ಜಾತ್ರೆ ಉತ್ಸವಗಳಲ್ಲಿ ಎಲ್ಲಿ ನೋಡಿದರೂ ವಿವಿಧ ಹಣ್ಣು ಹಂಪಲ, ಬೆಂಡು ಬತ್ತಾಸು ಚುರುಮುರಿ, ಜೋಕಾಲಿಗಳು, ಮಕ್ಕಳ ಆಟದ ರೈಲು ಒಂದೇ ಎರಡೇ ಮುಂದೆ ಸಾಗಿದಂತೆ ಗೋಬಿ ಮಂಚೂರಿ, ಪಾನಿ ಪುರಿ, ಸೇವ್ ಪುರಿಯ ಘಮಲು  ಅಲ್ಲಿ ಬೇಯಿಸಿದ ಪಾಪ್ಕಾರ್ನ ಹೀಗೆ ದೇವಸ್ಥಾನದ ಉತ್ಸವ ಮೂರ್ತಿಗೂ ಮುನ್ನ ಇವುಗಳತ್ತ ಯುವಕರ ಮಕ್ಕಳ ನೆಟ್ಟ ನೋಟ ಬರುವಾಗ  ಅವುಗಳನ್ನು ಆಸ್ವಾದಿಸುವ ಚಪಲ ವಿಪುಲವಾಗುತ್ತದೆ. ಇದಕ್ಕಿಂತ ಮಹತ್ವದೆಂದರೆ  ತನ್ನೂರಿನ ಜಾತ್ರೆಗಾಗಿ ಸಂಬಂಧಿಕರನ್ನು ಆತ್ಮೀಯರನ್ನು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವದು. ಹೊಟ್ಟೆಪಾಡಿಗಾಗಿ  ಇಲ್ಲವೆ ಉನ್ನತ ವ್ಯಾಸಂಗಕ್ಕಾಗಿ ವಲಸೆ ಹೋದ ಕುಟುಂಬಸ್ಥರು ಸಂಪ್ರದಾಯದ ಕಟ್ಟು ಪಾಡಿನಂತೆ ಜಾತ್ರೆ ನಡೆವ ಸ್ಥಳದಲ್ಲಿ ಹದಿನೈದರಿಂದ ಇಪ್ಪತ್ತು ದಿನ ಎಲ್ಲರೊಡನೆ ಬೆರೆತು ಖರ್ಚುವೆಚ್ವವನ್ನು ಭಾಗಿಸಿ, ಇದ್ದುದರಲ್ಲೇ ತೂಗಿಸಿ ಬಹಳ ವರ್ಷದ ನಂತರ ನಡೆವ ಜಾತ್ರೆಗೆ ಹರಸಾಹಸ ಪಟ್ಟು ಮನೆಯ ಸ್ವಚ್ಛತೆಯಿಂದ  ಬಂದವರ ಅತಿಥಿ ಸತ್ಕಾರಕ್ಕಾಗಿ ಉಡುಗೊರೆಯಾಗಿ ನೀಡುವ ಬಟ್ಟೆ ಬರೆಯಿಂದ  ದಿನಸಿಯವರೆಗೂ ತಿಂಗಳುಗಟ್ಟಲೇ ಪರದಾಡುತ್ತ ವ್ಯವಸ್ಥೆ ಮಾಡುತ್ತಲೇ ಇರುತ್ತಾರೆ. ಆದರೆ ಈ ಪ್ರೀತಿ, ವಿಶ್ವಾಸ ಯಾವಾಗಲೂಇದ್ದರೆ ತುಂಬಾ  ಸಂತೋಷವಾಗುತ್ತದೆ ಅಲ್ಲವೇ?


ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡರೆ ಕೂಗಿ ಕರೆಯದೇ
ತನ್ನ ಕುಲವನೆಲ್ಲವನು
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲ ಸಂಗಮದೇವ”

ಎಂಬ ಬಸವಣ್ಣನವರ ವಚನ ಸರ್ವಕಾಲಕೂ ಸ್ತುತ್ಯಾರ್ಹವಾಗಿದೆ.
