ಕಾವ್ಯ ಸಂಗಾತಿ
ಶಾರದಜೈರಾಂ.ಬಿ,
ಗಂಧರ್ವ ಕನ್ಯೆ
ಇಳಿಸಂಜೆಯ ಹೊತ್ತು
ಇನಿಯನ ನೆನೆದು
ಅವಳ ಕೆನ್ನೆ ಕೆಂಪಿಗಿಂತ
ನನ್ನ ಕೆಂಪು ಕಡಿಮೆಯಾಯಿತು
ಎಂದರಿತ ನೇಸರ ನಾಚಿ
ನಭದಂಚಿಗೆ ಜಾರಿದ
ಎಲೆಯ ಮೇಲಿನ ಇಬ್ಬನಿ
ಅವಳ ಕಣ್ಣ ಹೊಳಪ ಮುಂದೆ
ಕಡಿಮೆಯೇ ಎಂದರಿತು ಕರಗಿತು
ತಂಪೆರೆವ ತಂಗಾಳಿ ತಡೆದು
ಅವಳ ಮುಂಗುರುಳು ನೇವರಿಸಿ ಸಾಗಿತು
ಅವಳು ಕೆಂದಾವರೆ ಸೊಬಗೆಂದು
ಮೂಡಿದ ಕಾಮನಬಿಲ್ಲು ಕರಗಿತು
ಮೈಯರಳಿಸಿ ಬಂದ ಮಯೂರಿ
ಇವಳ ಮೈಮಾಟ ಕಂಡು ಮೂಕವಾಯಿತು
ಸಂಜೆ ಸರಿದು ನಿಶೆ ಬರಲು
ಚಂದಿರನು ಇದ್ಯಾವ ಬೆಳಕೆಂದು
ಅವಳೆಡೆ ನೋಡಿ ಮೋಡದಿ ಅಡಗಿದ
ಗಗನದಿ ಮಿನುಗುವ ತಾರೆಗಳು
ಅವಳ ನೋಡಿ ನಲಿದವು
ಗಗನದ ಗಂಧರ್ವರು ಗಾನ ಮರೆತು
ಗಗನದಿ ಜಾರಿದ ಗಂಧರ್ವ ಕನ್ಯೆ
ಎಂದು ಸ್ತುತಿಸಿದರು.
ಶಾರದ ಬಿ ಜೈ ರಾಮ್ ಅವರ ಕವನ ತುಂಬಾ ಚೆನ್ನಾಗಿದೆ