ವಿಶೇಷ ಸಂಗಾತಿ
ಜಯಲಕ್ಷ್ಮಿ ಕೆ
ಮನ ಮಂದಾರ

ಅದೊಂದು ಪದವಿ ತರಗತಿ. ಬೆಳಗ್ಗಿನಿಂದ ಲವಲವಿಕೆಯಿಂದ ವಿದ್ಯಾರ್ಥಿನಿಯೊಬ್ಬಳಿಗೆ ಆ ತರಗತಿಯಲ್ಲಿ ಉಪನ್ಯಾಸಕರೊಬ್ಬರು ಒಂದು ಪ್ರಶ್ನೆ ಕೇಳಿದರು. ಆಕೆಗೆ ಉತ್ತರಿಸಲಾಗಲಿಲ್ಲ. ಎಲ್ಲ ವಿದ್ಯಾರ್ಥಿಗಗೆದುರು ಅವಮಾನ ಆದಂತಾಗಿ ಆಕೆ ಮಂಕಾಗಿಬಿಟ್ಟಳು. ವಾರ್ಷಿಕ ಪರೀಕ್ಷೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಜೋರಾಗಿ ಹಾಡು ಹಾಡುತ್ತಾ ಅಜ್ಜಿ ಮನೆಗೆ ಹೋಗುವ ಸಂಭ್ರಮದಲ್ಲಿ ಬಟ್ಟೆಗಳನ್ನೆಲ್ಲ ಜೋಡಿಸಿಟ್ಟುಕೊಳ್ಳುತ್ತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅವನ ಅಮ್ಮ ” ನಿನ್ನನ್ನು 10 ದಿನಗಳ ಕಂಪ್ಯೂಟರ್ ತರಬೇತಿಗೆ ಸೇರಿಸಿ ಬಂದಿದ್ದೇನೆ ಆ ಬೇಸಿಗೆ ಶಿಬಿರ ಮುಗಿಸಿ ಮತ್ತೆ ಅಜ್ಜಿ ಮನೆಗೆ ಹೋದರಾಯಿತು ” ಎಂದಳು. ಹುಡುಗನ ಮನ ಮುದುಡಿತು. ರೇಷ್ಮೆ ಸೀರೆ ಉಟ್ಟುಕೊಂಡು ಅದಕ್ಕೊಪ್ಪುವ ಆಭರಣಗಳನ್ನು ತೊಟ್ಟುಕೊಂಡು ಮಹಿಳೆಯೊಬ್ಬರು ಮದುವೆ ಮನೆಯಲ್ಲಿ ಗೆಳತಿಯರ ಜೊತೆಗೆ ಮಾತನಾಡುತ್ತಾ, ನಗುತ್ತಾ ಸಂಭ್ರಮದಲ್ಲಿದ್ದರು. ಅಲ್ಲಿಗೆ ಬಂದಾಕೆ ಒಬ್ಬಳು ” ನಿಮ್ಮ ಮಗಳ ಮದುವೆ ಯಾಕೆ ತಡ ಆಗ್ತಾ ಇದೆ? ಬೇಗನೆ ಮದುವೆ ಊಟ ಹಾಕಿಸಿ ಅಲ್ಲ? ” ಎಂದಳು. ಅದನ್ನು ಕೇಳಿದ ತಕ್ಷಣ ಈಕೆಯ ಸಂಭ್ರಮ ಉತ್ಸಾಹಗಳೆಲ್ಲ ಜರ್ರೆಂದು ಇಳಿದು ಹೋಯಿತು. ಎಲ್ಲರೊಂದಿಗೆ ಹರಟುತ್ತಾ ಸಂತೋಷವಾಗಿದ್ದ ಆಕೆಗೆ ಯಾಕಪ್ಪಾ ಬಂದೆ ಎಂದು ಬೇಸರ ಆಗತೊಡಗಿ ಮೌನಕ್ಕೆ ಶರಣಾದಳು. ಕಾರ್ಮಿಕನೊಬ್ಬ ಅಕ್ಕಿ ತುಂಬಿದ ಗೋಣಿಚೀಲಗಳನ್ನು ಹೊತ್ತು ತಂದು,ತಂದು ಲಾರಿಗೆ ಲೋಡ್ ಮಾಡುತ್ತಿದ್ದಾನೆ. ಹೊಟ್ಟೆಯಲ್ಲಿ ಹಸಿವು, ತಲೆಯಲ್ಲಿ ಅಕ್ಕಿಗೋಣಿ ಜೊತೆಗೆ ನಾನಾ ಹೊರೆಗಳು. ಮನೆ ಬಾಡಿಗೆ ಕಟ್ಟದೆ ಎರಡು ತಿಂಗಳುಗಳಾದವು. ಮಗಳಿಗೆ ಮದುವೆ ಗೊತ್ತಾಗಿದೆ. ಅವಶ್ಯ ವಸ್ತುಗಳನ್ನು ಕೊಂಡುಕೊಳ್ಳಲೇಬೇಕು. ಹೇಗೇ ಲೆಕ್ಕಾಚಾರ ಹಾಕಿದರೂ ಆಯವ್ಯಯ ಸರಿದೂಗಿಸಲು ಆಗುತ್ತಿಲ್ಲ ಆತನಿಗೆ.. ಯೋಚಿಸುತ್ತಾ ಮೂಟೆ ಹೊರುವ ಶಕ್ತಿ ಕುಗ್ಗುತ್ತಾ ಇದೆ.