ಕಾಗೆ ಆಹಾರ ಪದಾರ್ಥವನು ಕಂಡರೆ ತಾನೊಂದೇ ತಿನ್ನದೇ ತನ್ನ ಇತರ ಕೋಳಿಗಳ ಜೊತೆಗೆ ತಿನ್ನುತ್ತದೆ.ಮಾನವರಂತೆ ಎಲ್ಲವೂ ನಮಗೆ ಇರಲಿ ಎಂಬ ಸ್ವಾರ್ಥವಿರದು.ಬಾಃಧವ್ಯಗಳು ಕೂಡ ಆತ್ಮೀಯತೆಯಿಂದ ವ್ಯವಹಾರಿಕತೆಯೆಡೆಗೆ ಹೊರಳುತ್ತಿದೆ. ಹಬ್ಬ ಹರಿದಿನಗಳಲ್ಲಿ ರಂಗೋಲಿಯಿಂದ ಸಿಹಿಅಡುಗೆ ತಯಾರಿವರೆಗಿನ ಕೆಲಸದಲ್ಲಿ ಜವಾಬ್ದಾರಿ ಹಂಚಿಕೆ ಖುಷಿಯೊಂದಿಗೆ ಹಾಡು ಹೇಳುತ್ತ ತಮ್ಮ ಕಾಲದ ಧಾರ್ಮಿಕ ವಿಧಿ ವಿಧಾನಗಳನು ತಿಳಿಸುತ್ತ ಅಡುಗೆಯ  ಪರಿಮಳ ಪದೇ ಪದೇ ಅಡುಗೆ ಮನೆ ಇಣುಕುವ ಪುಟಾಣಿಗಳ ಕಲರವ ಮಂಗಳಾರತಿಗೆ  ಭಜನೆಯ ಹಾಡು ಊಟಕ್ಕೆ ಗ್ರೀನ್ ಸಿಗ್ನಲ್  ಸಿಕ್ಕಂತೆ ತಾವು ಕುಳಿತುಕೊಳ್ಳುವ  ಪಂಕ್ತಿ ನೀಡುವವರ ಸಂಕ್ತಿ ತುಂಬಾ  ಸಂತಸ ಕೊಡುತ್ತಿತ್ತು. ಇದು ತುಂಬು ಕುಟುಂಬದ ಹಬ್ಬದ ಆಚರಣೆ ಸಿಗುವದು ತುಂಬಾ ಅಪರೂಪವಾಗಿದೆ.

ರಮೇಶನ  ಅಣ್ಣ ಹಳ್ಳಿಯಲಿ ವಾಸ ಮಾಡುತ್ತಿದ್ದ. ರಮೇಶನ ತಾಯಿ  ಇವನ ಮದುವೆಯ ನಂತರ  ಶಿವನ ಪಾದ ಸೇರಿದ್ದಳು. ರಮೇಶ  ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ 10 ವರ್ಷ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳು. ಅವನ ಅಣ್ಣನಿಗೆ ಒಂದು ಗಂಡು ಒಂದು ಹೆಣ್ಣು. ಮಗಳ ಮದುವೆಯಾಗಿತ್ತು. ಹಬ್ಬ ಹರಿದಿನಗಳಲ್ಲಿ ರಮೇಶ ತಂದೆಗೆ ಹಾಗೂ ಅಣ್ಣನ ಕುಟುಂಬದವರಿಗೆ ತನ್ನ ಕುಟುಂಬದವರನ್ನು ಸೇರಿಸಿ ಬಟ್ಟೆ, ದಿನಸಿ ತರುತ್ತಿದ್ದರು. ೧ಜ ವರ್ಷದ ಜಾತ್ರೆ ಒವರ ಹಳ್ಳಿಯಲ್ಲಿ ನಡೆಯುವದಾಗಿ ವಿಷಯ ಬಂದಾಗ ರಮೇಶ ಹಾಗು ಅವನ ಹೆಂಡತಿ ಮಾತನಾಡಿಕೊಂಡು ಹದಿನೈದು ದಿನ ರಜೆ ಹಾಕಿಕೊಂಡು ಬರುವ   ಯೋಚನೆ ಮಾಡಿದ್ದರು. ಅಣ್ಣನಿಗೆ ಈ ವಿಷಯ ಪ್ರಸ್ತಾಪಿಸಿದಾಗ ಹೌದು ಇನ್ನು  ಹತ್ತು ದಿನಗಳಲ್ಲಿ ಜಾತ್ರೆ ಪ್ರಾರಂಭವಾಗುತ್ತೆ ಎಂದಾಗ ದಿನಸಿ ಪದಾರ್ಥಗಳೊಂದಿಗೆ ಬಟ್ಟೆ ತೆಗೆದುಕೊಳ್ಳಲು ಬಟ್ಟೆ ಅಂಗಡಿಗೆ ಹೋದಾಗ ಅಣ್ಣನ ಮಗನ ಶರ್ಟಿನ ಸೈಜನ್ನು ಕೇಳಿದಾಗ ಅಣ್ಣ ನೀಡಿದ ಉತ್ತರ ಬರಸಿಡಿಲು  ಬಡಿದಂತಾಗಿ ಮನಕೆ ಮಂಕು ಕವಿದು ಮೌನದಿಂದ ತನ್ನ ಮೊಬೈಲನ್ನು ಜೇಬಿನಲ್ಲಿಟ್ಟು ನಡೆಯಿರಿ ಹೋಗೋಣ ಎಂದು ಹೆಂಡತಿಗೆ ಹೇಳಿದಾಗ”ಏನಾಯ್ತು.. ರೀ.ಈಗ ತಾನೆ ನಿಮ್ಮಣ್ಣನ ಮಗನಿಗೆ ಶರ್ಟ ಕೊಳ್ಳಲು ನಿಮ್ಮಣ್ಣನಿಗೆ ಕರೆ ಮಾಡಿದ್ರಿ?  ಹೇಳ್ರೀ.. ಯಾಕ ಸುಮ್ಮನಾದ್ರಿ” ಎಂದಾಗ ಕಣ್ಣಲಿ ಜಿನುಗಿದ ನೀರನ್ನು ತನ್ನ ಪತ್ನಿಗೆ ಕಾಣದಂತೆ ಕಣ್ಲಲೇನೋ ಬಿತ್ತು”ಎಂದು ಕಣ್ಣೊತ್ತಿಕೊಂಡ.”ಈ ಸಲ  ಜಾತ್ರೆಯನ್ನು ಕೂಡಿ ಮಾಡೋದು ಬೇಡ, ನೀವು ಬೇರೆ ಮಾಡಿ ಅದೇ  ದನ ಕಟ್ಟುವ ಮನೆಯಹತ್ತಿರದ ಇರುವ ಗಿಲಾಯಿ ಕಾಣದ ಗೋಡೆಯ  ಎರಡಂಕಣದ ಕೋಣೆಯನ್ನು ಬಳಸಿಕೊಳ್ಳಿ ನಿಮ್ಮ ಭಾಗದ್ದು, ಶೌಚಾಲಯ ಹಾಗೂ ಸ್ನಾನ ಗೃಹವನ್ನು ಬಳಸಬಹುದು”ಎಂದು ಹೇಳಿದ ವಿಷಯ ಕೇಳಿ ರಮೇಶನ ಪತ್ನಿಗೂ ಕಣ್ಣೀರು ಬಂದಿತು.ಮರುದಿನವೇ ಊರಿಗೆ ಹೋಗಿ ಹತ್ತು ದಿನಗಳಲ್ಲೇ ಚನ್ನಾಗಿ ವ್ಯವಸ್ಥೆ ಮಾಡಿ ಜಾತ್ರೆ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋದ. ಹೀಗೆ ರಮೇಶನ ಅಣ್ಣನ ದಿಢೀರ ನಿರ್ಧಾರ ಅವನ  ಹೆಂಡತಿಯ  ಹೇಳಿಕೆ ಎಂದು ತಿಳಿಯಲು  ಫಹಳ ಸಮಯ ಬೇಕಾಗಲಿಲ್ಲ. ಸೌಹಾರ್ದಯುತ ಬಾಂಧವ್ಯಗಳು ಒಮ್ಮೊಮ್ಮೆ ಸಂಘರ್ಷವನ್ನು ಆಹ್ವಾನಿಸುವ  ದ್ವಾರಗಳಾಗಿವೆ.”ಒಳಿತು ಮಾಡು ಮನುಷ
