ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ನಾಳೆಯ ಹಾದಿಯಲಿ

ನೆಲದ ಹಸಿರು
ಭೂತಾಯಿ ಒಡಲಲ್ಲಿ
ಕಾಯುತಿದೆ ನಳನಳಿಸಲು
ಹೂವ ಕಂಪದು
ಮೊಗ್ಗ ಹೊಕ್ಕಳಲ್ಲಿ
ಕಾತರಿಸಿದೆ ಸುವಾಸಿಸಲು
ನಗುವ ಕೂಸದು
ಅವ್ವನ ಮಡಿಲಲ್ಲಿ
ಕಾಯ್ದಿದೆ ನಾಳೆ ಕನಸಿನಲ್ಲಿ
ಪ್ರೇಮಿ ಜೋಡಿಯದು
ಮೈಯ ಮಿಲನದಲ್ಲಿ
ಕಂಡಿದೆ ನಾಳೆ ಬೆಳಕಲ್ಲಿ
ಗಾಢ ತಮಂಧವದು
ಬರುವ ಬೆಳಕಿನಲ್ಲಿ
ಕಾಯ್ದಿದೆ ಕಣ್ಮಿಂಚಿನಲ್ಲಿ
—————–
ಎಸ್ಕೆ ಕೊನೆಸಾಗರ ಹುನಗುಂದ