ಆಗ ಲಕೋಟೆ ಹಿಡಿದು ಬಂದ ಒಬ್ಬಾತ ” ನಿನಗೂ ನನಗೂ ಸರ್ಕಾರಿ ಮನೆ ಮಂಜೂರು ಆಗಿದೆ. ಈಗಲೇ ಕೀ ಕೊಡುತ್ತಾರಂತೆ!” ಎಂದಾಗ ಅಪಾರ ಆನಂದದಿಂದ ಅವನ ಮನವರಳುತ್ತದೆ. ಮನಸಿನೊಂದಿಗೆ ದಣಿದಿದ್ದ ದೇಹಕ್ಕೂ ಈಗ ಮರು ಚೈತನ್ಯ ತುಂಬಿದೆ. ಉಣ್ಣದೆಯೇ ಹೊಟ್ಟೆ ತುಂಬಿದೆ. ” ಇನ್ನೊಂದಾರು ಮೂಟೆ ತುಂಬಿದರೆ ಲೋಡ್ ಫುಲ್ ಆಗುತ್ತೆ, ಕೆಲಸ ಮುಗಿಸಿ ಬಿಡುತ್ತೇನೆ, ಆಮೇಲೆ ಬೇಗ ಬರುತ್ತೇನೆ ” ಅವನ ಕಾಲುಗಳು ಚುರುಕಾದವು. ಈಗ ಬಿಸಿಲಿನ ಬೇಗೆ ಏನೂ ಅಷ್ಟಿಲ್ಲ,,
ಈ ಎಲ್ಲ ಸಂದರ್ಭಗಳಲ್ಲಿ ‘ ಮನಸು ‘ ಎಂಬುದು ಯಾವ ರೀತಿಯಲ್ಲಿ ನಮ್ಮ ನಡೆ – ನುಡಿಗಳ ಮೇಲೆ ಪ್ರಭಾವ ಬೀರುತ್ತೆ ಎಂಬುದನ್ನು ನಾವು ಗಮನಿಸಬಹುದು. ನಮ್ಮೆಲ್ಲ ಚಟುವಟಿಕೆಗಳ ಮೂಲ ಮನಸು.ಮೊಗ ಮುದುಡುವುದು, -ಅರಳುವುದು ಎಲ್ಲವೂ ಈ ಮನದಂಗಳದಲ್ಲೇ. ಸುಖ -ದುಃಖ, ಚಿಂತನ-ಮಂಥನ ಎಲ್ಲಕ್ಕೂ ಮನಸೇ ಆಗರ.ಅಗೋಚರವಾದ ಈ ಉಗ್ರಾಣ ಪ್ರಫುಲ್ಲವಾಗಿದ್ದರೆ ಮನೋವ್ಯಾಪಾರಗಳೆಲ್ಲ ಶುಭ್ರ!! ಈ ಮನಸಿನ ನೆಲೆ ಎಲ್ಲಿ? ಯಾವ ಆಕಾರದಲ್ಲಿದೆ ಅದು? ” ಮಂಥನೋ ಮಸ್ತಿಷ್ಕ ಆಲೋಚನಾ ರೂಪಂ ” ಮೆದುಳಿನಲ್ಲಿ… ಅದು ನಿರಾಕಾರ. ಆಲೋಚನೆಗಳ ಕೇಂದ್ರ ಬಿಂದು, ಅಂತರಂಗದ ಸ್ವರೂಪ.. ಕೆಲವರು ಹೇಳುತ್ತಾರೆ, “ನಾನು ಮನಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ “ಎಂದು. ಅಂಥ ದೃಢತೆಗೆ ಪ್ರಚೋದನೆ ನೀಡಬೇಕು, ಮನಸು. ದುರ್ಬಲ ಮನಸು ಸೂಕ್ಷ್ಮಾತಿಸೂಕ್ಷ್ಮ ವಿಷಯಕ್ಕೂ ಮುದುಡಿದರೆ, ಸದೃಢ ಮನಸು ಯಾವುದಕ್ಕೂ ಬಗ್ಗುವುದಿಲ್ಲ, ಕುಗ್ಗುವುದಿಲ್ಲ. ಯಾವ ಸೋಲೇ ಬರಲಿ, ಯಾರೇ ಅವಮಾನ ಮಾಡಲಿ, ಯಾವ ಕಷ್ಟವೇ ಬರಲಿ, ಎಂಥ ಸಂದರ್ಭಗಳೇ ಎದುರಾಗಲಿ, ಜಗ್ಗದೆ ಮುಂದೆ ನಡೆವ ತಾಕತ್ತು ಇವರದ್ದು.” ಈಸಬೇಕು ಇದ್ದು