ನಂಬಿಕೆ : ಮರು ಪ್ರಶ್ನೆ

ನಂಬಿಕೆ : ಮರು ಪ್ರಶ್ನೆ

ಸಣ್ಣ ಕಥೆ  ನಂಬಿಕೆ : ಮರು ಪ್ರಶ್ನೆ ರೇಷ್ಮಾ ನಾಯ್ಕ, ಶಿರಸಿ ಯಾರು ಒಳ್ಳೆ ಕೆಲ್ಸ ಮಾಡ್ತಾರೋ ಅವ್ರ ಪರ ದೇವ್ರು ನಿಂತಿರ್ತಾನೆ ಯಾವುದೇ ರೀತಿಲಿ ಸಮಸ್ಯೆಗಳಿಗೆ ಪರಿಹಾರಾನೂ ಸೂಚಿಸುತ್ತಾನೆ ಎಂದ ಮಾತಿಗೆ;  ಮಗಳು , ” ಹಾಗಾದ್ರೆ ಜಗತ್ತಿಗೆ ಕರೋನ ಬಂದಿದೆ ಇಷ್ಟೆಲ್ಲ ಕಷ್ಟ ಪಡ್ತಿದೀವಿ ಶಾಲೆಗೂ ಹೋಗೋಕಾಗ್ತಿಲ್ಲ  ಯಾಕಮ್ಮ ದೇವ್ರು ಪರಿಹಾರಾನೇ ಸೂಚಿಸ್ತಿಲ್ಲ?”  ಎಂದಳು. ಕಂದಾ, ” ದೇವ್ರು ಅನ್ನೋದು ಒಂದು ನಂಬಿಕೆ , ಧೈರ್ಯ. “ ನಿಂಗೆ ಜ್ವರ ಬಂದಾಗ ಹೆದ್ರಬೇಡ ನಾವ್ […]

ಮಾಗಿ ಕಾಲ

ಕವಿತೆ ಮಾಗಿ ಕಾಲ ಡಾಲಿ ವಿಜಯ ಕುಮಾರ್. ಕೆ.ವಿ ಆವರಿಸಿದ ಚಳಿನನ್ನ ಮೈತಾಕದಂತೆಎದೆಯ ಚಿಪ್ಪಿನೊಳಗೆ ಕಾದನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆಬರುವ ಮಾಸಗಳೆಲ್ಲಮಾಘಮಾಸವನ್ನೇಹೊತ್ತಿರಬಾರದೆ ಅನ್ನಿಸುತ್ತೆ… ಒಲಿದ‌ ಮನಸುಗಳಮಾಗಿಸಿ.ಬಿಗಿಯಾಗಿ ಬೆಸೆದುಬಲಿತ ಕನಸುಗಳಮಿಲನವಾಗಿಸುವಶಿಶಿರ ಋತುಪರಿಪೂರ್ಣತೆಯ ಭಾವಗಳಪೂರ್ಣವಿರಾಮದಂತೆ.ನನಗೆ… ಮನದ ಮಾತುಗಾರನಮಂತ್ರಿಸಿ ವಶೀಕರಿಸುವಮಾಘಮಾಸಮಡದಿ ಮನದರಸರಮನಸುಗಳ ಹೊಸೆದುಪ್ರತಿ ಹೊತ್ತಿನ ಪಾಲುದಾರಿಕೆಯಪರಮ ಸುಖಕೆಮುತ್ತುಗಳ ಮಳೆಗರೆಸುವಪ್ರತಿ ಮಾಗಿಯೂಇಲ್ಲಿ ಹೊಸ ವಸಂತಗಳೇ…… ಕಿಟಕಿಯಿಂದತೂರಿ ಬರುವಹೊಂಗಿರಣಗಳ ಅಲ್ಲೇತಡೆದು ನಿಲ್ಲಿಸುವೆ.ಇನಿಯನಮುದ ನೀಡುವಮುದ್ದು ಪ್ರೀತಿಯಕದ್ದು ನೋಡದಿರಲೆಂದು…. ಅಂತದ್ದೊಂದುಸವಿ ಸಾಕಾಗುವಷ್ಟುಸವಿದೇಬಿಡುವೆ.ಸುಮ್ಮನಿರಿಚಿಲಿಪಿಲಿ ರಾಗಗಳೇ.ಬೆಳಗಿನ ಕಾತರಿಕೆ ನನಗಿಲ್ಲ. ಇಂದಿನಕನಸುಗಳ ಕೈಚೆಲ್ಲಿದರೆಮನಮುಂದಿನ ಮಾಗಿಕಾಲಕ್ಕಾಗಿಕಾದು ಕೂರಬೇಕು….ಹೆಪ್ಪುಗಟ್ಟಿದ ಹಲವು ನೆನಪುಗಳಜೊತೆಗೆ…… ಮಾಗಿ-ಶಿಶಿರ-ಚಳಿಗಾಲ *******************************

