ಅನುವಾದ ಸಂಗಾತಿ
ಮಲಯಾಳಂ ಕವಿತೆ
“ಒಂದು ನುಡಿ?”
ಮೂಲ ತಾಜುದ್ದೀನ್ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ.


ಸಹ ಪ್ರಯಾಣಿಕನೇ…….,
ಈ ತಿರುವಿನಲ್ಲಿಯೂ
ಅಥವಾ
ಮುಂದಿನ ತಿರುವಿನಲ್ಲಿಯೂ
ನಾವು ಬೇರೆಯಾಗುತ್ತೇವೆ….!
ನೀನು ಪುನಃ
ಯಾತ್ರೆಯನ್ನು ಮುಂದುವರಿಸುವಾಗ
ನನ್ನ ‘ಶವಪೆಟ್ಟಿಗೆ ‘ಯನ್ನು
ಹೊತ್ತುಕೊಂಡು ಸಾಗಬೇಡಾ….!!!.
ಯಾರದ್ದರೂ
ನನ್ನ ಕುರಿತು ಕೇಳಿದ್ದರೇ…….,
ನಾನು
ಜೊತೆಗೆ ಇದ್ದು
ನಷ್ಟವಾದ ದುರಾದೃಷ್ಟವಂತ….!
ಬಾಳಿನಿಂದ ದೂರವಾದ
ಪಾತ್ರದಾರ……
ಎಂದು ಮಾತ್ರ ಹೇಳಬೇಕು….!
‘ ದರಿದ್ರ’ನಾಗಿದ್ದೆ ಎಂದು
ಮಾತ್ರ ಹೇಳಬಾರದು…..!!!
ನನ್ನ ನೋಟಗಳಲ್ಲಿ
ಬರೆಯದೇ ಇದ್ದದ್ದು
ಓದಿದ್ದರೇ……
ಅಳಿಸಿ ಹಾಕಲು
ನೀನು ‘ಅವಳ ‘
ಬಳಿ ಹೇಳಬೇಕು….!!!
ನಾನು ಒಂದು
‘ಹೂವು’ ಸಹ
ಕಿತ್ತು ಹಾಕಿಯೇ
ಇಲ್ಲ….!!!.
ಮಲಯಾಳಂ ಮೂಲ: ತಾಜುದ್ದೀನ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.



