ʼರೈತ — ನಮ್ಮ ಅನ್ನದಾತʼ ವಿಶೇಷ ಲೇಖನ-ಗಾಯತ್ರಿ ಸುಂಕದ ಅವರಿಂದ

ರೈತ — ನಮ್ಮ ಅನ್ನದಾತ
ನಮ್ಮದು ಭಾರತೀಯ ಸಂಸ್ಕೃತಿಯು ಕೃಷಿ ಸಂಸ್ಕೃತಿ ಕೂಡಾ ಆಗಿದೆ. ಏಕೆಂದರೆ ಭಾರತೀಯರಿಗೆ ಕೃಷಿಯು ಕೇವಲ. ಒಂದು ಜೀವನೋಪಾಯ ಮಾತ್ರವಲ್ಲ, ಅದು ನಮ್ಮ ಜೀವನ ಶೈಲಿಯು ಕೂಡ ಆಗಿದೆ. ಆದ್ದರಿಂದಲೇ ಪ್ರತಿ ವರ್ಷ ಡಿಸೆಂಬರ್ 23ರನ್ನು ರೈತ ದಿನ ವನ್ನಾಗಿ ಆಚರಿಸಲಾಗುತ್ತಿದೆ.
ಭಾರತದಲ್ಲಿ ಈಗಲೂ ಶೇ.58 ರಷ್ಟು ಜನ ಈಗಲೂ ಕೃಷಿಯನ್ನು ಅವಲಂಬಿಸಿದ್ದಾರೆ.
ಆದರೆ ನಮ್ಮ ಕೃಷಿ ಎತ್ತ ಸಾಗುತ್ತಿದೆ ? ಎಂಬ ಪ್ರಶ್ನೆ ಏಳುತ್ತದೆ. ಆಧುನಿಕತೆಯನ್ನು ಅಪ್ಪಿ ಕೊಳ್ಳಲಾ? ಅಥವಾ ಅಪ್ಪ ಅಜ್ಜಂದಿರಿನಿಂದ ಬಂದ ಸಾಂಪ್ರದಾಯಿಕ ಕೃಷಿಯನ್ನು ನಡೆಸಲಾ? ಎಂಬ ಗೊಂದಲದಲ್ಲಿ ಬಿದ್ದಿದ್ದಾನೆ.
ಆದರೆ ಕೆಲವು ಜನ ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿಯನ್ನು ಮೇಳೈಸಿಕೊಂಡು ಯಶಸ್ಸನ್ನು ಕಂಡಿದ್ದಾರೆ.ಆದರೂ ಈಗಲೂ ರೈತ ಎಂದರೆ ನಮ್ಮ ಕಣ್ಣಿಗೆ ಹರಿದ ಅಂಗಿಯ, ಹರಕು ತೋಳಿನ. ಹರಿದ ಚಪ್ಪಲಿನ ವ್ಯಕ್ತಿಯ ಚಿತ್ರವೇ ನಮ್ಮ ಕಣ್ಣಿಗೆ ಬರುವುದು.
ಈಗಲೂ ನಮ್ಮ ಪಠ್ಯ ಪುಸ್ತಕಗಳಲ್ಲಿ ಕೃಷಿಯು ನಮ್ಮ ಆರ್ಥಿಕತೆಯ ಬೆನ್ನೆಲುಬು ಎಂದು ಕಲಿಸಲಾಗುತ್ತಿದೆ. ಆದರೆ ಈ ಬೆನ್ನೆಲುಬು ಗಟ್ಟಿಯಾಗುವುದು ಯಾವಾಗ ? ಎಂಬ ಪ್ರಶ್ನೆ ಏಳುತ್ತದೆ.ಸೂಟು ಬೂಟು ,ಹಾಕಿಕೊಂಡ ರೈತನ ಚಿತ್ರವನ್ನು ನಾವು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಜಡ್ಡು ಗಟ್ಟಿ ದ. ಮನಸ್ಥಿತಿಯನ್ನು ತೋರಿಸುತ್ತದೆ.ಬೇರೆ. ದೇಶಗಳು ಕೂಡ ಕೃಷಿಯನ್ನು ಅವಲಂಬಿಸಿವೆ.
ಆದರೆ ಅವರಿಗೆ ಸಾಧ್ಯವಾಗಿದ್ದು ನಮಗೆ ಏಕೆ ಸಾಧ್ಯವಾಗುತ್ತಿಲ್ಲ?
ಇಸ್ರೇಲ್ ನಂತಹ ಪುಟ್ಟ ದೇಶ ಕೂಡ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ಸಾಧಿಸಿದ್ದು ನಮಗೆ. ಏಕೆ ಸಾಧ್ಯವಾಗುತ್ತಿಲ್ಲ?
ಕೃಷಿಯು ನಮ್ಮ ಯುವ ಜನಾಂಗವನ್ನು ಆಕರ್ಷಿಸುತ್ತಿಲ್ಲ.
ಅವರ ಪ್ರಕಾರ ಕೃಷಿಯು ಕೇವಲ ಅಪ್ಪ ,ಅಜ್ಜರಿಗೆ ಮೀಸಲಾಗಿದ್ದು.ಮನೆಯಲ್ಲಿ ಹಿರಿಯರು ತೀರಿಕೊಂಡ ಮೇಲೆ ಇದ್ದ ಆಸ್ತಿಯನ್ನು ಮಾರಿಕೊಂಡು city ನಲ್ಲಿ settle ಆದ ಎಷ್ಟೋ ಜನರನ್ನು ಕಾಣುತ್ತೇವೆ. ಏಕೆಂದರೆ ಅವರ ಪ್ರಕಾರ ಕೃಷಿಯು ಅವರ ಪಾಲಿಗೆ not a cup of tea.
ಹೀಗಾಗಿ ಈಗ ನಮ್ಮ ಹಳ್ಳಿಗಳು ವೃದ್ಧಶ್ರಮಗಳಾಗಿ ಪರಿಣಮಿಸಿವೆ. ಕೇವಲ ಊರ ಜಾತ್ರೆಗೆ , ಬಂದು ಮುಖ ತೋರಿಸಿ ಹೊeಗುತ್ತಾರೆ.


