮಾಯಕದ ನಗುವೊಂದು ಚಂದದಲಿ ಮೂಡಿರಲುನನ ಮೋರೆ ದಿಟ್ಟಿಸಲು ಬರಲಾರೆಯಾ. ********************************

ನಿತ್ಯ ಸಾವುಗಳ ಸಂತೆಯಲಿ ನಿಂತು

ಲೇಖನ ನಿತ್ಯ ಸಾವುಗಳ ಸಂತೆಯಲಿ ನಿಂತು ಬದುಕ ಪ್ರೀತಿ ಧೇನಿಸುತ್ತಾ… ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಸಾವುಗಳ ಶಕೆ ಆರಂಭವಾಗಿ ಆರೇಳು ತಿಂಗಳುಗಳೇ ಕಳೆಯುತ್ತಿವೆ. ತೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದರೆ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ಜತೆಯಲಿ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರ ಸಾಲು ಸಾಲು ಸಾವುಗಳು. ಸಾಹಿತಿ, ಕಲಾವಿದರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ. ನಾಳೆ ಯಾರ ಸರದಿಯೋ..? ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ […]

Back To Top