ಅಕ್ಕಮಹಾದೇವಿ ವಚನ

 ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚಡೆ ಗರಿದೋರದಂತಿರಬೇಕು
ಅಪ್ಪಿದಡೆ ಅಸ್ಥಿಗಳು ನಗ್ಗುನುಸಿಯಾಗಬೇಕು
ಬೆಚ್ಚಡೆ ಬೆಸುಗೆಯರಿಯದಂತಿರಬೇಕು
ಮಚ್ಚು ಒಪ್ಪಿತ್ತು, ಚೆನ್ನಮಲ್ಲಿಕಾರ್ಜುನನ ಸ್ನೇಹ ತಾಯೆ

12   ನೇ ಶತಮಾನದ ಶ್ರೇಷ್ಠ ಶರಣೆ ,ಆಧ್ಯಾತ್ಮದ ಶಿಖರವಾದ  ಅಕ್ಕಮಹಾದೇವಿಯ ಅಂತರಂಗವನ್ನು ಎಷ್ಟು ಅರಿತರೂ ಮತ್ತಷ್ಟು ಮತ್ತಷ್ಟು ಅರಿಯುವ ಅನುಭಾವದ ಅರಿವಿನ ಹೊಳವು ಹೊಳಪು ಹೊಳೆಯುತ್ತಲೇ ಇರುವ ಬದುಕಿನ ಹುಡುಕಾಟ .

ಅಕ್ಕನ ಮೆಚ್ಚು ಅಕ್ಕನ ನೆಚ್ಚು ಚೆನ್ನಮಲ್ಲಿಕಾರ್ಜುನನೇ ಆಗಿದ್ದಾನೆ.ಅಕ್ಕನ ಇಡೀ ಬದುಕೇ ಚೆನ್ನಮಲ್ಲಿಕಾರ್ಜುನ. ಅಂತರಂಗದಲ್ಲಿ  ಅಚ್ಚಾಗಿ ಮೆಚ್ಚಾಗಿ  ಅಲಂಕರಿಸಿಕೊಂಡ ಅಕ್ಕನವರ ಭಾವ  ವ್ಯಕ್ತಿತ್ವ ದೈಹಿಕ ಸಂಬಂಧದ ಗಾಢ ತನ್ಮಯತೆಯನ್ನು ವಿವರಿಸುವ ವಚನವು ಕಾಮಕ್ಕೆ ಸಂಬಂಧಿಸಿದ ಎಲ್ಲ ಸಂಕೋಚವನ್ನು ಅತ್ಯಂತ ಸಹಜವೆನ್ನುವ ರೀತಿಯಲ್ಲಿ ನಿರಾಕರಿಸುತ್ತದೆ.