ಅಂಕಣ ಬರಹ ಕಬ್ಬಿಗರ ಅಬ್ಬಿ  ಕ್ಯಾನುವಾಸು ಮತ್ತು ಕಾವ್ಯ ರಾತ್ರೆ ಆಗಷ್ಟೇ ಲಂಗದಾವಣಿ ತೊಟ್ಟು ಕುಳಿತಿತ್ತು. ಆ ಹೊತ್ತಿಗೆ ಆ ಪುಟ್ಟ ಮನೆಯೊಳಗೆ ಬಡಕಲು ಕ್ಯಾಂಡಲ್ ಮಾತ್ರ ಉರಿಯುತ್ತಿದೆ. ನಸುಗೆನ್ನೆಯ ಹೊಳೆವ ಕಣ್ಣುಗಳ ಬಾಲಕ ಮತ್ತು ಆತನ ಉಬ್ಬುಗೆನ್ನೆಯ ಕನಸುನೇತ್ರದ ತಂಗಿಗೆ ತಿನ್ನಲು ಬರೇ ಎರಡು ಸ್ಲೈಸ್ ಬ್ರೆಡ್ ಮಾತ್ರ ಉಳಿದಿದೆ. ಆ ಮಕ್ಕಳ ಅಮ್ಮ ಬ್ರೆಡ್ ಬಿಸಿ ಮಾಡಿಕೊಡಲು ವಿದ್ಯುತ್ ಪೂರೈಕೆ ಇಲ್ಲದೇ, ಆ ಛಳಿಯಲ್ಲೂ ತಣ್ಣಗಿನ ಬ್ರೆಡ್ ಮಕ್ಕಳಿಗೆ ತಿನ್ನಲು ಕೊಡುತ್ತಾಳೆ. ಎರಡನೇ ಮಹಾಯುದ್ಧದ […]

ಶಬ್ದಗಳ ಸಂತೆಯಲ್ಲಿ.

ಕವಿತೆ ಶಬ್ದಗಳ ಸಂತೆಯಲ್ಲಿ. ವೀಣಾ ನಿರಂಜನ್ ಇಂದುಶಬ್ದಗಳು ಅರ್ಥದ ಒಜ್ಜೆ ತಾಳಲಾರದೆನನ್ನ ಮನೆಯ ಬಾಗಿಲಿಗೆ ಬಂದು ನಿಂತಿವೆನಾನೀಗಅವುಗಳಿಗೆ ಸರಳವಾದ ಉಡುಪು ತೊಡಿಸಿಮತ್ತೆ ಮರಳಿ ಕಳುಹಿಸಬೇಕಾಗಿ ಬಂದಿದೆ. ** ಸುಳ್ಳು ಸಂಚರಿಸುವಾಗಶಬ್ದಗಳ ಜಾತ್ರೆಯೇ ನೆರೆದಿರುತ್ತದೆಸತ್ಯ ಹೊರಗಡಿಯಿಡುವಾಗಮೌನದ ಮೆರವಣಿಗೆ ನಡೆಯುತ್ತದೆ ** ಶಬ್ದಗಳು ನಾಚಿದಾಗಮೌನ ಮಾತಾಡುತ್ತದೆಶಬ್ದಗಳು ಬಿಂಕ ತೋರಿದಾಗಮೌನ ನಾಚುತ್ತದೆ ** ಅಕ್ಷರಗಳ ಹೆತ್ತದಕ್ಕೆಪದಗಳಿಗೆ ಬೆರಗಾಗಿತ್ತುಪದಗಳ ಬವಣೆಗೆಅಕ್ಷರಗಳೇ ಸಾಕ್ಷಿಯಾಗಿದ್ದವು. **********************************