ಜೈಸಬೇಕು ” ಎನ್ನುವ ಪ್ರವೃತ್ತಿಯವರಿವರು. ಕಷ್ಟ -ಕಾರ್ಪಣ್ಯಗಳೇ ಭಯ ಪಟ್ಟು ಹಿಂದೆ ಸರಿಯಬೇಕು ಇವರ ಎದೆಗಾರಿಕೆಗೆ! ಇಂದಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಜೀವಕ್ಕೇ ಸಂಚಕಾರ ತಂದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಳುತ್ತಿರುವ ಮನಸು ನಗಲು, ನಗುತ್ತಿರುವ ಮನಸು ಅಳಲು ಒಂದು ಘಳಿಗೆ ಸಾಕು. ಮಾನಸಿಕ ಏಳುಬೀಳಿನ ಕತೆಗಳು ನಮ್ಮೆಲ್ಲರ ಬದುಕಲ್ಲೂ ಎದುರಾಗುತ್ತವೆ. ಕೆಲವರು ಬಹಳ ಬೇಗ ಇವುಗಳಿಂದ ಹೊರಬರುತ್ತಾರೆ. ಮತ್ತೆ ಕೆಲವರು ಅವುಗಳ ಕೋಟೆಯೊಳಗೆ ಭದ್ರವಾಗಿ ಉಳಿದುಬಿಡುತ್ತಾರೆ.ಇಂತಹವರೇ ಖಿನ್ನತೆಗೆ ಒಳಗಾಗುವವರು. ಹಾಗೆಂದು ಮಾನಸಿಕ ಖಿನ್ನತೆಗೆ ಬೇರೆ ಕಾರಣಗಳು ( ದೈಹಿಕ ನರನಾಡಿ ಸಂಬಂಧಿತ )ಇಲ್ಲವೆಂದು ಹೇಳಲಾಗದು.. ಇತ್ತೀಚೆಗೆ ನಮ್ಮ ಯುವ ಜನಾಂಗವನ್ನು ಕಾಡುವ ದೊಡ್ಡ ಸಮಸ್ಯೆ ಎಂದರೆ ಮಾನಸಿಕ ಖಿನ್ನತೆ.
ಪೋಷಕರು ಮಕ್ಕಳನ್ನು ಮಾನಸಿಕವಾಗಿ ಪ್ರಬಲರನ್ನಾಗಿ ಮಾಡಬೇಕು. ತಮ್ಮ ಮಕ್ಕಳು ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿದರೆ ಪೋಷಕರು ಉದಾಸೀನ ತೋರದೆ ಎಚ್ಛೆತ್ತುಕೊಳ್ಳಬೇಕು. ಯೋಗ, ಧ್ಯಾನ, ಆಟ, ಸಾಂಸ್ಕೃತಿಕ ಚಟುವಟಿಕೆ ಇತ್ಯಾದಿಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿಸಬೇಕು.ಖಿನ್ನತೆಗೆ ಜಾರದಂತೆ ಜಾಗ್ರತೆ ವಹಿಸಬೇಕು.
ನಾವು ನಮ್ಮ ಜೀವನದ ಬಹು ಭಾಗವನ್ನು ಕಳೆಯುವುದು ನಮ್ಮ ಮನಸಿನೊಂದಿಗೆ.. ಆದ್ದರಿಂದ ಮನಸು ಸುಂದರವಾಗಿ, ಸಂತಸಭರಿತವಾಗಿರಬೇಕು.
ನಿಸರ್ಗದ ಸೊಬಗನ್ನು ಸವಿಯುತ್ತಿದ್ದರೆ ಮನಸಿಗೆ ಸಿಗುವ ಖುಷಿಯೇ ಬೇರೆ. ಪ್ರಕೃತಿಯನ್ನು ನೋಡುತ್ತಿದ್ದರೆ ಜಗತ್ತು ಸುಂದರ ಎನಿಸುತ್ತದೆ. ಬಾಳು ಬೋರ್ ಅನಿಸಲ್ಲ. ನಕಾರಾತ್ಮಕ ಭಾವನೆಗಳೆಲ್ಲ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತವೆ.