ನೀ ನಿರುದು ಮೂರು ದಿವಸ” ಎಂಬ ಕವಿವಾಣಿಯು ಶಾಶ್ವತವಲ್ಲದ ಶರೀರಕೆ ವಾಸ್ತವತೆಯ ನೆಲೆಯಲಿ  ಮಾನವಿಯತೆಯ  ಬೆಲೆಯನ್ನು ಒತ್ತಿ ಹೇಳುತ್ತದೆ. ಧಾರ್ಮಿಕ ವಿಧಿ-ವಿಧಾನಗಳು,ಸಂಪ್ರದಾಯ, ಸಂಸ್ಕ್ರತಿಯ ಸೊಗಡು ಸ್ಶಚ್ಛಂದವಾದ  ಆಂತರ್ಯಕೆ  ಬಾಂಧವ್ಯದ ಮೆರುಗನ್ನು ಹೆಚ್ಚಿಸುತ್ತವೆ.

ಜಾತ್ರೆ, ಹಬ್ಬ, ಉತ್ಸವಗಳು ಸಮುದಾಯದಲ್ಲಿ ನಮ್ಮ ಸನಾತನ ಸಂಸ್ಕ್ರತಿಯ ಹೊಳಹನ್ನು ಬಿಂಬಿಸಿ  ಅವುಗಳ ಮಹತ್ವ ತಲೆಮಾರಿನಿಂದ   ತಲೆಮಾರಿಗೆ  ಅವರ ಆಚಾರ ವಿಚಾರ ನಡೆನುಡಿಗಳಲ್ಲಿ   ಕ್ಷೀಣಿಸುತ್ತಿದೆ.
ಆದ್ದರಿಂದ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರುವಾಗುತ್ತಾಳೆ. ಉದ್ಯೋಗಕ್ಕಾಗಿ, ಉನ್ನತ ಶಿಕ್ಷಣಕ್ಕಾಗಿ ವಲಸೆ ಹೋಗುವ ಕುಟುಂಬ ಕೂಡ ಮೊದಲಿನಂತೆ ಹೊಂದಿಕೊಳ್ಳಲಾಗದ  ವೈಭೋಗಕ್ಕೆ ಒಳಗಾಗುತ್ತಿದೆ. ಯುವಜನತೆ ಮತ್ತು ಮಕ್ಕಳು ಮೊಬೈಲ್, ಟಿ.ವಿ ಎಂಬ ಮಾಯಾಪೆಟ್ಟಿಗೆ ಹಾಗೂ ಫೇಸ್ಬುಕ್, ವಾಟ್ಸಾಪ, ಇನಸ್ಸ್ಟ್ರಾ ಗ್ರಾಮ, ಟ್ವೀಟರ್ಗಳಿಗೆ ದಾಸರಾಗಿ  ಮಾದಕ ವಸ್ತುಗಳ ದಾಸರಾಗಿ ಮೋಜು ಮಸ್ತಿಯಲ್ಲಿ ಕಾಲ ವ್ಯಯಿಸಿ ತಮ್ಮ ಭವಿಷ್ಯಕ್ಕೆ ತಾವೇ ಇತಿಶ್ರೀ ಹಾಡುತ್ತಿದ್ದಾರೆ  ಹಾಗಾದರೆ ಇವರನ್ನು ನಃಬಿದ ಪಾಲಕರ ಗತಿ ಏನು? ಬಲ್ಲಿರಾ
ತಂದೆ ತಾಯಿಯಾದವರು ಮಗುವಿಗೆ ಉತ್ತಮ ಸಂಸ್ಕಾರ  ನೀಡಿದರೆ ಮಾತ್ರ ಆ ಮಗು ಒಬ್ಬ ರಾಷ್ಟ್ರದ ಉತ್ತಮ ಮಾನವ ಸಂಪನ್ಮೂಲವಾಗಲು ಸಾಧ್ಯ.

