ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
“ಕಂಗಳ ಹೊಳಪು”


ಹೂವಿನ ಪರಿಮಳ ಬಣ್ಣದಲ್ಲಿರದೆ
ಸುಗಂಧವನೇ ಸೂಸುತಿದೆ
ಸಹನೆಯ ತೊರೆದು ನಡೆಯಲು ಜಗದಲ್ಲಿ
ಪ್ರೀತಿಯೇ ಸೋಲುತಿದೆ.
ಕಾಡಿನ ದಾರಿಯು ನಾಡನು ಸೇರಲು ಪ್ರಕೃತಿಯೇ ನಗುತಲಿದೆ
ತಿರುಗುವ ಮನುಜನ ಕಂಡು ಭೂಮಿಯೂ ತಿರುಗುತ ನೋಡುತಿದೆ.
ಕಂಗಳ ಹೊಳಪಿಗೆ ಮುತ್ತನು ಹುಡುಕಲು
ಮನಸ್ಸು ಕಡಲಾಳಕ್ಕೆ ಇಳಿಯುತಿದೆ
ಬೆಳದಿಂಗಳ ಚುಕ್ಕಿಯು ಮೆಲ್ಲನೆ ಭೂಮಿಗೆ ಜಾರುತಿದೆ.
ಸ್ವರಗಳು ಪ್ರಾಸವ ಸೇರಿ ಛಂದಸ್ಸಿನಲ್ಲಿ ಅಡಗುತಿವೆ
ಭಾವಗಳೆಲ್ಲವೂ ಲಯದಲ್ಲಿ ಸೇರಿ ಸಾಹಿತ್ಯವನ್ನು ನೀಡುತಿವೆ.
ಮನ್ಸೂರ್ ಮುಲ್ಕಿ