ಅಕ್ಕನ ಅಚ್ಚಿಗೆ ಮೆಚ್ಚಿಗೆ ಸಮಾಜದಲ್ಲಿ ಅವಕಾಶವೇ ಇಲ್ಲ .
ಅಕ್ಕನ ವೈಯಕ್ತಿಕ ಆಕಾಂಕ್ಷೆ, ದುಡಿತ, ಮಿಡಿತ ಭಾವ ,ಅಭಿಷ್ಟೆಗಳಿಗೆ  ಸಾಮಾಜಿಕ ನಿಯಮಗಳ ಚೌಕಟ್ಟುಗಳನ್ನು ದಾಟಿ ನಡೆಯುವ ಹಾಗಿಲ್ಲ.
ಅಕ್ಕಳು ಸಮಾಜದಲ್ಲಿ ಇರುವ
 ನಿಯಮಗಳನ್ನು ಮೀರುವ ಹಾಗಿಲ್ಲ. ಅಕ್ಕಮಹಾದೇವಿಯ ಅಭಿವ್ಯಕ್ತಿಯು ಸಾಮಾಜಿಕ ಚೌಕಟ್ಟುಗಳ ನಿಯಮವನ್ನು ಅತ್ಯಂತ ವೈಯಕ್ತಿಕವಾದ ಈ ವಾತಾವರಣದಲ್ಲಿ ಸಂಪೂರ್ಣವಾಗಿ ಮೀರುತ್ತದೆ,
 ಚೆನ್ನಮಲ್ಲಿಕಾರ್ಜುನನ ಒಲವು ಪ್ರೇಮ ಸಂಬಂಧ ಭಾವವು , ಚೆನ್ನಮಲ್ಲಿಕಾರ್ಜುನನ ಕನಸು ಕಾಣುವ ಸ್ವರೂಪವನ್ನು ಧ್ವನಿಸುತ್ತದೆ. :
ಅಕ್ಕನವರ ಒಲವು ಹಾಗೂ ಪ್ರೇಮ ಸಂಬಂಧವು ಈ ಸಾಮಾಜಿಕ ವಾತಾವರಣದಲ್ಲಿ,ಆರೋಗ್ಯಪೂರ್ಣ ಬೆಳವಣಿಗೆಗೆ ಅವಕಾಶವನ್ನು ಮಾಡಿಕೊಡುವುದಿಲ್ಲ ಎನ್ನುವುದು ಅಕ್ಕಮಹಾದೇವಿಯ ವಚನದ ಆಶಯವಾಗಿದೆ. ಹೀಗಾಗಿ ಅಕ್ಕಳು ಚೆನ್ನಮಲ್ಲಿಕಾರ್ಜುನನಲ್ಲಿಯೇ ತನ್ನ ಮನವನ್ನು ಐಕ್ಯವಾಗಿಸಿ, ಚೆನ್ನಮಲ್ಲಿಕಾರ್ಜುನನ ಸಂಗವೇ ತನ್ನಬದುಕಿನಪಥವನ್ನುಪಯಣಿಸುವ ಬದುಕಿನ ಮಾರ್ಗ ಇದೆ ಅಕ್ಕ ನ ಚಿತ್ತ.ಆ ಚಿತ್ತದಲ್ಲಿಯೇ  ಪಯಣವು ಅಕ್ಕನಿಗೆಅನಿವಾರ್ಯವಾಗಿಸುತ್ತದೆ.
ಇಲ್ಲಿ ಅಕ್ಕಮಹಾದೇವಿಯು ತನ್ನ ಅಂತರಂಗದ ಪ್ರೇಮ ,ಒಲವು ಸಂಬಂಧದ ಹಾರೈಕೆಯ ಅನುಭವದ ನೆಲೆ ಸೆಲೆಗಳನ್ನು ಹೇಳಿದ್ದಾರೆ .
ಅಕ್ಕಳು ಮನುಷ್ಯ ಸಂಬಂಧದ ನೆಲೆಗಳು ಹೆಚ್ಚು ಜೀವ ಚೈತನ್ಯವನ್ನು ಹೊಂದಬೇಕೆಂದು ಹಂಬಲಿಸಿದ್ದವಳು. ಅದರ ಅಭಿವ್ಯಕ್ತಿಯಾಗಿಯೇ ಅವಳ ವಚನಗಳ ಪ್ರಮುಖ ಧೋರಣೆಗಳು ಕಂಡುಬರುತ್ತವೆ.
 ಅಕ್ಕಳು ಬಾಳಿದ ಲೌಕಿಕ ಸಮಾಜದಲ್ಲಿ ಇಂಥಹ ಪ್ರೀತಿ , ಭಾವ ಮದುರತೆ,ಒಲವಿನ ಧ್ವನಿ ಇವುಗಳು ಸಾಧ್ಯವಾಗದಂಥ ಸ್ಥಿತಿಯೊಂದು  ಸಮಾಜದಲ್ಲಿ ರೂಪುಗೊಂಡಿದ್ದು, ಇಂಥಹ ಸಮಾಜಕ್ಕೆ ವಿರೋಧವು ಇಲ್ಲಿ ಅನಿವಾರ್ಯವಾಗಿದೆ.
ಅಲ್ಲದೆ ಅಕ್ಕನವರು  ತನ್ನ ಅನುಭವ ಚಿತ್ತದ ಪಯಣದ ಹಂಬಲದಲ್ಲಿ ಹೊಸ ಸಂಬಂಧಗಳ ಜಗತ್ತನ್ನು ಕಾಣುವ   ಪ್ರಯತ್ನ ಪಡುತ್ತಾಳೆ.
ಅಕ್ಕನವರ ದಿಟ್ಟತನ ಪಯಣ , ಮಾರ್ಗ ಯಾರೂ ತುಳಿಯಲಾರದ ಬದುಕಿನ ಸತ್ಯ ಸಂಗತಿಯಾಗಿದೆ ಅಕ್ಕಳು ತನ್ನ ಅನೇಕ ವಚನಗಳಲ್ಲಿ ಸಮಾಚದ ವೈರುಧ್ಯತೆಯ ಮಧ್ಯೆ ಗಡಿಯನು ದಾಟುವ ಪಯಣ ನಿಜಕ್ಕೂ ಅಚ್ಚರಿಯಾದುದು.


Leave a Reply

Back To Top