ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಿಭಕ್ತ ಕುಟುಂಬದಲಿ ಜನಿಸಿ
ಅಸ್ಪೃಶ್ಯತಾ ಅಂಧಕಾರವನು ಅಳಿಸಿ
ಜಾತೀಯತೆ ಹೊಡೆದೊಡಿಸಲು
ಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧-

ಅಸ್ಪೃಶ್ಯತೆಯ ಕಹಿಯನು ಉಂಡು
ಅವಮಾನದಿ
ಕುಲುಮೆಯಲಿ ಬೆಂದು
ಬದುಕಿನ ಬವಣೆಗಳಲಿ ನೊಂದು
ಅಸಹಾಯಕತೆಯ ಕಣ್ಣಿರಲಿ ಮಿಂದು
ದೀನ-ದುರ್ಬಲರ ಧ್ವನಿಯಾಗಿಹರು  -೨-

ಸಮಾನತೆಯ ಲೇಖನಿ ಹಿಡಿದು
ಸಮ ಸಮಾಜಕೆ ಸಂವಿಧಾನ’ವ ಬರೆದು
ಸರ್ವರಲೂ ಸಮಭಾವ ತಂದು  
ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿ
ಆಗಿಹರು  -೩-

ಅಕ್ಷರಗಳನು ಆಯುಧವಾಗಿರಿಸಿ
ಅಂಧಶ್ರದ್ಧೆಗಳನು ಬೇಧಿಸಿ
ಲೇಖನಿಯ ಮಸಿ
ಕೋಟಿ-ಕೋಟಿ ಜನಗಳಿಗೆ ಬಿಸಿ
ಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪-

ಅನಿಷ್ಟಗಳ ನಡುವಿಂದ ಸಿಡಿದು
ಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದು
ಜ್ಞಾನಕ್ಷೀರವನು ಕುಡಿದು
ಘರ್ಜಿಸಿಹರು ಮಹಾ ನಾಯಕರಿವರು
ಅಂಬೇಡ್ಕರರು -೫-


About The Author

1 thought on “ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು””

Leave a Reply

You cannot copy content of this page

Scroll to Top