ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಶಕವೈದು ಶತಮಾನಗಳ ಸಂಸ್ಕೃ ತಿಯು  ನಮ್ಮದು.
ಚಿತ್ರ ವಿಚಿತ್ರ, ವೈಪರೀತ್ಯಗಳ
ಬಂಧನದ  ಬದುಕಿದು.

ಸತ್ಯಾನ್ವೇಷಣೆಯಲ್ಲಿ, ಸೃಷ್ಟಿಗರ್ಭವ ಹೊಕ್ಕು,
ವೇದ ಬ್ರಹ್ಮರು ಅಂದು, ಧರ್ಮನೀ ತಿಯ ಸಾರೇ,
ಸ್ವಾರ್ಥಮೌಢ್ಯತೆಯಲ್ಲಿ, ಮುಳುಗಿ ತೇಲುತ ನಾವು,
ಋಷಿಪದವಿತ್ತ  ಏಕಾತ್ಮ ಬ್ರಹ್ಮವನು ಅರಿಯವು.

ಲೋಕದೋನ್ನತಿಯಲ್ಲಿ, ಜಾತಿ ಸಮ ತೆಯ  ಬಯಸಿ,
ಶಾಂತಿ ಸಹನೆಯ ಬಾಳುವೆ, ಗು ರಿಯ ಆಧರಿಸಿ,
ಬುದ್ಧ ಬಸವರ  ನುಡಿಯ, ಗಾಂಧಿ ಯಾ   ನಡೆಯ,
ದಿಕ್ಕರಿಸಿ  ಅವರ, ಬಲಿದಾನ ಪಡೆ ದವು.

ಯಂತ್ರತಾಂತ್ರಿಕತೆಯಲ್ಲಿ, ಜ್ಞಾನ ವಿಜ್ಞಾನದಲಿ,
ಉತ್ತಮೋತ್ತಮರೆಂದು , ಗರ್ವ ಪಡುತಿರುವಲ್ಲಿ ,
ಜಗವು  ಮೆಚ್ಚುವ ತೆರದಿ, ಮುನ್ನ ಡೆಯುತಿರುವೆವು.
ಗ್ರಹ ತಾರೆಗಳತ್ತ  ಲಗ್ಗೆಯಿತ್ತ, ನಾವೂ ಗಣ್ಯರು.

ಹಾದಿ ಬೀದಿಗಳಲ್ಲಿ , ಹೋಮಹವ ನವ ನಡೆಸಿ,
ವಕ್ರದೃಷ್ಟಿಯ ಗ್ರಹಗಳನು, ಶಾಂತ ಪಡಿಸಿ,
ಮಾಟಮಂತ್ರಕೆ ಒಲಿದು, ರೋಗ ಶ ಮನವಗೊಳಿಸೊ,
ಕ್ಷುದ್ರಾತ್ಮರು, ಚಂಡಿ ಮಾರಮ್ಮರು ಇಲ್ಲಿ ಮಾನ್ಯರು.

ಉಜ್ವಲಪರಂಪರೆಯ, ಭವ್ಯ ಭಾ ರತ  ಚರಿತೆ,
ತ್ಯಾಗ ಭೋಗ, ಯೋಗಿವರೇಣ್ಯರ,
ಕರ್ಮ ಭೂಮಿ.
ಲೋಕತಂತ್ರಪಾಲನೆಯ, ಧರ್ಮ ನಿರಪೇಕ್ಷತೆ,
ಸಿದ್ಧಾಂತವನು ನಂಬಿರುವ, ಜಾತ್ಯ ತೀತರು ನಾವು.

ಅಧಿಕಾರದ ಉಮತ್ತಿನಲಿ, ಡಂ ಭಾಚಾರದಲಿ,
ಮೆರೆವಲ್ಲಿ, ತತ್ವಾದರ್ಶಗಳಿಗೆ  ತಾ ಣವೆಲ್ಲಿ.
ಮತ ಮತಗಳಲ್ಲಿ, ದ್ವೇಷ ಅಸೂಯೆ ಕೆರಳಿ,
ಸೃಷ್ಟಿಕರ್ತನ ಹೆಸರಿನಲಿ, ಕಾದಾಡು ತಿಹವು.

ಸರ್ವರಿಗೆ ಸಮಪಾಲು, ಸರ್ವ ರೊಂದಿಗೆ ಬಾಳು,
ಸಿದ್ಧಾಂತದೊಳೆಮ್ಮನು, ನಮಗೆ ನಾವೇ ಬಂಧಿಸಿ,
ಗತಿಸಿದ ತ್ರೇತಾಯುಗದ, ಸುಖೀ ರಾಜ್ಯ ಕನಸ ,
ಚಪ್ಪರಿಸಿ, ಅಬ್ಬರಿಸಿ, ಕಾಣುತಲಿ ಹವು.

ತನ್ನದು ತನ್ನವರ, ಜಾತಿ ಕುಲ ಬಾಂಧವರ,
ಸುಖವನು ಬಯಸೊ, ಭ್ರಷ್ಟವ್ಯಯ ಸ್ಥೆಯಲಿ,
ಮಿತಿ ಮೀರಿದ ಅಂತರ, ಬಡವ ಬಲ್ಲಿಗರಲ್ಲಿ,
ಸುಖೀ ರಾಜ್ಯದ ಕನಸು, ನನಸು, ಇನ್ನೆಲ್ಲಿ?

——————-

About The Author

Leave a Reply

You cannot copy content of this page