ಕೆಲವು. ಸಾಫ್ಟವೇರ್ ಟೆಕ್ಕಿಗಳು ಹಳ್ಳಿಗೆ ಬಂದು ಲಕ್ಷ ಗಟ್ಟಲೆ ಸಂಪಾದನೆ ಮಾಡಿ ತೋರಿಸುವವರ ಉದಾಹರಣೆಗಳು ಕೆಲವೊಂದು ಮಾತ್ರ.
ಸರ್ಕಾರವು ಕೃಷಿಗೆ ಬೇಕಾದಷ್ಟು. ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದೆ. ಗಂಗಾ ಕಲ್ಯಾಣ ಯೋಜನೆ, ಸಾಲ ಸೌಲಭ್ಯ, ಕಿಸಾನ್ ಸಮ್ಮಾನ್ ಯೋಜನೆಗಳನ್ನೂ ಮಾಡಿದ್ದರೂ ಈಗಲೂ ಹರಿದ ಅಂಗಿಯನ್ನು ತೊಟ್ಟು ಬ್ಯಾಂಕ್ ಮ್ಯಾನೇಜರ್ ಮುಂದೆ ಕೈ ಜೋಡಿಸಿ ನಿಂತ ರೈತನ ಚಿತ್ರವೇ ಕಣ್ಣ ಮುಂದೆ ಬರುತ್ತದೆ.
ಎಷ್ಟೋ ಸಾರಿ ಸಾಲ ತುಂಬಲಾಗದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಉದಾಹರಣೆಗಳನ್ನು ನೋಡುತ್ತೇವೆ.
: ಆದ್ದರಿಂದ ಮುಖ್ಯವಾಗಿ ರೈತರಲ್ಲಿ ಉತ್ಸಾಹ ತುಂಬುವ ಕೆಲಸವಾಗಬೇಕು. ಕೃಷಿ ಎಂಬುದು ಲಾಭದಾಯಕ ಎಂದೆನಿಸಿದಾಗ ಮಾತ್ರ. ರೈತ ದಿನಾಚರಣೆ ಸಾರ್ಥಕವಾಗುತ್ತದೆ. ಕೃಷಿ ಎಂಬುವುದು ಹೃದಯದ ಭಾಷೆ ಮಾತ್ರವಲ್ಲದೆ ಹೊಟ್ಟೆಯ ಭಾಷೆ ಆದಾಗ ಮಾತ್ರ ರೈತ ಉಳಿದವರಿಗೆ ಉತ್ತಮ ಪ್ರತಿಸ್ಪರ್ಧಿ ಆಗಬಲ್ಲ.
ಈ ದಿಕ್ಕಿನಲ್ಲಿ ಯೋಚಿಸಿ ನೋಡಿ.
ಏನಂತೀರಿ


Leave a Reply

Back To Top