ಸದಾ ಕ್ರಿಯಾಶೀಲರಾಗಿರುವವರಿಗೆ ಖಿನ್ನತೆ ಕಾಡುವುದಿಲ್ಲ ಮನಸು ಉಲ್ಲಾಸದಿಂದಿರಲು ಉತ್ತಮ ಹವ್ಯಾಸಗಳು ಸಹಕಾರಿ. ಅಭಿರುಚಿಗೆ ತಕ್ಕಂತೆ ಹವ್ಯಾಸಗಳನ್ನು ಬೆಳೆಸಿಕೊಂಡವರಿಗೆ ಆಗಾಗ ಕಾಡುವ ಬೇಸರಿಕೆ ಚಿಂತೆಗಳು ಇಲ್ಲವಾಗಿಬಿಡುತ್ತವೆ. ಯೋಚನೆಗಳು ಮನದಲ್ಲಿ ಮನೆ ಮಾಡದಂತೆ ತಡೆಯುವ ಶಕ್ತಿ ಹವ್ಯಾಸಗಳಿಗಿವೆ. ಈ ಹವ್ಯಾಸಗಳನ್ನು ಎಳವೆಯಿಂದಲೇ ಮೈಗೂಡಿಸಿಕೊಳ್ಳಬೇಕು. ಚಿತ್ರಕಲೆ, ಸಂಗೀತ, ಓದುವಿಕೆ, ಬರಹ, ಆಟ, ಪ್ರಕೃತಿ ವೀಕ್ಷಣೆ, ಅಪರೂಪದ ವಸ್ತುಗಳ ಸಂಗ್ರಹಣೆ, ಇತ್ಯಾದಿಗಳಲ್ಲಿ ತಮ್ಮ ಮಕ್ಕಳ ಒಲವು ಯಾವುದರತ್ತ ಹೆಚ್ಚಾಗಿ ಇದೆ ಎನ್ನುವುದನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿಯನ್ನು ಪೋಷಕರು ವಹಿಸಬೇಕು. ಕೇವಲ ಶಾಲೆ, ಓದು, ಮಾರ್ಕು, ರಾಂಕ್ ಎಂದು ಏಕಮುಖವಾಗಿ ಮಕ್ಕಳ ಮೇಲೆ ಒತ್ತಡ ಹಾಕದೆ ಅವರ ಮನಸ್ಸನ್ನು ಸದಾ ಕಾಲ ಉಲ್ಲಾಸವಾಗಿ ಇರಿಸಬಲ್ಲ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳಲು ಅನುವು ಮಾಡಿ ಕೊಡಬೇಕು. ಯಾರಿಗೆ ಗೊತ್ತು.. ಕೆಲವೊಂದು ಹವ್ಯಾಸಗಳು ಮೇರು ಪ್ರತಿಭೆಗಳಾಗಿ ಬೆಳಗಲೂಬಹುದು. ಕುಂಚ ಕಲಾವಿದ ಬಣ್ಣಗಳ ಒಡನಾಟದಲ್ಲಿ ಎಷ್ಟು ಆನಂದ ಪಡೆಯಬಲ್ಲ!! ಗಿಟಾರ್ ನುಡಿಸುವ ಯುವಕನ ಏಕಾಗ್ರತೆ, ತನ್ಮಯತೆಯ ನಡುವೆ ಯಾವ ಖಿನ್ನತೆ ನುಸುಳೀತು? ಹವ್ಯಾಸಗಳಿಲ್ಲದ ವ್ಯಕ್ತಿ ಏಕಾಂಗಿಯಾಗಿ ಕುಳಿತರೆ ಇಲ್ಲ ಸಲ್ಲದ ಯೋಚನೆಗಳು ನುಗ್ಗಿ ಬಂದು ಕಾಡಲಾರಂಭಿಸುತ್ತವೆ. ಮನಸು -ದೇಹ ಆರೋಗ್ಯವಾಗಿರಬೇಕಾದರೆ ಸದಾ ಕ್ರಿಯಾಶೀಲರಾಗಿರಬೇಕು. ಮನಸು ಮಂದಾರವಾಗಿರಲು ಆಸಕ್ತಿಗೆ ಅನುಗುಣವಾದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳೋಣ.

ಜಯಲಕ್ಷ್ಮಿ ಕೆ.

Very well written Jayalakshmi.
God bless your talent of writing to help people live a better life.