ನವನವ ಪ್ರಶ್ನೆಗಳು ನವನವ ಪರೀಕ್ಷೆಗಳು
ದಿವಸಾಬ್ದ ಯುಗ ಚಕ್ರ ತಿರುಗಿದಂತೆ ಪ್ರವಹಿವಪ್ಪುವದರಂತೆ ಪೌರುಷ ಪ್ರಜ್ಞೆ ಅವಿರತದ ಚೇತನ್ಯ- ಮಂಕುತಿಮ್ಮ  ಎಂಬ  ಡಿ.ವಿ.ಜಿಯವರ ಕಗ್ಗದ ರಸಧಾರೆಯಂತೆ  ಬದಲಾದ ಕಾಲಘಟ್ಟಕ್ಕೆ ಬದಲಾಗುವ ಚೈತನ್ಯ ಅನವರತದ ಅನಂತವಾಗುತ್ತದೆ.ಅಂತೆಯೇ ಬದಲಾವಣೆ ಜಗದ ನಿಯಮ ಅದಕ್ಕೆ ತಕ್ಕಂತೆ  ಹೊಂದಿಕೊಂಡು ಜೀವನ ಮಾಡಲೇಬೇಕಾಗುತ್ತದೆ. ಅಂತೆಯೇ ಇಂದು ಜಂಟಿ ಕುಟುಂಬಗಳು ಒಂಟಿಯಾಗಿ ಬಾಂಧವ್ಯದ ಕೊಂಡಿಗಳು ಕಳಚಿ  ಕೇವಲ ತೋರಿಕೆಗಾಗಿ ಬದುಕಾಗಿದೆ.ಇತ್ತೀಚೆಗೆ  ಜಾರ್ಖಂಡನಲ್ಲಿ ನಡೆದ ಘಟನೆ ಮನ ಕಲಕುವಂತಿದೆ. ವಯಸ್ಸಾದ ತಾಯಿಯನ್ನು ಮನೆಯೊಳಗಿರಿಸಿ ಮಗನೆಂಬ ಮಹಾಶಯ ಪ್ರಯಾಗದ ಕುಂಭಮೇಳಕ್ಕೆ ತನ್ನ ಹೆಂಡತಿ ಮಕ್ಕಳೊಂದಿಗೆ ಹೋದ. ಇದನ್ನು ಪ್ರಶ್ನಿಸಿದಾಗ ತಾನು ಅವಳ ಯೋಗಕ್ಷೇಮಕ್ಕೆ ಆಳನ್ನು  ಇಟ್ಟು ಮಾತ್ರೆಗಳನ್ನು ಕೊಟ್ಟು ಬಂದಿದ್ದೇನೆಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಾಗ ಪಾಪ! ವಯಸ್ಸಾದ ಜೀವ ಸದಾ ತನ್ನವರ ಸಾಮಿಪ್ಯಕ್ಕಾಗಿ ತುಡಿಯುತ್ತಿರುತ್ತದೆ ಎಂಬ ಅರಿವಿನ ಹರವನ್ನು  ಅರಿಯದ ಇಂತ ಗಂಡು ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು? ತೀರಿಸಲಾಗದ ಋಣಭಾರ ಅರ್ಥವಾಗದೆ ರಕ್ತ ಬಸಿದ ಒಡಲಲಿ ಚಿಗುರಿದ ಜೀವಕೆ. ಇಂತವರಿಗೆ  ಅವರ ವೃದ್ದಾಪ್ಯದಲಿ ಅವರ ಮಕ್ಕಳೇ ಪಾಠ  ಕಲಿಸುತ್ತಾರೆ.


Leave a Reply

Back To Top