ದೊಡ್ಡವರ ಮನೆಯ ಸಣ್ಣ ಕತೆ

ಅನುಭವ ದೊಡ್ಡವರ ಮನೆಯ ಸಣ್ಣ ಕತೆ ವೀಣಾ ನಿರಂಜನ್ ಈ ದೊಡ್ಡವರ ಮನೆಯ ಕತೆಗಳು ಬಹಳ ಸ್ವಾರಸ್ಯಕರವಾಗಿರುತ್ತವೆ. ನಾನು ಇಲ್ಲಿ ಹೇಳ ಹೊರಟಿರುವುದು ಒಂದು ಸ್ಯಾಂಪಲ್ ಅಷ್ಟೇ. ಆ ದಿನ ಮನೆ ಮಂದಿಯೆಲ್ಲ ಸಡಗರದಿಂದ ಓಡಾಡುತ್ತಿದ್ದರು. ಮನೆಯ ಮಗನ ಹುಟ್ಟುಹಬ್ಬ ಎಂದರೆ ಕೇಳಬೇಕೆ. ಶೇಖರ್ ಬಾಬು ಬೆಳಿಗ್ಗೆಯೇ ಮಗನಿಗೆ ಇಂಪೋರ್ಟೆಡ್ ಶಾಂಪೂ, ಸೋಪು ಹಾಕಿ ಹಿತವಾಗಿ ಸ್ನಾನ ಮಾಡಿಸಿದರು. ಮಕ್ಕಳಿಬ್ಬರೂ ಸಂಭ್ರಮದಿಂದ ತಂದೆಗೆ ನೆರವಾದರು. ಶರಾವತಿ ಸಂಜೆ ಪಾರ್ಟಿಗೆ ಯಾರ್ಯಾರನ್ನು ಕರೆಯಬೇಕು, ಏನೇನು ಆರ್ಡರ್ ಮಾಡಬೇಕು ಅದೆಲ್ಲವನ್ನೂ […]

ಜೀವನ ಪಯಣ (ಸುನೀತ ಕಾವ್ಯ)

ಸುನೀತ ಕಾವ್ಯ ಜೀವನ ಪಯಣ (ಸುನೀತ ಕಾವ್ಯ) ಸುನೀತ (ಐದು ಮಾತ್ರೆಯ ನಾಲ್ಕು ಗಣಗಳ ಹದಿನಾಲ್ಕು ಸಾಲುಗಳು) ಶುಭಲಕ್ಷ್ಮಿ ಆರ್ ನಾಯಕ ಸಾಗುತಿದೆ ಅನವರತ ಜೀವನ ರಥದ ಪಯಣಹಲವು ಮಧುರ ವಸಂತಗಳ ಹರೆಯವನು ದಾಟಿಕಾಲ ಗುರುವ ವೀಣೆಯ ತಂತಿಯ ಸದಾ ಮೀಟಿಸದ್ದುಗದ್ದಲದಿ ಮಾಡದೇ ಸಮಯದ ಹರಣ ಏಳು ಬೀಳುಗಳನು ಸಮ ದೂಗಿಸುವ ತಾಳ್ಮೆಯುಬದುಕಿನ ಸತ್ಯವನು ಅರಿತು ಅರುಹುವ ಛಲದಲ್ಲಿಸಾಗಿದೆ ಪಯಣವು ಗುರಿ ಸೇರೋ ತವಕದಲ್ಲಿಪಯಣದಲಿ ಬೇಕೆಮಗೆ ಎಂದಿಗೂ ಭರವಸೆಯು ಬಂದ ಸೋಲು ಗೆಲುವುಗಳ ಅನುನಯದಿ ಸವಿಯುತಮಾರ್ಗದ ಎಡರು […]

ಸುಳಿಗಾಣ

ಸಣ್ಣ ಕತೆ. ಸುಳಿಗಾಣ ಶೋಭಾ ನಾಯ್ಕ .ಹಿರೇಕೈ ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ […]

ನನ್ನ ಕವಿತೆ

ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ […]

ಅಹಮ್ಮಿನ ಕೋಟೆ

ಕವಿತೆ ಅಹಮ್ಮಿನ ಕೋಟೆ ಚಂದ್ರಪ್ರಭ ಬಿ. ‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿನಿನ್ನ ನಲ್ನುಡಿ ಎದುರು ಗಾಳಿಯೊಡನೆತೂರಿ ಹೋದುದು ಅರಿವಿಗೇ ಬರಲಿಲ್ಲಆಹಾ! ಏನದರ ಸೊಗಸು…ಖೋಡಿ ಮನಸ್ಸಿನ ಹತ್ತು ಹದಿನಾರು ಕನಸುಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕುನಡು ಮಧ್ಯಾಹ್ನದ ನಿಗಿನಿಗಿ ಕೆಂಡಮಂಜು ಕರಗಿ ಒಳಹೊರಗೆಲ್ಲ ಕಡು ತಾಪಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತುತುದಿ ಮೊದಲಿಲ್ಲದ ತಪ್ಪು ಒಪ್ಪುಗಳಗುಣಾಕಾರ ಭಾಗಾಕಾರ… ಮುಂಬರಿಯಲು ತವಕಿಸುವ ಹೃದಯನಿಂತೇ ಬಿಡುವ ಹಠಮಾರಿ ಹೆಜ್ಜೆಕ್ಷಮಿಸು ಗೆಳೆಯ, ನಿನ್ನಂತೆ […]

Back To Top